ಇಂಟರ್ನೆಟ್​ ಇಲ್ಲದೆಯೂ ಗೂಗಲ್​ ಕ್ರೋಮ್​ ಬ್ರೌಸ್​ ಮಾಡಬಹುದು


Updated:June 22, 2018, 4:24 PM IST
ಇಂಟರ್ನೆಟ್​ ಇಲ್ಲದೆಯೂ ಗೂಗಲ್​ ಕ್ರೋಮ್​ ಬ್ರೌಸ್​ ಮಾಡಬಹುದು

Updated: June 22, 2018, 4:24 PM IST
ನವದೆಹಲಿ: ಗೂಗಲ್​ ತನ್ನ ಎಲ್ಲಾ ಆ್ಯಂಡ್ರಾಯ್ಡ್​ ಡಿವೈಸ್​ಗಳಿಗೆ ಹೊಸ ಫೀಚರ್​ ಬಿಡುಗಡೆ ಮಾಡಿದ್ದು, ಇನ್ನು ಮುಂದೆ ನೀವು ಇಂಟರ್​ನೆಟ್​ ಸಹಾಯವಿಲ್ಲದೇ ಅಂತರ್ಜಾಲದಲ್ಲಿ ಹುಡುಕಾಟ ನಡೆಸಬಹುದು.

ಈ ಕುರಿತು ಮಾಹಿತಿ ನೀಡಿರುವ ಸಂಸ್ಥೆ ಭಾರತ ಸೇರಿದಂತೆ 100 ದೇಶಗಳಿಗೆ ಈ ಅಪ್​ಡೇಟ್​ ಬಿಡುಗಡೆ ಮಾಡಿದ್ದು ಇಂಟರ್ನೆಟ್ ಸೌಲಭ್ಯ ಇಲ್ಲದೆ ಹೋದ್ರೂ, ವೈಫೈ ಇಲ್ಲದೆ ಹೋದ್ರೂ ಕ್ರೋಮ್​ ಬಳಕೆದಾರರು ತಮಗೆ ಬೇಕಾದ ಮಾಹಿತಿಯನ್ನು ಪಡೆಯಬಹುದು.

ಗೂಗಲ್​ ಪ್ರತಿಬಾರಿಯೂ ನೀವು ಬ್ರೌಸ್​ ಮಾಡುವ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇರುತ್ತದೆ, ಬಳಿಕ ಸ್ವಯಂಚಾಲಿತವಾಗಿ ನೀವು ಬ್ರೌಸ್​ ಮಾಡುವ ವಿಚಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಡೌನ್ಲೋಡ್ ಮಾಡಿಕೊಳ್ಳುತ್ತದೆ. ಅಲ್ಲದೇ ನೀವಿರುವ ಪ್ರದೇಶದ ಸುತ್ತಮುತ್ತ ಲಭ್ಯವಿರುವ ಎಲ್ಲಾ ಮಾಹಿತಿಯನ್ನು ಕಲೆ ಹಾಕುತ್ತದೆ. ಈ ವಿಚಾರಗಳು ಇಂಟರ್ನೆಟ್ ಇಲ್ಲದ ಸಮಯದಲ್ಲೂ ನಿಮಗೆ ಸಿಗಲಿದೆ.

ಇನ್ನು ಈ ಮಾಹಿತಿಗಳನ್ನು ನೀವು ಕ್ರೋಮ್​ನ ಬ್ರೌಸಿಂಗ್ ಹಿಸ್ಟರಿಯಲ್ಲಿ ಪಡೆಯಬಹುದು. ಇದ್ರ ಮೂಲಕ ನೀವು ಲೇಖನ, ಫೋಟೋವನ್ನು ನೋಡಬಹುದು. ಇಲ್ಲಿ ಹೆಚ್ಚಿನ ವಿಚಾರಗಳು ಡೌನ್​ಲೋಡ್​ ಆಗಿರುವುದರಿಂದ ನಿಮಗೆ ಬೇಕಾದ ಸಂದರ್ಭದಲ್ಲಿ ನೋಡಬಹುದು. ಈ ಅಪ್​ಡೇಟ್​ ಪಡೆಯಲು ನೀವು ಪ್ಲೇಸ್ಟೋರ್​ನಲ್ಲಿ ನಿಮ್ಮ ಕ್ರೋಮ್​ನ್ನು ಅಪ್ಡೇಟ್​ ಮಾಡಿಕೊಳ್ಳಿ
First published:June 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...