• Home
  • »
  • News
  • »
  • tech
  • »
  • Google Phone: ಕೇವಲ 17299 ರೂಪಾಯಿಗೆ ಗೂಗಲ್‌ ಪಿಕ್ಸಲ್ 6a ಸ್ಮಾರ್ಟ್‌ಫೋನ್! ಬೆಸ್ಟ್ ಆಫರ್ ಮಿಸ್ ಮಾಡ್ಕೋಬೇಡಿ

Google Phone: ಕೇವಲ 17299 ರೂಪಾಯಿಗೆ ಗೂಗಲ್‌ ಪಿಕ್ಸಲ್ 6a ಸ್ಮಾರ್ಟ್‌ಫೋನ್! ಬೆಸ್ಟ್ ಆಫರ್ ಮಿಸ್ ಮಾಡ್ಕೋಬೇಡಿ

Google Pixel 6a  ಫೋನ್

Google Pixel 6a ಫೋನ್

ಗೂಗಲ್ ಬಳಿ ಏನಿಲ್ಲ ಹೇಳಿ? ಎಲ್ಲವೂ ಇದೆ! ಈಗ ತನ್ನದೇ ಆದ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ ಆಗಿದೆ. ಇದು ಪ್ರೀಮಿಯಂ ಸ್ಮಾರ್ಟ್‌ಫೋನ್  ಹುಡುಕುತ್ತಿರುವ ಗ್ರಾಹಕರಿಗೆ ಸಖತ್ ಆಫರ್ ಆಗಿದೆ. ಹಾಗಿದ್ರೆ ಬನ್ನಿ ಇದರ ವಿಷೇಷತೆಯನ್ನು ತಿಳಿದುಕೊಳ್ಳೊಣ...

  • Share this:

    ಗೂಗಲ್ (Google) ಬಳಿ ಎನಿಲ್ಲ ಹೇಳಿ. ಎಲ್ಲವು ಇದೆ ಈಗ ತನ್ನದೆ ಆದ ಹೊಸ ಸ್ಮಾರ್ಟ್ಫಫೋನ್ (Smart Phone) ಬಿಡುಗಡೆ (Release) ಆಗಿದೆ ಬನ್ನಿ ಇದರ ವಿಷೇಷತೆಯನ್ನು (Special) ತಿಳಿದುಕೋಳ್ಳೊಣ. Google Pixel 6a ಸ್ಮಾರ್ಟ್‌ಫೋನ್ 6.1-ಇಂಚಿನ ಫುಲ್‌ HD+ (1,080 x 2,400 ಪಿಕ್ಸೆಲ್‌ಗಳು) OLED ಡಿಸ್‌ಪ್ಲೇಯನ್ನು (Display) ಹೊಂದಿದೆ. 20:9 ರೇಶಿಯೊ ಈ ಸ್ಮಾರ್ಟ್‌ಫೋನಿನ ಡಿಸ್‌ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ (Gorilla Glass) 3 ರಕ್ಷಣೆಯನ್ನು ಹೊಂದಿದೆ ಮತ್ತು 60Hz ರಿಫ್ರೆಶ್ ರೇಟ್ ಬಲವನ್ನು ಹೊಂದಿದೆ  . ಭಾರತದಲ್ಲಿ ಇತ್ತೀಚಿಗಷ್ಟೆ ಬಿಡುಗಡೆಗೊಂಡಿರುವ ಗೂಗಲ್‌ ಪಿಕ್ಸಲ್ 6a (Google Pixel 6a) ಸ್ಮಾರ್ಟ್‌ಫೋನ್ ಇದೀಗ ಭಾರೀ ಡಿಸ್ಕೌಂಟ್ (Discount) ಬೆಲೆಯಲ್ಲಿ ಮಾರಾಟಕ್ಕೆ ಬಂದಿದೆ.


    ಆಫರ್ ಕ್ಲೋಸ್ ಆಗೋ ಮುಂಚೆ ಖರೀದಿಸಿ


    ಇದೇ ಅಕ್ಟೋಬರ್‌ 23 ರಂದು ಮುಕ್ತಾಯವಾಗಲಿರುವ ಫ್ಲಿಪ್‌ಕಾರ್ಟ್ 'ಬಿಗ್ ದೀಪಾವಳಿ ಸೇಲ್'ನಲ್ಲಿ ಆಯ್ದ ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿಯನ್ನುನಿಡಲಾಗಿದೆ, ಇವುಗಳಲ್ಲಿ ಗೂಗಲ್‌ನ ಇತ್ತೀಚಿನ ಪಿಕ್ಸಲ್ 6a ಸ್ಮಾರ್ಟ್‌ಫೋನನ್ನು ಕೇವಲ 17,299 ರೂ.ಗಳಿಗೆ ಖರೀದಿಸಬಹುದಾದ ಆಯ್ಕೆಯನ್ನು ಸಹ ನೀಡಿದೆ.


    ಡಿಸ್ಕೌಂಟೋ ಡಿಸ್ಕೌಂಟು


    ಹೌದು, ಕೆಲವೇ ತಿಂಗಳುಗಳ ಹಿಂದೆಯಷ್ಟೇ ದೇಶದಲ್ಲಿ ಗೂಗಲ್‌ ಪಿಕ್ಸಲ್ 6a ಸ್ಮಾರ್ಟ್‌ಫೋನ್ನು 43,999 ರೂ ಬೆಲೆಯಲ್ಲಿ ಪರಿಚಯಿಸಲಾಗಿತ್ತು. ಇದೀಗ ಡಿಸ್ಕೌಂಟ್ ಬೆಲೆಯಲ್ಲಿ ಕೇವಲ 34,199 ರೂ.ಗೆ ಮಾರಾಟಕ್ಕಿಡಲಾಗಿದೆ.


    ಜೊತೆಗೆ ಬ್ಯಾಂಕ್ ರಿಯಾಯಿತಿ ಹಾಗೂ 16,900 ರೂ.ವರೆಗಿನ ಎಕ್ಸ್‌ಚೇಂಜ್‌ ಕೊಡುಗೆಗಳು ಸೇರಿ ಗೂಗಲ್‌ ಪಿಕ್ಸಲ್ 6a ಸ್ಮಾರ್ಟ್‌ಫೋನನ್ನು ಕೇವಲ 17,299 ರೂ.ಗಳಿಗೆ ಖರೀದಿಸಬಹುದಾಗಿದೆ ಪ್ರೀಮಿಯಂ ಸ್ಮಾರ್ಟ್‌ಫೋನ್  ಹುಡುಕುತ್ತಿರುವ ಗ್ರಾಹಕರಿಗೆ ಇದೊಂದು ಸಕ್ಕತ್ ಆಫರ್ ಅಂದ್ರೆ ತಪ್ಪಾಗಲ್ಲ.


    Check out this outstanding Google Pixel 6a smartphone at just Rs 17 299
    Google Pixel 6a ಫೋನ್


    Google Pixel 6a ನಲ್ಲಿ ಎಂತಹ ಫೀಚರ್ ಗಳಿವೆ  ಗೊತ್ತಾ


    Google Pixel 6a ಸ್ಮಾರ್ಟ್‌ಫೋನ್ 6.1-ಇಂಚಿನ ಫುಲ್‌ HD+ (1,080 x 2,400 ಪಿಕ್ಸೆಲ್‌ಗಳು) OLED ಡಿಸ್‌ಪ್ಲೇಯನ್ನು ಹೊಂದಿದೆ. 20:9 ರೇಶಿಯೊ ಹೊಂದಿದೆ. ಈ ಸ್ಮಾರ್ಟ್‌ಫೋನಿನ ಡಿಸ್‌ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿದೆ ಮತ್ತು 60Hz ರಿಫ್ರೆಶ್ ರೇಟ್ ಸಾಮರ್ಥ್ಯದಲ್ಲಿದೆ.


    Google Pixel 6a ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಗೂಗಲ್ ಟೆನ್ಸರ್ SoC ಮತ್ತು Titan M2 ಸೆಕ್ಯುರಿಟಿ ಕೊಪ್ರೊಸೆಸರ್‌ನಿಂದ ಕೆಲಸ ಆರಂಬಿಸುತ್ತದೆ. ಈ ಪ್ರೊಸೆಸರ್ 6GB LPDDR5 RAM ಹೊಂದಿದೆ. ಆಂಡ್ರಾಯ್ಡ್ 12 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕನಿಷ್ಟ ಐದು ವರ್ಷಗಳ ಗ್ಯಾರಂಟಿಯನ್ನು ನೀಡಲಾಗುತ್ತದೆ.


    ಇದನ್ನೂ ಓದಿ: Smart Phone: ರಕ್ತ ಕೊಟ್ಟು ಮೊಬೈಲ್ ಖರೀದಿಸಲು ಬಂದ ಬಾಲಕಿ! ಸಿಕ್ತಾ ಸ್ಮಾರ್ಟ್ ಫೋನ್?


    Google Pixel 6a ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬಿಡುಗಡೆಯಾಗಿದೆ. ರಿಯರ್ ಕ್ಯಾಮೆರಾವು f/1.7 ಅಪಾರ್ಚರ ಲೆನ್ಸ್‌ನೊಂದಿಗೆ 12.2-ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್  ಮತ್ತು 12-ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸರ್ ನೊಂದಿಗೆ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾವನ್ನು ಒಳಗೊಂಡಿದೆ.


    Google Pixel 6a ಸ್ಮಾರ್ಟ್‌ಫೋನಿನಲ್ಲಿ f/2.0 ಅಪರ್ಚರ್ ಲೆನ್ಸ್‌ನೊಂದಿಗೆ 8-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಹಿಂದಿನ ಕ್ಯಾಮರಾವು 30fps ನಲ್ಲಿ 4K ವೀಡಿಯೊ ರೆಕಾರ್ಡಿಂಗ್ ಅನ್ನು ನೀಡುತ್ತದೆ ಮತ್ತು ಮುಂಭಾಗದ ಕ್ಯಾಮರಾ 30fps ನಲ್ಲಿ 1080p ವರೆಗೆ ವೀಡಿಯೊ ರೆಕಾರ್ಡಿಂಗ್ ಮಾಡಬಹುದು.


    Google Pixel 6a ಸ್ಮಾರ್ಟ್‌ಫೋನ್ 128GB  ಸ್ಟೋರೆಜ್ ಸಂಗ್ರಹಣೆಯನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6E, ಬ್ಲೂಟೂತ್ 5.2, ಮತ್ತು USB ಟೈಪ್-C ಪೋರ್ಟ್ ವೈಶಿಷ್ಟ್ಯಗಳು ಸೇರಿವೆ.


    ಇದನ್ನೂ ಓದಿ:  Google ಸಂಸ್ಥೆಗೆ ಬಿತ್ತು ಬರೋಬ್ಬರಿ 1337 ಕೋಟಿ ರೂಪಾಯಿ ದಂಡ! ಇಂಟರ್‌ನೆಟ್‌ ದೈತ್ಯ ಕಂಪನಿ ಮಾಡಿದ ತಪ್ಪೇನು?


    ವೇಗದ ಚಾರ್ಜಿಂಗ್ ನೊಂದಿಗೆ ಬಂದಿರುವ Pixel 6a ನಲ್ಲಿ Google 4,410mAh ಬ್ಯಾಟರಿಯನ್ನು ಒದಗಿಸಲಾಗಿದ್ದು, ಇದು 24 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಮತ್ತು 72 ಗಂಟೆಗಳವರೆಗೆ ಬ್ಯಾಕಪ್ ಸಹಾ ನೀಡುತ್ತದೆ.


    ಪ್ರೀಮಿಯಂ ಸ್ಮಾರ್ಟ್‌ಫೋನ್  ಹುಡುಕುತ್ತಿರುವ ಗ್ರಾಹಕರಿಗೆ ಇದೊಂದು ಸಕ್ಕತ್ ಆಫರ್

    Published by:Harshith AS
    First published: