Coca-Cola Smartphone: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರ್ತಿದೆ ಕೋಕಾ ಕೋಲಾ ಸ್ಮಾರ್ಟ್​​ಫೋನ್​! ಹೀಗಿದೆ ವಿನ್ಯಾಸ

ಕೋಕಾ ಕೋಲಾ ಸ್ಮಾರ್ಟ್​​ಫೋನ್​

ಕೋಕಾ ಕೋಲಾ ಸ್ಮಾರ್ಟ್​​ಫೋನ್​

ಅಮೆರಿಕಾದ ಜನಪ್ರಿಯ ಪಾನೀಯ ಕಂಪೆನಿಯಾಗಿರುವ ಕೋಕಾ ಕೋಲಾ ಮಾರುಕಟ್ಟೆಗೆ ಹೊಸ ಸ್ಮಾರ್ಟ್​​​ಫೋನ್​ ಅನ್ನು ಪರಿಚಯಿಸಲು ಸಜ್ಜಾಗಿದ್ದು, ಈ ಸ್ಮಾರ್ಟ್​​ಫೋನ್​ನ ಸದ್ಯ ಫೀಚರ್ಸ್​, ವಿನ್ಯಾಸದ ಬಗ್ಗೆ ಮಾಹಿತಿ ಸೋರಿಕೆಯಾಗಿದೆ. 

  • Share this:

    ಇತ್ತೀಚಿನ ದಿನಗಳಲ್ಲಿ ಮೊಬೈಲ್​​ ಮಾರುಕಟ್ಟೆ (Mobile Market) ವ್ಯಾಪಕವಾಗಿ ಬೆಳವಣಿಗೆಯಾಗುತ್ತಿದೆ. ಇದಕ್ಕೆ ಕಾರಣ ಬಿಡುಗಡೆಯಾಗುತ್ತಿರುವ ಸ್ಮಾರ್ಟ್​​​ಫೋನ್​ಗಳಲ್ಲಿರುವ ವಿನ್ಯಾಸ, ಫೀಚರ್ಸ್​​ಗಳು ಅಂತಾನೇ ಹೇಳ್ಬಹುದು. ಕಳೆದ ವರ್ಷದಲ್ಲಿ ಹೊಸ ಸ್ಮಾರ್ಟ್​​ಫೋನ್​ಗಳ ಜೊತೆಗೆ ಹೊಸ ಮೊಬೈಲ್​ ತಯಾರಿಕಾ ಕಂಪೆನಿಗಳು ಸಹ ಹುಟ್ಟಿಕೊಂಡಿವೆ. ಸ್ಮಾರ್ಟ್​​ಫೋನ್​ಗಳು ಈಗಿನ ಕಾಲಮಾನದಲ್ಲಿ ಪ್ರತಿಯೊಬ್ಬರ ಅಗತ್ಯ ಸಾಧನವಾಗಿಬಿಟ್ಟಿದೆ. ಸ್ಮಾರ್ಟ್​​ಫೋನ್​ ಇಲ್ಲದೇಜೀವನವೇ ಇಲ್ಲ ಎನ್ನುವರು ಎಷ್ಟೋ ಮಂದಿ ಇದ್ದಾರೆ. ಹೀಗಿರುವಾಗ ಸ್ಮಾರ್ಟ್​​ಫೋನ್​ ಯುಗದಲ್ಲಿ ಸಂಚಲನ ಮೂಡಿಸಲುಹೊಸ ಕಂಪೆನಿಯೊಂದು ತಯಾರಾಗಿದೆ. ಇದುವರೆಗೆ ಕೂಲ್​ ಡ್ರಿಂಕ್ಸ್​ (Cool Drinks) ತಯಾರಿಯಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದಿದ್ದ ಕೋಕಾ ಕೋಲಾ ಕಂಪೆನಿ (Coca-Cola Company) ಇದೀಗ ತನ್ನ ಬ್ರಾಂಡ್​ನ ಅಡಿಯಲ್ಲಿ ಸ್ಮಾರ್ಟ್​​ಫೋನ್​ ಅನ್ನು ಬಿಡುಗಡೆ ಮಾಡುತ್ತಿದೆ.


    ಅಮೆರಿಕಾದ ಜನಪ್ರಿಯ ಪಾನೀಯ ಕಂಪೆನಿಯಾಗಿರುವ ಕೋಕಾ ಕೋಲಾ ಮಾರುಕಟ್ಟೆಗೆ ಹೊಸ ಸ್ಮಾರ್ಟ್​​​ಫೋನ್​ ಅನ್ನು ಪರಿಚಯಿಸಲು ಸಜ್ಜಾಗಿದ್ದು, ಈ ಸ್ಮಾರ್ಟ್​​ಫೋನ್​ನ ಸದ್ಯ ಫೀಚರ್ಸ್​, ವಿನ್ಯಾಸದ ಬಗ್ಗೆ ಮಾಹಿತಿ ಸೋರಿಕೆಯಾಗಿದೆ.


    ಸೋಶಿಯಲ್​ ಮೀಡಿಯಾದಲ್ಲಿ ವೈರಲ್​


    ಕೋಕಾ ಕೋಲಾ ಕಂಪೆನಿಯ ಸ್ಮಾರ್ಟ್​​ಫೋನ್​ ಕೆಲವೇ ದಿನಗಳಲ್ಲಿ ಭಾರತೀಯ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಎಂದು ವರದಿಯಾಗಿದೆ. ಇನ್ನು ಈ ಕಂಪೆನಿಯ ಸ್ಮಾರ್ಟ್​​ಫೋನ್​ ಮುಕುಲ್​ ಶರ್ಮಾ ಮಾಹಿತಿ ಶೇರ್​ ಮಾಡಿಕೊಂಡಿದ್ದಾರೆ. ಹಾಗೆಯೇ ಮಂಬರುವ ಸ್ಮಾರ್ಟ್​​ಫೋನ್​ನ ವಿನ್ಯಾಸ ಹಾಗೂ ಬ್ಯಾಕ್​ ಪ್ಯಾನೆಲ್​ನ  ಫೋಟೋವನ್ನು ತನ್ನ ಟ್ವಿಟರ್​ ಅಕೌಂಟ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.




    ಟಿಪ್​ಸ್ಟಾರ್​​ ಮುಕುಲ್​ ಶರ್ಮಾ ಅವರ ಸ್ಮಾರ್ಟ್​ಫೋನ್​ ಬಗ್ಗೆ ಅಭಿಪ್ರಾಯ


    ಟಿಪ್‌ಸ್ಟಾರ್‌ ಮುಕುಲ್‌ ಶರ್ಮಾ ಅವರು ತಮ್ಮ ಟ್ವಿಟರ್​ನಲ್ಲಿ ಕೋಕಾ-ಕೋಲಾದಿಂದ ಮುಂಬರುವ ಹೊಸ ಫೋನ್‌ನ ವಿನ್ಯಾಸವನ್ನು ಶೇರ್ ಮಾಡಿದ್ದು, ಈ ಫೋನ್‌ ಕೆಂಪು ಬಣ್ಣದ ವೇರಿಯಂಟ್‌ನಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ಅಂದಾಜಿಸಲಾಗಿದೆ.


    ಕೋಕಾ ಕೋಲಾ ಸ್ಮಾರ್ಟ್​​ಫೋನ್​


    ಇನ್ನು ಶೇರ್ ಮಾಡಿರುವ ಫೋಟೋವನ್ನು ನೋಡುವಾಗ ಈ ಫೋನ್‌ ಹಿಂಭಾಗದ ಪ್ಯಾನೆಲ್‌ನಲ್ಲಿ ಕೋಕಾ ಕೋಲಾ ಬ್ರ್ಯಾಂಡಿಂಗ್ ಅನ್ನು ದೊಡ್ಡ ಫಾಂಟ್‌ನಲ್ಲಿ ಬರೆದಿರುವುದನ್ನು ಕಾಣಬಹುದಾಗಿದೆ. ಅದೇ ರೀತಿ ಕೋಕಾ ಕೋಲಾ ಕಂಪೆನಿಯ ಈ ಸ್ಮಾರ್ಟ್​​ಫೋನ್​ ಇದೇ ತ್ರೈಮಾಸಿಕದಲ್ಲಿ ಬಿಡುಗಡೆಯಾಗಬಹುದೆಂದು ಅಂದಾಜಿಸಲಾಗಿದೆ.


    ಕೋಕಾ ಕೋಲಾ ಸ್ಮಾರ್ಟ್​​ಫೋನ್​ ಫೀಚರ್ಸ್​​ನ ನಿರೀಕ್ಷೆ


    ಮುಕುಲ್‌ ಶರ್ಮಾ ಶೇರ್ ಮಾಡಿರುವ ಫೋಟೋ ಪ್ರಕಾರ, ಕೋಕಾ ಕೋಲಾ ಸ್ಮಾರ್ಟ್‌ಫೋನ್‌ ಹಿಂದಿನ ಪ್ಯಾನೆಲ್‌ ಲುಕ್‌ ಆಕರ್ಷಕ ರೆಡ್‌ ಲುಕ್‌ನಲ್ಲಿದೆ. ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್​ ಅನ್ನು ಹೊಂದಿರಬಹುದು ಎಂದು ಈ ಚಿತ್ರದಲ್ಲಿ ಅಂದಾಜಿಸಬಹುದು. ಹಿಂಭಾಗದಲ್ಲಿ ಕ್ಯಾಮೆರಾ ಜೊತೆಗೆ ಎಲ್ಇಡಿ ಫ್ಲ್ಯಾಷ್ ಅನ್ನು ಸಹ ಹೊಂದಿರಲಿದೆ. ಇನ್ನು ಕೋಕಾ ಕೋಲಾ ಫೋನ್ ಬಹುತೇಕ ರಿಯಲ್‌ಮಿ 10, ರಿಯಲ್‌ಮಿ ಸಿ33 ಮತ್ತು ಒಪ್ಪೋ ಎ78 ಫೋನಿನ ಕ್ಯಾಮೆರಾ ಲೆನ್ಸ್‌ಗಳಂತೆ ಕಂಡು ಬರುತ್ತದೆ.


    ಇದನ್ನೂ ಓದಿ: ಮೊಟೊ ಕಂಪೆನಿಯ ಎರಡು ಸ್ಮಾರ್ಟ್​​ಫೋನ್​ಗಳು​ ಲಾಂಚ್​! ಬೆಲೆ ಎಷ್ಟು?


    ಫಿಂಗರ್​​ಪ್ರಿಂಟ್​ ಸ್ಕ್ಯಾನರ್​


    ಕೋಕಾ ಕೋಲಾ ಸ್ಮಾರ್ಟ್​​ಫೋನ್​ ಹಿಂಬದಿಯ ಪ್ಯಾನೆಲ್​ ಡಾರ್ಕ್​ ಕೆಂಪು ಬಣ್ಣದಲ್ಲಿ ಬಿಡುಗಡೆಯಾಗಬಹುದು. ಹಾಗೆಯೇ ಇದರಲ್ಲಿ ಕೋಕಾ ಕೋಲಾ ಬ್ಯಾಂಡಿಂಗ್ ಅನ್ನು ದೊಡ್ಡ ಫಾಂಟ್​ ಸೈಜ್​ನಲ್ಲಿ ಬರೆಯಲಾಗಿದೆ. ಇನ್ನು ಇದರ ಹಿಂಬದಿಯಲ್ಲಿ ಯಾವುದೇ ಫಿಂಗರ್​ಪ್ರಿಂಟ್​ ಸ್ಕ್ಯಾನರ್​ ಇಲ್ಲದೇ ಇರುವುದರಿಂದ ಸೈಡ್​ ಪವರ್​ ಬಟನ್​ನಲ್ಲೇ ಫಿಂಗರ್​ ಪ್ರಿಂಟ್​ ಸ್ಕ್ಯಾನರ್​ ಅನ್ನು ಆ್ಯಡ್​ ಮಾಡಬಹುದು ಎಂದು ನಿರೀಕ್ಷಿಸಬಹುದು.


    ಈ ಸ್ಮಾರ್ಟ್​​ಫೋನ್​ನ ಒಂದೆರಡು ಫೋಟೋ ಮಾತ್ರ ಸದ್ಯ ವೈರಲ್​ ಆಗಿದ್ದು ಇದರ ಫೀಚರ್ಸ್​, ಬೆಲೆ ಬಗ್ಗೆ ಕಂಪೆನಿ ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು