• Home
  • »
  • News
  • »
  • tech
  • »
  • Mobile Ban: ಭಾರತದಲ್ಲಿ ಚೀನಾದ ಕಡಿಮೆ ಬೆಲೆಯ ಮೊಬೈಲ್ ಬ್ಯಾನ್? ಇದುವೇ ಕಾರಣ

Mobile Ban: ಭಾರತದಲ್ಲಿ ಚೀನಾದ ಕಡಿಮೆ ಬೆಲೆಯ ಮೊಬೈಲ್ ಬ್ಯಾನ್? ಇದುವೇ ಕಾರಣ

ಚೀನಾದ ಕಡಿಮೆ ಬೆಲೆಯ ಮೊಬೈಲ್ ಬ್ಯಾನ್

ಚೀನಾದ ಕಡಿಮೆ ಬೆಲೆಯ ಮೊಬೈಲ್ ಬ್ಯಾನ್

ಚೀನಾದ 12,000 ರೂಪಾಯಿಗಳಿಗಿಂತ ಕಡಿಮೆ ದರದ ಸ್ಮಾರ್ಟ್ ಫೋನುಗಳನ್ನು ಭಾರತದಲ್ಲಿ ನಿರ್ಬಂಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಭಾರತದಲ್ಲಿ ದೇಶೀಯ ಮೊಬೈಲ್ ಉದ್ಯಮ ಕೊಂಚ ಇಳಿಕೆ ಕಾಣುತ್ತಿದ್ದು, ಈ ಉದ್ಯಮವನ್ನು ಪುನಃಶ್ಚೇತನಗೊಳಿಸಲು ಮತ್ತು ಮಾರುಕಟ್ಟೆಯಲ್ಲಿ ಭಾರತದ ಕಂಪನಿಗಳನ್ನು ಅಗ್ರಸ್ಥಾನದಲ್ಲಿರಿಸಲು ಸರ್ಕಾರ ಕ್ರಮಕ್ಕೆ ಮುಂದಾಗಿದೆ. 

ಮುಂದೆ ಓದಿ ...
  • Share this:

ಚೀನಾದ (China) 12,000 ರೂಪಾಯಿಗಳಿಗಿಂತ ಕಡಿಮೆ ದರದ ಸ್ಮಾರ್ಟ್ ಫೋನುಗಳನ್ನು (Smart Phones) ಭಾರತದಲ್ಲಿ ನಿರ್ಬಂಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಭಾರತದಲ್ಲಿ ದೇಶೀಯ ಮೊಬೈಲ್ ಉದ್ಯಮ ಕೊಂಚ ಇಳಿಕೆ ಕಾಣುತ್ತಿದ್ದು, ಈ ಉದ್ಯಮವನ್ನು ಪುನಃಶ್ಚೇತನಗೊಳಿಸಲು ಮತ್ತು ಮಾರುಕಟ್ಟೆಯಲ್ಲಿ ಭಾರತದ ಕಂಪನಿಗಳನ್ನು ಅಗ್ರಸ್ಥಾನದಲ್ಲಿರಿಸಲು ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಇತ್ತೀಚಿನ ದಿನಗಳಲ್ಲಿ ಭಾರತ ಸರ್ಕಾರವು (Indian Government) ಭಾರತದಲ್ಲಿನ ಹಲವಾರು ಚೀನೀ ಕಂಪನಿಯ (Chinese Company) ಸ್ಮಾರ್ಟ್‌ಫೋನ್ ತಯಾರಕರ ಬಗ್ಗೆ ತನಿಖೆ ನಡೆಸುತ್ತಿದೆ. ಅವರ ಭಾರತೀಯ ಅಂಗಸಂಸ್ಥೆಗಳು ಕಡಿಮೆ ತೆರಿಗೆ ಮತ್ತು ಸುಂಕಗಳನ್ನು ಪಾವತಿಸುವ ಸಲುವಾಗಿ ಭಾರತದಿಂದ ತಮ್ಮ ಲಾಭ ಮತ್ತು ಹಣವನ್ನು ಭಾರತದಿಂದ ತಮ್ಮ ಚೀನೀ ಕಚೇರಿಗಳಿಗೆ ತಿರುಗಿಸುವ ಮೂಲಕ ಹಣವನ್ನು ಲಾಂಡರಿಂಗ್ ಮಾಡುತ್ತಿವೆ ಎಂಬ ಬಗ್ಗೆಯೂ ಕೇಳಿ ಬರುತ್ತಿದೆ.


ಈ ಎಲ್ಲಾ ಕಾರಣದಿಂದಾಗಿ ಕೇಂದ್ರ ಸರ್ಕಾರವು ಚೀನಾ ಕಂಪನಿಯ ಕಡಿಮೆ ಅಂದರೆ ಹನ್ನೆರಡು ಸಾವಿರಗಿಂತ ಕಡಿಮೆ ಇರುವ ಮೊಬೈಲ್ ಗಳನ್ನು ಬ್ಯಾನ್ ಮಾಡಲು ನಿರ್ಧರಿಸಿದೆ.


ಚೀನಾದ ಶಿಯೋಮಿ ಕಂಪನಿಗೆ ಹೊಡೆತ
ಭಾರತ ಕೇಂದ್ರ ಸರ್ಕಾರದ ಈ ಕ್ರಮ ಚೀನಾದ ಶಿಯೋಮಿ ಫೋನ್ ಸೇರಿದಂತೆ ಹಲವು ಚೀನಾ ಮೊಬೈಲ್ ಕಂಪನಿಗಳಿಗೆ ಹೊಡೆತ ನೀಡಲಿದೆ. ಇಷ್ಟು ಮಾತ್ರವಲ್ಲದೇ ಕೇಂದ್ರದ ಈ ಕ್ರಮವು ಚೀನಾದ ದೈತ್ಯರನ್ನು ಅತಿದೊಡ್ಡ ಮೊಬೈಲ್ ಮಾರುಕಟ್ಟೆಯ ಕಡಿಮೆ ದರದ ಮೊಬೈಲ್ ವಲಯದಿಂದ ಹೊರಹಾಕುವ ಗುರಿಯನ್ನು ಇಟ್ಟುಕೊಂಡಿದೆ ಎನ್ನಲಾಗಿದೆ. ರಿಯಲ್ ಮಿ ಮತ್ತು ಟ್ರಾನ್ಸಿಷನ್ ಗಳಂತಹ ಹೆಚ್ಚಿನ ಪ್ರಮಾಣದ ಬ್ರ್ಯಾಂಡುಗಳು ಸ್ಥಳೀಯ ಮೊಬೈಲ್ ತಯಾರಿಕಾ ಉದ್ಯಮದ ಮೇಲೆ ಪರಿಣಾಮ ಬೀರುತ್ತಿರುವುದರಿಂದಲೂ ಸಹ ಕಾಕತಾಳೀಯವಾಗಿ ಈ ಕ್ರಮ ಹೊಂದಿಕೆಯಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.


ಇದನ್ನೂ ಓದಿ: Smart Phones: ಬೆಸ್ಟ್​ ಕ್ಯಾಮೆರಾ ಫೋನ್​ ಹುಡುಕುತ್ತಿದ್ದೀರಾ? 15 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುವ ಸ್ಮಾರ್ಟ್​ಫೋನ್​ಗಳು ಇಲ್ಲಿದೆ ನೋಡಿ


ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಮಾರುಕಟ್ಟೆಯಾಗಿದೆ ಮತ್ತು ಶೀಘ್ರದಲ್ಲೇ ವಿಶ್ವದ ಅತಿದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆಯಾಗುವತ್ತ ಸಾಗುತ್ತಿದೆ. ಹೀಗಿರುವಾಗ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಚೀನಾ ಕಂಪನಿಗಳ ಪ್ರಾಬಲ್ಯ ಕುಗ್ಗಿಸಲು ಕೇಂದ್ರ ಈ ಕ್ರಮಕ್ಕೆ ಮುಂದಾಗಿದೆ. ಶಿಯೋಮಿ ಮತ್ತು ಒಪ್ಪೋ ನಂತಹ ತಯಾರಕರು ಕೈಗೆಟುಕುವ ಆಂಡ್ರಾಯ್ಡ್ ಸಾಧನಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಾಗಿನಿಂದ ಭಾರತೀಯ ಮೊಬೈಲ್ ಮಾರುಕಟ್ಟೆಗೆ ಅಪಾರ ಹೊಡೆತ ಬಿದ್ದಿದೆ.


ಭಾರತದ ಅತಿದೊಡ್ಡ ಸ್ಮಾರ್ಟ್‍ಫೋನ್ ವಿಭಾಗವು ರೂ 10,000 ಬೆಲೆಯಿಂದ ಶುರುವಾಗುತ್ತವೆ, ನಂತರ ಸುಮಾರು ರೂ 15,000 ಬೆಲೆಗೆ ಲಭ್ಯವಾಗುತ್ತವೆ. ಕೆಲವು ಪ್ರಮುಖ ಚೀನೀ ಸ್ಮಾರ್ಟ್‌ಫೋನ್ ತಯಾರಕರೊಂದಿಗೆ ನಿಕಟವಾಗಿ ಸಂಬಂಧ ಹೊಂದಿರುವ ತಜ್ಞರು ಅಗ್ಗದ ಮತ್ತು ಬಜೆಟ್ ಸ್ಮಾರ್ಟ್‌ಫೋನ್‌ಗಳ ಮಾರಾಟವನ್ನು ನಿಷೇಧಿಸುವ ನಿರ್ಣಯವನ್ನು ಅಂಗೀಕರಿಸಿದರೆ, ಚೀನಾದವರು ಮೊಬೈಲ್ ಫೋನ್ ಗಳ ಬೆಲೆಗಳನ್ನು ಹೆಚ್ಚಿಸಬಹುದು ಎಂದು ಹೇಳುತ್ತಿದ್ದಾರೆ.


ಭಾರತದ ಈ ಕ್ರಮಕ್ಕೆ ಚೀನಾ ಉಲ್ಟಾ ಹೊಡೆಯಬಹುದು..!
ಈ ಬಗ್ಗೆ ಮಾತನಾಡಿದ ಒಬ್ಬರು, ಇನ್‌ಪುಟ್ ವೆಚ್ಚಗಳು ಹೆಚ್ಚುತ್ತಿರುವ ಕಾರಣ ಅವರು ತಮ್ಮ ಉತ್ತಮ-ಮಾರಾಟದ ಸಾಧನಗಳ ಬೆಲೆಯನ್ನು ಹೆಚ್ಚಿಸಲು ಯೋಜಿಸುತ್ತಿದ್ದಾರೆ ಎಂದು ಹೇಳಿದರು. ಉದಾಹರಣೆಗೆ ಮಾರುಕಟ್ಟೆಯಲ್ಲಿರುವ ಒಂದು ಹ್ಯಾಂಡ್‌ಸೆಟ್ ರೂ 11,999 ಇದ್ದು ಮತ್ತು ಇ-ಕಾಮರ್ಸ್ ಪೋರ್ಟಲ್‌ಗಳಲ್ಲಿ ಕೆಲವು ರಿಯಾಯಿತಿದರದಲ್ಲಿ ಲಭಿಸುತ್ತವೆ. ಈಗ ಅದೇ ಹ್ಯಾಂಡ್‌ಸೆಟ್‌ಗೆ ಕನಿಷ್ಠ 12,049 ರೂ.ಗಳನ್ನು ನಿಗದಿಪಡಿಸಿ ನಿಷೇಧವನ್ನು ತಪ್ಪಿಸಿಕೊಳ್ಳುವ ಕ್ರಮದ ಬಗ್ಗೆ ಚರ್ಚೆಗಳನ್ನು ಚೀನಾ ಕಂಪನಿಗಳು ನಡೆಸುತ್ತಿವೆ.


ಇದನ್ನೂ ಓದಿ:  Type-C charging port: ಒಂದೇ ಚಾರ್ಜರ್ ನೀತಿಯನ್ನು ತರಲಿದೆಯಾ ಭಾರತ? ಇದರಿಂದ ಇ-ತ್ಯಾಜ್ಯ ಕಡಿಮೆಯಾಗುತ್ತಾ?


ಇದೇ ಕ್ರಮವನ್ನು ಎಲ್ಲಾ ಫೋನ್ ಗಳಿಗೆ ಅನ್ವಯ ಮಾಡಲು ಚೀನಾ ಮುಂದಾದರೆ ಭಾರತ ಸರ್ಕಾರ ಮತ್ತಷ್ಟು ಕಠಿಣ ಕ್ರಮಗಳಿಗೆ ಮುಂದಾಗಬಹುದು ಎಂದೂ ಸಹ ಹೇಳಲಾಗುತ್ತಿದೆ. ಅಲ್ಲದೇ ಈ ಪರಿಸ್ಥಿತಿಯು ಮೈಕ್ರೊಮ್ಯಾಕ್ಸ್, ಕಾರ್ಬನ್ ಮುಂತಾದ ಭಾರತೀಯ ಮೊಬೈಲ್ ಫೋನ್ ತಯಾರಕರಿಗೆ ತಮ್ಮನ್ನು ತಾವು ಮರುಶೋಧಿಸಲು ಉತ್ತಮ ಪ್ರಚೋದನೆಯನ್ನು ನೀಡುತ್ತದೆ ಎಂದು ಸಹ ಹೇಳಲಾಗುತ್ತಿದೆ.

Published by:Ashwini Prabhu
First published: