Chinese Apps: ಭಾರತೀಯ ಗುಪ್ತಚರ ಇಲಾಖೆ ಪಟ್ಟಿ ಮಾಡಿದೆ ಟಿಕ್​ಟಾಕ್​ ಸೇರಿದಂತೆ 52 ಚೀನಾ ಆ್ಯಪ್​ಗಳ ಹೆಸರು!

China Apps: ಭಾರತೀಯ ಗುಪ್ತಚರ ಇಲಾಖೆ ಬಿಡುಗಡೆ ಮಾಡಿದ್ದ 52 ಚೀನಾ ಆ್ಯಪ್​ಗಳಲ್ಲಿ ಕೆಲವು ಆ್ಯಪ್​ಗಳು ಜನಪ್ರಿಯತೆ ಪಡೆದುಕೊಂಡಿದೆ. ಜೊತೆಗೆ ಅನೇಕರು ಆ ಆ್ಯಪ್​ಗಳನ್ನು ಬಳಸುತ್ತಿದ್ದಾರೆ. ಟಿಕ್​​​​ಟಾಕ್​, ಬಿಗೋ ಲೈವ್, ಫೈಲ್​ ಶೇರಿಂಗ್​ ಸರ್ವಿಸ್​​ ಶೇರ್​​ಇಟ್​, ಯುಸಿ ಬ್ರೌಸರ್​, ಕ್ಲಾಷ್​​​​ ಆಫ್​ ಕಿಂಗ್​​ ಹೀಗೆ ಅನೇಕ ಆ್ಯಪ್​ಗಳನು ಭಾರತೀಯರು ಬಳಕೆ ಮಾಡುತ್ತಿದ್ದಾರೆ ಎಂದು ತಿಳಿಸಿದೆ.

news18-kannada
Updated:June 19, 2020, 3:59 PM IST
Chinese Apps: ಭಾರತೀಯ ಗುಪ್ತಚರ ಇಲಾಖೆ ಪಟ್ಟಿ ಮಾಡಿದೆ ಟಿಕ್​ಟಾಕ್​ ಸೇರಿದಂತೆ 52 ಚೀನಾ ಆ್ಯಪ್​ಗಳ ಹೆಸರು!
ಸಾಂದರ್ಭಿಕ ಚಿತ್ರ
  • Share this:
ಚೀನಾ ಆ್ಯಪ್​ಗಳ ಬ್ಯಾನ್​ ಆಗಬೇಕೆಂಬ ಕೂಗು ಎಲ್ಲೆಡೆ ಕೇಳಿಬಂದಿದೆ. ಇದೀಗ ಭಾರತೀಯ ಗುಪ್ತಚರ ಇಲಾಖೆ 52 ಚೀನಾ ಆ್ಯಪ್​​​ಗಳನ್ನು ಪಟ್ಟಿಮಾಡಿದ್ದು, ಇವುಗಳು ರಾಷ್ಟ್ರೀಯ ಭದ್ರತೆಗೆ ಹಾನಿಕಾರಕ ಎಂದು ಕೇಂದ್ರ ಸರ್ಕಾರಕ್ಕೆ ವರದಿ ನೀಡಿದೆ

ಭಾರತೀಯ ಗುಪ್ತಚರ ಇಲಾಖೆ ಬಿಡುಗಡೆ ಮಾಡಿದ್ದ 52 ಚೀನಾ ಆ್ಯಪ್​ಗಳಲ್ಲಿ ಕೆಲವು ಆ್ಯಪ್​ಗಳು ಜನಪ್ರಿಯತೆ ಪಡೆದುಕೊಂಡಿದೆ. ಜೊತೆಗೆ ಅನೇಕರು ಆ ಆ್ಯಪ್​ಗಳನ್ನು ಬಳಸುತ್ತಿದ್ದಾರೆ. ಟಿಕ್​​​​ಟಾಕ್​, ಬಿಗೋ ಲೈವ್, ಫೈಲ್​ ಶೇರಿಂಗ್​ ಸರ್ವಿಸ್​​ ಶೇರ್​​ಇಟ್​, ಯುಸಿ ಬ್ರೌಸರ್​, ಕ್ಲಾಷ್​​​​ ಆಫ್​ ಕಿಂಗ್​​ ಹೀಗೆ ಅನೇಕ ಆ್ಯಪ್​ಗಳನು ಭಾರತೀಯರು ಬಳಕೆ ಮಾಡುತ್ತಿದ್ದಾರೆ ಎಂದು ತಿಳಿಸಿದೆ.

ಇನ್ನು ಕೊರೋನಾ ಲಾಕ್​ಡೌನ್​​ ಸಮಯದಲ್ಲಿ ಬಿಡುಡೆಗೊಂಡು ಜನಪ್ರಿಯತೆ ಪಡೆದ ಜೂಮ್​ ಆ್ಯಪ್​ ಕೂಡ ಈ ಪಟ್ಟಿಯಲ್ಲಿದೆ. ಅನೇಕರು ಲಾಕ್​ಡೌನ್​ ಸಮಯದಲ್ಲಿ ಮನೆಯಿಂದಲೇ ಕುಳಿತು ಆಫೀಸು ಕೆಲಸವನ್ನು ಮಾಡುತ್ತಿದ್ದಾರೆ. ಹಾಗಾಗಿ ಉದ್ಯೋಗಿಗಳು ಆನ್​ಲೈನ್​ ಮೀಟಿಂಗ್​ ಮಾಡಲು ಜೂಮ್​ ಆ್ಯಪ್​ ಬಳಕೆ ಮಾಡುತ್ತಿದ್ದಾರೆ. ಈ ಆ್ಯಪ್​ ಕೂಡ ರಾಷ್ಟ್ರಿಯ ಭದ್ರತೆಗೆ ಹಾಕಿಕಾರಕವಾಗಿದೆ.

ಅನೇಕ ದೇಶಿಗರು ಚೀನಾ ಆ್ಯಪ್​ಗಳನ್ನು ಬಳಕೆ ಮಾಡುತ್ತಿದ್ದಾರೆ. ಸಾಕಷ್ಟು ಜನರಿಗೆ ದೇಶಿಯ ಆ್ಯಪ್​ಗಳು ಯಾವುದು? ಚೀನಾ ಆ್ಯಪ್​ಗಳ ಆಯಾವುದು? ಎಂಬ ಮಾಹಿತಿ ತಿಳಿದಿಲ್ಲ. ಹಾಗಾಗಿ ಪ್ಲೇಸ್ಟೋರ್​ನಲ್ಲಿ ಜನಪ್ರಿಯಗಳಿಸಿರುವ ಆ್ಯಪ್​ಗಳನ್ನು ಬಳಕೆ ಮಾಡುತ್ತಿದ್ದಾರೆ. ಭಾರತೀಯ ಗುಪ್ತಚರ ಇಲಾಖೆ ಪಟ್ಟಿ ಮಾಡಿದ 52 ಆ್ಯಪ್​ಗಳ ಪಟ್ಟಿ ಇಲ್ಲಿದೆ.

52 ಚೀನಾ ಆ್ಯಪ್​ಗಳ ಪಟ್ಟಿ:

ಹೆಲೋ, ಟಿಕ್​ಟಾಕ್​, ಜೂಮ್​, ಬ್ಯೂಟಿ ಪ್ಲಸ್​, ಕ್ಲಾಷ್ ಆಫ್ ಕಿಂಗ್ಸ್, 360ಸೆಕ್ಯೂರಿಟಿ, ಎಪಿಯುಎಸ್ ಬ್ರೌಸರ್, ಬೈಡು ಮ್ಯಾಪ್​, ಬೈಡು ಟ್ರಾನ್ಸ್​ಲೇಟ್​​, ಬಿಗೊ ಲೈವ್, ಕ್ಯಾಚಿ ಕ್ಲೀಯರ್​ ಡಿಯು ಆ್ಯಪ್​ ಸ್ಟುಡಿಯೋ, ಕ್ಲೀನ್ ಮಾಸ್ಟರ್, ಕ್ಲಬ್‌ಫ್ಯಾಕ್ಟರಿ, ಸಿಎಮ್ ಬ್ರೌಸರ್, ಡಿಯು ಬ್ಯಾಟರಿ ಸೇವರ್, ಡಿಯು ಬ್ರೌಸರ್, ಡಿಯು ಕ್ಲೀನರ್, ಡಿಯು ಪ್ರೈವೆಸಿ, ಡಿಯು ರೆಕಾರ್ಡರ್, ಇಎಸ್ ಫೈಲ್ ಎಕ್ಸ್‌ಪ್ಲೋರರ್, ಕ್ವಾಯ್, ಲೈಕ್, ಮೇಲ್ ಮಾಸ್ಟರ್, ಮಿ ಕಮ್ಯುನಿಟಿ, ಮಿ ಸ್ಟೋರ್, ಮಿ ವಿಡಿಯೋ ಕಾಲ್-ಶಿಯೋಮಿ, ನ್ಯೂಸ್‌ಡಾಗ್, ಪ್ಯಾರಲೆಲ್ ಸ್ಪೇಸ್​​, ಪರ್ಫೆಕ್ಟ್ ಕಾರ್ಪ್, ಫೋಟೋ ವಂಡರ್, ಕ್ಯೂಕ್ಯೂ ಇಂಟರ್‌ನ್ಯಾಷನಲ್, ಕ್ಯೂಕ್ಯೂ ಲಾಂಚರ್, ಕ್ಯೂಕ್ಯೂ ಮೇಲ್, ಕ್ಯೂಕ್ಯೂ ಮ್ಯೂಸಿಕ್, ಕ್ಯೂಕ್ಯೂ ನ್ಯೂಸ್‌ಫೀಡ್, ಕ್ಯೂಕ್ಯೂ ಪ್ಲೇಯರ್, ಕ್ಯೂಕ್ಯೂ ಸೆಕ್ಯುರಿಟಿ ಸೆಂಟರ್, ROMWE, ಸೆಲ್ಫಿ ಸಿಟಿ, ಶೇರ್​ಇಟ್​​, ಯುಸಿ ಬ್ರೌಸರ್​​, ಯುಸಿ ನ್ಯೂಸ್​, ವಾಲ್ಟ್​​-ಹೈಡ್​​, ವಿಗೋ ವಿಡಿಯೋ, ವೈರಸ್​ ಕ್ಲೀನರ್​, ವಿವಾ ವಿಡಿಯೋ, ವಿಚಾಟ್​​, ವೈಬೊ,ವಿಸಿಂಕ್​, ವಂಡರ್​ ಕ್ಯಾಮೆರಾ, ಕ್ಸೆಂಡರ್​, ಯೂಕ್ಯಾಮ್​ ಮೇಕಅಪ್
First published: June 19, 2020, 3:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading