ಚೀನಾದಿಂದ ಸ್ಮಾರ್ಟ್​ಫೋನ್​ಗಳ ಮೇಲೆ ವೈರಸ್ ಅಟ್ಯಾಕ್..!

ಇದೇ ವೇಳೆ ಕೆಲವು ಫೈಲ್​ಗಳನ್ನು ಸ್ಕ್ಯಾನ್ ಮಾಡುವ ಭದ್ರತಾ ಸಿಬ್ಬಂದಿ ಪೋನ್​ನಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದ ವಿಷಯಗಳಿದೆಯೇ ಎಂಬುದನ್ನು ಖಚಿತ ಪಡಿಸಿ ವಾಪಾಸ್ ನೀಡುತ್ತಾರೆ.

zahir | news18
Updated:July 4, 2019, 5:58 PM IST
ಚೀನಾದಿಂದ ಸ್ಮಾರ್ಟ್​ಫೋನ್​ಗಳ ಮೇಲೆ ವೈರಸ್ ಅಟ್ಯಾಕ್..!
echnology News World
  • News18
  • Last Updated: July 4, 2019, 5:58 PM IST
  • Share this:
ಚೀನಾ ದೇಶದ ನೀಚ ಬುದ್ದಿಯು ಮತ್ತೊಮ್ಮೆ ವಿಶ್ವದ ಮುಂದೆ ಬಹಿರಂಗವಾಗಿದೆ. ಈ  ದೇಶಕ್ಕೆ ತೆರಳುವ ವಿದೇಶಿಯರ ಮೊಬೈಲ್ ಫೋನ್​ಗಳ ಮೇಲೆ ಮಾಲ್​ವೇರ್ ವೈರಸ್ ಅನ್ನು ಇನ್​ಸ್ಟಾಲ್ ಮಾಡಲಾಗುತ್ತಿದೆ ಎಂಬ ಅಚ್ಚರಿಯ ವಿಷಯವೊಂದು ಇದೀಗ ಬಹಿರಂಗವಾಗಿದೆ.

ಪ್ರವಾಸಿಗರಿಂದ ಫೋನ್​ಗಳನ್ನು ವಶಕ್ಕೆ ಪಡೆಯುವ ಸೆಕ್ಯೂರಿಟಿ ಫೋರ್ಸ್​ ಮೊಬೈಲ್​ನಲ್ಲಿನ ಮೆಸೇಜ್​, ವಿಡಿಯೋಗಳನ್ನು ಪರಿಶೀಲಿಸುತ್ತದೆ. ಇದೇ ವೇಳೆ ಕೆಲವು ಫೈಲ್​ಗಳನ್ನು ಸ್ಕ್ಯಾನ್ ಮಾಡುವ ಭದ್ರತಾ ಸಿಬ್ಬಂದಿ ಪೋನ್​ನಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದ ವಿಷಯಗಳಿದೆಯೇ ಎಂಬುದನ್ನು ಖಚಿತ ಪಡಿಸಿ ವಾಪಾಸ್ ನೀಡುತ್ತಾರೆ.

ಆದರೆ ಇದೇ ವೇಳೆ ಸಂಪೂರ್ಣವಾಗಿ ಮೊಬೈಲ್ ಫೋನ್​ನನ್ನು ಹ್ಯಾಕ್ ಮಾಡಬಹುದಾದಂತಹ ಸಾಫ್ಟ್​ವೇರ್​ ಅಥವಾ ಮಾಲ್​ವೇರ್​ ಅನ್ನು ಚೀನಿಯರು ಇನ್​ಸ್ಟಾಲ್ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಮೂಲಕ ನಿಮ್ಮ ಮೊಬೈಲ್​ ಮೇಲೆ ನಿಯಂತ್ರಣ ಪಡೆದುಕೊಳ್ಳುತ್ತಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ನ್ಯೂಯಾರ್ಕ್ ಟೈಮ್ಸ್, ವೈಸ್, Süddeutsche Zeitung ಮತ್ತು ಜರ್ಮನ್ ಬ್ರಾಡ್​ಕಾಸ್ಟರ್​ ಚೀನಿ ಮಾಲ್​ವೇರ್ ಇನ್​ಸ್ಟಾಲ್​ ಬಗ್ಗೆ ತನಿಖೆ ನಡೆಸಿದ್ದು, ಈ ವೇಳೆ ಇಂತಹದೊಂದು ಜಾಲವನ್ನು ಚೀನಿಯರು ಸ್ಥಾಪಿಸಿರುವ ವಿಷಯ ತಿಳಿದು ಬಂದಿದೆ. ಇಲ್ಲಿ 70 ಸಾವಿರಕ್ಕೂ ಹೆಚ್ಚು ಫೈಲ್‌ಗಳನ್ನು ಸ್ಕ್ಯಾನ್ ಮಾಡಲಾಗಿದ್ದು, ಇವುಗಳನ್ನು ಚೀನಾ ಸರ್ಕಾರವು ಅನುಮಾನಾಸ್ಪದ ಎಂದು ಪರಿಗಣಿಸಿದೆ.

ಈ ಡೇಟಾಗಳನ್ನು ಚೀನಾ ಬಾರ್ಡರ್ ಆಫೀಸ್ ಸ್ಥಳೀಯ ಇಂಟರ್​ನೆಟ್​ ಸರ್ವರ್‌ನಲ್ಲಿ ಸಂಗ್ರಹಿಸಲಾಗುತ್ತಿದೆ. ಈ ಮೂಲಕ ಸ್ಮಾರ್ಟ್​ಫೋನ್ ಬಳಕೆದಾರರಿಗೆ ತಿಳಿಯದಂತೆ ಅವರ ಮಾಹಿತಿಯನ್ನು ಚೀನಾ ಸರ್ಕಾರ ಸಂಗ್ರಹಿಸಿದೆ. ಇನ್ನು ಈ ಮೂಲಕ ನಿಮ್ಮ ಚಲನವಲನಗಳ ಮೇಲೂ ಕೂಡ ಚೀನಿಯರು ನಿಗಾ ಇಟ್ಟಿದ್ದಾರೆ ಎಂಬ ವಿಚಾರವನ್ನು ಅಲ್ಲಗೆಳೆಯುವಂತಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಈ ಪವಾಡ ನಡೆದರೆ ಪಾಕಿಸ್ತಾನ ಸೆಮಿ ಫೈನಲ್ ಪ್ರವೇಶಿಸುವುದು ಬಹುತೇಕ ಖಚಿತ..!
First published:July 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...