Instagram Bug: ದೋಷವನ್ನು ಕಂಡು ಹಿಡಿದ ಚೆನ್ನೈ ಟೆಕ್ಕಿಗೆ 7,14,900 ರೂ. ಬಹುಮಾನ

ಕಳೆದ ಬಾರಿಯೂ ಇನ್​ಸ್ಟ್ರಾಗ್ರಾಂನಲ್ಲಿ ಲಾಗಿನ್​ ಆಗುವ ಸಂದರ್ಭದಲ್ಲಿ ದೋಷವೊಂದು ಕಂಡುಬಂದಿತ್ತು. ಇದನ್ನ ಮುತ್ತಯ್ಯ ಪತ್ತೆ ಹಚ್ಚಿದ್ದಾರೆ

news18
Updated:August 26, 2019, 8:57 PM IST
Instagram Bug: ದೋಷವನ್ನು ಕಂಡು ಹಿಡಿದ ಚೆನ್ನೈ ಟೆಕ್ಕಿಗೆ 7,14,900 ರೂ. ಬಹುಮಾನ
ಇನ್​ಸ್ಟ್ರಾಗ್ರಾಂ
  • News18
  • Last Updated: August 26, 2019, 8:57 PM IST
  • Share this:
ಇನ್​​ಸ್ಟಾಗ್ರಾಂನಲ್ಲಿ ಕಂಡು ಬಂದ ದೋಷವನ್ನು ಪತ್ತೆ ಹಚ್ಚಿದ ಚೆನ್ನೈ ಮೂಲದ ಟೆಕ್ಕಿಗೆ 10,000 ಡಾಲರ್​ (7,14,900 ರೂ)ಬಹುಮಾನ ಲಭಿಸಿದೆ.

ತಮಿಳುನಾಡಿನ ಲಕ್ಮ್ಮಣ್​ ಮುತ್ತಯ್ಯ ಎಂಬ ಯುವಕ ಕಳೆದ ತಿಂಗಳು ಫೇಸ್​ಬುಕ್​ನಲ್ಲಿದ್ದ ತೊಂದರೆಯಂದನ್ನು ಪತ್ತೆಹಚ್ಚಿದ್ದರು. ಅದಕ್ಕೆ ಪ್ರತಿಯಾಗಿ ಫೇಸ್​ಬುಕ್​ ಆತನಿಗೆ 30,000 ಡಾಲರ್​(21,57,060 ರೂ.)ಬಹುಮಾನವಾಗಿ ನೀಡಿತ್ತು. ಈ ಬಾರಿ ಇನ್​ಸ್ಟ್ರಾಗ್ರಾಂನಲ್ಲಿ ಕಂಡು ಬಂದಿದ್ದ ದೋಷವನ್ನು ಪತ್ತೆಹಚ್ಚಿದ್ದಾರೆ. ಪ್ರತಿಯಾಗಿ ಇನ್​ಸ್ಟಾಗ್ರಾಂ ಬಗ್​ ಬೌಂಟಿ ಯೋಜನೆಯಡಿ ವಿಶೇಷ ಮೊತ್ತ ನೀಡಲಾಗಿದೆ.

ಕಳೆದ ಬಾರಿಯೂ ಇನ್​ಸ್ಟ್ರಾಗ್ರಾಂನಲ್ಲಿ ಲಾಗಿನ್​ ಆಗುವ ಸಂದರ್ಭದಲ್ಲಿ ದೋಷವೊಂದು ಕಂಡುಬಂದಿತ್ತು. ಇದನ್ನ ಮುತ್ತಯ್ಯ ಪತ್ತೆ ಹಚ್ಚಿದ್ದಾರೆ. ಈ ಬಾರಿಯೂ ಅಂತಹದೇ ಲಾಗಿನ್​ ದೋಷವೊಂದು ಕಂಡುಬಂದಿದೆ. ಇದು ಇನ್ನೊಬ್ಬರ ಖಾತೆಯನ್ನು ಬಳಕೆದಾರರ ಗಮನಕ್ಕೆ ಬಾರದಂತೆ ಹ್ಯಾಕ್​ ಮಾಡಿ ಅದರ ಮೂಲಕ ಖಾತೆ ಮಾಹಿತಿಯನ್ನು ಕದಿಯಬಹುದಾಗಿತ್ತು. ಈ ಬಗ್ಗೆ ಮುತ್ತಯ್ಯ ದೋಷವನ್ನು ಪತ್ತೆ ಹಚ್ಚಿ ಕಂಪೆನಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಸೂರು ಕೊಡಿಸಿ ಎಂದು ಕಣ್ಣೀರಿಡುತ್ತಿರುವ ಸಂತ್ರಸ್ತರು: ಕೊಣ್ಣೂರು ಗ್ರಾಮದ ಜನರ ಸ್ಥಿತಿ ಶೋಚನೀಯ

ಇನ್ನು ದೋಷವನ್ನು ಕಂಡು ಹಿಡಿದ ಮುತ್ತಯ್ಯುನಿಗೆ ಬಗ್​ ಬೌಂಟಿ ಯೋಜನೆಯಡಿ ವಿಶೇಷ ಮೊತ್ತವನ್ನು ನೀಡಿದೆ. ಅಂತೆಯೇ, ಇನ್​​ಸ್ಟಾಗ್ರಾಂ ಸಮಸ್ಯೆಯನ್ನು ಫೇಸ್​ಬುಕ್​ ಸರಿಪಡಿಸಿಕೊಂಡಿದೆ.
First published:August 26, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...