JioGames: ಜಿಯೋಗೇಮ್ಸ್‌ನಲ್ಲಿ ಬರಲಿದೆ ಛೋಟಾ ಭೀಮ್‌

Chota Bheem: ಛೋಟಾ ಭೀಮ್‌ ದೇಶದ ಅತ್ಯಂತ ಮೆಚ್ಚಿನ ಆನಿಮೇಟೆಡ್‌ ಕ್ಯಾರೆಕ್ಟರ್ ಆಗಿದ್ದು, ಮಕ್ಕಳಿಗೆ ಇದರ ಜೊತೆಗೆ ಆಟವಾಡುವುದು ತುಂಬಾ ಖುಷಿ ನೀಡುತ್ತದೆ. ಛೋಟಾ ಭೀಮ್‌ ಅನ್ನು ಭಾರತದಲ್ಲಿ ಅತ್ಯಂತ ದೀರ್ಘಕಾಲದವರೆಗೆ ವೀಕ್ಷಿಸಲಾಗಿದ್ದು, ದಶಕಗಳಿಂದಲೂ ಭಾರತದ ಮಕ್ಕಳು ಈ ಪಾತ್ರವನ್ನು ವಿವಿಧ ರೂಪದಲ್ಲಿ ಇಷ್ಟಪಟ್ಟಿದ್ದಾರೆ.

Jio /ಜಿಯೋ

Jio /ಜಿಯೋ

  • Share this:
    ಜಿಯೋಗೇಮ್ಸ್‌ (JioGames) ಪ್ಲಾಟ್‌ಫಾರಂನಲ್ಲಿ ಇನ್ನು ಛೋಟಾ ಭೀಮ್‌ (Chota Bheem) ಕೂಡ ಕಾಣಿಸಿಕೊಳ್ಳಲಿದೆ. ಇದಕ್ಕಾಗಿ ಜಿಯೋಗೇಮ್ಸ್‌ ಮತ್ತು ಗ್ರೀನ್ ಗೋಲ್ಡ್‌ ಆನಿಮೇಶನ್‌ ಪ್ರೈ. ಲಿ. ಸಹಭಾಗಿತ್ವ ಸಾಧಿಸಿದೆ. ಛೋಟಾ ಭೀಮ್‌ನ ಜನ್ಮದಿನವನ್ನು (Birthday) ಮೇಯಲ್ಲಿ ಆಚರಿಸುವುದರ ಜೊತೆಗೆ ತಮ್ಮ ಮೆಚ್ಚಿನ ಛೋಟಾ ಭೀಮ್ ಗೇಮ್ ಅನ್ನು ಮಕ್ಕಳು (Childrens) ಮತ್ತು ಗೇಮ್ಸ್‌ ಉತ್ಸಾಹಿಗಳು ಬಳಸಬಹುದು. ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳು (Android Smartphone) ಮತ್ತು ಜಿಯೋ ಸೆಟ್‌ ಟಾಪ್‌ ಬಾಕ್ಸ್ (Jio Set Top Box ) ಸೇರಿದಂತೆ ವಿವಿಧ ಪ್ಲಾಟ್‌ಫಾರಂಗಳಲ್ಲಿ ಜಿಯೋ ಗೇಮ್ಸ್‌ ಆ್ಯಪ್‌ನ ಗೇಮ್‌ಗಳು ಲಭ್ಯವಿವೆ.

    ಛೋಟಾ ಭೀಮ್‌ ದೇಶದ ಅತ್ಯಂತ ಮೆಚ್ಚಿನ ಆನಿಮೇಟೆಡ್‌ ಕ್ಯಾರೆಕ್ಟರ್ ಆಗಿದ್ದು, ಮಕ್ಕಳಿಗೆ ಇದರ ಜೊತೆಗೆ ಆಟವಾಡುವುದು ತುಂಬಾ ಖುಷಿ ನೀಡುತ್ತದೆ. ಛೋಟಾ ಭೀಮ್‌ ಅನ್ನು ಭಾರತದಲ್ಲಿ ಅತ್ಯಂತ ದೀರ್ಘಕಾಲದವರೆಗೆ ವೀಕ್ಷಿಸಲಾಗಿದ್ದು, ದಶಕಗಳಿಂದಲೂ ಭಾರತದ ಮಕ್ಕಳು ಈ ಪಾತ್ರವನ್ನು ವಿವಿಧ ರೂಪದಲ್ಲಿ ಇಷ್ಟಪಟ್ಟಿದ್ದಾರೆ. ಧೋತಿ ಉಟ್ಟುಕೊಂಡು ಕಾಣಿಸಿಕೊಳ್ಳುವ ಭೀಮ್‌ ಶುದ್ಧ ಹೃದಯದ, ವಿಶ್ವಾಸಾರ್ಹ ಮತ್ತು ಜನರಿಗೆ ಸಹಾಯ ಮಾಡುವುದಕ್ಕೆ ಭಾರಿ ಸಾಹಸಗಳನ್ನು ಮಾಡುವ ವ್ಯಕ್ತಿ. ಈಗ ಈ ಅತ್ಯಂತ ಮನರಂಜನೆ ನೀಡುವ ಗೇಮ್ಸ್‌ ಜಿಯೋಗೇಮ್ಸ್‌ಗೆ ಬಂದಿದ್ದು, ಈತನ ಸಾಹಸದಲ್ಲಿ ಮಕ್ಕಳೂ ಸೇರಿಕೊಳ್ಳಬಹುದು.

    ಇದನ್ನೂ ಓದಿ: Tim Cook ಈ ಮಾತನ್ನು ಹೇಳಿದ್ದೇ ತಡ, Apple ಉದ್ಯೋಗಿಗಳು ಕೆಲಸ ಬಿಡುತ್ತಿದ್ದಾರಂತೆ!

    ಜಿಯೋಗೇಮ್ಸ್‌ನಲ್ಲಿ ಛೋಟಾ ಭೀಮ್‌ ಸೇರಿಕೊಂಡಿರುವುದು ನನಗೆ ತುಂಬಾ ಖುಷಿ ತಂದಿದೆ. ಹಲವು ಸಾಧನಗಳು ಮತ್ತು ಪ್ಲಾಟ್‌ಫಾರಂಗಳಲ್ಲಿ ಜಿಯೋಗೇಮ್ಸ್ ಇದ್ದು, ಭಾರತದ ಮೆಚ್ಚಿನ ಆನಿಮೇಟೆಡ್‌ ಶೋ ಛೋಟಾ ಭೀಮ್‌ಗೆ ಒಂದು ಉತ್ತಮ ಪ್ಲಾಟ್‌ಫಾರಂ ಆಗಿದೆ. ನಾವು 5 ಹೈಪರ್‌ ಕ್ಯಾಶುವಲ್‌ ಗೇಮ್‌ಗಳನ್ನು ಅನಾವರಣಗೊಳಿಸುತ್ತಿದ್ದೇವೆ ಮತ್ತು ಶೀಘ್ರದಲ್ಲೇ ಇನ್ನಷ್ಟನ್ನು ಸೇರಿಸಲಿದ್ದೇವೆ ಎಂದು ಗ್ರೀನ್ ಗೋಲ್ಡ್‌ ಆನಿಮೇಶನ್‌ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶ್ರೀನಿವಾಸ್‌ ಚಿಕಲಪುಡಿ ಹೇಳಿದ್ದಾರೆ.
    Published by:Harshith AS
    First published: