HOME » NEWS » Tech » CHECK POINT RESEARCH SAYS POPULAR ANDROID APPS LIKE GRINDR OKCUPID AND OTHERS VULNERABLE TO MAJOR SECURITY FLAW HG

ಜನಪ್ರಿಯ ಆ್ಯಪ್​ಗಳಲ್ಲಿ ಕಂಡುಬಂದ ಭದ್ರತಾ ದೋಷ; ಯಾವೆಲ್ಲಾ ಅಪ್ಲಿಕೇಶನ್​​​ನಲ್ಲಿದೆ ಈ ಸಮಸ್ಯೆ?

ಕಳೆದ ಏಪ್ರಿಲ್​ ತಿಂಗಳಿನಲ್ಲಿ ಗೂಗಲ್​ ಕೆಲವು ಆ್ಯಪ್​ಗಳಲ್ಲಿ ದೋಷಗಳು ಇರುವುದಾಗಿ ತಿಳಿಸಿತ್ತು. ಆದರೆ ಈ ನ್ಯೂನತೆಯನ್ನು ಡೆವಲಪರ್​ಗಳು ಸರಿಪಡಿಸದೆ ಇದ್ದ ಕಾರಣ ಇದೀಗ ಮಿಲಿಯನ್​ ಬಳಕೆದಾರರು ಅಪಾಯದಲ್ಲಿದ್ದಾರೆ ಎಂದು ಟೆಕ್​​ ಪಾಯಿಂಟ್​​ ಸೆಕ್ಯುರಿಟಿ ರಿಸರ್ಚ್​ ತಿಳಿಸಿದೆ.

news18-kannada
Updated:December 7, 2020, 8:44 PM IST
ಜನಪ್ರಿಯ ಆ್ಯಪ್​ಗಳಲ್ಲಿ ಕಂಡುಬಂದ ಭದ್ರತಾ ದೋಷ; ಯಾವೆಲ್ಲಾ ಅಪ್ಲಿಕೇಶನ್​​​ನಲ್ಲಿದೆ ಈ ಸಮಸ್ಯೆ?
ಆ್ಯಂಡ್ರಾಯ್ಡ್​
  • Share this:
ಈಗಾಗಲೇ ಜನಪ್ರಿಯಗೊಂಡ ಕೆಲವು ಆ್ಯಪ್​ಗಳಲ್ಲಿ ಭದ್ರತಾ ದೋಷಗಳು ಕಂಡುಬಂದಿದೆ. ಚೆಕ್​ಪಾಯಿಂಟ್​​ ಭದ್ರತಾ ಸಾಫ್ಟ್​ವೇರ್​​ ಟೆಕ್ನಾಲಜಿ ಈ ಬಗ್ಗೆ ಸಂಶೋಧನೆ ನಡೆಸಿದ್ದು, ಯಾವೆಲ್ಲಾ ಆ್ಯಪ್​ಗಳಲ್ಲಿ ಸೆಕ್ಯೂರಿಟಿ ಸಮಸ್ಯೆ ಕಾಣಿಸಿಕೊಂಡಿದೆ ಎಂಬುದನ್ನು ಪಟ್ಟಿ ಮಾಡಿದ್ದಾರೆ.

ಗ್ರೈಂಡರ್​​, ಬಂಬಲ್​, ಸಿಸ್ಕೊ, ಓಕೆಕುಪಿಡ್​ ಮುಂತಾದ ಆ್ಯಪ್​ಗಳನ್ನು ಭದ್ರತಾ ಸಮಸ್ಯೆಗಳು ಕಾಣಿಸಿಕೊಂಡಿದೆ ಎಂದು ತಿಳಿಸಿದೆ. ಇವೆಲ್ಲವೂ ಆ್ಯಂಡ್ರಾಯ್ಡ್​ ಆ್ಯಪ್​ಗಳಾಗಿವೆ.

ಕಳೆದ ಏಪ್ರಿಲ್​ ತಿಂಗಳಿನಲ್ಲಿ ಗೂಗಲ್​ ಕೆಲವು ಆ್ಯಪ್​ಗಳಲ್ಲಿ ದೋಷಗಳು ಇರುವುದಾಗಿ ತಿಳಿಸಿತ್ತು. ಆದರೆ ಈ ನ್ಯೂನತೆಯನ್ನು ಡೆವಲಪರ್​ಗಳು ಸರಿಪಡಿಸದೆ ಇದ್ದ ಕಾರಣ ಇದೀಗ ಮಿಲಿಯನ್​ ಬಳಕೆದಾರರು ಅಪಾಯದಲ್ಲಿದ್ದಾರೆ ಎಂದು ಟೆಕ್​​ ಪಾಯಿಂಟ್​​ ಸೆಕ್ಯುರಿಟಿ ರಿಸರ್ಚ್​ ತಿಳಿಸಿದೆ.

CVE-2020-8913 ಎಂಬ ದುರುದ್ದೇಶಪೂರಿತ ಕೋಡ್​ಗಳು ಅಪ್ಲಿಕೇಶನ್​ಗಳನ್ನು ಒಳಸೇರಿಸಲು ಅನುಮತಿಸುತ್ತದೆ. ನಂತರ ಎಲ್ಲಾ ಆ್ಯಪ್​ಗಳಿಗೆ ಪ್ರವೇಶ ಪಡೆಯುವಂತೆ ಕಾರ್ಯಗತಗೊಳಿಸುತ್ತದೆ.

ಚೆಕ್​ ಪಾಯಿಂಟ್​ ಸಂಸ್ಥೆಯ ವರದಿ ಪ್ರಕಾರ, ಈ ನ್ಯೂನತೆಯಿಂದಾಗಿ ಅಪ್ಲಿಕೇಶನ್​ಗಳ ಸೂಕ್ಷ್ಮ ಡೇಟಾವನ್ನು ಕದಿಯಲು ಸಾಧ್ಯವಾಗುತ್ತದೆ. ಖಾಸಗಿ ಮಾಹಿತಿ, ಲಾಗಿನ್​ ವಿವರ, ಪಾಸ್​ವರ್ಡ್​, ಹಣಕಾಸಿನ ವಿವರ ಸೋರಿಕೆಯಾಗಲು ಸಹಾಯವಾಗಲಿದೆ. ಇದರಿಂದಾಗಿ ಬಳಕೆದಾರರಿಗೆ  ಅಪಾಯವನ್ನು ಉಂಟುಮಾಡಲಿದೆ ಎಂದು ತಿಳಿಸಿದೆ.

ಇನ್ನು ಈ ಸಮಸ್ಯೆ ಪ್ಲೇ ಕೋರ್​ ಲೈಬ್ರರಿ ತುಂಬಾ ಬೇರೂರಿದ್ದು, ಅಪ್ಲಿಕೇಶನ್​ ನವೀಕರಣ ಸಮಯದಲ್ಲಿ ಹಾಗೆಯೇ ಮುಂದುವರಿಯುತ್ತದೆ. ಆದರೆ ಸಂಪೂರ್ಣವಾಗಿ ಬಳಕೆದಾರರು ಈ ನ್ಯೂನತೆಯಿಂದ ಪಾರಾಗಬೇಕಾದರೆ ಡೆವಲಪರ್​ಗಳು ಹೊಸ ಪ್ಲೇ ಕೋರ್​ ಲೈಬ್ರರಿ ಸ್ಥಾಪಿಸಬೇಕಾಗಿದೆ.
CVE-2020-8913 ಎಂಬ ದುರುದ್ದೇಶಪೂರಿತ ಕೋಡ್ ವೈಬರ್​, ಗ್ರೈಂಡರ್​, ಓಕೆಕುಪಿಡ್​​, ಸಿಸ್ಕೋ, ಯಂಗೊ ಪ್ರೊ, ಎಡ್ಜ್​​, ಎಕ್ಸ್​ರೆಕಾರ್ಡರ್​, ಪವರ್​ ಡೈರೆಕ್ಟರ್​ನಲ್ಲಿ ಈ ದೋಷ ಕಾಣಿಸಿಕೊಂಡಿದೆ ಎಂದು ತಿಳಿಸಿದೆ
Published by: Harshith AS
First published: December 7, 2020, 8:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories