Coca Cola Smartphone: ಕೊನೆಗೂ ಭಾರತದಲ್ಲಿ ರಿಲೀಸ್ ಆಯ್ತು ಕೋಕಾ ಕೋಲಾ ಸ್ಮಾರ್ಟ್‌ಫೋನ್! ಬೆಲೆ ಎಷ್ಟು ಗೊತ್ತಾ?
Coca Cola Smartphone: ಕೊನೆಗೂ ಭಾರತದಲ್ಲಿ ರಿಲೀಸ್ ಆಯ್ತು ಕೋಕಾ ಕೋಲಾ ಸ್ಮಾರ್ಟ್‌ಫೋನ್! ಬೆಲೆ ಎಷ್ಟು ಗೊತ್ತಾ?
ಕೋಕಾ ಕೋಲಾ ಸ್ಮಾರ್ಟ್‌ಫೋನ್
Smartphone Launch: ಮಾರುಕಟ್ಟೆಯಲ್ಲಿ ಭಾರೀ ನಿರೀಕ್ಷೆಯಲ್ಲಿದ್ದ ಸ್ಮಾರ್ಟ್‌ಫೋನ್ ಎಂದರೆ ಅದು ಕೋಕಾ ಕೋಲಾ ಸ್ಮಾರ್ಟ್‌ಫೋನ್. ಈ ಸ್ಮಾರ್ಟ್‌ಫೋನ್ ಸದ್ಯ ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಹಾಗಿದ್ರೆ ಈ ಸ್ಮಾರ್ಟ್‌ಫೋನ್ ಫೀಚರ್ಸ್, ಬೆಲೆ ಮಾಹಿತಿ ತಿಳಿಬೇಕಾದ್ರೆ ಈ ಲೇಖನವನ್ನು ಓದಿ.
ಬಹುನಿರೀಕ್ಷಿತ ಕೋಕಾ ಕೋಲಾ ಎಡಿಷನ್ ಸ್ಮಾರ್ಟ್‌ಫೋನ್ ಭಾರತದಲ್ಲಿ ಸದ್ಯ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಫೋನ್ ಅನ್ನು ರಿಯಲ್‌ಮಿ ಸಂಸ್ಥೆಯು ಭಾರತದಲ್ಲಿ ಲಾಂಚ್ ಮಾಡಿದ್ದು, ಈ ಫೋನ್ ಈಗಾಗಲೇ ಮಾರುಕಟ್ಟೆಯಲ್ಲಿ ಭಾರೀ ಕುತೂಹಲವನ್ನು ಸೃಷ್ಠಿಸಿದೆ.
ಡಿಸ್‌ಪ್ಲೇ ವಿನ್ಯಾಸ: ರಿಯಲ್‌ಮಿ 10ಪ್ರೋ 5ಜಿ ಕೋಕಾ-ಕೋಲಾ ಎಡಿಷನ್ ಫೋನ್ 6.72 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಅನ್ನು ಪಡೆದಿದೆ. ಇದು 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು 93.76 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ ಬಿಡುಗಡೆಯಾಗಿದೆ.
ಕ್ಯಾಮೆರಾ ಸೆಟಪ್: ರಿಯಲ್‌ಮಿ 10 ಪ್ರೋ 5ಜಿ ಕೋಕಾ-ಕೋಲಾ ಎಡಿಷನ್ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಸ್ಯಾಮ್‌ಸಂಗ್ HM6 ಸೆನ್ಸಾರ್ ಅನ್ನು ಹೊಂದಿದೆ.
ಕೋಕಾ ಕೋಲಾ ಸ್ಮಾರ್ಟ್ಫೋನ್ನಲ್ಲಿ ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಪೋರ್ಟ್ರೇಟ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ ಸೆಲ್ಫಿಗಾಗಿ ಈ ಸ್ಮಾರ್ಟ್ಫೋನ್ನಲ್ಲಿ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಪ್ರೊಸೆಸರ್ ಸಾಮರ್ಥ್ಯ: ರಿಯಲ್‌ಮಿ 10 ಪ್ರೋ 5ಜಿ ಕೋಕಾ-ಕೋಲಾ ಎಡಿಷನ್ ಫೋನ್ 6nm ಸ್ನಾಪ್‌ಡ್ರಾಗನ್ 695 5G SoC ಪ್ರೊಸೆಸರ್ ಬಲವನ್ನು ಪಡೆದಿದೆ. ಹಾಗೆಯೇ 8 ಜಿಬಿ ರ್‍ಯಾಮ್ ಮತ್ತು 128 ಜಿಬಿ ಇಂಟರ್ನಲ್ ಸ್ಟೋರೇಜ್ ಆಯ್ಕೆಯನ್ನು ಪಡೆದುಕೊಂಡಿದೆ.
ಇನ್ನು ಈ ಸ್ಮಾರ್ಟ್ಫೋನ್ನಲ್ಲಿ ರ್‍ಯಾಮ್ ಅನ್ನು 16ಜಿಬಿ ವರೆಗೆ ವಿಸ್ತರಿಸಬಹುದಾಗಿದೆ. ಇದರೊಂದಿಗೆ ಮೆಮೊರಿ ಕಾರ್ಡ್ ಸ್ಲಾಟ್ ಅನ್ನು ಸಹ ನೀಡಲಾಗಿದ್ದು, ಈ ಮೂಲಕ 1 ಟಿಬಿ ವರೆಗೆ ಸ್ಟೋರೇಜ್ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.
ಬ್ಯಾಟರಿ ಫೀಚರ್ಸ್: ರಿಯಲ್‌ಮಿ 10 ಪ್ರೋ 5ಜಿ ಕೋಕಾ-ಕೋಲಾ ಎಡಿಷನ್ ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪ್ಯಾಕ್ ಆಗಿದೆ. ಈ ಬ್ಯಾಟರಿಯು 33W ಸೂಪರ್ ವೂಕ್ ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಪಡೆದಿದೆ. ಇದರಿಂದ ಈ ಸ್ಮಾರ್ಟ್‌ಫೋನ್ ಅನ್ನು ಕೇವಲ 20 ನಿಮಿಷಗಳಲ್ಲಿ 50% ಚಾರ್ಜ್ ಮಾಡಬಹುದಾಗಿದೆ.
ಬೆಲೆ ಮತ್ತು ಲಭ್ಯತೆ: ಭಾರತದಲ್ಲಿ ರಿಯಲ್‌ಮಿ 10 ಪ್ರೋ 5ಜಿ ಕೋಕಾ-ಕೋಲಾ ಎಡಿಷನ್ ಫೋನ್ 8ಜಿಬಿ ರ್‍ಯಾಮ್ ಮತ್ತು 128 ಜಿಬಿ ಸ್ಟೋರೇಜ್ ರೂಪಾಂತರದ ಬೆಲೆ 20,999 ರೂಪಾಯಿ ಆಗಿದೆ. ಅಂದಹಾಗೆ ರಿಯಲ್‌ಮಿ ಸಂಸ್ಥೆಯು ಸದ್ಯ 1000 ಯೂನಿಟ್‌ಗಳಷ್ಟು ಸ್ಮಾರ್ಟ್ಫೋನ್ಗಳನ್ನು ಮಾತ್ರ ಮಾರಾಟ ಮಾಡುವುದಾಗಿ ತಿಳಿಸಿದೆ.
Published by:Prajwal B
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ