HOME » NEWS » Tech » CHINA BYTEDANCE TIKTOK WAS THE MOST DOWNLOADED APP OF 2020 GLOBALLY HG

ಈ ವರ್ಷ ಅತಿ ಹೆಚ್ಚು ಡೌನ್​ಲೋಡ್ ಆದ​​ ಆ್ಯಪ್​​ಗಳಲ್ಲಿ ಟಿಕ್​ಟಾಕ್​ ಮೊದಲ ಸ್ಥಾನ!; ಹಾಗಿದ್ದರೆ ಇನ್​​ಸ್ಟಾಗ್ರಾಂ?

ಫೇಸ್​​​ಬುಕ್​ಗಿಂತ ಟಿಕ್​ಟಾಕ್​ ಹೆಚ್ಚು ಬಳಕೆದಾರರನ್ನುಗಳಿಸಿಕೊಂಡಿದೆ. ಇನ್ನು 2021ರಲ್ಲಿ ಸರಾಸರಿ 1.2 ಬಿಲಿಯನ್​​ ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಲಿದೆ ಎಂದು ಅಂದಾಜಿಸಲಾಗಿದೆ.

news18-kannada
Updated:December 11, 2020, 3:56 PM IST
ಈ ವರ್ಷ ಅತಿ ಹೆಚ್ಚು ಡೌನ್​ಲೋಡ್ ಆದ​​ ಆ್ಯಪ್​​ಗಳಲ್ಲಿ ಟಿಕ್​ಟಾಕ್​ ಮೊದಲ ಸ್ಥಾನ!; ಹಾಗಿದ್ದರೆ ಇನ್​​ಸ್ಟಾಗ್ರಾಂ?
ಆ್ಯಪ್​
  • Share this:
ಚೀನಾ ಮೂಲದ ಟಿಕ್​ಟಾಪ್​ ಆ್ಯಪ್​ ಈ ವರ್ಷ ಹೆಚ್ಚು ಡೌನ್​ಲೋಡ್​ ಆದ ಆ್ಯಪ್​ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದೆ ಎಂದು ವಿಶ್ಲೇಷಣಾತ್ಮಕ ಸಂಸ್ಥೆ ಅನ್ನಿ ವರದಿ ಮಾಡಿದೆ.

ಅಚ್ಚರಿಯ ವಿಚಾರವೆಂದರೆ, ಈ ವರ್ಷ ಫೇಸ್​​​ಬುಕ್​ಗಿಂತ ಟಿಕ್​ಟಾಕ್​ ಹೆಚ್ಚು ಬಳಕೆದಾರರನ್ನುಗಳಿಸಿಕೊಂಡಿದೆ. ಇನ್ನು 2021ರಲ್ಲಿ ಸರಾಸರಿ 1.2 ಬಿಲಿಯನ್​​ ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಲಿದೆ ಎಂದು ಅಂದಾಜಿಸಲಾಗಿದೆ.

ಫೇಸ್​ಬುಕ್​ ಒಡೆತನದ ಇನ್​​ಸ್ಟಾಗ್ರಾಂ ಹಾಗೂ ವಾಟ್ಸ್​ಆ್ಯಪ್​ 3ನೇ ಮತ್ತು 5ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಫೇಸ್​ಬುಕ್​ ಮೆಸೆಂಜರ್​ 2019ರಲ್ಲಿ ಅತಿ ಹೆಚ್ಚು ಡೌನ್​ಲೋಡ್​ ಆದ ಆ್ಯಪ್​ ಆಗಿ ಗುರುತಿಸಿಕೊಂಡಿತ್ತು. ಆದರೆ ಈ ವರ್ಷ ಆರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ಇನ್ನು ಜೂಮ್​ ವಿಡಿಯೋ ಕಾನ್ಫರೆನ್ಸಿಂಗ್​ ಆ್ಯಪ್​ 4ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 219 ಸ್ಥಾನಗಳಿಗೆ ಜಿಗಿದಿದೆ.
Youtube Video

ಕೊರೋನಾ ಸಮಯ ಹಾಗೂ ಲಾಕ್​​ಡೌನ್​ ಸಮಯದಲ್ಲಿ ಅನೇಕರು ಸ್ಮಾರ್ಟ್​ಫೋನ್​ ಮತ್ತು ಇಂಟರ್​ನೆಟ್​ ಮೊರೆ ಹೋಗಿದ್ದರು. ಈ ವೇಳೆ ಸಾಮಾಜಿಕ ಜಾಲತಾಣಗಳ ಬಳಕೆ ಕೂಡ ಹೆಚ್ಚಾಗಿದೆ. ಹಾಗಾಗಿ ಆ್ಯಪ್​ಗಳ ಡೌನ್​ಲೋಡ್​ ಮತ್ತು ಬಳಕೆ ಮಾಡಿದ್ದಾರೆ. ಆದರೆ ಟಿಕ್​ಟಾಕ್​​ ಮಾತ್ರ ಭಾರತದಲ್ಲಿ ಬ್ಯಾನ್​ ಆಗಿದ್ದರು, ವಿದೇಶದಲ್ಲಿ ಅತಿ ಹೆಚ್ಚು ಡೌನ್​ಲೋಡ್​ ಕಾಣುವ ಮೂಲಕ ಮೊದಲ ಸ್ಥಾನದಲ್ಲಿ ಕಾಣಿಸಿದೆ.
Published by: Harshith AS
First published: December 11, 2020, 3:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories