ನಿಮ್ಮ ಮೊಬೈಲ್​ನಲ್ಲಿ ಆಧಾರ್​ ನಂಬರ್​ ಹೇಗೆ ಬಂತು?!!


Updated:August 3, 2018, 3:57 PM IST
ನಿಮ್ಮ ಮೊಬೈಲ್​ನಲ್ಲಿ ಆಧಾರ್​ ನಂಬರ್​ ಹೇಗೆ ಬಂತು?!!

Updated: August 3, 2018, 3:57 PM IST
ನಿಮ್ಮ ಮೊಬೈಲ್​ನಲ್ಲಿ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರದ ಕಸ್ಟಮರ್​ ಕೇರ್​ ನಂಬರ್​ ಸೇವ್​ ಮಾಡಿದ್ದೀರ? ಇಲ್ಲವೆಂದು ನೀವು ಅಂದುಕೊಂಡಿದ್ದರೆ ಅದು ಸುಳ್ಳಾಗಿರಬಹುದು. ಏಕೆಂದರೆ ನಿಮಗರಿಯದೇ ಯುಐಡಿಎಐ ನಂಬರ್​ ಮೊಬೈಲ್​ನಲ್ಲಿ ಸೇವ್​ ಆಗಿದೆ.

ತನ್ನ ಹಳೇಯ ನಂಬರ್​ನ್ನು ಮಾರ್ಪಾಡು ಮಾಡಿ ಹೊಸ ನಂಬರ್​ನ್ನು ನೀಡಿರುವ ಯುಐಡಿಎಐ, ಸಾವಿರಾರು ಗ್ರಾಹಕರ ಅರಿವಿಗೆ ಬಾರದಂತೆಯೇ 1800-300-1947 ನಂಬರ್​ನ್ನು ಸೇವ್​ ಮಾಡಿದೆ.ಇನ್ನು ಹೊಸ ನಂಬರ್​ ಕಂಡು ಆಶ್ಚರ್ಯಗೊಂಡ ಹಲವರು ಸ್ಕ್ರೀನ್​ ಶಾಟ್​ ತೆಗೆದು ಈ ಕುರಿತಾದ ಟ್ವೀಟ್​ ಮಾಡಿದ್ದಾರೆ.

ಈ ಕುರಿತು ಫ್ರೆಂಚ್​ ಭದ್ರತಾ ತಜ್ಞ ಎಲಿಯಟ್​ ಆಲ್ಡರ್​ಸನ್​ ಕೂಡಾ ಕಮೆಂಟ್​ ಮಾಡಿದ್ದು, ಆಧಾರ್​ ಹೊಂದಿರುವ ಮತ್ತು ಖಾತೆಯನ್ನು ತೆರೆಯದೇ ಇರುವ, mAadhaar ಇನ್ಸ್ಟಾಲ್​ ಆ್ಯಪ್​ ಬಳಸದೇ ಇರುವ ವ್ಯಕ್ತಿಗಳೂ ಸೇರಿದಂತೆ ಸಾವಿರಾರು ಜನರ ಮೊಬೈಲ್​ನಲ್ಲಿ UIDAI ಗ್ರಾಹಕರ ಸೇವಾ ಸಂಖ್ಯೆ ದಾಖಲಾಗಿದೆ. ಇದರ ಕುರಿತು ಅವರಿಗೆ ಯಾವುದೇ ಜ್ಞಾನವೂ ಇಲ್ಲ. ಗ್ರಾಹಕರಿಗೆ ಅರಿವಿಲ್ಲದಂತೆಯೇ ನಂಬರ್​ ಸೇವ್​ ಮಾಡಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಕೆಲ ದಿನಗಳ ಹಿಂದೆ ಟ್ರಾಯ್​ನ ಅಧ್ಯಕ್ಷ ಆರ್​ ಎಸ್​ ಶರ್ಮಾ ತನ್ನ ಆಧಾರ್​ ನಂಬರ್​ನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿ ಹ್ಯಾಕ್​ ಮಾಡುವಂತೆ ಬಹಿರಂಗ ಸವಾಲು ಹಾಕಿದ್ದರು. ಹಲವಾರು ಎಥಿಕಲ್​ ಹ್ಯಾಕರ್​ಗಳು ಶರ್ಮಾ ಅವರ 14 ಖಾಸಾಗಿ ಮಾಹಿತಿಯನ್ನು ಬಹಿರಂಗ ಪಡಿಸಿದ್ದರು. ಇದರೊಂದಿಗೆ ಅವರ ಪಾನ್ ಕಾರ್ಡ್​ ಸಂಖ್ಯೆ, ಖಾಸಗಿ ಮೊಬೈಲ್​ ನಂಬರ್​, ವೋಟರ್​ ಐಡಿ ಎಲ್ಲವನ್ನು ಬಹಿರಂಗ ಪಡಿಸಿದ್ದರು.
First published:August 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...