Viral Video: ಕೊರೋನಾ ಲಾಕ್​ಡೌನ್: ಡ್ರೋನ್​​ ಬಳಸಿ ನಾಯಿಗೆ ವಾಕಿಂಗ್​ ಮಾಡಿಸಿದ ವಿಡಿಯೋ ವೈರಲ್​..!

Dog And Dron: ಕೊರೋನಾ ಎಫೆಕ್ಟ್​ನಿಂದಾಗಿ ಸದ್ಯ ಎಲ್ಲೆಡೆ ಆತಂಕ ವಾತಾವರಣ ನಿರ್ಮಾಣವಾಗಿದೆ. ಅದರಲ್ಲೂ ಜನರು ಮನೆಗಳಿಂದ ಹೊರ ಬರಲು ಹೆದರುವ ಪರಿಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಾಣಿ ಪ್ರೇಮಿಗಳು ಸಹ ಒಂದು ರೀತಿಯ ಸಂಕಷ್ಟದಲ್ಲಿದ್ದಾರೆ. ಮನೆಗಳಲ್ಲಿ ನಾಯಿಗಳನ್ನು ಸಾಕಿರುವವರು ಅವುಗಳನ್ನು ನಿತ್ಯ ಕರ್ಮಕ್ಕಾಗಿ ಹೊರಗೆ ಕರೆದುಕೊಂಡು ಹೋಗದ ಪರಿಸ್ಥಿತಿ ವಿದೇಶಗಳಲ್ಲಿದೆ. 

Anitha E | news18-kannada
Updated:March 21, 2020, 1:32 PM IST
Viral Video: ಕೊರೋನಾ ಲಾಕ್​ಡೌನ್: ಡ್ರೋನ್​​ ಬಳಸಿ ನಾಯಿಗೆ ವಾಕಿಂಗ್​ ಮಾಡಿಸಿದ ವಿಡಿಯೋ ವೈರಲ್​..!
ನಾಯಿ ಹಾಗೂ ಡ್ರೋಣ್​
  • Share this:
ಕೊರೋನಾ ಭೀತಿಯಿಂದಾಗಿ ಈಗ ಯಾರೂ ಅನಾವಶ್ಯಕವಾಗಿ ರಸ್ತೆಗಿಳಿಯುವಂತಿಲ್ಲ. ಕೊರೋನಾ ಸೋಂಕು ತಗುಲುವ ಭೀತಿಯಿಂದಾಗಿ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲೇ ಇದ್ದರೆ ಒಳಿತು ಎಂದು ಆದೇಶ ಹೊರಡಿಸಲಾಗಿದೆ. ಆದರೆ ಇಲ್ಲೊಬ್ಬ ವ್ಯಕತಿ ಕೊರೋನಾ ಭೀತಿ ನಡುವೆಯೇ ತನ್ನ ಸಾಕು ನಾಯಿಯ ಖುಷಿಗಾಗಿ ತಂತ್ರಜ್ಞಾನವನ್ನು ತುಂಬಾ ಕ್ರಿಯೇಟೀವ್​ ಆಗಿ ಬಳಸಿಕೊಂಡಿದ್ದಾರೆ. 

ಕೊರೋನಾ ಎಫೆಕ್ಟ್​ನಿಂದಾಗಿ ಸದ್ಯ ಎಲ್ಲೆಡೆ ಆತಂಕ ವಾತಾವರಣ ನಿರ್ಮಾಣವಾಗಿದೆ. ಅದರಲ್ಲೂ ಜನರು ಮನೆಗಳಿಂದ ಹೊರ ಬರಲು ಹೆದರುವ ಪರಿಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಾಣಿ ಪ್ರೇಮಿಗಳು ಸಹ ಒಂದು ರೀತಿಯ ಸಂಕಷ್ಟದಲ್ಲಿದ್ದಾರೆ. ಮನೆಗಳಲ್ಲಿ ನಾಯಿಗಳನ್ನು ಸಾಕಿರುವವರು ಅವುಗಳನ್ನು ನಿತ್ಯ ಕರ್ಮಕ್ಕಾಗಿ ಹೊರಗೆ ಕರೆದುಕೊಂಡು ಹೋಗದ ಪರಿಸ್ಥಿತಿ ವಿದೇಶಗಳಲ್ಲಿದೆ.

Cases in India Rise to 195; US Sees 200 Deaths world death count 10 thousand,
ಸಾಂದರ್ಭಿಕ ಚಿತ್ರ


ಇದೇ ಕಾರಣಕ್ಕೆ ವ್ಯಕ್ತಿಯೊಬ್ಬರು ತಮ್ಮ ಸಾಕು ನಾಯಿಯನ್ನು ವಾಕಿಂಗ್​ ಮಾಡಿಸಲು ಡ್ರೋನ್​​ ಬಳಸಿದ್ದಾರೆ. Vakis Demetriou ಎಂಬ ವ್ಯಕ್ತಿ ತಮ್ಮ ಒಲಿವರ್​ ಎಂಬ ನಾಯಿಯನ್ನು ಡ್ರೋಣ್​ ಸಹಾಯದಿಂದ ವಾಕಿಂಗ್​ ಮಾಡಿಸಿದ್ದಾರೆ. ಈ ವಿಡಿಯೋವನ್ನು ಅವರು ಹಂಚಿಕೊಳ್ಳುತ್ತಿದ್ಧಂತೆಯೇ ಅದು ವೈರಲ್​ ಆಗಿದೆ.ಫೇಸ್​ಬುಕ್​ನಲ್ಲಿ ಈ ವಿಡಿಯೋಗೆ 10 ಲಕ್ಷಕ್ಕೂ ಅಧಿಕ ವೀಕ್ಷಣೆ, 36 ಸಾವಿರ ಶೇರ್​ ಹಾಗೂ 6 ಸಾವಿರಕ್ಕೂ ಅಧಿಕ ಕಮೆಂಟ್​ ಸಿಕ್ಕಿದೆ. ಈ ವಿಡಿಯೋ ನೋಡಿದವರು ಒಳ್ಳೆಯ ಐಡಿಯಾ ಎನ್ನುತ್ತಿದ್ದಾರೆ. ಆದರೆ ಕೆಲವರು ಈ ರೀತಿಯ ಮಾಡಿದರೆ ನಾಯಿ ಕಳವಾಗುವ ಭಯ ವ್ಯಕ್ತಪಡಿಸಿದ್ದಾರೆ.

 
Corona Lock down Man uses drone to walk his dog video gone viral
ನಾಯಿ ಹಾಗೂ ಡ್ರೋಣ್​


 

Nysa: ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್​ ಕಿಡ್​ ನ್ಯಾಸಾಳದ್ದೇ ಸದ್ದು: ಫೋಟೋಶೂಟ್​ನಲ್ಲಿ ಮಿಂಚಿದ ಕಾಜೋಲ್​ ಮಗಳು.!

First published: March 21, 2020, 1:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading