• Home
  • »
  • News
  • »
  • tech
  • »
  • Online fraud: 10 ಸಾವಿರ ಪಡೆದು 7 ಲಕ್ಷ ರೂ ಪಾವತಿಸಿದ! ಆನ್​ಲೈನ್ ಸಾಲ ತೆಗೆದುಕೊಂಡು ಮೋಸ ಹೋದ ಚಿಕ್ಕಬಳ್ಳಾಪುರ ವ್ಯಕ್ತಿ

Online fraud: 10 ಸಾವಿರ ಪಡೆದು 7 ಲಕ್ಷ ರೂ ಪಾವತಿಸಿದ! ಆನ್​ಲೈನ್ ಸಾಲ ತೆಗೆದುಕೊಂಡು ಮೋಸ ಹೋದ ಚಿಕ್ಕಬಳ್ಳಾಪುರ ವ್ಯಕ್ತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Chikkaballapur: ಇಲ್ಲೊಬ್ಬ ವ್ಯಕ್ತಿಯ ಪರಿಸ್ಥಿತಿಯೂ ಹೀಗೆ ಆಗಿದೆ. 10 ಸಾವಿರ ರೂಪಾಯಿ ಸಾಲ ಪಡೆದಾತ ಅದನ್ನು ತೀರಿಸಲು 7 ಲಕ್ಷ ರೂಪಾಯಿ ಪಾವತಿಸಿದ್ದಾನೆ.

  • Share this:

    ಚಿಕ್ಕಬಳ್ಳಾಪುರ: ಹಣ ಅವಶ್ಯಕತೆ ಬಂದಾಗ ಬ್ಯಾಂಕ್ (Bank)  ಸಹಾಯದಿಂದ ಸಾಲ (Loan) ಮಾಡಲು ಮುಂದಾಗುತ್ತೇವೆ. ಅದಕ್ಕಾಗಿ ಸಮಯವಿಟ್ಟುಕೊಂಡು ಸಾಲಕ್ಕೆ ಅರ್ಜಿ ಸಲ್ಲಿಸಿ ಕೊನೆಗೆ ಸಾಲ ಪಡೆಯುತ್ತೇವೆ. ಆದರೀಗ ಆನ್​ಲೈನ್​ ಆ್ಯಪ್​ಗಳ (Online App) ಮೂಲಕವೇ ಸಾಲ ಪಡೆಯಬಹುದಾಗಿದೆ. ಆದರೆ ಸಾಲ ಪಡೆಯುವುದೇನೋ ನಿಜ..ಕೆಲವೊಮ್ಮೆ ಇಂಥಹ ಆ್ಯಪ್​ಗಳ ಮೂಲಕ ಮೋಸ (fraud) ಹೋದ ಪ್ರಸಂಗಗಳು ಎದುರಾಗಬಹುದು ಅಥವಾ ಸಂಕಷ್ಟಕ್ಕೆ ಸಿಲುಕುವ ಸನ್ನಿವೇಷ ಎದುರಾಗಬಹುದು. ಏಕೆಂದರೆ ಇಲ್ಲೊಬ್ಬ ವ್ಯಕ್ತಿಯ ಪರಿಸ್ಥಿತಿಯೂ ಹೀಗೆ ಆಗಿದೆ. 10 ಸಾವಿರ ರೂಪಾಯಿ ಸಾಲ ಪಡೆದಾತ ಅದನ್ನು ತೀರಿಸಲು 7 ಲಕ್ಷ ರೂಪಾಯಿ ಪಾವತಿಸಿದ್ದಾನೆ.


    ಅಚ್ಚರಿಯಾದ್ರು ಸತ್ಯ. ಚಿಂತಾಮಣಿ ತಾಳೂಕಿನ ಜಿಯೋ ಭೋರ್​ ಕಂಪನಿ ವ್ಯವಸ್ಥಾಪಕ ಬುರಡಗುಂಡೆಯ ವಿನೋದ್​ (33) ಆನ್​ಲೈನ್​ ಆ್ಯಪ್​ ಮೂಲಕ ಸಾಲ ಪಡೆದು ಬರೋಬ್ಬರಿ 7 ಲಕ್ಷ ಪಾವತಿಸಿದ್ದಾರೆ. ತಾನು ಮೋಸ ಹೋಗಿರುವುದು ಗೊತ್ತಾಗುತ್ತಿದ್ದಂತೆ ವಿನೋದ್​ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ತನಗಾದ ಮೋಸದ ಸತ್ಯವನ್ನು ಬಯಲಿಗೆಳೆಯಲು ಪೊಲೀಸರೊಟ್ಟಿಗೆ ಸಹಾಯಯಾಚಿಸಿದ್ದಾರೆ.


    10 ಸಾವಿರ ಸಾಲಕ್ಕೆ 7 ಲಕ್ಷ ಪಾವತಿಸಿದರು


    ವಿನೋದ್​ ಸ್ನೇಹಿತ ಚಲಪತಿ ಎಂಬವರಿಗೆ ಹಿಂದೊಮ್ಮೆ ಅಪಘಾತವಾಗಿತ್ತು. ಈ ಸಮಯದಲ್ಲಿ ಹಣಕ್ಕಾಗಿ ವಿನೋದ್​ ಗೂಗಲ್​ನಲ್ಲಿ ಸಾಲ ನೀಡುವ ಆ್ಯಪ್​ ಬಗ್ಗೆ ಹುಡುಕಾಡಿದರು. ಕೊನೆಗೆ ಆನ್​ಲೈನ್​ ಮೂಲಕ ಸಾಲ ನೀಡುವ ಆ್ಯಪ್​ ಅನ್ನು ಡೌನ್​ಲೋಡ್​ ಮಾಡಿ ಬ್ಯಾಂಕ್​ ಖಾತೆ ಲಿಂಕ್​ ಮಾಡಿ ಎರಡು ಹಂತದಲ್ಲಿ 5 ಸಾವಿರ ರೂ ಸಾಲ ಪಡೆದರು. ಆದರೆ ಖಾತೆಗೆ ಬಡ್ಡಿಯ ಮೊತ್ತವು ಸೇರಿ 5,962 ರೂಪಾಯಿ ಜಮಾ ಆಗಿದೆ. ಇಷ್ಟೆಲ್ಲಾ ಆದ ನಂತರ ಸಾಲ ತೀರಿಸಲು ಬೇರೆ ಆ್ಯಪ್​ನಲ್ಲಿ 4,180 ರೂ ಮತ್ತು 3,400 ರೂ ನೀಡಿ ಸಾಲ ಪಡೆದುಕೊಂಡಿದ್ದರು. ಸಾಲ ಜೊತೆಗೆ ಬಡ್ಡಿಯನ್ನು ಸೇರಿಸಿ 20 ಸಾವಿರ ಪಾವತಿಸಿ ಕೊನೆಗೆ ಸಾಲವನ್ನು ತೀರಿಸಿದರು.


    ತಡಮಾಡಿ ಸಾಲ ಕಟ್ಟಿದ್ದಕ್ಕೆ ಹೀಗಾ ಮಾಡೋದು


    ವಿನೋದ್​ ಮಾಡಿದ ಸಾಲವನ್ನು ಬಡ್ಡಿ ಸಮೇತ ತೀರಿಸಿದ್ದಾರೆ. ಆದರೆ ಅವರು ತಡ ಮಾಡಿ ಸಾಲ ಮಾಡಿದ್ದಾರೆ ಎಂಬ ಕಾರಣಕ್ಕೆ 10 ಸಾವಿರ ರೂಪಾಯಿ ಹಣ ಕಟ್ಟುವಂತೆ ಹೇಳಿದ್ದಾರೆ. ಆದರೆ ವಿನೋದ್​ ಕರ್ನಾಟಕ ಬ್ಯಾಂಕ್​ನಿಂದ 2,42,029 ರೂ ಮತ್ತು ಯೂನಿಯನ್​ ಬ್ಯಾಂಕ್​ನಿಂದ 4,58,160 ರೂ ಸೇರಿ 7,00 189 ರೂ ಕಟ್ಟಿದ್ದಾರೆ.


    ಇಷ್ಟಾದರೂ ವಿನೋದ್​ ಅವರನ್ನು ಸುಮ್ಮನೆ ಬಿಡಲಿಲ್ಲ. ಹೇಳಿದಂತೆ ಹಣ ಕಟ್ಟುತ್ತಿದ್ದಾರೆ ಮೋಸ ಮಾಡಲು ಸುಲಭವಾಗುತ್ತಿದೆ ಎಂಬುದನ್ನು ಅರಿತು ಮತ್ತೆ ವಿನೋದ್​ಗೆ ತೊಂದರೆ ಕೊಡಲು ಶುರು ಮಾಡುತ್ತಾರೆ. ಬೆನ್ನು ಬಿಡದೆ ಮತ್ತೆ 1,50,000 ರೂ ಪಾವತಿಸಬೇಕು ಎಂದು ಒತ್ತಡ ಹಾಕುತ್ತಾರೆ. ಹಣ ಕಟ್ಟದೆ ಇದ್ದರೆ ಮಗಳ ಫೋಟೋವನ್ನು ಬೇರೆಯವರಿಗೆ ಕಳುಹಿಸುವುದಾಗಿ ಬೆದರಿಗೆ ಹಾಕುತ್ತಾರೆ. ಇದರಿಂದ ಬೇಸತ್ತ ವಿನೋದ್​ಗೆ ಏನು ಮಾಡಲು ತಿಳಿಯದೆ ಕೊನೆಗೆ ಪೊಲೀಸರ ಮೊರೆ ಹೋಗುತ್ತಾರೆ.


    ಇದನ್ನೂ ಓದಿ: Reliance Jio ಪರಿಚಯಿಸಿದೆ ಹೊಸ ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಪ್ರಿಪೇಯ್ಡ್ ಪ್ಲಾನ್​


    ವಿನೋದ್ ಮೋಸ ಹೋಗಿದ್ದು ತಿಳಿದು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಮಗಳ ಫೋಟೋವನ್ನು ವೈರಲ್​ ಮಾಡುತ್ತೇವೆ ಸ್ನೇಹಿತರಿಗೆ ಫೋಟೋ ಕಳುಹಿಸುತ್ತೇವೆ ಎಂಬ ಬೆದರಿಕೆ ಮಾತನ್ನಾಡುತ್ತಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.


    ಇದನ್ನೂ ಓದಿ: Samsung Galaxy F22 ಖರೀದಿಗೆ ಕ್ಯೂ ನಿಂತ ಜನರು: ಕೇವಲ 50 ರೂ.ಗೆ ಸಿಗುತ್ತಿದೆ ಈ ಸ್ಮಾರ್ಟ್​ಫೋನ್!


    ಬ್ಯಾಂಕ್​ನ ಲಿಂಕ್​ ಕಳುಹಿಸಿ ಹಣ ಲಪಟಾಯಿಸುವುದಲ್ಲದೆ, ಮೊಬೈಲ್​ ಕರೆ ಮಾಡಿ ನಿರಂತರ ತೊಂದರೆ ನೀಡುತ್ತಿದ್ದಾರೆ ಎಂದು ದೂರುದಾರ ವಿನೋದ್​ ಹೇಳಿಕೊಂಡಿದ್ದಾರೆ. ಆದರೆ ಈ ಪ್ರಕರಣದಲ್ಲಿ ಆನ್​ಲೈನ್​ ಬ್ಯಾಕ್​ 7 ಸಾವಿರ ಸಾಲಕ್ಕೆ ಬರೋಬ್ಬರಿ 7 ಲಕ್ಷ ರೂಪಾಯಿಯನ್ನು ತೆಗೆದುಕೊಂಡಿದೆ. ವಿನೋದ್​ ಬರೋಬ್ಬರಿ ದೊಡ್ಡ ಮೊತ್ತ ನೀಡಿ ಮೋಸ ಹೋಗಿದ್ದಾರೆ. ಪ್ರಕರಣವನ್ನು ಕೈಗೆತ್ತಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


    ಆನ್​ಲೈನ್​ನಲ್ಲಿ ಹಲವಾರು ಆನ್​ಲೈನ್​ ಸಾಲ ನೀಡುವ ಆ್ಯಪ್​ಗಳಿದ್ದು, ಇದರ ಮೂಲಕ ಮೋಸ ಹೋದವರ ಸಂಖ್ಯೆ ಬಹಳಷ್ಟಿದೆ. ಆದರೆ ಕೆಲವರು ಮಾತ್ರ ಇಂತಹ ಪ್ರಕರಣದಿಂದ ಮೋಸ ಹೋಗಿ ಪೊಲೀಸ್​ ಠಾಣೆ ಮೆಟ್ಟಿಲೇರುತ್ತಾರೆ.

    Published by:Harshith AS
    First published: