• Home
  • »
  • News
  • »
  • tech
  • »
  • Tech News: ಈ ಮಾನಿಟರ್​ ಮೂಲಕ ಮಕ್ಕಳನ್ನು ಆಫೀಸ್​ನಲ್ಲೇ ಕುಳಿತು ನೋಡಿಕೊಳ್ಬಹುದು, ನಿಯಂತ್ರಿಸಬಹುದು! ಫೀಚರ್ಸ್​ ಬಗ್ಗೆ ನೀವೇ ನೋಡಿ.

Tech News: ಈ ಮಾನಿಟರ್​ ಮೂಲಕ ಮಕ್ಕಳನ್ನು ಆಫೀಸ್​ನಲ್ಲೇ ಕುಳಿತು ನೋಡಿಕೊಳ್ಬಹುದು, ನಿಯಂತ್ರಿಸಬಹುದು! ಫೀಚರ್ಸ್​ ಬಗ್ಗೆ ನೀವೇ ನೋಡಿ.

ಬೇಬಿ ಮಾನಿಟರ್

ಬೇಬಿ ಮಾನಿಟರ್

ಮಾರುಕಟ್ಟೆಯಲ್ಲಿ ಇಂತಹ ಅನೇಕ ಬೇಬಿ ಮಾನಿಟರ್‌ಗಳು ಲಭ್ಯವಿದೆ. ಇದರೊಂದಿಗೆ ನೀವು ಮಕ್ಕಳನ್ನು ನೋಡಿಕೊಳ್ಳುವುದು ಮಾತ್ರವಲ್ಲದೆ, ನಿರಂತರವಾಗಿ ಅವರ ಮೇಲೆ ಕಣ್ಣಿಡಲು ತುಂಬಾ ಸುಲಭವಾಗುತ್ತದೆ. ಹಾಗಿದ್ರೆ ಆ ಬೇಬಿ ಮಾನಿಟರ್​​ನ ವಿಶೇಷತೆ ಬಗ್ಗೆ ಮಾಹಿತಿ ಇಲ್ಲಿದೆ.

  • Share this:

    ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳು (Childrens) ಖುಷಿಯಿಂದ ಇರಬೇಕೆಂದು ಬಯಸುತ್ತಾರೆ. ಆದರೆ ಇತ್ತೀಚೆಗೆ ಮನೆಯಲ್ಲಿ ಕೇವಲ ತಂದೆ, ತಾಯಿ, ಮಗು ಮೂರೇ ಮಂದಿ ಇರುತ್ತಾರೆ. ಅದ್ರಲ್ಲಿ ಪೇರೆಂಟ್ಸ್​ ಇಬ್ಬರಿಗೂ ಆಫೀಸ್​ (Office) ಕೆಲಸಗಳಿಂದ ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಪೋಷಕರಿಗೆ ತಮ್ಮ ಮಕ್ಕಳು ಏನು ಮಾಡಿಕೊಂಡಿದ್ದಾರೆ ಎಂಬ ಚಿಂತೆ ಇರುತ್ತದೆ. ಇನ್ಮುಂದೆ ಈ ರೀತಿಯ ಟೆನ್ಷನ್​ ಮಾಡಬೇಕಿಲ್ಲ. ಈಗಿನ ತಂತ್ರಜ್ಞಾನ ಕಂಪನಿಗಳು (Technology Company) ಇದಕ್ಕಾಗಿಯೆ ಒಂದು ಹೊಸ ಪ್ರಯೋಗವನ್ನು ಮಾಡಿದೆ. ಈ ಮೂಲಕ ಆಫೀಸಿನಲ್ಲೇ ಕುಳಿತುಕೊಂಡು ಮನೆಯಲ್ಲಿರುವ ಮಕ್ಕಳು ಏನು ಮಾಡುತ್ತಿದ್ದಾರೆ, ಏನು ಬೇಕೆಂಬುದನ್ನು ನೋಡಬಹುದಾಗಿದೆ. ಬೇಬಿ ಮಾನಿಟರ್​​ನ (Baby Monitor) ಸಹಾಯದಿಂದ ಮಕ್ಕಳನ್ನು ಬೇಕಾದಂತೆ ನೋಡಿಕೊಳ್ಳಬಹುದು.


    ಮಾರುಕಟ್ಟೆಯಲ್ಲಿ ಇಂತಹ ಅನೇಕ ಬೇಬಿ ಮಾನಿಟರ್‌ಗಳು ಲಭ್ಯವಿದೆ. ಇದರೊಂದಿಗೆ ನೀವು ಮಕ್ಕಳನ್ನು ನೋಡಿಕೊಳ್ಳುವುದು ಮಾತ್ರವಲ್ಲದೆ, ನಿರಂತರವಾಗಿ ಅವರ ಮೇಲೆ ಕಣ್ಣಿಡಲು ತುಂಬಾ ಸುಲಭವಾಗುತ್ತದೆ. ಹಾಗಿದ್ರೆ ಆ ಬೇಬಿ ಮಾನಿಟರ್​​ನ ವಿಶೇಷತೆ ಬಗ್ಗೆ ಮಾಹಿತಿ ಇಲ್ಲಿದೆ.


    ಬೇಬಿ ಮಾನಿಟರ್​ ಮನರಂಜನೆಯೂ ನೀಡುತ್ತದೆ


    ಎಲ್ಲಾ ಸಮಯದಲ್ಲೂ ನಿಮ್ಮ ಮಕ್ಕಳನ್ನು ನೋಡಿಕೊಳ್ಳಲು ಮತ್ತು ಅವರ ಮೇಲೆ ಕಣ್ಣಿಡಲು ನೀವು ಬೇಬಿ ಮಾನಿಟರ್ ಅನ್ನು ಬಳಸಬಹುದು. ಇದು ಒಂದು ಎಲೆಕ್ಟ್ರಾನಿಕ್ ಸಾಧನವಾಗಿದೆ. ಇದರಲ್ಲಿ ನೀವು  ಅನೇಕ ಫೀಚರ್ಸ್​ ಅನ್ನು ನೋಡಬಹುದು, ಅದರ ಸಹಾಯದಿಂದ ನೀವು ನಿಮ್ಮ ಮಕ್ಕಳನ್ನು ಮೇಲ್ವಿಚಾರಣೆ ಮಾಡಬಹುದು.


    ಇದನ್ನೂ ಓದಿ: ಇ ಕಾಮರ್ಸ್​ ವೆಬ್​ಸೈಟ್​ನಲ್ಲಿ ಪೋಕೋ ಎಮ್4 5ಜಿ ಸ್ಮಾರ್ಟ್​​ಫೋನ್​ ಮೇಲೆ ಭರ್ಜರಿ ಆಫರ್ಸ್


    ಇದಲ್ಲದೇ ಮಕ್ಕಳಿಗೆ ಮನರಂಜನೆ ನೀಡಲು ಹಲವು ಸೌಲಭ್ಯಗಳನ್ನು ಇದರಲ್ಲಿ ನೀಡಲಾಗಿದೆ. ಬೇಬಿ ಮಾನಿಟರ್ ಬಗ್ಗೆ ತಿಳಿದಿರುವವರು ಈಗಿನ ಕಾಲದಲ್ಲಿ ಬಹಳ ಕಡಿಮೆ. ಇದು ಆನ್‌ಲೈನ್ ಮತ್ತು ಆಫ್‌ಲೈನ್ ಮೋಡ್ ಎರಡರಲ್ಲೂಬಳಕೆ ಮಾಡುವಂತಹ ಸಾಧನವಾಗಿದೆ.


    ಬೇಬಿ ಮಾನಿಟರ್


    ಬೇಬಿ ಮಾನಿಟರ್ ಹೇಗೆ ಕಾರ್ಯನಿರ್ವಹಿಸುತ್ತದೆ


    ವಾಸ್ತವವಾಗಿ, ಬೇಬಿ ಮಾನಿಟರ್‌ನಲ್ಲಿ ನೀವು ನಿಮ್ಮ ಮಕ್ಕಳೊಂದಿಗೆ ಮಾತನಾಡುವುದರ ಜೊತೆಗೆ ಅವರ ಎಲ್ಲಾ ಚಟುವಟಿಕೆಗಳನ್ನು ನೋಡುವಂತಹ ಎಲ್ಲಾ ಫೀಚರ್ಸ್​ ಅನ್ನು ಇದು ಹೊಂದಿದೆ. ಇದರಲ್ಲಿ ಹೆಚ್ಚಿನ ರೆಸಲ್ಯೂಶನ್ ಕ್ಯಾಮೆರಾಗಳು ಮತ್ತು ಸ್ಪೀಕರ್‌ಗಳ ಜೊತೆಗೆ ಮೈಕ್‌ನ ಸೌಲಭ್ಯವೂ ನೀಡಲಾಗಿದೆ.


    ಬೇಬಿ ಮಾನಿಟರ್ ಮೂಲಕ, ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಕುಳಿತು ವಿಡಿಯೋ ಕಾಲ್ ಮೂಲಕ ನಿಮ್ಮ ಮಕ್ಕಳ ಎಲ್ಲಾ ಚಲನವಲನಗಳನ್ನು ನೀವು ನೋಡಬಹುದು. ಅವರಿಗೆ ಏನಾದರೂ ಅಗತ್ಯವಿದ್ದರೆ ಅಥವಾ ಮಗು ಅಳಲು ಪ್ರಾರಂಭಿಸಿದರೆ, ನಂತರ ಅವರನ್ನೂ ಮನರಂಜನೆ ಸಹ ನೀಡಬಹುದು.


    ಬೇಬಿ ಮಾನಿಟರ್ ಮೂಲಕ ಹೇಗೆ ನಿಯಂತ್ರಿಸುವುದು?


    ವೈರ್‌ಲೆಸ್ ಬೇಬಿ ಮಾನಿಟರ್ ಮೂಲಕ ನಿಯಂತ್ರಿಸುವುದು ತುಂಬಾ ಸುಲಭ. ಮಕ್ಕಳು ನಿದ್ರಿಸಿದರೆ ಅಥವಾ ಅವರು ನಿದ್ದೆ ಮಾಡಿದರೆ, ಅಂತಹ ಪರಿಸ್ಥಿತಿಯಲ್ಲಿ ನೀವು ಕೋಣೆಯ ಲೈಟ್​ ಅನ್ನು ಆಫ್ ಮಾಡಬಹುದು. ಇದಲ್ಲದೇ ಅಟೋ ಆಫ್ ಸೌಲಭ್ಯವೂ ಇದರಲ್ಲಿ ನೀಡಲಾಗಿದೆ. ಮಕ್ಕಳು ಎದ್ದಾಗ, ಆ ಸಮಯದಲ್ಲಿ ಲೈಟ್ ಸಹ ಸ್ವಯಂಚಾಲಿತವಾಗಿ ಆನ್ ಆಗುವಂತೆ ಇದರಲ್ಲಿ ಮಾಡಬಹುದಾಗಿದೆ.


    ಬೇಬಿ ಮಾನಿಟರ್


    ಇದಲ್ಲದೆ, ಕೋಣೆಯಲ್ಲಿ ಯಾವುದೇ ರೀತಿಯ ಚಟುವಟಿಕೆ ನಡೆಯುತ್ತಿದ್ದರೆ, ಅಂತಹ ಪರಿಸ್ಥಿತಿಯಲ್ಲಿಯೂ ನೀವು ಎಲ್ಲಾ ಶಬ್ದಗಳನ್ನು ಕೇಳುವುದರೊಂದಿಗೆ ವಿಡಿಯೋ ಕಾಲ್ ಮೂಲಕ ಮಗುವಿನ ಮೇಲೆ ಕಣ್ಣಿಡಬಹುದು.


    ಈ ಬೇಬಿ ಮಾನಿಟರ್ ಉಪಯೋಗಿಸುವುದರಿಂದ ಆಫೀಸ್​ನಲ್ಲೇ ಕುಳಿತು ಮಕ್ಕಳ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಬಹುದಾಗಿದೆ. ಇದು ಕೂಡ ಒಂದು ಈಗಿನ ತಂತ್ರಜ್ಞಾನದ ಅಭಿವೃದ್ಧಿಗೆ ಕಾರಣ ಅಂತ ಹೇಳಬಹುದು.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು