• Home
  • »
  • News
  • »
  • tech
  • »
  • Mobile Technology: 2022 ರಲ್ಲಿ ಟ್ರೆಂಡ್‌ ಆಗಿರುವ ಮೊಬೈಲ್‌ ತಂತ್ರಜ್ಞಾನಗಳು ಇವೇ ನೋಡಿ!

Mobile Technology: 2022 ರಲ್ಲಿ ಟ್ರೆಂಡ್‌ ಆಗಿರುವ ಮೊಬೈಲ್‌ ತಂತ್ರಜ್ಞಾನಗಳು ಇವೇ ನೋಡಿ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಈಗಿನ ತಂತ್ರಜ್ಞಾನಗಳು ಬಹಳಷ್ಟು ಬೆಳವಣಿಗೆಯಾಗಿವೆ ಅದ್ರಲ್ಲೂ ಮೊಬೈಲ್​ಗಳಲ್ಲಿ ಬೇಕಾದಷ್ಟು ಫೀಚರ್ಸ್​ಗಳನ್ನು ನೀಡುವ ಮೂಲಕ ತನ್ನನ್ನು ತಾನು ಮಾರುಕಟ್ಟೆಯಲ್ಲಿ ತೊಡಗಿಸಿಕೊಂಡಿದೆ. ಇದೀಗ ಸ್ಮಾರ್ಟ್​ಫೋನ್​ಗಳಲ್ಲಿ ಯಾವೆಲ್ಲಾ ಟೆಕ್ನಾಲಜಿಗಳು ಹೇಗೆಲ್ಲಾ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನೋಡೋಣ.

ಮುಂದೆ ಓದಿ ...
  • Share this:

    ಇಂದು ಮೊಬೈಲ್‌ (Mobile) ಹಾಗೂ ಇಂಟರ್‌ ನೆಟ್‌ (Internet) ಇಲ್ಲದೇ ಜಗತ್ತೇ ಇಲ್ಲ ಎನ್ನುವಂತಾಗಿದೆ. ಅದರಲ್ಲೂ ಮೊಬೈಲ್‌ ಜೀವನಾವಶ್ಯಕ ಎಂಬ ಹಂತಕ್ಕೆ ತಲುಪಿದೆ. ಹಾಗಾಗಿಯೇ ವರ್ಷದಿಂದ ವರ್ಷಕ್ಕೆ ಮೊಬೈಲ್ ತಂತ್ರಜ್ಞಾನದ ಅಳವಡಿಕೆ ಹೆಚ್ಚುತ್ತಿದೆ. ಪ್ರಸ್ತುತ, ಜಗತ್ತಿನಾದ್ಯಂತ 5.31 ಬಿಲಿಯನ್‌ಗಿಂತಲೂ ಹೆಚ್ಚು ಮೊಬೈಲ್ ಬಳಕೆದಾರರಿದ್ದಾರೆ. ಸ್ಮಾರ್ಟ್‌ಫೋನ್ (Smartphone) ಅಳವಡಿಕೆಯ ಹೆಚ್ಚಳದ ಜೊತೆಗೆ, ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಕೂಡ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ. ಹಾಗಿದ್ರೆ 2022ರಲ್ಲಿ ಮೊಬೈಲ್ ತಂತ್ರಜ್ಞಾನದ ಟ್ರೆಂಡ್‌ಗಳು ಯಾವುವು ಅನ್ನೋದನ್ನು ನೋಡೋಣ.


    ಈಗಿನ ತಂತ್ರಜ್ಞಾನಗಳು ಬಹಳಷ್ಟು ಬೆಳವಣಿಗೆಯಾಗಿವೆ ಅದ್ರಲ್ಲೂ ಮೊಬೈಲ್​ಗಳಲ್ಲಿ ಬೇಕಾದಷ್ಟು ಫೀಚರ್ಸ್​ಗಳನ್ನು ನೀಡುವ ಮೂಲಕ ತನ್ನನ್ನು ತಾನು ಮಾರುಕಟ್ಟೆಯಲ್ಲಿ ತೊಡಗಿಸಿಕೊಂಡಿದೆ. ಇದೀಗ ಸ್ಮಾರ್ಟ್​ಫೋನ್​ಗಳಲ್ಲಿ ಯಾವೆಲ್ಲಾ ಟೆಕ್ನಾಲಜಿಗಳು ಹೇಗೆಲ್ಲಾ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನೋಡೋಣ.


    1)ಕೃತಕ ಬುದ್ಧಿವಂತಿಕೆ : ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (AI) ಸದ್ಯ ಮೊಬೈಲ್‌ ನಲ್ಲಿ ಮುಖ್ಯವಾದ ತಂತ್ರಜ್ಞಾನವಾಗಿದೆ. ಮೊಬೈಲ್ ಗಳಲ್ಲಿರುವ ಗೂಗಲ್‌ ಅಸಿಸ್ಟೆಂಟ್ ಮತ್ತು ಸಿರಿಯನ್ನು ಹೊರತುಪಡಿಸಿ ಸಾಕಷ್ಟು ವರ್ಚುವಲ್ ಅಸಿಸ್ಟೆಂಟ್‌ಗಳು ಕೃತಕ ಬುದ್ದಿಮತ್ತೆಯಿಂದ ಕೆಲಸ ಮಾಡುತ್ತವೆ.ಅಲ್ಲದೆ, ಬಳಕೆದಾರರ ವಾಯ್ಸ್‌ ಕಮಾಂಡ್‌ ಕೇಳಿಸಿಕೊಂಡು ಕೆಲಸ ಮಾಡುವ ಸಾಕಷ್ಟು ಅಪ್ಲಿಕೇಷನ್‌ ಗಳೂ ಈಗ ಲಭ್ಯವಿದೆ.


    ಇದನ್ನೂ ಓದಿ: ಇಲ್ಲಿವೆ ನೋಡಿ 2022ರ ಬೆಸ್ಟ್​ ಸ್ಮಾರ್ಟ್​​ವಾಚ್​ಗಳ ಪಟ್ಟಿ


    2)ಮೊಬೈಲ್ ಭದ್ರತೆ: ಕಳೆದ 2 ವರ್ಷಗಳಲ್ಲಿ ಅದರಲ್ಲೂ ಕೋವಿಡ್‌ ಸಾಂಕ್ರಾಮಿಕದ ನಂತರ ಗೂಗಲ್‌ ಪೇ, ಪೋನ್‌ ಪೇ, ಪೇಟಿಎಂ ನಂತಹ ಅಪ್ಲಿಕೇಷನ್‌ ಗಳ ಬಳಕೆ ಕಾಮನ್‌ ಆಗಿದೆ.ಆದ್ರೆ ಹೀಗೆ ಬ್ಯಾಂಕ್‌ ಅಕೌಂಟ್‌ಗೆ ನೇರವಾಗಿ ಸಂಪರ್ಕದಲ್ಲಿರುವ ಅಪ್ಲಿಕೇಷನ್‌ ಗಳನ್ನು ಬಳಸುವಾಗಿ ಮೊಬೈಲ್‌ ಭದ್ರತೆಯು ಬಹಳ ಮುಖ್ಯವಾಗುತ್ತದೆ. ಹಾಗಾಗಿ ಫಿನ್‌ಟೆಕ್ ಉದ್ಯಮಗಳು ಮೊಬೈಲ್ ಪಾವತಿ ಆಯ್ಕೆಯನ್ನು ಸಾಧ್ಯವಾದಷ್ಟು ಸುರಕ್ಷಿತವಾಗಿಸಲು ಕೆಲಸ ಮಾಡುತ್ತಿವೆ.


    ಸಾಂಕೇತಿಕ ಚಿತ್ರ


    3) ವರ್ಚುವಲ್ ರಿಯಾಲಿಟಿ: ಮೊದಮೊದಲು ಗೇಮಿಂಗ್‌ ಅಪ್ಲಿಕೇಷನ್‌ ಗಳಲ್ಲಿ ಮಾತ್ರ ಬಳಸುತ್ತಿದ್ದ ಈ ತಂತ್ರಜ್ಞಾನ ಈಗ ಸಾಕಷ್ಟು ಫೀಚರ್‌ ಗಳಲ್ಲಿ ಹಾಗೂ ಅಪ್ಲಿಕೇಷನ್‌ ಗಳಲ್ಲಿ ನೋಡಬಹುದಾಗಿದೆ. ತ್ರಿಡಿ ತಂತ್ರಜ್ಞಾನವನ್ನು ಇಂದು ಜನಸಾಮಾನ್ಯರೂ ಬಳಸಲು ಸಾಧ್ಯವಾಗಿದೆ. ಅದರಲ್ಲೂ ಇಂಟೀರಿಯರ್‌ ಡಿಸೈನ್‌, ಶಿಕ್ಷಣ, ರೂಟ್‌ ಮ್ಯಾಪ್‌ ಗಳಲ್ಲಿ ಈ ತಂತ್ರಜ್ಞಾನ ಬಳಸುವುದು ಸಾಮಾನ್ಯವಾಗಿದೆ.


    4)ಸಣ್ಣ ವ್ಯಾಪಾರಗಳಿಗಾಗಿ ಮೊಬೈಲ್ ಅಪ್ಲಿಕೇಶನ್‌ಗಳು: ಕೆಲವು ವರ್ಷಗಳ ಹಿಂದೆ, ದೊಡ್ಡ ಉದ್ಯಮಗಳು ಮಾತ್ರ ಮೊಬೈಲ್ ಅಪ್ಲಿಕೇಶನ್‌ಗಳನ್ನು ಹೊಂದಿರುವುದ ಕಂಡುಬರುತ್ತಿತ್ತು. ಆದ್ರೆ ಈಗ DIY ( DO IT YOURSELF)ವಸ್ತುಗಳನ್ನು ಮಾರಾಟ ಮಾಡುವುದರಿಂದ ಹಿಡಿದು ಬಟ್ಟೆ ರಿಸೇಲ್‌ ಉದ್ಯಮದಂತಹ ಕಂಪನಿಗಳು ಕೂಡ ಅಪ್ಲಿಕೇಷನ್‌ ಹೊಂದಿರುತ್ತಾರೆ. ಅಪ್ಲಿಕೇಶನ್‌ಗಳನ್ನು ಹೊಂದಿರುವ ಸಣ್ಣ ವ್ಯಾಪಾರಗಳ ಸಂಖ್ಯೆ ಇನ್ನೂ ಚಿಕ್ಕದಿದ್ದರೂ ಸಹ, ಅನೇಕರು ಅಪ್ಲಿಕೇಶನ್ ಅಭಿವೃದ್ಧಿಯಲ್ಲಿ ಕೆಲಸ ಮಾಡುತ್ತಿದ್ದಾರೆ.


    5)IoT ಅಪ್ಲಿಕೇಶನ್‌ಗಳು: ಆರೋಗ್ಯ ಮತ್ತು ಸಾರಿಗೆ, ವ್ಯಾಪಾರ, ವ್ಯವಹಾರ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಿಗೆ ಇಂಟರ್ನೆಟ್ ಆಫ್ ಥಿಂಗ್ಸ್ ಅನಿವಾರ್ಯವಾಗಿದೆ. IoT ಅಪ್ಲಿಕೇಶನ್ ಗಳು ಮೊಬೈಲ್ ಸಾಧನ ಮತ್ತು ಬಳಕೆದಾರರನ್ನು ಮತ್ತಷ್ಟು ಹತ್ತಿರಕ್ಕೆ ತರುತ್ತವೆ. ಹಾಗಾಗಿ ಇದು ಅನೇಕ IoT ಅಪ್ಲಿಕೇಶನ್‌ಗಳ ಅಭಿವೃದ್ಧಿಗೆ ಕಾರಣವಾಗಿದೆ.


    6) 5G ನೆಟ್‌ವರ್ಕ್: ಸದ್ಯ ಟ್ರೆಂಡ್‌ ನಲ್ಲಿರೋದು 5G ನೆಟ್‌ವರ್ಕ್. ಈ ತಂತ್ರಜ್ಞಾನವು ಅತಿ ವೇಗದ ಇಂಟರ್ನೆಟ್ ಬಳಕೆಗೆ ಸಹಾಯ ಮಾಡುತ್ತದೆ. ಹಾಗಾಗಿ ಯಾವುದೇ ಅಡೆತಡೆಗಳಿಲ್ಲದೇ ಜನರು 5ಜಿ ನೆಟ್‌ ವರ್ಕ್‌ ಬಳಸುತ್ತಿದ್ದಾರೆ.


    7) ಎಂ-ಕಾಮರ್ಸ್‌ ಏರಿಕೆ: ನೀವು ಇ ಕಾಮರ್ಸ್‌ ಅಂದರೆ ಇಂಟರ್‌ ನೆಟ್‌ ಮೂಲಕ ಮಾಡುವ ವ್ಯಾಪಾರ ವ್ಯವಹಾರದ ಬಗ್ಗೆ ಕೇಳಿರ್ತೀರಾ. ಆದರೆ ಇತ್ತೀಚಿನ ದಿನಗಳಲ್ಲಿ ಎಂ ಕಾಮರ್ಸ್‌ ಹೆಚ್ಚು ಜನಪ್ರಿಯವಾಗಿದೆ. ಎಂ ಕಾಮರ್ಸ್‌ ಎಂದರೆ ಮೊಬೈಲ್‌ ಮೂಲಕ ಮಾಡುವ ವ್ಯಾಪಾರವಾಗಿದೆ. ಆದಾಗ್ಯೂ ಎಂ ಕಾಮರ್ಸ್‌ ಅನ್ನೋದು ಇ ಕಾಮರ್ಸ್‌ ನ ಭಾಗವೇ ಆಗಿದೆ. ಸಾಂಕ್ರಾಮಿಕ ಕೋವಿಡ್‌ ನಂತರದಲ್ಲಿ ಮೊಬೈಲ್‌ ಉದ್ಯಮ ಹೆಚ್ಚಾಗಿದೆ.


    ಸಾಂಕೇತಿಕ ಚಿತ್ರ


    8) ಧರಿಸಬಹುದಾದ ಅಪ್ಲಿಕೇಶನ್ ಗಳು: ಧರಿಸಬಹುದಾದ ತಂತ್ರಜ್ಞಾನವೆಂದರೆ ದೇಹದ ಮೇಲೆ ಧರಿಸಲು ವಿನ್ಯಾಸಗೊಳಿಸಲಾಗುವ ಎಲೆಕ್ಟ್ರಾನಿಕ್ ಸಾಧನ. ವಾಚ್‌ ಸೇರಿದಂತೆ ಆಭರಣ, ಎಕ್ಸಸರೀಸ್‌, ಬಟ್ಟೆ ಹೀಗೆ ಆಭರಣಗಳು ಹೀಗೆ ವಿವಿಧ ರೂಪಗಳಲ್ಲಿರಬಹುದು. 2017ರಲ್ಲಿ 453 ಮಿಲಿಯನ್‌ ನಷ್ಟಿದ್ದ ಧರಿಸಬಹುದಾದ ಸಾಧನಗಳ ವ್ಯಾಪ್ತಿಯು 2022 ರಲ್ಲಿ 929 ಮಿಲಿಯನ್‌ಗೆ ಹೆಚ್ಚಾಗಿದೆ.


    9) ಕ್ರಾಸ್-ಪ್ಲಾಟ್‌ಫಾರ್ಮ್ ಅಪ್ಲಿಕೇಶನ್‌ಗಳ ಅಭಿವೃದ್ಧಿ: ಅಪ್ಲಿಕೇಶನ್ ಮಾರುಕಟ್ಟೆಯಲ್ಲಿ iOS ಮತ್ತು Android ಆವೃತ್ತಿಗಳು ಸಮಬಲ ಹೊಂದಿವೆ. ವಿಭಿನ್ನ ಪ್ಲಾಟ್‌ಫಾರ್ಮ್‌ಗಳಿಗಾಗಿ ಪ್ರತ್ಯೇಕ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸುವ ಬದಲು, ಈಗ ಕ್ರಾಸ್-ಪ್ಲಾಟ್‌ಫಾರ್ಮ್ ಅಪ್ಲಿಕೇಶನ್‌ಗಳೇ ಉತ್ತಮ ಎನ್ನಲಾಗುತ್ತದೆ. ಏಕೆಂದರೆ ಅವು ಬಳಕೆದಾರ ಸ್ನೇಹಿಯಾಗಿದೆ.


    10)ವೈಯಕ್ತೀಕರಣ: ಸ್ಮಾರ್ಟ್‌ಫೋನ್ ಬಳಕೆದಾರರು 2022 ರಲ್ಲಿ ವೈಯಕ್ತಿಕರಣದ ಅನುಭವಗಳನ್ನು ಆನಂದಿಸುತ್ತಿದ್ದಾರೆ. ಅವರ ಆಸಕ್ತಿಗಳಿಗೆ ಅನುಗುಣವಾಗಿ ಹೊಸ ಹೊಸ ಅಪ್ಲಿಕೇಶನ್‌ಗಳು ಮತ್ತು ತಂತ್ರಜ್ಞಾನಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ.

    Published by:Prajwal B
    First published: