Video: ಸ್ವಯಂ ಚಾಲಿತ ಕಾರು ತಯಾರಿಸಿದ ಚೀನಾ; ಹೇಗಿದೆ ಗೊತ್ತಾ?

news18-kannada
Updated:September 13, 2020, 7:05 PM IST
Video: ಸ್ವಯಂ ಚಾಲಿತ ಕಾರು ತಯಾರಿಸಿದ ಚೀನಾ; ಹೇಗಿದೆ ಗೊತ್ತಾ?
ಕಾರು
  • Share this:
ಚೀನಾ ಏನಾದರೊಂದು ಹೊಸ ಅನ್ವೇಷಣೆಯನ್ನು ಮಾಡುತ್ತಾ ಇರುತ್ತದೆ. ಈಗಾಗಲೇ ಅನೇಕ ಸ್ಮಾರ್ಟ್​ಫೊನ್​ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅದರ ಮುಂದಿನ ಭಾಗದಂತೆ ಮಡಚುವ ಆ್ಯಂಡ್ರಾಯ್ಡ್ ಫೋನ್​ಗಳನ್ನು ಸಿದ್ಧಪಡಿಸಿ ಬಿಡುಗಡೆ ಮಾಡಿದೆ. ಇತ್ತ ವಾಹನ ಉತ್ಪಾದನೆಯಲ್ಲೂ ಮುಂದಿದೆ. ಸದ್ಯ ಎಲೆಕ್ಟ್ರಿಕ್​ ವಾಹನವನ್ನು ಉತ್ಪಾದಿಸುತ್ತಿದೆ. ಕೊರೋನಾ ಕಾಲವಾದ್ದರಿಂದ ಕೊರೋನಾವನ್ನು ತಡೆಗಟ್ಟುವ ಕಾರುಗಳನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇವುಗಳ ಮಧ್ಯೆ ಸ್ವಯಂ ಚಾಲಿತ ವಾಹನವನ್ನು ಮಾರುಕಟ್ಟೆಗೆ ತರಲು ಸಿದ್ಧತೆ ಮಾಡಿಕೊಂಡಿದೆ. ಈ ಬಗ್ಗೆ ಅನ್ವೇಷಣೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ತರಲು ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ಚೀನಾ ತನ್ನದೇ ಆದ ಬೈದು ಸರ್ವರ್​ ಅನ್ನು ಬಳಸುತ್ತಿದೆ. ಇದೀಗ ಬೈದು ಸರ್ವರ್​ ಸಹಾಯದಿಂದ ಚಲಿಸುವ ಕಾರೊಂದನ್ನು ಚೀನಾ ಉತ್ಪಾದಿಸಿದ್ದು, ಅದನ್ನು ಬೀಜಿಂಗ್​ನ ಯಿಝುವಾಂಗ್​, ಹೈಡಿಯನ್​, ಸುನ್ಯಾಯಿ ರಸ್ತೆಯಲ್ಲಿ ಟ್ರಯಲ್​ ನಡೆಸಿದೆ . ಸುಮಾರು 700 ಕಿ.ಮೀ ಚಲಿಸುವ ಮೂಲಕ ರಸ್ತೆ ಟ್ರಯಲ್​​ ಪೂರ್ಣಗೊಳಿಸಿದೆ.

ನೂತನ ಸ್ವಯಂ ಚಾಲಿತ ಕಾರು ಇಂಟರ್​ನೆಟ್​ ಮೂಲಕ ಕಾರ್ಯ ನಿವರ್ಹಿಸುತ್ತಿದ್ದು, ಟ್ರಾಫಿಕ್​ ವೇಳೆ ಕೂಡ ನಿಭಾಯಿಸಿಕೊಂಡು ಚಾಲನೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಸದ್ಯ ಸ್ವಯಂ ಚಾಲಿತ ಕಾರಿನ ಬಗ್ಗೆ ಪೀಪಲ್ಸ್​ ಡೈಲಿ ಚೀನಾ ತನ್ನ ಟ್ವಿಟ್ಟರ್​ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ಅನೇಕರು ವಿಡಿಯೋ ಕಂಡು ಅಚ್ಚರಿಗೊಂಡಿದ್ದಾರೆ.ಸದ್ಯ ತಂತ್ರಜ್ಞಾನ ಬೆಳಯುತ್ತಿದೆ. ಮಾರುಕಟ್ಟೆಗೆ ಹೊಸ ಬಗೆಯ ವಾಹನಗಳು ಬರುತ್ತಿದೆ. ಜಪಾನ್​ನ ಯಮಹಾ ಸಂಸ್ಥೆ ನೀರನ್ನು ಬಳಸಿ ಚಲಾಯಿಸಬಹುದಾದಾ ಬೈಕ್​ವೊಂದನ್ನು ಸಿದ್ಧಪಡಿಸುತ್ತಿದೆ. ಅದರಂತೆ ಚೀನಾ ಸ್ವಯಂ ಚಾಲಿತ ಕಾರನ್ನು ಅಭಿವೃದ್ಧಿ ಪಡಿಸಿದೆ. ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆ ಹೆಚ್ಚಿದೆ.
Published by: Harshith AS
First published: September 13, 2020, 7:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading