ಸ್ಮಾರ್ಟ್ಫೋನ್ಗಳು (Smartphones) ಇತ್ತೀಚಿನ ಟೆಕ್ ಮಾರುಕಟ್ಟೆಯಲ್ಲಿ ಭಾರೀ ಮುಂಚೂಣಿಯಲ್ಲಿದೆ. ಅದೇ ರೀತಿ ಕಂಪೆನಿಗಳು ಸಹ ಹೊಸ ಹೊಸ ಮಾದರಿಯ ಮೊಬೈಲ್ಗಳನ್ನು ಬಿಡುಗಡೆ ಮಾಡುತ್ತಿರುತ್ತಾರೆ. ಇತ್ತೀಚೆಗೆ ಸ್ಮಾರ್ಟ್ಫೋನ್ಗಳಿಗೆ ಬೇಡಿಕೆ ಹೆಚ್ಚಿದೆ ಹೌದು, ಆದರೆ ಇದರ ಜೊತೆಗೆ ಕೆಲವೊಂದು ಹೊಸ ಕಂಪೆನಿಗಳು ಸಹ ಹುಟ್ಟಿಕೊಳ್ತಾ ಇದೆ. ಈ ಕಂಪೆನಿಗಳು ಜನರನ್ನು ತನ್ನತ್ತ ಆಕರ್ಷಿಸುವ ಸಲುವಾಗಿ ಗುಣಮಟ್ಟದ ಪ್ರೊಸೆಸರ್, ವಿನ್ಯಾಸ ಹೊಂದಿದ ಸ್ಮಾರ್ಟ್ಫೋನ್ಗಳನ್ನು ಪರಿಚಿಯಿಸುತ್ತದೆ. ಇದೀಗ ಜನಪ್ರಿಯ ತಂಪು ಪಾನೀಯ ತಯಾರಿಕಾ ಬ್ರಾಂಡ್ ಆಗಿರುವ ಕೋಕಾ ಕೋಲಾ ಕಂಪೆನಿ (Coca-Cola Company) ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಸ್ಮಾರ್ಟ್‌ಫೋನ್ ರಿಯಲ್‌ಮಿ ಸ್ಮಾರ್ಟ್‌ಫೋನ್‌ನ (Realme Smartphone) ವರ್ಷನ್ನೊಂದಿಗೆ ಬಿಡುಗಡೆಯಾಗುತ್ತದೆ.
ಕೋಕಾ ಕೋಲಾ ಕಂಪೆನಿಯಿಂದ ಬರುತ್ತಿರುವ ಹೊಸ ಸ್ಮಾರ್ಟ್‌ಫೋನ್ ಇದೇ ಫೆಬ್ರವರಿ 10ರಂದು ಲಾಂಚ್ ಆಗಲಿವೆ ಎಂದು ವರದಿಯಾಗಿದೆ. ಈ ಸ್ಮಾರ್ಟ್‌ಫೋನ್ ಬಿಡುಗಡೆಗೆ ಮೊದಲೇ ಇದರ ಫೋಟೋಗಳು, ಕೆಲವೊಂದು ಫೀಚರ್ಸ್ಗಳು ಸೋರಿಕೆಯಾಗಿದ್ದು, ಇದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ.
ರಿಯಲ್ಮಿಯನ್ನು ಹೋಲುವ ಕೋಕಾ ಕೋಲಾ ಸ್ಮಾರ್ಟ್‌ಫೋನ್
ರಿಯಲ್‌ಮಿ ಭಾರತದಲ್ಲಿ ಹೊಸ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲು ಮುಂದಾಗಿದ್ದು, ಈ ಮೂಲಕ ಈ ವಿಶೇಷ ರೂಪಾಂತರವನ್ನು ಮಾರುಕಟ್ಟೆಗೆ ಪರಿಚಯಿಸಲು ಕೋಕಾ-ಕೋಲಾದೊಂದಿಗೆ ಸಹಕರಿಸುತ್ತಿದೆ ಎಂದು ತಿಳಿದುಬಂದಿದೆ. ಈ ಹೊಸ ಸ್ಮಾರ್ಟ್‌ಫೋನ್‌ಗೆ ರಿಯಲ್‌ಮಿ 10 ಪ್ರೋ ನ ವಿಶೇಷ ಆವೃತ್ತಿ ಎಂದು ತಿಳಿದುಬಂದಿದೆ. ಹಾಗೆಯೇ ರಿಯಲ್‌ಮಿ 10 ಪ್ರೋ ಸ್ಮಾರ್ಟ್‌ಫೋನ್ ಅನ್ನು ಕಳೆದ ವರ್ಷದ ಕೊನೆಯಲ್ಲಿ ಭಾರತದಲ್ಲಿ ಲಾಂಚ್ ಮಾಡಲಾಗಿತ್ತು.
ವಿನ್ಯಾಸ ಹೇಗಿದೆ?
ಇನ್ನು ಕೋಕಾ ಕೋಲಾ ಕಂಪೆನಿಯಿಂದ ಬಿಡುಗಡೆಯಾಗುತ್ತಿರುವ ಸ್ಮಾರ್ಟ್‌ಫೋನ್‌ನ ಲೀಕ್ ಆದ ಚಿತ್ರಗಳ ಪ್ರಕಾರ, ಈ ಮೊಬೈಲ್ ರಿಯರ್ ಪ್ಯಾನೆಲ್ ವಿನ್ಯಾಸದಲ್ಲಿ ಡ್ಯುಯಲ್ ಟೋನ್ ಕಲರ್ನಲ್ಲಿ ಬಿಡುಗಡೆಯಾಗಲಿದೆ. ಅಂದರೆ ರಿಯರ್ ಪ್ಯಾನೆಲ್‌ನ ಹಿಂಭಾಗದಲ್ಲಿ ಮೂರನೇ ಒಂದು ಭಾಗವು ಕಪ್ಪು ಬಣ್ಣವನ್ನು ಹೊಂದಿದೆ. ಇದರಲ್ಲಿ ರಿಯಲ್‌ಮಿ ಬ್ರಾಂಡ್ನ ಲೋಗೋ ಹೆಸರನ್ನು ಬರೆಯಲಾಗಿದೆ.
ಹಾಗೆಯೇ ಉಳಿದ ಭಾಗವು ಕೆಂಪು ಬಣ್ಣದಿಂದ ಕೂಡಿದ್ದು, ಇದರ ಮೇಲೆ ಕೋಕಾ-ಕೋಲಾ ಬ್ರ್ಯಾಂಡಿಂಗ್ ಅನ್ನು ಸ್ಲ್ಯಾಪ್ ಮಾಡಲಾಗಿದೆ. ಇನ್ನು ವಿಶೇಷವಾಗಿ ಈ ಸ್ಮಾರ್ಟ್‌ಫೋನ್ ರಿಯಲ್‌ಮಿ 10 ಪ್ರೋ ಸ್ಮಾರ್ಟ್‌ಫೋನ್‌ನ ಫೀಚರ್ಸ್ ಅನ್ನೇ ಹೊಂದಿರಲಿದೆ ಎನ್ನಲಾಗಿದ್ದು, ವಿನ್ಯಾಸ ಮಾತ್ರ ವಿಭಿನ್ನತೆಯನ್ನು ಹೊಂದಿರುತ್ತದೆ ಎನ್ನಲಾಗಿದೆ. ಹಾಗಿದ್ರೆ ರಿಯಲ್‌ಮಿ 10 ಪ್ರೋ ಫೀಚರ್ಸ್ ಹೇಗಿದೆ ಎಂದು ಈ ಕೆಳಗಿನ ಲೇಖನದಲ್ಲಿ ಓದಿ.
ರಿಯಲ್‌ಮಿ 10 ಪ್ರೋ 5ಜಿ ಸ್ಮಾರ್ಟ್‌ಫೋನ್ ಫೀಚರ್ಸ್
ರಿಯಲ್‌ಮಿ 10 ಪ್ರೋ 5ಜಿ ಸ್ಮಾರ್ಟ್‌ಫೋನ್ 6.72 ಇಂಚಿನ ಫುಲ್ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಇದು 120Hz ರಿಫ್ರೆಶ್ ರೇಟ್ ನೀಡಲಿದ್ದು, ಸೆಲ್ಫಿ ಕ್ಯಾಮೆರಾ ಉದ್ದೇಶಕ್ಕಾಗಿ ಮೇಲ್ಭಾಗದ ಮಧ್ಯದಲ್ಲಿ ಪಂಚ್ ಕಟೌಟ್‌ನ ಶೈಲಿ ಪಡೆದುಕೊಂಡಿದೆ. ಇದರೊಂದಿಗೆ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 695 ಎಸ್ಓಸಿ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ಈ ಫೋನ್ 8ಜಿಬಿ ರ್‍ಯಾಮ್ ಮತ್ತು 128ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯದೊಂದಿಗೆ ಲಾಂಚ್ ಆಗಿದೆ.
ಇದನ್ನೂ ಓದಿ: ಅಪಾಯಕಾರಿ ಆ್ಯಪ್‌ಗಳ ಮೇಲೆ ಗೂಗಲ್ ಹದ್ದಿನಕಣ್ಣು, 12 ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ಡಿಲೀಟ್!
ಹಾಗೆಯೇ ರಿಯರ್ ಡ್ಯುಯಲ್ ಕ್ಯಾಮೆರಾ ರಚನೆ ಇದರಲ್ಲಿದ್ದು, 108 ಎಮ್ಪಿ ಪ್ರಮುಖ ಕ್ಯಾಮೆರಾ ಸೆನ್ಸಾರ್ ಹಾಗೂ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಆಯ್ಕೆ ಇದೆ. ಇನ್ನು ಈ ಫೋನ್‌ನ ಬ್ಯಾಟರಿ ವಿಚಾರಕ್ಕೆ ಬರುವುದಾದರೆ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದ್ದು, ಈ ಬ್ಯಾಟರಿಯು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ