Chinese Phones: ಚೀನಾ ಸ್ಮಾರ್ಟ್​ಫೋನ್​ಗಳಿಗೆ ಭಾರತದಲ್ಲಿ ಜಾಗವಿಲ್ಲವೇ? ಬ್ಯಾನ್​ ಆಗೋದು ನಿಜನಾ?

ದೇಶೀಯ ಮೊಬೈಲ್ ಉದ್ಯಮವನ್ನು ಪುನಶ್ಚೇತನಗೊಳಿಸಲು ಕೇಂದ್ರ ಸರ್ಕಾರ, ಚೀನಾದ 12,000 ರೂಪಾಯಿಗಳಿಗಿಂತ (150 ಡಾಲರ್) ಕಡಿಮೆ ದರದ ಸ್ಮಾರ್ಟ್ ಫೋನುಗಳನ್ನು ಭಾರತದಲ್ಲಿ ನಿರ್ಬಂಧಿಸಲು ಚಿಂತನೆ ನಡೆಸಿದೆ. ಭಾರತದಲ್ಲಿ ದೇಶೀಯ ಮೊಬೈಲ್ ಉದ್ಯಮ ಕೊಂಚ ಮಟ್ಟಿಗೆ ಕುಗ್ಗುತ್ತಿದ್ದು, ಲಾಭದಾಯಕ ದಾರಿಯಲ್ಲಿ ಸಾಗಿಸುವ ದೃಷ್ಟಿಯಿಂದ ಈ ನಿರ್ಧಾರಕ್ಕೆ ಮುಂದಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ದೇಶೀಯ ಮೊಬೈಲ್ (Mobile) ಉದ್ಯಮವನ್ನು ಪುನಶ್ಚೇತನಗೊಳಿಸಲು ಕೇಂದ್ರ ಸರ್ಕಾರ, ಚೀನಾದ 12,000 ರೂಪಾಯಿಗಳಿಗಿಂತ (150 ಡಾಲರ್) ಕಡಿಮೆ ದರದ ಸ್ಮಾರ್ಟ್ ಫೋನುಗಳನ್ನು (Smart Phones) ಭಾರತದಲ್ಲಿ ನಿರ್ಬಂಧಿಸಲು ಚಿಂತನೆ ನಡೆಸಿದೆ. ಭಾರತದಲ್ಲಿ ದೇಶೀಯ ಮೊಬೈಲ್ ಉದ್ಯಮ ಕೊಂಚ ಮಟ್ಟಿಗೆ ಕುಗ್ಗುತ್ತಿದ್ದು, ಲಾಭದಾಯಕ (Profitable) ದಾರಿಯಲ್ಲಿ ಸಾಗಿಸುವ ದೃಷ್ಟಿಯಿಂದ ಈ ನಿರ್ಧಾರಕ್ಕೆ ಮುಂದಾಗಿದೆ. ಇದು ಶಿಯೋಮಿ ಸೇರಿದಂತೆ ಹಲವು ಚೀನಾ ಮೊಬೈಲ್ ಕಂಪನಿಗಳಿಗೆ (China Mobile Company) ಹೊಡೆತ ನೀಡಲಿದೆ. ಇಷ್ಟು ಮಾತ್ರವಲ್ಲದೇ ಕೇಂದ್ರದ ಈ ಕ್ರಮವು ಚೀನಾದ ದೈತ್ಯರನ್ನು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಮಾರುಕಟ್ಟೆಯ ಕಡಿಮೆ ದರದ ಮೊಬೈಲ್ ವಲಯದಿಂದ ಹೊರಹಾಕುವ ಗುರಿಯನ್ನು ಇಟ್ಟುಕೊಂಡಿದೆ ಎನ್ನಲಾಗಿದೆ.

ರಿಯಲ್ ಮಿ ಮತ್ತು ಟ್ರಾನ್ಸಿಷನ್ ಗಳಂತಹ ಹೆಚ್ಚಿನ ಪ್ರಮಾಣದ ಬ್ರ್ಯಾಂಡುಗಳು ಸ್ಥಳೀಯ ಮೊಬೈಲ್ ತಯಾರಿಕಾ ಉದ್ಯಮದ ಮೇಲೆ ಪರಿಣಾಮ ಬೀರುತ್ತಿರುವುದರಿಂದಲೂ ಸಹ ಕಾಕತಾಳೀಯವಾಗಿ ಈ ಕ್ರಮ ಹೊಂದಿಕೆಯಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಚೀನಾ ಮೊಬೈಲ್ ಕಂಪನಿಗಳಿಗೆ ಪೆಟ್ಟು
ಇತ್ತೀಚೆಗೆ ಸ್ಮಾರ್ಟ್ ಫೋನ್ ದೈತ್ಯ ಚೀನಾವು ತನ್ನ ಬೆಳವಣಿಗೆಗಾಗಿ ಭಾರತದ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿಂದ, ಭಾರತದ ಪ್ರವೇಶ ಮಟ್ಟದ ಮಾರುಕಟ್ಟೆಯಿಂದ ಚೀನಾದ ಶಿಯೋಮಿ ಮತ್ತು ಹಲವು ಮೊಬೈಲ್ ತಯಾರಿಕಾ ಕಂಪನಿಗಳನ್ನು ಹೊರಗಿಡುವುದರಿಂದ ಚೀನಾ ಮೊಬೈಲ್ ಕಂಪನಿಗಳ ಮೇಲೆ ಭಾರೀ ಹೊಡೆತ ಬೀಳಲಿದೆ.

ಮಾರುಕಟ್ಟೆ ಟ್ರ್ಯಾಕರ್ ಕೌಂಟರ್‌ಪಾಯಿಂಟ್‌ನ ಪ್ರಕಾರ, $150 ಕ್ಕಿಂತ ಕಡಿಮೆ ಇರುವ ಸ್ಮಾರ್ಟ್‌ಫೋನ್‌ಗಳು ಜೂನ್ 2022 ರವರೆಗಿನ ತ್ರೈಮಾಸಿಕದಲ್ಲಿ ಭಾರತದ ಮಾರಾಟದ ಮೂರನೇ ಒಂದು ಭಾಗಕ್ಕೆ ಕೊಡುಗೆ ನೀಡಿವೆ, ಚೀನಾದ ಕಂಪನಿಗಳು ಆ ಸಾಗಣೆಗಳಲ್ಲಿ 80% ರಷ್ಟನ್ನು ಹೊಂದಿವೆ. ಹೀಗಾಗಿ ಕೋವಿಡ್ ಸಮಯದಲ್ಲಿ ಚೀನಾದ ದೈತ್ಯ ಮೊಬೈಲ್ ತಯಾರಿಕಾ ಕಂಪನಿಗಳಿಗೆ ಆಧಾರವಾಗಿದ್ದೆ ಭಾರತದ ಮೊಬೈಲ್ ಮಾರುಕಟ್ಟೆ ಎನ್ನಬಹುದು. ಹಾಂಗ್ ಕಾಂಗಿನಲ್ಲಿ ವಹಿವಾಟಿನ ಅಂತಿಮ ನಿಮಿಷಗಳಲ್ಲಿ ಶಿಯೋಮಿ ಷೇರುಗಳು ನಷ್ಟ ಅನುಭವಿಸಿದವು. ಇದು ಶೇಕಡ 3.6 ರಷ್ಟು ಕುಸಿದಿದೆ, ಈ ವರ್ಷ ಶಿಯೋಮಿ ಷೇರುಗಳ ಮೌಲ್ಯವು ಶೇಕಡ 35 ಕ್ಕಿಂತ ಹೆಚ್ಚು ಕುಸಿದಿದೆ.

ಇದನ್ನೂ ಓದಿ: Excahange Offer: 20 ಸಾವಿರ ರೂಪಾಯಿಯ ಎಕ್ಸ್​ಚೇಂಜ್​ ಆಫರ್​! ಕಡಿಮೆ ಬೆಲೆಗೆ ಖರೀದಿಸಿ Oppo ರೆನೋ ಸ್ಮಾರ್ಟ್​ಫೋನ್​!

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಯಾವುದೇ ನೀತಿಗಳನ್ನು ಪ್ರಕಟಿಸುತ್ತದೆಯೇ ಅಥವಾ ಚೀನಾದ ಕಂಪನಿಗಳಿಗೆ ತನ್ನ ಆದ್ಯತೆಯನ್ನು ತಿಳಿಸಲು ಅನೌಪಚಾರಿಕ ಚಾನಲ್‌ಗಳನ್ನು ಬಳಸುತ್ತದೆಯೇ ಎಂಬುದು ಅಸ್ಪಷ್ಟವಾಗಿದೆ ಎಂದು ತಜ್ಞರು ಹೇಳಿದ್ದಾರೆ. ಭಾರತವು ಹೊಸದಿಲ್ಲಿಯಲ್ಲಿ ಈಗಾಗಲೇ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಚೀನಾದ ಸಂಸ್ಥೆಗಳಾದ ಶಿಯೋಮಿ ಮತ್ತು ಪ್ರತಿಸ್ಪರ್ಧಿ ಒಪ್ಪೊ ಮತ್ತು ವಿವೊ ಕಂಪನಿಗಳನ್ನು ತಮ್ಮ ಹಣಕಾಸಿನ ಪರಿಶೀಲನೆಗೆ ಒಳಪಡಿಸಿದೆ. ಇವು ತೆರಿಗೆ ಸಂಬಂಧಿ ಮತ್ತು ಮನಿ ಲಾಂಡರಿಂಗ್ ಆರೋಪಗಳನ್ನು ಎದುರಿಸುತ್ತಿವೆ.

ಹುವಾಯಿ ಟೆಕ್ನಾಲಾಜೀಸ್ ಮತ್ತು ZTE ಕಾರ್ಪ್ ಟೆಲಿಕಾಂ ಉಪಕರಣಗಳನ್ನು ನಿಷೇಧಿಸಲು ಸರ್ಕಾರವು ಈ ಹಿಂದೆ ಅನಧಿಕೃತ ವಿಧಾನಗಳನ್ನು ಬಳಸಿದೆ. ಚೀನೀ ನೆಟ್ವರ್ಕಿಂಗ್ ಗೇರ್ ಅನ್ನು ನಿಷೇಧಿಸುವ ಯಾವುದೇ ಅಧಿಕೃತ ನೀತಿ ಇಲ್ಲದಿದ್ದರೂ, ಪರ್ಯಾಯ ಮೊಬೈಲ್ ಫೋನುಗಳನ್ನು ಖರೀದಿಸಲು ಪ್ರೋತ್ಸಾಹಿಸಲಾಗುತ್ತಿದೆ.

ಆ್ಯಪಲ್, ಸ್ಯಾಮ್ ಸಂಗ್ ಕಂಪನಿಗೆ ಯಾವುದೇ ಎಫೆಕ್ಟ್ ಇಲ್ಲ
ಈ ಕ್ರಮವು ಆ್ಯಪಲ್ ಇಂಕ್, ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಕೋ. ಮೇಲೆ ಪರಿಣಾಮ ಬೀರುವುದಿಲ್ಲ, ಏಕೆಂದರೆ ಈ ಕಂಪನಿಯ ಫೋನುಗಳು ಇಷ್ಟು ಕಡಿಮೆ ಬೆಲೆಗೆ ಲಭ್ಯವಾಗುವುದಿಲ್ಲ. ಈ ಬೆಳವಣಿಗೆ ಬಗ್ಗೆ ಈವರೆಗೂ ಶಿಯೋಮಿ, ರಿಯಲ್ ಮಿ, ಟ್ರಾನ್ಸಿಷನ್ ಮೊಬೈಲ್ ಕಂಪನಿಯ ಪ್ರತಿನಿಧಿಗಳು ಪ್ರತಿಕ್ರಿಯೆ ನೀಡಿಲ್ಲ, ಜೊತೆಗೆ ಭಾರತದ ತಂತ್ರಜ್ಞಾನ ಸಚಿವಾಲಯ ಕೂಡ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ.

ಟಿಕ್‌ ಟಾಕ್ ಸೇರಿದಂತೆ 300ಕ್ಕೂ ಹೆಚ್ಚು ಚೀನಾ ಅಪ್ಲಿಕೇಶನ್ ಗಳು ಭಾರತದಲ್ಲಿ ನಿಷೇಧ
ಗಡಿಯಲ್ಲಿ ಭಾರತ ಮತ್ತು ಚೀನಾ ನಡುವಿನ ಘರ್ಷಣೆಯಲ್ಲಿ ಹನ್ನೆರಡು ಭಾರತೀಯ ಸೈನಿಕರು ಸಾವನ್ನಪ್ಪಿದ ನಂತರ 2020ರ ಮಾರ್ಚ್-ಏಪ್ರಿಲ್ ವೇಳೆಯಲ್ಲಿ ಭಾರತವು ಚೀನಾದ ಸಂಸ್ಥೆಗಳ ಮೇಲೆ ಒತ್ತಡವನ್ನು ಹೆಚ್ಚಿಸಿತು. ಉಭಯ ದೇಶಗಳ ನಡುವಿನ ಸಂಬಂಧಗಳು ಕ್ಷೀಣಿಸುತ್ತಿರುವ ಕಾರಣ, ಟೆನ್ಸೆಂಟ್ ಹೋಲ್ಡಿಂಗ್ಸ್ ಲಿಮಿಟೆಡ್‌ನ ವೀಚಾಟ್ ಮತ್ತು ಬೈಟ್‌ಡ್ಯಾನ್ಸ್ ಲಿಮಿಟೆಡ್‌ನ ಟಿಕ್‌ ಟಾಕ್ ಸೇರಿದಂತೆ 300ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ.

ಚೀನೀ ಸ್ಮಾರ್ಟ್‌ಫೋನ್ ಸಂಸ್ಥೆಗಳು ಈಗ ಭಾರತದಲ್ಲಿ ಬಹುಪಾಲು ಸಾಧನಗಳನ್ನು ಮಾರಾಟ ಮಾಡುತ್ತಾರೆ, ಆದರೆ ಅವರ ಮಾರುಕಟ್ಟೆ ಪ್ರಾಬಲ್ಯವು "ಮುಕ್ತ ಮತ್ತು ನ್ಯಾಯಯುತ ಸ್ಪರ್ಧೆಯ ಆಧಾರದ ಮೇಲೆ" ಇರಲಿಲ್ಲ ಎಂದು ಭಾರತದ ತಂತ್ರಜ್ಞಾನ ಸಚಿವರು ಕಳೆದ ವಾರ ಬಿಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆಗೆ ತಿಳಿಸಿದ್ದರು.

ಇದನ್ನೂ ಓದಿ: Type-C charging port: ಒಂದೇ ಚಾರ್ಜರ್ ನೀತಿಯನ್ನು ತರಲಿದೆಯಾ ಭಾರತ? ಇದರಿಂದ ಇ-ತ್ಯಾಜ್ಯ ಕಡಿಮೆಯಾಗುತ್ತಾ?

ಖಾಸಗಿಯಾಗಿ, ಸ್ಥಳೀಯ ಪೂರೈಕೆ ಸರಪಳಿಗಳು, ವಿತರಣಾ ಜಾಲಗಳನ್ನು ನಿರ್ಮಿಸಲು ಮತ್ತು ಭಾರತದಿಂದ ರಫ್ತು ಮಾಡಲು ಚೀನಾದ ಕಾರ್ಯನಿರ್ವಾಹಕರನ್ನು ಸರ್ಕಾರ ಕೇಳುವುದನ್ನು ಮುಂದುವರೆಸಿದೆ ಹಾಗೂ ದೆಹಲಿಗೆ ಇನ್ನೂ ಹೂಡಿಕೆಯ ಅವಶ್ಯಕತೆಯಿದೆ ಎಂದು ತಜ್ಞರು ತಿಳಿಸಿದ್ದಾರೆ.
Published by:Ashwini Prabhu
First published: