ಜೂನ್ 20ರಂದು ಜನಪ್ರಿಯ ಕಂಟೆಂಟ್ ಡೆಲಿವರಿ ನೆಟ್ವರ್ಕ್ (ಸಿಡಿಎನ್) ಕ್ಲೌಡ್‌ಫ್ಲೇರ್ (Cloudflare) ಸ್ಥಗಿತಗೊಂಡಿತ್ತು. ಹಲವಾರು ವೆಬ್‌ಸೈಟ್‌ಗಳು ಮತ್ತು ಆ್ಯಪ್ ಗಳಾದ ಡಿಸ್ಕಾರ್ಡ್, ಝೆರೋಧ, ಕ್ಯಾನ್ವ ಮತ್ತು ಇನ್ನೂ ಹೆಚ್ಚಿನ ಅಪ್ಲಿಕೇಶನ್‌ಗಳು (Application) ಸೇರಿ ಹಲವು ಸೇವೆಗಳು ಸ್ಥಗಿತಗೊಳ್ಳಲು ಕಾರಣವಾಗಿತ್ತು. ಬಳಕೆದಾರರು ವೆಬ್ ಮತ್ತು ಆ್ಯಪ್ ಗಳನ್ನು ತೆರೆದಾಗ “500 ಇಂಟರ್ನಲ್ ಸರ್ವರ್ ದೋಷ” (500 Internal Server Error) ಎಂಬ ಸಂದೇಶವು ಕಾಣುತ್ತಿತ್ತು. ಇದರಿಂದಾಗಿ ಬಳಕೆದಾರರು ಬೇಕಾದ ಕೆಲವು ಆ್ಯಪ್ ಮತ್ತು ವೆಬ್ (Web) ತೆರೆಯಲು ಕೆಲ ಗಂಟೆಗಳ ಕಾಲ ಹೆಣಗಾಡಬೇಕಾಯಿತು. ಬಳಕೆದಾರರು ದೂರು ನೀಡುತ್ತಿದ್ದಂತೆ ಸಮಸ್ಯೆಯನ್ನು ಕ್ಲೌಡ್ಫ್ಲೇರ್ ಬಗೆಹರಿಸಿದ್ದು, ಸೇವೆಗಳಲ್ಲಿ ತೊಂದರೆಯಿಲ್ಲ ಎಂದು ದೃಢಪಡಿಸಿದೆ.
ಅಂತರ್ಜಾಲದಲ್ಲಿ ಹಲವಾರು ಬಳಕೆದಾರರು ಸರ್ವರ್ ಪ್ರಾಬ್ಲಂ ಅನ್ನು ಎದುರಿಸಿದ್ದಾರೆ. ಈ ಸಮಸ್ಯೆಯೂ ಸಾಮಾನ್ಯವಾಗಿ ವಿಷಯ ವಿತರಣಾ ನೆಟ್‌ವರ್ಕ್ ಕ್ಲೌಡ್‌ಫ್ಲೇರ್‌ನಲ್ಲಿನ ಸಮಸ್ಯೆಯಿಂದಾಗಿ ಉಂಟಾಗುತ್ತದೆ. ಹಾಗಾದರೆ ‘500 ಆಂತರಿಕ ಸರ್ವರ್ ದೋಷ’ ಎಂದರೇನು ಮತ್ತು ಅದು ಏಕೆ ಕಾಣಿಸಿಕೊಳ್ಳುತ್ತದೆ ಎಂಬುದರ ಬಗ್ಗೆ ಇಲ್ಲಿ ನೋಡೋಣ.
500 ಇಂಟರ್ನಲ್ ಸರ್ವರ್ ದೋಷ ಎಂದರೇನು?
ಸರ್ವರ್ ಸಮಸ್ಯೆಗಳು ಎದುರಾದಾಗ "500 ಆಂತರಿಕ ಸರ್ವರ್ ದೋಷ" ಸಾಮಾನ್ಯವಾಗಿ ವೆಬ್‌ಸೈಟ್‌ಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಗೆ ನಿರ್ದಿಷ್ಟವಾದ ಮೂಲ ಕಾರಣಗಳಿಲ್ಲ. ಹಲವಾರು ಸಮಸ್ಯೆಯಿಂದಾಗಿ ಈ ದೋಷ ಕಂಡುಬರುತ್ತದೆ. ಸಾಮಾನ್ಯವಾಗಿ ಇದು HTTPS ದೋಷವಾಗಿದೆ. '500' ದೋಷವು ಸರಿಪಡಿಸಲು ಸ್ವಲ್ಪ ಕ್ಲಿಷ್ಟವಾಗಿದೆ ಏಕೆಂದರೆ ಅದನ್ನು ಪರಿಹರಿಸಲು ಸಾಧ್ಯವಾಗುವ ಮೊದಲು ಎಂಜಿನಿಯರ್‌ಗಳು ಸಮಸ್ಯೆಯನ್ನು ಗುರುತಿಸುವ ಅಗತ್ಯವಿದೆ.
ಇದನ್ನೂ ಓದಿ: Beware! ವಿದ್ಯುತ್ ಬಿಲ್ ಪಾವತಿಗೆ ಸಂಬಂಧಿಸಿದಂತೆ ಏನಾದ್ರೂ ಮೆಸೇಜ್ ಬಂದಿದ್ಯಾ? ಅದು ಸ್ಕ್ಯಾಮ್ ಆಗಿರಬಹುದು ಎಚ್ಚರ !
ಜೂನ್ 20ರಂದು ವೆಬ್‌ಸೈಟ್‌ಗಳಲ್ಲಿ ಏನಾಯಿತು?
ಜೂನ್ 20 ರಂದು, ಕ್ಲೌಡ್‌ಫ್ಲೇರ್ ಸೇವೆಗಳನ್ನು ಬಳಸುವ ವೆಬ್‌ಸೈಟ್‌ಗಳಲ್ಲಿ “500 ಆಂತರಿಕ ಸರ್ವರ್ ದೋಷ” ಕಂಡು ಬಂದಿತು. ನಂತರ ಈ ಬಗ್ಗೆ ಸ್ಪಷ್ಟನೆ ನೀಡಿದ ಕ್ಲೌಡ್‌ಫ್ಲೇರ್ ”ಇದು ಕಂಟೆಂಟ್ ಡೆಲಿವರಿ ಸಿಸ್ಟಮ್ (ಸಿಡಿಎನ್) ನಿರ್ಣಾಯಕ ಸಮಸ್ಯೆಯಾಗಿದೆ” ಎಂದು ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಘಟನೆಯು ಅದರ ನೆಟ್‌ವರ್ಕ್‌ನಲ್ಲಿನ ಎಲ್ಲಾ ಡೇಟಾ ಪ್ಲಾನ್ ಸೇವೆಗಳ ಮೇಲೆ ಪರಿಣಾಮ ಬೀರಿದ್ದಲ್ಲದೇ ಜೊತೆಗೆ ವೆಬ್‌ಸೈಟ್‌ಗಳಾದ್ಯಂತ “500 ಆಂತರಿಕ ಸರ್ವರ್ ದೋಷ” ಉಂಟಾಯಿತು. ಬಳಕೆದಾರರು ಸ್ಥಗಿತದ ಬಗ್ಗೆ ವರದಿ ಮಾಡಿದ ನಂತರ ಕ್ಲೌಡ್‌ಫ್ಲೇರ್ ಸಮಸ್ಯೆಯನ್ನು ಪರಿಹರಿಸಿದೆ. .
ಇದು ಒಂದು ವಾರದೊಳಗೆ ವರದಿಯಾದ ಕ್ಲೌಡ್‌ಫ್ಲೇರ್ ನ ಎರಡನೇ ಘಟನೆಯಾಗಿದೆ. ಕಳೆದ ವಾರದ ಸ್ಥಗಿತವು ಭಾರತಕ್ಕೆ ಮಾತ್ರ ಸೀಮಿತವಾಗಿತ್ತು. ಇದರಿಂದಾಗಿ ಹಲವಾರು ಸೇವೆಗಳು ಕಾರ್ಯಕ್ಷಮತೆಯ ಸಮಸ್ಯೆ ಗಳನ್ನು ಎದುರಿಸಬೇಕಾಯಿತು. ಕ್ಲೌಡ್‌ಫ್ಲೇರ್ ಸಮಸ್ಯೆಯ ನಿಖರವಾದ ಕಾರಣ ಅಥವಾ ಯಾವುದೇ ಇತರ ವಿವರಗಳನ್ನು ಬಹಿರಂಗಪಡಿಸಲಿಲ್ಲ. ಒಂದೆರಡು ಗಂಟೆಗಳ ಸ್ಥಗಿತದನಂತರ ಸೇವೆಗಳು ಚಾಲನೆಗೆ ಬಂದವು.
ಸಿಡಿಎನ್ (CDN) ಎಂದರೇನು?
ಕಂಟೆಂಟ್ ಡೆಲಿವರಿ ನೆಟ್‌ವರ್ಕ್ ಎಂಬುದು ಸರ್ವರ್‌ಗಳ ನೆಟ್‌ವರ್ಕ್ ಆಗಿದ್ದು, ಇದು ಮೂಲ ಸರ್ವರ್‌ನಿಂದ ಪ್ರಪಂಚದಾದ್ಯಂತ ಸರ್ವರ್‌ಗಳಿಗೆ ವಿಷಯವನ್ನು ವಿತರಿಸುತ್ತದೆ. ಒಂದು CDN ತ್ವರಿತವಾಗಿ ವಿಷಯವನ್ನು ವಿತರಿಸಲು ಬಳಕೆದಾರರಿಗೆ ಹತ್ತಿರವಿರುವ ಸರ್ವರ್‌ನಲ್ಲಿ ಸಂಗ್ರಹವಾದ ವಿಷಯವನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತದೆ.
ಇದನ್ನೂ ಓದಿ: Xiaomi ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿ! ಕಡಿಮೆ ಬೆಲೆಗೆ ಖರೀದಿಸಿ ನಿಮ್ಮಿಷ್ಟದ ಸ್ಮಾರ್ಟ್ಫೋನ್
ಕೆಲವು ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದ ಬಳಕೆದಾರರಿಗೆ "500 ಆಂತರಿಕ ಸರ್ವರ್ ದೋಷ" ಸಂದೇಶ ಕಾಣಿಸಿಕೊಂಡಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ ಕ್ಲೌಡ್‌ಫ್ಲೇರ್‌ನ ಸಿಡಿಎನ್ "ನಿರ್ಣಾಯಕ P0 ಘಟನೆಯನ್ನು" ತೋರಿಸಿದೆ ಎಂದು ಕಂಪನಿಯು ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಇದರ ಪರಿಣಾಮವಾಗಿ ಸರ್ವರ್‌ಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸಲು ಕಾರಣವಾಯಿತು.
500 ಆಂತರಿಕ ಸರ್ವರ್ ದೋಷ ಕಾಣಿಸಿಕೊಂಡಾಗ ಏನು ಮಾಡಬೇಕು?
ಬಳಕೆದಾರರು ಭೇಟಿ ನೀಡುತ್ತಿರುವ ವೆಬ್‌ಸೈಟ್‌ನಲ್ಲಿ ಈ ದೋಷ ಕಂಡು ಬಂದರೆ, ಅದೃಷ್ಟವಶಾತ್, ಹೆಚ್ಚಿನ ಎಚ್ಟಿಟಿಪಿ 500 ಆಂತರಿಕ ಸರ್ವರ್ ದೋಷಗಳನ್ನು ಸರಿಪಡಿಸಲು ಕೆಲವು ಪರಿಣಾಮಕಾರಿ ಪರಿಹಾರಗಳಿವೆ. ಮೊದಲನೆಯದಾಗಿ ಇದು ತಾತ್ಕಾಲಿಕ ಲೋಡಿಂಗ್ ಸಮಸ್ಯೆಯಾಗಿದ್ದರೆ ಬಳಕೆದಾರರು ತಾವು ಭೇಟಿ ನೀಡುತ್ತಿರುವ ಪುಟವನ್ನು ರಿಫ್ರೆಶ್ ಮಾಡಬಹುದು ಅಥವಾ ಬ್ರೌಸರ್ ಕುಕೀಗಳನ್ನು ಅಳಿಸಬಹುದು ಮತ್ತು ಪ್ಲಗಿನ್ ಅಥವಾ ಥೀಮ್ ಅನ್ನು ನಿಷ್ಕ್ರಿಯಗೊಳಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ