Clubhouse: ಹೊಸ ಮ್ಯೂಸಿಕ್ ಮೋಡ್ ಆಯ್ಕೆಯನ್ನು ಸಕ್ರಿಯಗೊಳಿಸುವುದು ಮತ್ತು ಬಳಸುವುದು ಹೇಗೆ?

Clubhouse Music Mode: ಈ ಅಪ್ಲಿಕೇಷನ್ ಮೊದಲು ಐಫೋನ್ ಬಳಕೆದಾರರಿಗೆ ಮಾತ್ರ ಲಭ್ಯವಿತ್ತು. ಈಗ ಆ್ಯಂಡ್ರಾಯ್ಡ್ ಬಳಕೆದಾರರೂ ಬಳಸಬಹುದು. ಒಮ್ಮೆ ಒಬ್ಬ ಬಳಕೆದಾರ ಈ ಅಪ್ಲಿಕೇಷನ್‍ಗೆ ಸೇರಿದರೆ, ಆ ವ್ಯಕ್ತಿ ಕ್ಲಬ್ ಹೌಸಿನ ಯಾವುದೇ ‘ರೂಮ್’ಗಳನ್ನು ಪ್ರವೇಶಿಸಬಹುದು.

Clubhouse

Clubhouse

  • Share this:
    ಕ್ಲಬ್ ಹೌಸ್ (Clubhouse) ಇದು ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್ (Facebook), ಇನ್‍ಸ್ಟಾಗ್ರಾಮ್ (Instagram), ಟ್ವಿಟ್ಟರ್‌ನಂತೆ (Twitter) ಈಗಾಗಲೇ ಎಲ್ಲರಿಗೂ ಚಿರಪರಿಚಿತವಾಗಿದೆ. ಇದು ಇನ್ವೈಟ್ ಓನ್ಲಿ ಆಡಿಯೋ ಆಧಾರಿತ ಆ್ಯಪ್ ಆಗಿದ್ದು, ಇದರಲ್ಲಿ ಯಾವುದೇ ಪ್ರೈವಸಿ ಇರುವುದಿಲ್ಲ. ಅಂದರೆ ಸಾರ್ವಜನಿಕವಾಗಿ ಮುಕ್ತವಾಗಿ ಇಲ್ಲಿ ಮಾತನಾಡಬಹುದು, ತಮಗೆ ಅನಿಸಿದ್ದನ್ನು ಶೇರ್ ಮಾಡಬಹುದು. ಯಾವುದೇ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಬಹುದು, ಗುಂಪಲ್ಲಿ ಹರಟೆ ಹೊಡೆಯಬಹುದು.

    ಈ ಅಪ್ಲಿಕೇಷನ್ ಮೊದಲು ಐಫೋನ್ ಬಳಕೆದಾರರಿಗೆ ಮಾತ್ರ ಲಭ್ಯವಿತ್ತು. ಈಗ ಆ್ಯಂಡ್ರಾಯ್ಡ್ ಬಳಕೆದಾರರೂ ಬಳಸಬಹುದು. ಒಮ್ಮೆ ಒಬ್ಬ ಬಳಕೆದಾರ ಈ ಅಪ್ಲಿಕೇಷನ್‍ಗೆ ಸೇರಿದರೆ, ಆ ವ್ಯಕ್ತಿ ಕ್ಲಬ್ ಹೌಸಿನ ಯಾವುದೇ ‘ರೂಮ್’ಗಳನ್ನು ಪ್ರವೇಶಿಸಬಹುದು.

    ಕ್ಲಬ್ ಹೌಸ್ ಅನ್ನು ಸುಖಾಸುಮ್ಮನೆ ಸೇರುವುದಕ್ಕೆ ಆಗುವುದಿಲ್ಲ ಅಂದರೆ ಇದಕ್ಕೆ ಯಾರದ್ದಾದ್ರೂ ಇನ್ವೈಟ್ ಇದ್ದರೆ ಮಾತ್ರ ಸೇರಬಹುದು. ಒಬ್ಬ ಬಳಕೆದಾರ ಮತ್ತಷ್ಟು ಮಂದಿಗೆ ಕ್ಲಬ್ ಹೌಸ್ ಸೇರುವಂತೆ ಆಮಂತ್ರಣ ನೀಡಬಹುದು. ಆ ಲಿಂಕ್ ಮೂಲಕ ಮತ್ತೊಬ್ಬ ಕ್ಲಬ್ ಹೌಸ್ ಸೇರಬಹುದು. ಅಪ್ಲಿಕೇಷನ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, ಡೌನ್ಲೋಡ್ ಮಾಡಿಕೊಳ್ಳಬಹುದು. ಆಮೇಲೆ, ಆಯಾ ವ್ಯಕ್ತಿಯ ಯೂಸರ್ ನೇಮ್ ದಾಖಲು ಮಾಡಿ, ಕ್ಲಬ್ ಹೌಸ್ ಸೇರಲು ಕಾಯಬಹುದು.

    ಕಂಪೆನಿಯೇ ವಿವರಿಸುವಂತೆ, ಈ ಅಪ್ಲಿಕೇಷನ್ ಹೊಸ ರೀತಿಯ ಸಾಮಾಜಿಕ ಮಾಧ್ಯಮ ಯೋಜನೆ. ಇದರಲ್ಲಿ ಕೇವಲ ಆಡಿಯೋ ಮೂಲಕ ಕಥೆ ಹೇಳಬಹುದು, ಹೊಸ ಯೋಜನೆಗಳನ್ನು ರೂಪಿಸಬಹುದು. ಹೊಸ ಹೊಸ ಅಂಶಗಳನ್ನು ಚರ್ಚೆ ಮಾಡಬಹುದು. ಇದೀಗ ಕ್ಲಬ್ ಹೌಸ್ ಮ್ಯೂಸಿಕ್ ಮೋಡ್ ಕೂಡ ಬಳಕೆಗೆ ಬರಲಾರಂಭಿಸಿದೆ.

    ಆ್ಯಂಡ್ರಾಯ್ಡ್ ಫೋನ್‍ಗಳಿಗೆ ಈಗ ಲಭ್ಯವಿರುವ ಕ್ಲಬ್‍ಹೌಸ್ ಆ್ಯಪ್ ವೇಗವಾಗಿ ಬೆಳೆಯುತ್ತಿದೆ. ಹೆಚ್ಚಿನ ಜನರು ಲೈವ್-ಆಡಿಯೋ ಆ್ಯಪ್‌ ಅನ್ನು ಪ್ರಯತ್ನಿಸುತ್ತಿರುವಾಗ ಮತ್ತು ಸಾಂಕ್ರಾಮಿಕ ಸಮಯದಲ್ಲಿ ಲೈವ್ ಪ್ರದರ್ಶನಗಳು ಸಾಧ್ಯವಾಗದೆ ಇರುವುದರಿಂದ, ಸಂಗೀತಗಾರರು ಮತ್ತು ಕಲಾವಿದರು ಲೈವ್ ಶೋಗಳನ್ನು ಆಯೋಜಿಸಲು ಆಡಿಯೋ ಪ್ಲಾಟ್‍ಫಾರ್ಮ್‍ಗಳಿಗೆ ತೆರೆದುಕೊಳ್ಳುತ್ತಿರುವುದನ್ನು ನಾವು ಕಾಣಬಹುದು.

    Read Also: T20 World Cup Live: ಜಿಯೋ ಬಳಕೆದಾರರಿಗೆ Ind Vs Pak ಪಂದ್ಯವನ್ನು ಉಚಿತವಾಗಿ ವೀಕ್ಷಿಸುವ ಅವಕಾಶ!

    ಇಂತಹ ಸಮಯದಲ್ಲಿ ಹೊಸ ಕ್ಲಬ್ ಹೌಸ್ ಮ್ಯೂಸಿಕ್ ಮೋಡ್ ನಿಜವಾಗಿಯೂ ಉಪಯೋಗಕ್ಕೆ ಬರುತ್ತದೆ. ಬ್ಲಾಗ್ ಪೋಸ್ಟಿನಲ್ಲಿ ಕಂಪನಿಯು ಸೂಚಿಸಿದಂತೆ "ಉತ್ತಮ ಗುಣಮಟ್ಟದ ಮತ್ತು ಉತ್ತಮ ಸ್ಟಿರಿಯೊ ಸೌಂಡ್" ನೊಂದಿಗೆ ಸಂಗೀತ ಪ್ರಸಾರ ಮಾಡಲು ಈ ವೈಶಿಷ್ಟ್ಯವು ಶಕ್ತವಾಗಿದೆ. ಬಳಕೆದಾರರು ಈಗಾಗಲೇ ಕಡಿಮೆ, ಮಧ್ಯಮ ಮತ್ತು ಉತ್ತಮ ಗುಣಮಟ್ಟದ ಸೆಟ್ಟಿಂಗ್ ಮೂಲಕ ನೀವು ಲೈವ್ ಸಂಗೀತ ಕೇಳುತ್ತಿದ್ದರೆ ಈ ಹೊಸ ಸಂಗೀತ ಮೋಡ್ ಇನ್ನಷ್ಟು ಸಹಾಯಕವಾಗುತ್ತದೆ.

    ಈ ವೈಶಿಷ್ಟ್ಯ ಬಳಸಿಕೊಂಡು ನೀವು ಯಾವ ಗುಣಮಟ್ಟವನ್ನು ನಿರೀಕ್ಷಿಸಬಹುದು ಎಂಬುದನ್ನು ಕ್ಲಬ್‍ಹೌಸ್ ವಿವರಿಸದಿದ್ದರೂ, ಅದರ ಪೋಸ್ಟಿನಲ್ಲಿ ಬಾಹ್ಯ ಯುಎಸ್‍ಬಿ ಮೈಕ್ರೋಫೋನ್‌ಗಳು ಮತ್ತು ಮಿಕ್ಸಿಂಗ್ ಬೋರ್ಡ್‍ಗಳಂತಹ ವೃತ್ತಿಪರ ಆಡಿಯೋ ಸಾಧನಗಳಿಗೆ ಬೆಂಬಲ ನೀಡುತ್ತದೆ.

    Read Also: Google Drive ಇಲ್ಲದೆಯೇ WhatsApp ಡೇಟಾವನ್ನು ಹೊಸ ಆ್ಯಂಡ್ರಾಯ್ಡ್ ಫೋನ್‌ಗೆ ವರ್ಗಾಯಿಸುವುದು ಹೇಗೆ..?

    ಕ್ಲಬ್‍ಹೌಸ್‍ನಲ್ಲಿ ಸಂಗೀತ ಮೋಡ್ ಅನ್ನು ಸಕ್ರಿಯಗೊಳಿಸುವುದು ಮತ್ತು ಬಳಸುವುದು ಹೇಗೆ?
    ಹೊಸ ವೈಶಿಷ್ಟ್ಯ ಸಕ್ರಿಯಗೊಳಿಸಲು, ಬಳಕೆದಾರರು ಕ್ಲಬ್‍ಹೌಸ್ ಅನ್ನು ತೆರೆಯಬೇಕು ಮತ್ತು ಈಗಾಗಲೇ ಕ್ಲಬ್ ಹೌಸ್ ಬಳಸುತ್ತಿದ್ದರೆ ಮೇಲಿನ ಬಲಭಾಗದಲ್ಲಿರುವ ಮೂರು-ಡಾಟ್ ಮೆನುವನ್ನು ಟ್ಯಾಪ್ ಮಾಡಿ ಆಯ್ಕೆಗಳಿಗೆ ನ್ಯಾವಿಗೇಟ್ ಮಾಡಬಹುದು. ಇಲ್ಲಿ 'ಆಡಿಯೋ ಕ್ವಾಲಿಟಿ' ಆಯ್ಕೆಯನ್ನು ನೋಡಿ ಮತ್ತು ತರುವಾಯ, ವಿವಿಧ ಆಯ್ಕೆಗಳಲ್ಲಿ 'ಮ್ಯೂಸಿಕ್' ಅನ್ನು ಆಯ್ದುಕೊಳ್ಳಬಹುದು. ಮ್ಯೂಸಿಕ್ ಮೋಡ್ ಭವಿಷ್ಯದಲ್ಲಿ ಮೊದಲು ಆ್ಯಪಲ್‍ನ ಐಒಎಸ್ ಆಧಾರಿತ ಮೊಬೈಲ್‍ಗಳಿಗೆ ಹೊರಹೊಮ್ಮುತ್ತದೆ ಮತ್ತು ಶೀಘ್ರದಲ್ಲೇ ಆ್ಯಂಡ್ರಾಯ್ಡ್ ಫೋನ್‍ಗಳಿಗೂ ಲಭ್ಯವಾಗುವುದು.
    First published: