Xiaomi: ಸ್ಮಾರ್ಟ್​ಫೋನ್ ಥರಾ ಇನ್ಮೇಲೆ ಸ್ಮಾರ್ಟ್ ಕಾರ್... ಎಲೆಕ್ಟ್ರಿಕ್ ವಾಹನದತ್ತ ಶಿಯೋಮಿ ಚಿತ್ತ

Chinese smartphone maker Xiaomi: ಶಿಯೋಮಿ ಅಂತ್ರರಾಷ್ಟ್ರೀಯ ಮಾರ್ಕೆಟಿಂಗ್​ ವಿಭಾಗದ ಜಾಂಗ್​ ಜಿಯುವನ್​ ಕೂಡ ಈ ಸುದ್ದಿಯ ಬಗ್ಗೆ ವಿಬೋ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಕಾರುಗಳನ್ನು ಶಿಯೋಮಿ ಉತ್ಪಾದಿಸುವ ಮೂಲಕ ಗ್ರಾಹಕರಿಗೆ ಹತ್ತಿರವಾಗಲಿದೆ ಎಂದು ಹೇಳಿದ್ದಾರೆ.

Xioami

Xioami

 • Share this:
  Xiaomi Electric Cars: ಚೀನಾ ಮೂಲದ ಶಿಯೋಮಿ ಕಂಪನಿ ಬಗ್ಗೆ ಬಹುತೇಕರಿಗೆ ತಿಳಿದಿದೆ. ಹಲವು ವಿಶೇಷತೆಯುಳ್ಳ ಸ್ಮಾರ್ಟ್​ಫೋನ್​ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಗ್ರಾಹಕರಿಗೆ ಹತ್ತಿರವಾಗಿದೆ. ಮಾತ್ರವಲ್ಲದೆ, ತನ್ನದೇ ರೀತಿಯಲ್ಲಿ ಮಾರುಕಟ್ಟೆಯನ್ನು ವಿಸ್ತರಿಸುವ ಮೂಲಕ ಗ್ರಾಹಕ ಸ್ನೇಹಿ ಎಂದೆನಿಸಿಕೊಂಡಿದೆ. ಸ್ಮಾರ್ಟ್​ಫೋನ್ (Smartphone)​ ವಿಚಾರವನ್ನೇ ಮೆಲುಕು ಹಾಕಿದಾಗ ಅತಿ ಹೆಚ್ಚು ಬಳಕೆದಾರರನ್ನು ಶಿಯೋಮಿ (Xiaomi) ಹೊಂದಿದೆ. ಹಾಗಾಗಿ ಪ್ರಪಂಚದಾದ್ಯಂತ ಟಾಪ್​ ಸ್ಮಾರ್ಟ್​ಫೋನ್​​ ಬ್ರಾಂಡ್​ ಗಳಲ್ಲಿ ಶಿಯೋಮಿ ಕೂಡ ಸ್ಥಾನ ಪಡೆದಿದೆ.

  ಸ್ಮಾರ್ಟ್​ಫೋನ್​ ಮೂಲಕ ಶಿಯೋಮಿ ಇದೀಗ ಕಾರು ಉತ್ಪಾದನೆಯತ್ತ ಕಣ್ಣುಹಾಯಿಸಿದೆ. 2024ರ ಮೊದಲಾರ್ಧದಲ್ಲಿ ಬೃಹತ್​​ ಪ್ರಮಾಣದಲ್ಲಿ ಕಾರು ತಯಾರಿಸುದರ ಬಗ್ಗೆ ಹೇಳಿಕೊಂಡಿದೆ. ಶಿಯೋಮಿ ಕಾರ್ಪ್​​ ಮುಖ್ಯ ಕಾರ್ಯನಿರ್ವಾಹಕ ಲೀ ಜುನ್​ ಅವರು ಶಿಯೋಮಿ ಕಾರು ಉತ್ಪಾದಿಸು ಬಗ್ಗೆ ಮಂಗಳವಾರದಂದು ಮಾಹಿತಿ ಹಂಚಿಕೊಂಡಿದ್ದಾರೆ.

  ಶಿಯೋಮಿ ಹೂಡಿಕೆ ಕಾರ್ಯಕ್ರದಲ್ಲಿ ಲೀ ಜುನ್​ ಮಾಡಿದ ಕಾಮೆಂಟ್​ ಅನ್ನು ಅಲ್ಲಿನ ಸ್ಥಳಿಯ ಮಾಧ್ಯಮಗಳು ವರದಿ ಮಾಡಿದೆ. ಕಂಪನಿ ಕೂಡ ಈ ವಿಚಾರವನ್ನು ದೃಢಪಡಿಸಿದೆ.

  ಶಿಯೋಮಿ ಅಂತ್ರರಾಷ್ಟ್ರೀಯ ಮಾರ್ಕೆಟಿಂಗ್​ ವಿಭಾಗದ ಜಾಂಗ್​ ಜಿಯುವನ್​ ಕೂಡ ಈ ಸುದ್ದಿಯ ಬಗ್ಗೆ ವಿಬೋ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಕಾರುಗಳನ್ನು ಶಿಯೋಮಿ ಉತ್ಪಾದಿಸುವ ಮೂಲಕ ಗ್ರಾಹಕರಿಗೆ ಹತ್ತಿರವಾಗಲಿದೆ ಎಂದು ಹೇಳಿದ್ದಾರೆ.

  ಮಾಹಿತಿ ಪ್ರಕಾರ ಕಂಪನಿ ಎಲೆಕ್ಟ್ರಿಕ್​ ವಾಹನ (ಇವಿ) ವಿಭಾಗದಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳುವ ದೊಡ್ಡ ಗುರಿಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.

  Xiaomi ಷೇರುಗಳು 5.4% ನಷ್ಟು HK $ 22.50 ಕ್ಕೆ ಏರಿತು, ಇದು ಮೇ 12 ರ ನಂತರದ ಅತಿದೊಡ್ಡ ದೈನಂದಿನ ಶೇಕಡಾವಾರು ಏರಿಕೆಯಾಗಿದೆ, ಮೂರನೇ ಸತತ ಅಧಿವೇಶನಕ್ಕೆ ಲಾಭವನ್ನು ವಿಸ್ತರಿಸಿದೆ.

  ಮಾರ್ಚ್​​ ತಿಂಗಳಿನಲ್ಲಿ, Xiaomi ಮುಂದಿನ ಹತ್ತು ವರ್ಷಗಳಲ್ಲಿ ಹೊಸ ಎಲೆಕ್ಟ್ರಿಕ್ ಕಾರು (Electric Car) ವಿಭಾಗದಲ್ಲಿ $ 10 ಬಿಲಿಯನ್ ಹೂಡಿಕೆ ಮಾಡಲು ಬದ್ಧವಾಗಿದೆ ಎಂದು ಹೇಳಿದೆ. ಆಗಸ್ಟ್ ಅಂತ್ಯದಲ್ಲಿ ಕಂಪನಿಯು ತನ್ನ ಇವಿ ಘಟಕದ ವ್ಯಾಪಾರ ನೋಂದಣಿಯನ್ನು ಪೂರ್ಣಗೊಳಿಸಿತು.

  ಕಂಪನಿಯು ತನ್ನ ಘಟಕಕ್ಕೆ ಈಗಾಗಲೇ ನೇಮಕಾತಿಯನ್ನು ಹೆಚ್ಚಿಸಿದೆ, ಆದರೂ ಅದು ಕಾರನ್ನು ಸ್ವತಂತ್ರವಾಗಿ ಉತ್ಪಾದಿಸುತ್ತದೆಯೇ ಅಥವಾ ಅಸ್ತಿತ್ವದಲ್ಲಿರುವ ಕಾರು ತಯಾರಕರೊಂದಿಗೆ ಪಾಲುದಾರಿಕೆಯ ಮೂಲಕ ಬಹಿರಂಗಪಡಿಸುತ್ತದೆಯೇ ಎಂಬುದನ್ನು ಇನ್ನೂ ಬಹಿರಂಗಪಡಿಸಿಲ್ಲ.

  ಇದನ್ನು ಓದಿ: Log-in to God: ಆ್ಯಪ್​ ಬಳಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ!, ‘‘ಕ್ಲಿಕ್ ಟು ಪ್ರೇ‘‘ಮತ್ತೆ ಆರಂಭಿಸಿದ ಪೋಪ್​ ಫ್ರಾನ್ಸಿಸ್​

  ಸದ್ಯ ಚೀನಾಸ ಹಲಬವು ಕಂಪನಿಗಳು ಪೆಟ್ರೋಲ್​ ಮತ್ತು ಡಿಸೇಲ್​ ವಾಹನವನ್ನು ಉತ್ಪಾದಿಸಿ  ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಅದರ ಜೊತೆಗೆ ಎಲೆಕ್ಟ್ರಿಕ್ ​ ವಾಹನಗಳನ್ನು ಉತ್ಪಾದಿಸುತ್ತಿರುವುದಲ್ಲಿದೆ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಭಾರತದಲ್ಲೂ ಚೀನಾ ಕಂಪನಿಗಳು ಪರಿಚಯಿಸಿದ ಎಲೆಕ್ಟ್ರಿಕ್​ ವಾಹನಗಳಿವೆ. ಇದೀಗ ಶಿಯೋಮಿ ಕೂಡ ಅದರತ್ತ ಚಿತ್ತ ಹರಿಸಿದ್ದು ತನ್ನ ಮಾರುಕಟ್ಟೆಯನ್ನು ವಿಸ್ತರಿಸುವ ಮೂಲಕ ಕಾರ್ಯಕ್ಷಮತೆಯನ್ನು ವೃದ್ಧಿಸಲಿದೆ.

  ಭಾರತದಲ್ಲಿ ಬಹುಥೆಕ ಸ್ಮಾರ್ಟ್​ಫೋನ್​ ಪ್ರಿಯರು ಬಳಸುವ ಸ್ಮಾರ್ಟ್​ಫೋನ್ ಚೀನಾ ಮೂಲದ್ದಾಗಿದೆ. ವಿಶ್ವದಾದ್ಯಂತ ಗಮನ ಹರಿಸಿದಾಗ ಚೀನಾ ಕೂಡ ಸ್ಮಾರ್ಟ್​ಫೋನ್​ ಉತ್ಪಾದನೆಯ ಪಟ್ಟಿಯಲ್ಲಿ ಮೊದಲಿದೆ. ಹಾಗಾಗಿ ಶಿಯೋಮಿ ಮಾತ್ರವಲ್ಲದೆ, ಒಪ್ಪೊ, ಒನ್​ಪ್ಲಸ್​ ಹೀಗೆ ನಾನಾ ಕಂಪನಿಗಳು ಚೀನಾ ಮೂಲದ್ದಾಗಿದೆ ಎಂಬುದನ್ನು ಗಮನಿಸಬೇಕಾಗಿದೆ.

  ಇದನ್ನು ಓದಿ: Google Pixel 6 ಸರಣಿ ಸ್ಮಾರ್ಟ್​ಫೋನ್​ ಮಾರುಕಟ್ಟೆಗೆ; ನೂತನ ಫೋನಿನ ವಿಶೇಷತೆ ಏನು?

  ಸ್ಮಾರ್ಟ್​ಫೋನ್​ ಮೂಲಕ ವಿಶ್ವದಾದ್ಯಂತ ಮಾರುಕಟ್ಟೆ ಪಸರಿಸಿರುವ ಶಿಯೋಮಿ ಇದೀಗ ಇಲೆಕ್ಟ್ರಿಕ್​ ವಾಹನದತ್ತ ತನ್ನ ಚಿತ್ತನೆಟ್ಟಿದೆ. ಹಾಗಾಗಿ 2024ರ ವೇಳೆಗೆ ನೂತನ ಎಲೆಕ್ಟ್ರಿಕ್​ ವಾಹನ ಪರಿಚಯಿಸುವ ಬಗ್ಗೆ ಹೇಳಿಕೊಂಡಿದೆ. ಮಾಹಿತಿ ಪ್ರಕಾರ ಅದಕ್ಕೆಂದೇ ಈಗಾಗಲೇ ಕಾರ್ಯದಲ್ಲಿ ಮಗ್ನವಾಗಿದೆ ಎಂದು ತಿಳಿದುಬಂದಿದೆ.

  ಪೆಟ್ರೋಲ್​ -ಡಿಸೇಲ್ ವಾಹನದ ಬಳಕೆ ಮತ್ತು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆರ ಹೆಚ್ಚಾಗುತ್ತಿದೆ. ಸರ್ಕಾರ ಕೂಡ ಇವಿ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿದೆ. ವಿಶ್ವದಾದ್ಯಂತ ಬಹುತೇಕ ದೇಶಗಳು ಇವಿ ವಾಹನದ ಉತ್ಪಾದನೆ ಮತ್ತು ಬಳಕೆಯತ್ತ ತಿರುಗಿದೆ.
  Published by:Harshith AS
  First published: