ಟೆಕ್ ಮಾರುಕಟ್ಟೆಯಲ್ಲಿ (Tech Market) ಭಾರೀ ಮುಂಚೂಣಿಯಲ್ಲಿರುವ ಕಂಪೆನಿಯೆಂದರೆ ಅದು ಗೂಗಲ್. ಈ ಕಂಪೆನಿ ಟೆಕ್ನಾಲಜಿಯಲ್ಲಿ ತನ್ನದೇ ಒಂದು ಪ್ರಾಬಲ್ಯತೆಯನ್ನು ಪಡೆದುಕೊಂಡಿದೆ. ಆದರೆ ಇತ್ತೀಚೆಗೆ ಗೂಗಲ್ (Google) ತನ್ನ ಟೆಕ್ ಮಾರುಕಟ್ಟೆಯಲ್ಲಿರುವ ಪ್ರಾಬಲ್ಯವನ್ನು ದುರುಪಯೋಗ ಮಾಡುತ್ತಿದೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಇನ್ನು ಗೂಗಲ್ ಆಂಡ್ರಾಯ್ಡ್ ಮಾರುಕಟ್ಟೆಯಲ್ಲಿ (Android) ತನಗಿರುವ ಸ್ಥಾನವನ್ನೇ ಗುರಿಯಾಗಿಸಿಕೊಂಡು ಸ್ಪರ್ಧಾತ್ಮಕ ಯುಗದಲ್ಲಿ ಸಮಸ್ಯೆಯನ್ನುಂಟು ಮಾಡುತ್ತಿದೆ ಎಂಬ ಆರೋಪದಡಿಯಲ್ಲಿ ಭಾರತೀಯ ಸ್ಪರ್ಧಾ ಆಯೋಗ (Compitition Commission Of India) ಗೂಗಲ್ಗೆ ದಂಡ ವಿಧಿಸಿತ್ತು. ಇದೀಗ ಈ ದಂಡವನ್ನು ಟೆಕ್ ದೈತ್ಯ ಗೂಗಲ್ ಸಂಪೂರ್ಣವಾಗಿ ಪಾವತಿಸಿದೆ.
ಹೌದು, ಗೂಗಲ್ ಟೆಕ್ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ದುರುಪಯೋಗ ಮಾಡುತ್ತಿದೆ ಎಂಬ ಸುದ್ದಿಗಳು ಕೇಳಿ ಬರುತ್ತಲೇ ಇದೆ. ಅದೇ ಕಾರಣಕ್ಕೆ ಇತ್ತೀಚೆಗೆ ಗೂಗಲ್ಗೆ ಸಿಸಿಐ 1,337.76 ಕೋಟಿ ರೂಪಾಯಿ ದಂಡ ವಿಧಿಸಿತ್ತು. ಇದೀಗ ಆ ಮೊತ್ತವನ್ನು ಗೂಗಲ್ ಸಂಪೂರ್ಣವಾಗಿ ಪಾವತಿಸಿದೆ.
ಭಾರತೀಯ ಕಂಪೆನಿಯಿಂದ ವಿಧಿಸಿದ ದಂಡ
ಇನ್ನು ಭಾರತೀಯ ಆಡಳಿತ ಪ್ರಾಧಿಕಾರದ ಆದೇಶಕ್ಕೆ ತಕ್ಕಂತೆ ಜಾಗತಿಕವಾಗಿ ಭಾರೀ ಮುನ್ನಡೆಯಲ್ಲಿದ್ದ ಟೆಕ್ ಕಂಪೆನಿ ಇದರ ಆದೇಶವನ್ನು ಒಪ್ಪಿ ದಂಡ ಪಾವತಿಸಿದ್ದು ಇದೇ ಮೊದಲು ಎಂದು ಕೆಲವರದಿಗಳು ಹೇಳಿವೆ. ಹಾಗೆಯೇ ಈ ಪ್ರಕರಣ ಭಾರತದ ಡಿಜಿಟಲ್ ಇಂಡಿಯಾದ ಅಭಿವೃದ್ಧಿಗೆ ಒಂದು ಹೊಸ ಮಾದರಿಯಾಗಿ ರೂಪುಗೊಳ್ಳಬಹುದು. ಇನ್ಮುಂದೆ ಭಾರತದಲ್ಲಿ ಡಿಜಿಟಲ್ ನಿಯಮಗಳನ್ನು ಸ್ಥಾಪಿಸುವಾಗ ಈ ರೀತಿಯ ಕ್ರಮಗಳು ಬಹಳಷ್ಟು ಸಹಕಾರಿಯಾಗಬಹುದು ಎಂದು ಹೇಳಲಾಗಿದೆ.
ಇದನ್ನೂ ಓದಿ: ಕಾರಿನಲ್ಲಿ ಎಸಿ ಬಳಸಿದ್ರೆ ನಿಜವಾಗ್ಲೂ ಪೆಟ್ರೋಲ್ ಖಾಲಿಯಾಗುತ್ತಾ?
ಗೂಗಲ್ಗೆ ಇಷ್ಟು ದೊಡ್ಡ ಮೊತ್ತದಲ್ಲಿ ದಂಡ ವಿಧಿಸಿದ್ದು ಏಕೆ?
ಗೂಗಲ್ ಕಂಪೆನಿ ಭಾರೀ ಹಿಂದಿನಿಂದಳು ಟೆಕ್ ಮಾರುಕಟ್ಟೆಯಲ್ಲಿ ಪ್ರಾಬಲ್ಯತೆಯನ್ನು ಗುರುತಿಸಿಕೊಂಡು ಬಂದಿದೆ. ಅದರಲ್ಲೂ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಒಂದಲ್ಲ ಒಮದು ಕಾರಣಕ್ಕೆ ಪ್ರಸಿದ್ಧಿಯನ್ನು ಪಡೆದಿದೆ. ಸ್ಮಾರ್ಟ್ಫೋನ್ಗಳಲ್ಲಿ ಐಫೋನ್ಗಳು ಬಿಟ್ಟರೆ ಹೆಚ್ಚಾ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳೇ ಇದೆ. ಈ ಆಂಡ್ರಾಯ್ಡ್ ಡಿವೈಸ್ಗಳಲ್ಲಿ ಗೂಗಲ್ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ. ಆದರೆ ಇದನ್ನೇ ಬಲಪಡಿಸಿಕೊಂಡ ಗೂಗಲ್ ಇತ್ತೀಚೆಗೆ ತನ್ನ ಪ್ರಾಬಲ್ಯತೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂಬ ದೂರುಗಳು ಕೇಳಿಬರುತ್ತಿದೆ.
ಅಂದರೆ, ಆಂಡ್ರಾಯ್ಡ್ ಫೋನ್ಗಳಲ್ಲಿ ಗೂಗಲ್ ಅಪ್ಲಿಕೇಶನ್ಗಳು ಈಗಾಗಲೇ ಪ್ರೀಇನ್ಸ್ಟಾಲ್ ಆಗಿರುತ್ತದೆ. ಅದೇ ರೀತಿ ಗೂಗಲ್ ಪ್ಲೇ ಸ್ಟೋರ್ನಲ್ಲೂ ಕೆಲವೊಂದು ಆ್ಯಪ್ಗಳ ಮೇಲೆ ತಾರತಮ್ಯವನ್ನು ಮಾಡುತ್ತಿದೆ ಎಂಬ ದೂರುಗಳು ಕೇಳಿಬರುತ್ತಿದೆ. ಅಂದರೆ ಯಾವ ಆ್ಯಪ್ ಕಂಪನಿಗಳು ಗೂಗಲ್ಗೆ ಹಣ ಪಾವತಿಸಿರುತ್ತದೆಯೇ ಆ ಆ್ಯಪ್ಗಳನ್ನು ಮಾತ್ರ ಬಳಕೆದಾರರಿಗೆ ಪ್ಲೇ ಸ್ಟೋರ್ನಲ್ಲಿ ಕಾಣುವಂತೆ ಮಾಡುತ್ತದೆ. ಇದೇ ಕಾರಣವನ್ನು ಎತ್ತಿಹಿಡಿದು ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾ ಗೂಗಲ್ ಅನ್ನು ಆರೋಪಿಯನ್ನಾಗಿ ಮಾಡಿದೆ. ಇದಕ್ಕಾಗಿ 2022ರ ಅಕ್ಟೋಬರ್ 20ರಂದು ಗೂಗಲ್ಗೆ 1,337.76 ಕೋಟಿ ರೂ ದಂಡ ಕಟ್ಟುವಂತೆ ಆದೇಶಿಸಿತು.
ದಂಡ ವಿಧಿಸಿದ ಬಗ್ಗೆ ವಿರೋಧ ವ್ಯಕ್ತ ಪಡಿಸಿದ ಗೂಗಲ್
ಇನ್ನು ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾ ಗೂಗಲ್ಗೆ ವಿಧಿಸಿದ ದಂಡವನ್ನು ನೋಡಿದ ತಕ್ಷಣ, ಗೂಗಲ್ ಈ ದೂರಿನಲ್ಲಿ ಯಾವುದೇ ಸಾಕ್ಷಿಗಳಿಲ್ಲ. ಟೆಕ್ ಯುಗದಲ್ಲಿ ಇತರೆ ಕಂಪನಿಗಳ ಬೆಳವಣಿಗೆ ಧಕ್ಕೆ ತರುವಂತಹ ಕೆಲಸ ನಾವೇನು ಮಾಡಿಲ್ಲ. ಯೂರೋಪ್ನ ಪ್ರಕರಣವೊಂದರಲ್ಲಿ ನೀಡಿದ್ದ ವಿಷಯವನ್ನೇ ಕಾಪಿ ಮಾಡಿ ನಮಗೆ ಆದೇಶವನ್ನು ನೀಡಿದೆ ಎಂದು ಹೇಳಿ ಗೂಗಲ್ ಇದನ್ನು ತೀವ್ರವಾಗಿ ವಿರೋಧಿಸಿತ್ತು. ಆದರೆ ಸಿಸಿಐ ನೀಡಿದ ಆದೇಶವನ್ನು ಎನ್ಸಿಎಲ್ಎಟಿ (Company Law Appellate Tribunal) ಸಹ ಒಪ್ಪಿಕೊಂಡು 30 ದಿನದೊಳಗೆ ದಂಡ ಪಾವತಿಸುವಂತೆ 2023 ಮಾರ್ಚ್ 31ರಂದು ಗೂಗಲ್ಗೆ ತಿಳಿಸಿತು. ಅದೇ ರೀತಿಯಂತೆ ಗೂಗಲ್ ನಂತರ ಕಂಪನಿಗೆ ದಂಡವನ್ನು ಪಾವತಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ