Clubhouse New Features: ಇನ್ಮುಂದೆ ನಿಮ್ಮಿಷ್ಟದ ಸ್ನೇಹಿತನಿಗೆ ಖಾಸಗಿ ಸಂದೇಶ ಕಳುಹಿಸಬಹುದು! ಕ್ಲಬ್​ಹೌಸ್​ನಲ್ಲೊಂದು ಹೊಸ ಫೀಚರ್​

Clubhouse Wave Features: ಕ್ಲಬ್​ ಹೌಸ್​ ಇದೀಗ ಖಾಸಗಿ ಚಾಟ್​ (Private Chat) ತೆರೆಯಲು ಅನುಮತಿಸುತ್ತದೆ. ಈವರೆಗೆ ಗುಂಪಿನ ಮೂಲಕ ಧ್ವನಿ ಮೂಲಕ ಸಂದೇಶ ರವಾನೆಯಾಗುತ್ತಿತ್ತು. ಆದರೆ ಖಾಸಗಿಯಾಗಿ ಸಂದೇಶ ರವಾನಿಸುವ ಯಾವುದೇ ಆಯ್ಕೆ ಇರಲಿಲ್ಲ. ಆದರೀಗ ಬಳಕೆದಾರ ತನ್ನ ಸ್ನೇಹಿತನಿಗೆ ವೇವ್​ (Wave) ಮಾಡುವ ಮೂಲಕ ಖಾಸಗಿ ಆಡಿಯೋ ಚಾಟ್​ ಮಾಡುವ ಫೀಚರ್ಸ್​ ಅನ್ನು ಅಮೆರಿಕದ ಅಪ್ಲಿಕೇಶನ್​ ಪರಿಚಯಿಸಿದೆ.

ಕ್ಲಬ್​ಹೌಸ್​-Clubhouse App

ಕ್ಲಬ್​ಹೌಸ್​-Clubhouse App

  • Share this:
    Clubhouse Wave Features: ಅಮೆರಿಕ​ ಮೂಲಕ ಕ್ಲಬ್​ಹೌಸ್​​ ಸಾಕಷ್ಟು ಬಳಕೆದಾರರನ್ನು ಹೊಂದುವ ಮೂಲಕ ಸದ್ಯ ಟ್ರೆಂಡಿಂಗ್​ನಲ್ಲಿರುವ ಸಾಮಾಜಿಕ ಆಡಿಯೋ ಅಪ್ಲಿಕೇಶನ್​ ಆಗಿ ಗುರುತಿಸಿಕೊಂಡಿದೆ. ಸದ್ಯ ಪ್ರಪಂಚದ ಬಹುತೇಕರು ಈ ಆ್ಯಪ್​ ಅನ್ನು ಡೌನ್​ಲೋಡ್ (Download)​ ಮಾಡುವ ಮೂಲಕ ನಿರಂತರ ಬಳಸುತ್ತಿದ್ದಾರೆ. ಹೀಗಿರುವಾಗ ಕಂಪನಿ ಅವರಿಗೆಂದೇ ಹೊಸ ಫೀಚರ್ಸ್​​ವೊಂದನ್ನ ಪರಿಚಯಿಸಿದೆ. ನೂತನ ಫೀಚರ್ಸ್​ ಬಳಕೆದಾರ ತನ್ನ ಸ್ನೇಹಿತನೊಂದಿಗೆ ಆಡಿಯೋ ಚಾಟ್ (Audio Chat) ಮಾಡುವಂತಹ ಆಯ್ಕೆಯನ್ನು ಸೇರಿಸಿಕೊಂಡಿದೆ.

    ಕ್ಲಬ್​ ಹೌಸ್​ ಇದೀಗ ಖಾಸಗಿ ಚಾಟ್​ (Private Chat) ತೆರೆಯಲು ಅನುಮತಿಸುತ್ತದೆ. ಈವರೆಗೆ ಗುಂಪಿನ ಮೂಲಕ ಧ್ವನಿ ಮೂಲಕ ಸಂದೇಶ ರವಾನೆಯಾಗುತ್ತಿತ್ತು. ಆದರೆ ಖಾಸಗಿಯಾಗಿ ಸಂದೇಶ ರವಾನಿಸುವ ಯಾವುದೇ ಆಯ್ಕೆ ಇರಲಿಲ್ಲ. ಆದರೀಗ ಬಳಕೆದಾರ ತನ್ನ ಸ್ನೇಹಿತನಿಗೆ ವೇವ್​ (Wave) ಮಾಡುವ ಮೂಲಕ ಖಾಸಗಿ ಆಡಿಯೋ ಚಾಟ್​ ಮಾಡುವ ಫೀಚರ್ಸ್​ ಅನ್ನು ಅಮೆರಿಕದ ಅಪ್ಲಿಕೇಶನ್​ ಪರಿಚಯಿಸಿದೆ.

    ಕ್ಲಬ್‌ಹೌಸ್, "ಸಾಮಾಜಿಕ ಆಡಿಯೋ" (Social Audio) ಫೀಚರ್ ಅನ್ನು ಫೇಸ್‌ಬುಕ್ ಮತ್ತು ಟ್ವಿಟ್ಟರ್ ಮೂಲಕ ನಕಲು ಮಾಡಿದೆ, ಬಳಕೆದಾರರು ಇದೀಗ ಖಾಸಗಿ ಚಾಟ್‌ಗಳನ್ನು ಹೊಂದಬಹುದಾಗಿದೆ ಎಂದು ಸಹ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಪಾಲ್ ಡೇವಿಸನ್ ಅವರು ತಿಳಿಸಿದ್ದಾರೆ

    "ಹೆಚ್ಚಿನ ಜನರು ಸಂಭಾಷಣೆಗಾಗಿ, ಸೂಕ್ತವಾದ ವಿಚಾರದ ಕುರಿತು ಚರ್ಚಿಸಲು ಕ್ಲಬ್​ ಹೌಸ್​ ಬಳಸುತ್ತಿದ್ದಾರೆ. ಆದರೆ ಜನರು ಇಷ್ಟು ದಿನ ಉಳಿಯಲು ಮುಖ್ಯವಾದ ಕಾರಣವೆಂದರೆ ಅವರು ತಮ್ಮ ಸ್ನೇಹಿತರನ್ನು ಹುಡುಕುತ್ತಿದ್ದಾರೆ ಮತ್ತು ಹೊಸ ಜನರನ್ನು ಭೇಟಿಯಾಗುತ್ತಾರೆ" ಎಂದು ಅವರು ಸಂದರ್ಶನವೊಂದರಲ್ಲಿ ಪಾಲ್ ಡೇವಿಸನ್ ಹೇಳಿದರು.

    ಕ್ಲಬ್‌ಹೌಸ್‌ನ ಬಳಕೆದಾರರು, ವೆಂಚರ್ ಕ್ಯಾಪಿಟಲ್ ಸಂಸ್ಥೆ ಆಂಡ್ರೀಸೆನ್ ಹೊರೊವಿಟ್ಜ್ ಅವರ ಬೆಂಬಲದೊಂದಿಗೆ, ಕ್ಲಬ್​ಹೌಸ್​ ಆ್ಯಪ್‌ನಲ್ಲಿ ಆನ್‌ಲೈನ್‌ನಲ್ಲಿ ಸ್ನೇಹಿತರನ್ನು "ವೇವ್" ಮಾಡಬಹುದು ಮತ್ತು ಒಬ್ಬ ವ್ಯಕ್ತಿಯು ಅಲೆಯನ್ನು ಸ್ವೀಕರಿಸಿದಾಗ ಖಾಸಗಿ ಆಡಿಯೋ ಚಾಟ್ ರೂಮ್ ತೆರೆಯುತ್ತದೆ. ಬಳಕೆದಾರರು ನಂತರ ಪ್ರೈವೇಟ್​ ಅಥವಾ ಖಾಸಗಿ ಮೆಸೇಜ್​ ಮಾಡಲು ಆಹ್ವಾನಿಸಬಹುದಾಗಿದೆ, ಅಷ್ಟು ಮಾತ್ರವಲ್ಲದೆ  ಎಲ್ಲಾ ಬಳಕೆದಾರರಿಗೂ ಈ ಫೀಚರ್ಸ್​ ಸಿಗಲಿದ್ದ ಯಾರು ಬೇಕಾದರು ಚಾಟ್ ತೆರೆಯ ಬಹುದಾಗಿದೆ ಎಂದು ಕ್ಲಬ್ ಹೌಸ್ ಹೇಳಿದೆ.





    ಕ್ಲಬ್​ಹೌಸ್​-Clubhouse App

    ಸಾಮಾಜಿಕ ಜಾಲತಾಣಕ್ಕೆ ಸೇರ್ಪಡೆಗೊಂಡ ಆ್ಯಪ್​ ಇದಾಗಿದೆ. ಇದರಲ್ಲಿ ಇತರೆ ಜಾಲತಾಣದಂತೆ ಪೋಸ್ಟ್​ ಹಾಕಲು ಸಾಧ್ಯವಿಲ್ಲ. ಫೇಸ್​​ಬುಕ್​, ಇನ್​ಸ್ಟಾಗ್ರಾಂನಲ್ಲಿ ನಮಗೆ ಪೋಸ್ಟ್​ ಮಾಡುವ ಅವಕಾಶವಿದೆ. ಆದರೆ ಕ್ಲಬ್​ಹೌಸ್​ ವಿಶೇಷತೆ ಏನೆಂದರೆ ಇದರಲ್ಲಿ ವಾಯ್ಸ್​ ಚಾಟ್​​ ಮಾಡುವ ಮೂಲಕ ಸಂವಹನ ನಡೆಸಬಹುದಾಗಿದೆ.

    ಸಾಮಾನ್ಯವಾಗಿ ಫೋಟೋ, ವಿಡಿಯೋ, ಧ್ವನಿ ಕರೆ, ಸಂದೇಶ ಮೂಲಕ ಸಂವಹನ ನಡೆಸುತ್ತಿದ್ದ ಜನರು ಅದಕ್ಕೆ ಹೆಚ್ಚು ಒತ್ತುಕೊಟ್ಟಿದ್ದರು. ಆದರೆ ಕ್ಲಬ್​ಹೌಸ್​ ಜನರ ಮನಸ್ಥಿತಿಯನ್ನು ಬದಲಾಯಿಸಲು ಮತ್ತು ಕೊಂಚ ವಿಭಿನ್ನವಾದ ಫೀಚರ್​ ಪರಿಚಯಿಸುವ ಸಲುವಾಗಿ ವಾಯ್ಸ್​ ಚಾಟ್​​ ಅನ್ನು ಇದರಲ್ಲಿ ಮುಖ್ಯವಾಗಿ ಅಳವಡಿಸಿದೆ.

    ಕ್ಲಬ್​ಹೌಸ್​ ಆ್ಯಪ್​ನಲ್ಲಿ ಜನಪ್ರಿಯ ವ್ಯಕ್ತಿಗಳು!

    ಜನಪ್ರಿಯ ವ್ಯಕ್ತಿಗಳು ಕೂಡ ಕ್ಲಬ್​ಹೌಸ್​ ಆ್ಯಪ್​ ಬಳಕೆ ಮಾಡುತ್ತಿದ್ದಾರೆ. ಇದರ ಮೂಲಕ ಲೈವ್​ ಬರುತ್ತಿದ್ದಾರೆ. ಆದ್ದರಿಂದ ದಿನ ಕಳೆದಂತೆ ಬಳಕೆದಾರರ ಸಂಖ್ಯೆಯನ್ನು ಕ್ಲಬ್​ ಹೌಸ್​ ಆ್ಯಪ್ ಹೆಚ್ಚಿಸಿಕೊಳ್ಳುತ್ತಿದೆ.

    Club House ​ಪ್ರಾರಂಭದಲ್ಲಿ ಐಫೋನ್​ ಈ ತಂತ್ರಜ್ನಾನ ಲಭ್ಯವಿತ್ತು. ಆದರೀಗ ಆ್ಯಂಡ್ರಾಯ್ಡ್​ ಬಳಕೆದಾರರಿಗೆ ಬಳಕೆಗೆ ಸಿಗುತ್ತಿದೆ. ಅನೇಕರು ಡೌನ್​ಲೋಡ್​ ಮಾಡಿ ಬಳಸುತ್ತಿದ್ದಾರೆ. ಅದರಲ್ಲೂ ಯುವಜನತೆ ಉತ್ಸುಕತೆ ಜೋರಾಗಿದೆ. ಇನ್ನು ಹೊಸ ಅಪ್​ಡೇಟ್​ನಲ್ಲಿ ಬಳಕೆದಾರರು ಇನ್​ಸ್ಟಾಗ್ರಾಂ ಪ್ರೊಫೈಲ್​ ಸೇರ್ಪಡೆ ಮಾಡುವ ಅವಕಾಶ ನೀಡಿದೆ.

    ಇನ್ನು ಕ್ಲಬ್​ಹೌಸ್​ ಎಂಬುದು ಇನ್ವಿಟೇಷನ್​ ಓನ್ಲಿ ಸೋಷಿಯಲ್​ ಮೀಡಿಯಾ ಆ್ಯಪ್​. ಇದರ ಮೂಲಕ ಚಾಟ್​ ರೂಮ್​ಗಳ್ಲಿ ಬಳಕೆದಾರರು ಧ್ವನಿಯ ಮೂಲಕ ಸಂವಹನ ಮಾಡಬಹುದು. 500 ಸಾವಿರ ಮಂದಿಯ ತನಕ ಗ್ರೂಪ್​ ರಚಿಸಿ ಚಾಯ್ಸ್​ ಚಾಟ್​ ಮಾಡಬಹುದಾಗಿದೆ. ಆದರೆ ಈ ಆ್ಯಪ್​​ನಲ್ಲಿ ಸಂಭಾಷಣೆ ರೆಕಾರ್ಡ್​ ಮಾಡುವುದಕ್ಕೆ, ದಾಖಲಿಸುವುದಕ್ಕೆ ಅವಕಾಶವಿಲ್ಲ.

    ಜನಪ್ರಿಯ ವ್ಯಕ್ತಿಯೊಬ್ಬರು ಕ್ಲಬ್​ಹೌಸ್ ಲೈವ್​​ನಲ್ಲಿ ಮಾತನಾಡುತ್ತಿದ್ದಾರೆ ಎಂದರೆ ಅವರ ಮಾತನ್ನು ಯಾರೂ ಕೂಡ ಆಲಿಸಬಹುದು.  ಜತೆಗೆ ಪ್ರಶ್ನೆಯನ್ನು ಕೇಳಬಹುದು. ಪ್ನಶ್ನೆ ಕೇಳಬೇಕು ಅನಿಸಿದರೆ ಕೈ ಗುರುತಿರುವ ‘ಲೊಗೊ’ ಒತ್ತಿದರಾಯಿತು. ಯಾರು ರೂಂ ಕ್ರಿಯೇಟ್ ಮಾಡಿರುತ್ತಾರೋ ಅವರು ಅನುಮತಿ ನೀಡುತ್ತಾರೆ.

    ಕ್ಲಬ್​ಹೌಸ್​ ಸೃಷ್ಟಿಕರ್ತ ಯಾರು?

    ಚೀನಾದ ನಕಲಿ ಆ್ಯಪ್​ಗಳನ್ನು ಭಾರತ ನಿಷೇಧಗೊಳಿಸಿದ ಬಳಿಕ ಆ ನಂತರ ಜನಪ್ರಿಯತೆಗೊಳ್ಳುತ್ತಿರುವ ಆ್ಯಪ್​ಗಳನ್ನು ಬಳಸುವ ಮುನ್ನ ಆ್ಯಪ್​ ಡೆವಲಪರ್​​, ಯಾವ ದೇಶದ್ದು ಎಂದು ಪರೀಕ್ಷಿಸುತ್ತಿದ್ದಾರೆ. ಅದರಂತೆ ಇದೀಗ ಸುದ್ದಿಯಲ್ಲಿರುವ ಕ್ಲಬ್​ ಹೌಸ್​ ಆ್ಯಪ್​ ಆಲ್ಫಾ ಎಕ್ಸ್​​ ಫ್ಲೊರೇಶನ್​​ ಕಂಪನಿ ಮೂಲದ ಪೌಲ್​ ಡೇವಿಸನ್​ ಹಾಗೂ ರೋಹನ್​ ಸೇಠ್​​ 2020ರ ಮಾರ್ಚ್​ ನಲ್ಲಿ ಬಳಕೆಗೆ ತಂದಿದ್ದಾರೆ. ಐಒಎಸ್ ಮತ್ತು ಆ್ಯಂಡ್ರಾಯ್ಡ್​ (ಬೇಟಾ) ಆವೃತ್ತಿಯಲ್ಲಿ ಬಳಕೆಗೆ ಸಿಗಲಿದೆ. ಇದರ ಗಾತ್ರ 74.8 MBಯಷ್ಟಿದೆ.

    ಯಾರು ಬೇಕಾದರು ಕ್ಲಬ್​ಹೌಸ್​ನಲ್ಲಿ ಖಾತೆ ತೆರೆಯಬಹುದು, ಜತೆಗೆ ಫಾಲೋ ಮಾಡಬಹುದಾಗಿದೆ. ಸದ್ಯ 2 ಮಿಲಿಯನ್​ಗಿಂತ ಹೆಚ್ಚಿನ ಬಳಕೆದಾರರ ಈ ಆ್ಯಪ್​ ಅನ್ನು ಡೌನ್​ ಮಾಡಿದ್ದಾರೆ.

    ಚೀನಾದಲ್ಲಿ ಕ್ಲಬ್​ಹೌಸ್​ ಬ್ಯಾನ್​!

    ಕ್ಲಬ್​ಹೌಸ್​ ಅಲ್ಲಿನ ಮಾರ್ಗಸೂಚಿಗೆ ತಕ್ಕಂತೆ ಇಲ್ಲದಿರುವುದಿಂದ ಮತ್ತು ಇದರಲ್ಲಿ ಧ್ವನಿ ರೆಕಾರ್ಡ್​ ಮಾಡುವುದು, ನಕಲು ಮಾಡುವುದು,  ಹಂಚುವ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲದಿರುವುದರಿಂದ ಗೌಪ್ಯತೆ ವಿಚಾರವಾಗಿ ಓಮನ್​ಮ ಜೋರ್ಡಾನ್​ ಮತ್ತು ಚೀನಾದಲ್ಲಿ ಬ್ಯಾನ್​ ಮಾಡಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಸಾರ್ವಜನಿಕ ಪ್ರವಚನಕ್ಕೆ ಮರುಳಾಗುತ್ತಾರೆ ಎಂಬ ಕಾರಣಕ್ಕೆ ಚೀನಾದ ಈ ಕೆಲಸ ಮಾಡಿದೆ ಎನ್ನಲಾಗುತ್ತಿದೆ.

    ಫೇಸ್​ಬುಕ್​, ಟ್ವಿಟ್ಟರ್​, ಡಿಸ್ಕೋರ್ಡ್​​, ಸ್ಪೋಟಿಫೈ, ರಡ್ಡಿಟ್​​ ಮತ್ತು ಸ್ಲಾಕ್​​ ಆ್ಯಪ್​ನೊಂದಿಗೆ ಕ್ಲಬ್​ಹೌಸ್​ ಸ್ಪರ್ಧಿಸುತ್ತಿದೆ.
    Published by:Harshith AS
    First published: