• Home
 • »
 • News
 • »
 • tech
 • »
 • Google Chrome ಹೊಸ ಆವೃತ್ತಿ ಬಿಡುಗಡೆ ಸಾಧ್ಯತೆ ಸೃಷ್ಟಿಸಿರುವ ಆತಂಕ!

Google Chrome ಹೊಸ ಆವೃತ್ತಿ ಬಿಡುಗಡೆ ಸಾಧ್ಯತೆ ಸೃಷ್ಟಿಸಿರುವ ಆತಂಕ!

Google Chrome / ಗೂಗಲ್​ ಕ್ರೋಮ್

Google Chrome / ಗೂಗಲ್​ ಕ್ರೋಮ್

Google Chrome: ಗೂಗಲ್ ಅಭಿವೃದ್ಧಿ ಪಡಿಸುತ್ತಿರುವ ಆವೃತ್ತಿಯನ್ನು ಗೂಗಲ್ ಕ್ರೋಮ್ 100 ಅಪ್‌ಡೇಟ್ ಎಂದು ಕರೆಯಲಾಗಿದ್ದು ಇದು ಇಂಟರ್ನೆಟ್ ನ ಇತ್ತೀಚಿನ ಪ್ರಮುಖ ಅಪ್ಡೇಟ್ ಆಗಿದೆ. ಗೂಗಲ್ ಕ್ರೋಮ್ 100 ಆವೃತ್ತಿಯು ಮುಂದಿನ ತಿಂಗಳು ಪ್ರಾರಂಭವಾಗಲಿದೆ ಎಂದು ಸುದ್ದಿಗಳು ಹರಿದಾಡುತ್ತಿವೆ.

ಮುಂದೆ ಓದಿ ...
 • Share this:

  ವಿಶ್ವದ ಪ್ರಮುಖ ಇಂಟರ್ನೆಟ್ ಬ್ರೌಸರ್ (Internet Browser) ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಕ್ರೋಮ್ (Chrome) ಇದೀಗ ಮುಂಬರುವ ದಿನಗಳಲ್ಲಿ ತನ್ನ ಅಪ್ಡೇಟೆಡ್ (Updates) ಹೊಸ ಆವೃತ್ತಿಯನ್ನು ಪರಿಚಯಿಸಲಿದ್ದು ಇದರಿಂದಾಗಿ ಸಾಕಷ್ಟು ವೆಬ್‌ಸೈಟ್‌ಗಳ (Website) ಕಾರ್ಯನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದೆಂದು ಊಹಿಸಲಾಗುತ್ತಿದೆ. ಈಗಾಗಲೇ ಗೂಗಲ್ (Google) ಈ ಹೊಸ ಆವೃತ್ತಿಯನ್ನು ಅಭಿವೃದ್ಧಿಪಡಿಸುವಲ್ಲಿ ನಿರತವಾಗಿದ್ದು ಹೊಸ ಆವೃತ್ತಿಯನ್ನು (New Version) ತನ್ನ ಬಳಕೆದಾರರಿಗೆ ಸದ್ಯದಲ್ಲೆ ಪರಿಚಯಿಸುತ್ತಿರುವುದಾಗಿ ವರದಿಯಾಗಿದೆ.


  ಗೂಗಲ್ ಅಭಿವೃದ್ಧಿ ಪಡಿಸುತ್ತಿರುವ ಆವೃತ್ತಿಯನ್ನು ಗೂಗಲ್ ಕ್ರೋಮ್ 100 ಅಪ್‌ಡೇಟ್ ಎಂದು ಕರೆಯಲಾಗಿದ್ದು ಇದು ಇಂಟರ್ನೆಟ್ ನ ಇತ್ತೀಚಿನ ಪ್ರಮುಖ ಅಪ್ಡೇಟ್ ಆಗಿದೆ. ಗೂಗಲ್ ಕ್ರೋಮ್ 100 ಆವೃತ್ತಿಯು ಮುಂದಿನ ತಿಂಗಳು ಪ್ರಾರಂಭವಾಗಲಿದೆ ಎಂದು ಸುದ್ದಿಗಳು ಹರಿದಾಡುತ್ತಿವೆ. ವರದಿಗಳ ಪ್ರಕಾರ, ಒಮ್ಮೆ ಗೂಗಲ್ ಕ್ರೋಮ್ ಅಪ್‌ಡೇಟ್ ಮಾಡಿದರೆ ಹಳೆಯ ಹಲವು ಲೋಪ ದೋಷಗಳು ಸರಿಯಾಗುವ ಮೂಲಕ ಕ್ರೋಮ್ ಬ್ರೌಸರ್ ನ ಹೊಸ ಲೋಗೋ, ವೆಬ್‌ಸೈಟ್‌ಗಳು ಈ ಜನಪ್ರಿಯ ಸಾಫ್ಟ್ ವೇರ್‌ನೊಂದಿಗೆ ಬಳಕೆದಾರರಿಗೆ ಲಭ್ಯವಾಗುತ್ತವೆ.


  ಪ್ರಸ್ತುತ ಗೂಗಲ್ ಬಳಸುತ್ತಿರುವ ಕ್ರೋಮ್ ಆವೃತ್ತಿಯು 98 ಆಗಿದೆ ಹಾಗೂ ಬಹುತೇಕ ಎಲ್ಲ ಆನ್‌ಲೈನ್ ಸೈಟ್‌ಗಳು ಎರಡಂಕಿಯುಳ್ಳ 98 ಸಂಖ್ಯೆಗೆ ಅನುಗುಣವಾಗಿ ಕಾನ್ಫಿಗರ್ ಮಾಡಿಕೊಂಡಿವೆ. ಹಾಗಾಗಿ ಇದು ಎರಡು-ಅಂಕಿಯ ಹೆಸರಿನೊಂದಿಗೆ ಬ್ರೌಸರ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಮುಂಬರುತ್ತಿರುವ ನವೀಕರಣವು ಮೂರು ಸಂಖ್ಯೆಗಳನ್ನು ಹೊಂದಿದ್ದು ಎಲ್ಲಾ ಆನ್‌ಲೈನ್ ಸೈಟ್‌ಗಳು ಮೂರು ಅಂಕಿಗಳಿಗೆ ಅಳವಡಿಸಿಕೊಳ್ಳುವಂತೆ ಮತ್ತೆ ಬದಲಾಯಿಸಿಕೊಳ್ಳಬೇಕಾಗುತ್ತದೆ. ಅಲ್ಲದೆ ಇದಕ್ಕೆ ಸಮಯವೂ ಕಡಿಮೆಯಿದೆ ಅಂದರೆ ಮುಂಬರುವ ಕೆಲವೆ ವಾರಗಳಲ್ಲಿ ಕ್ರೋಮ್ 100 ಬರುವ ಸಾಧ್ಯತೆಯಿದೆ ಎನ್ನಲಾಗಿದೆ.


  ಎರಡು ದಶಕಗಳ ಹಿಂದೆ 1999ರ ಸಮಯದಲ್ಲಿ ಇದೇ ರೀತಿಯ ಘಟನೆಯೊಂದು ಸದ್ದು ಮಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಮಿಲೇನಿಯಮ್ ಬಗ್ ಎಂದು ಇದನ್ನು ಕರೆಯಲಾಗಿತ್ತು. ಅಂದಿನ ದೊಡ್ಡ ದೊಡ್ಡ ಕಂಪ್ಯೂಟರ್ ತಂತ್ರಜ್ಞಾನ ಕಂಪನಿಗಳಿಗೆ ಇದೊಂದು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಈಗ ಬರುತ್ತಿರುವ ಕ್ರೋಮ್ ಅಪ್ಡೇಟ್ ಸಹ ಅದೇ ರೀತಿಯ ಸವಾಲನ್ನು ಹಾಕಿದ್ದು ವೆಬ್‌ಸೈಟ್‌ಗಳ ಮೇಲೆ ಇದು ಎಷ್ಟು ಹಾಗೂ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾಗಿ ಯಾರಿಗೂ ಗೊತ್ತಾಗುತ್ತಿಲ್ಲ ಎಂದೇ ಹೇಳಲಾಗುತ್ತಿದೆ.


  ಇದನ್ನೂ ಓದಿ: Online fraud: 10 ಸಾವಿರ ಪಡೆದು 7 ಲಕ್ಷ ರೂ ಪಾವತಿಸಿದ! ಆನ್​ಲೈನ್ ಸಾಲ ತೆಗೆದುಕೊಂಡು ಮೋಸ ಹೋದ ಚಿಕ್ಕಬಳ್ಳಾಪುರ ವ್ಯಕ್ತಿ


  ಮೊಜಿಲ್ಲಾ ಪ್ರಕಾರ, ಫೈರ್‌ಫಾಕ್ಸ್ ಮತ್ತು ಕ್ರೋಮ್‌ನಂತಹ ಇಂಟರ್ನೆಟ್ ಬ್ರೌಸರ್‌ಗಳು ಸಂಭಾವ್ಯ ವೆಬ್‌ಸೈಟ್ ಒಡೆಯುವಿಕೆಯನ್ನು ಪತ್ತೆಹಚ್ಚಲು ಸಹಾಯ ಮಾಡಲು ಈಗಾಗಲೇ ಪ್ರಯೋಗಗಳನ್ನು ಪ್ರಾರಂಭಿಸಿವೆ ಎಂದಿವೆ. ನವೀಕರಿಸಿದ ಮೂರು-ಅಂಕಿಯ ಆವೃತ್ತಿಯ ಬಿಡುಗಡೆಯವರೆಗೂ ಈ ಪರೀಕ್ಷೆಗಳು ಮುಂದುವರಿಯುತ್ತವೆ. ಮಾರ್ಚ್‌ನಲ್ಲಿ ನಿಯಮಿತ ವೆಬ್-ಬ್ರೌಸಿಂಗ್ ಅವಧಿಗಳಲ್ಲಿ ಯಾವುದೇ ಅಡಚಣೆಗಳಿಗೆ ಸಿದ್ಧರಾಗಿರಲು ಬಳಕೆದಾರರಿಗೆ ಸಲಹೆ ನೀಡಲಾಗುತ್ತದೆ ಎಂದು ಮೋಜಿಲ್ಲಾ ತಿಳಿಸಿದೆ.


  ಇದನ್ನೂ ಓದಿ: Reliance Jio ಪರಿಚಯಿಸಿದೆ ಹೊಸ ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಪ್ರಿಪೇಯ್ಡ್ ಪ್ಲಾನ್​


  ಇತ್ತೀಚೆಗೆ ಗೂಗಲ್ ಕ್ರೋಮ್ ನಲ್ಲಿ ಹಲವು ದೋಷಗಳ ಬಗ್ಗೆ ವರದಿ ಮಾಡಲಾಗಿತ್ತು. ಹಾಗಾಗಿ ಕ್ರೋಮ್ ಬಳಕೆದಾರರು ಗೂಗಲ್ ನ ಇತ್ತೀಚಿನ ಆವೃತ್ತಿಯನ್ನು ಡೌನ್ ಲೋಡ್ ಮಾಡಿಕೊಂಡು ಆದಷ್ಟು ಬೇಗ ಅಪ್ಡೇಟ್ ಮಾಡುವಂತೆ ಸೂಚಿಸಲಾಗಿತ್ತು. ಕ್ರೋಮ್ ತನ್ನ ವಿಂಡೋಸ್, ಮ್ಯಾಕ್ ಮತ್ತು ಲೈನಕ್ಸ್ ಬಳಕೆದಾರರಿಗೆ ಅಪ್ಡೇಟ್ ನೀಡಿತ್ತು. ವಿಂಡೋಸ್ ಮತ್ತು ಕ್ರೋಮ್ ಗಾಗಿ 98.0.4758.80/81/82, ಮ್ಯಾಕ್ ಮತ್ತು ಲಿನಕ್ಸ್‌ಗಾಗಿ 98.0.4758.80 ಅನ್ನು ಡೌನ್ ಲೋಡ್ ಮಾಡಿಕೊಳ್ಳುವಂತೆ ತಿಳಿಸಲಾಗಿತ್ತು. 98.0.4758.80 ಕ್ರೋಮ್ ಆವೃತ್ತಿಗಳಲ್ಲಿ ಈ ಸಮಸ್ಯೆಯು ಅಸ್ತಿತ್ವದಲ್ಲಿದೆ ಎಂದು ತಿಳಿಸಿತ್ತು.


  ಗೂಗಲ್ ಕ್ರೋಮ್ ಹೆಚ್ಚಾಗಿ ವೆಬ್ಕಿಟ್ ಲೇಔಟ್ ಎಂಜಿನ್ ಹಾಗೂ ಅಪ್ಲೀಕೇಷನ್ ಫ್ರೇಮ್ವರ್ಕ್ ಅನ್ನು ಬಳಸುತ್ತದೆ. ಇದು ಮೊದಲ ಬಾರಿಗೆ ಮೈಕ್ರೋಸಾಫ್ಟ್ ವಿಂಡೋಸ್ನ ಬೀಟಾ ಆವೃತ್ತಿಯ ರೂಪದಲ್ಲಿ 2008 ಸೆಪ್ಟೆಂಬರ್ 2ರಂದು ಬಿಡುಗಡೆಯಾಯಿತಾದರೂ, ಸಾರ್ವಜನಿಕರ ಬಳಕೆಗೆ ಲಭ್ಯವಾಗಿದ್ದು ಮಾತ್ರ 2008 ಡಿಸೆಂಬರ್ 11ರಂದು.


  ’ಕ್ರೋಮ್’ ಎಂಬ ಹೆಸರನ್ನು ವೆಬ್ ಬ್ರೌಸರ್‌‌‌‌‌‌‌ನ ಗ್ರಾಫಿಕಲ್ ಬಳಕೆದಾರ ಅಂತರಸಂಪರ್ಕ ಫ್ರೇಮ್, ಅಥವಾ “ಕ್ರೋಮ್”, ನಿಂದ ಪಡೆದುಕೊಳ್ಳಲಾಯಿತು. ಗೂಗಲ್ ಸಂಸ್ಥೆಯ ಕ್ರೋಮ್ ಬ್ರೌಸರ್ 64.06 ಪ್ರತಿಶತದಷ್ಟು ಜಾಗತಿಕ ಮಾರುಕಟ್ಟೆ ಪಾಲನ್ನು ಹೊಂದಿರುವ ವಿಶ್ವದ ಪ್ರಮುಖ ಇಂಟರ್ನೆಟ್ ಬ್ರೌಸರ್ ಆಗಿದೆ. ಸರಳವಾಗಿ ಹೇಳುವುದಾದರೆ, ಹತ್ತರಲ್ಲಿ ಆರಕ್ಕೂ ಹೆಚ್ಚು ಜನರು ಇಂಟರ್ನೆಟ್ ಬ್ರೌಸ್ ಮಾಡಲು ಕ್ರೋಮ್ ಅನ್ನು ಬಳಸುತ್ತಾರೆ.

  Published by:Harshith AS
  First published: