ಮೊದಲೆಲ್ಲಾ ನಮ್ಮಲ್ಲಿ ಜನರು ತಮ್ಮ ಕಿವಿಗಳಿಗೆ ಇಯರ್ಫೋನ್ (Earphone) ಅಥವಾ ಹೆಡ್ಫೋನ್ ಗಳನ್ನು ಹಾಕಿಕೊಂಡು ಮೊಬೈಲ್ ಫೋನ್ ನಲ್ಲಿ ಹಾಡುಗಳನ್ನು ಕೇಳುವುದನ್ನು ಮತ್ತು ಕರೆಗಳಲ್ಲಿ ಮಾತಾಡುವುದನ್ನು ನಾವು ನೋಡುತ್ತಿದ್ದೆವು. ಆದರೆ ಈಗ ಆ ಕಾಲ ಹೋಗಿ ಆಯ್ತು ಅಂತಾನೆ ಹೇಳಬಹುದು. ಏಕೆಂದರೆ ಈಗೆಲ್ಲಾ ಬಹುತೇಕರ ಕಿವಿಯಲ್ಲಿ ಬರೀ ಎರಡು ಸ್ಮಾರ್ಟ್ ಆದ ಮತ್ತು ಚಿಕ್ಕ ಏರ್ಪಾಡ್ ಗಳು (AirPods) ನೋಡುವುದಕ್ಕೆ ಸಿಗುತ್ತವೆ ಅಂತ ಹೇಳಬಹುದು. ಈಗಂತೂ ಜನರು ಬೆಳಿಗ್ಗೆ ವಾಕಿಂಗ್, ಜಾಗಿಂಗ್ ಗೆ ಹೋದಾಗ, ಡೈನಿಂಗ್ ಟೇಬಲ್ ಮೇಲೆ ಕುಳಿತು ತಿಂಡಿ ತಿನ್ನುವಾಗ ಮತ್ತು ಬೈಕ್ ಮತ್ತು ಕಾರು ಚಲಾಯಿಸಿಕೊಂಡು ಕಚೇರಿಗೆ ಹೋಗುವಾಗ, ಅಷ್ಟೇ ಅಲ್ಲದೆ ಕಚೇರಿಯಲ್ಲಿ ಕೆಲಸ ಮಾಡುವಾಗ ಸಹ ಅನೇಕರ ಕಿವಿಯಲ್ಲಿ ಈ ಏರ್ಪಾಡ್ ಗಳನ್ನು ನಾವು ನೋಡುತ್ತೇವೆ.
ಈ ಏರ್ಪಾಡ್ ಗಳನ್ನು ಬಳಸುವುದರಿಂದ ನಮಗೆ ಮೊಬೈಲ್ ಫೋನ್ ಅನ್ನು ಗಂಟೆಗಟ್ಟಲೆ ಕೈಯಲ್ಲಿ ಹಿಡಿದುಕೊಳ್ಳುವ ಅವಶ್ಯಕತೆ ಇರುವುದಿಲ್ಲ ಅಂತಾನೆ ಹೇಳಬಹುದು.
ಅತ್ಯಂತ ಜನಪ್ರಿಯ ಟಿಡಬ್ಲ್ಯೂಎಸ್ ಇಯರ್ ಬಡ್ಗಳಾಗಿವೆ ಈ ಆ್ಯಪಲ್ ಏರ್ಪಾಡ್..
ಆ್ಯಪಲ್ ಏರ್ಪಾಡ್ ಗಳು ಜಾಗತಿಕವಾಗಿ ಅತ್ಯಂತ ಜನಪ್ರಿಯ ಟಿಡಬ್ಲ್ಯೂಎಸ್ ಇಯರ್ ಬಡ್ ಗಳಾಗಿವೆ ಅಂತ ಹೇಳಬಹುದು. ಪ್ರೀಮಿಯಂ ಸೌಂಡ್ ಗುಣಮಟ್ಟ, ಸುಲಭ ಸಂಪರ್ಕ ಮತ್ತು ಐಕಾನಿಕ್ ಇಯರ್ ಬಡ್ಸ್ ವಿನ್ಯಾಸದಿಂದಾಗಿ ಆ್ಯಪಲ್ನ ಮೊದಲ ವೈರ್ಲೆಸ್ ಬ್ಲೂಟೂತ್ ಇಯರ್ ಬಡ್ ಗಳು ಬೇಗನೆ ಹಿಟ್ ಆಗಿದ್ದವು.
ಇದನ್ನೂ ಓದಿ: ಲೆನೋವೋ ಕಂಪನಿಯ ಮೊದಲ ಸ್ಮಾರ್ಟ್ಫೋನ್ ಬಿಡುಗಡೆ! ಫೀಚರ್ಸ್ ಹೇಗಿದೆ ಗೊತ್ತಾ?
ಮೊದಲ ಆ್ಯಪಲ್ ಏರ್ಪಾಡ್ ಗಳನ್ನು 2016 ರಲ್ಲಿ ಕ್ಯುಪರ್ಟಿನೊ ಮೂಲದ ಟೆಕ್ ದೈತ್ಯ ಐಫೋನ್ 7 ರ ಜೊತೆಗೆ ಬಿಡುಗಡೆ ಮಾಡಿತು ಮತ್ತು ಕೆಲವೇ ವರ್ಷಗಳಲ್ಲಿ, ಈ ಕಂಪನಿಯು ಇಯರ್ಬಡ್ನ ಹಲವಾರು ಹೊಸ ಹೊಸ ಮಾದರಿಗಳನ್ನು ಪ್ರಾರಂಭಿಸಿತು ಅಂತ ಹೇಳಬಹುದು. ಪ್ರಸ್ತುತ, ಆ್ಯಪಲ್ ತನ್ನ ಪೋರ್ಟ್ಫೋಲಿಯೋದಲ್ಲಿ 3ನೇ ತಲೆಮಾರಿನ ಆಪಲ್ ಏರ್ಪಾಡ್ ಗಳು, 2ನೇ ತಲೆಮಾರಿನ ಆ್ಯಪಲ್ ಏರ್ಪಾಡ್ ಪ್ರೋ ಮತ್ತು ಏರ್ಪಾಡ್ ಮ್ಯಾಕ್ಸ್ ಅನ್ನು ಹೊಂದಿದೆ.
ಈ ಪೈಕಿ 2ನೇ ತಲೆಮಾರಿನ ಆ್ಯಪಲ್ ಏರ್ಪಾಡ್ ಗಳು ಜಾಗತೀಕವಾಗಿ ಅತಿ ಹೆಚ್ಚು ಮಾರಾಟವಾಗಿವೆ. 2ನೇ ಪೀಳಿಗೆಯ ಆಪಲ್ ಏರ್ಪಾಡ್ ಗಳು 1ನೇ ಪೀಳಿಗೆ ಏರ್ಪಾಡ್ ಗಳಿಗಿಂತ ಉತ್ತಮ ಬ್ಯಾಟರಿಯೊಂದಿಗೆ ಬರುತ್ತವೆ. ಆದರೆ ಇಯರ್ ಬಡ್ ಗಳ ವಿನ್ಯಾಸವು ಹೆಚ್ಚುಕಡಿಮೆ ಒಂದೇ ರೀತಿಯದ್ದಾಗಿದೆ. ಇನ್ನೂ 3ನೇ ಪೀಳಿಗೆಯ ಏರ್ಪಾಡ್ ಗಳು ಸಹ ಇದೇ ರೀತಿಯ ವೈಶಿಷ್ಟ್ಯತೆಗಳನ್ನು ಹೊಂದಿದೆ, ಆದರೆ ಹೊಸ ವಿನ್ಯಾಸವನ್ನು ಹೊಂದಿದೆ.
ಫ್ಲಿಪ್ಕಾರ್ಟ್ ನಲ್ಲಿ 2023 ರ ಮೊದಲ ವಾರದಲ್ಲಿ ಆಪಲ್ ಏರ್ಪಾಡ್ ಗಳ ಬೆಲೆ 1,499 ರೂಪಾಯಿ
ವೈಶಿಷ್ಟ್ಯತೆಗಳ ವಿಷಯಕ್ಕೆ ಬಂದಾಗ ಮೂರನೇ ಮತ್ತು ಎರಡನೇ ತಲೆಮಾರಿನ ಆ್ಯಪಲ್ ಏರ್ಪಾಡ್ ಗಳ ನಡುವೆ ತುಂಬಾನೇ ಕಡಿಮೆ ವ್ಯತ್ಯಾಸವಿದೆ, ಆದಾಗ್ಯೂ ಬೆಲೆಯ ವಿಷಯಕ್ಕೆ ಬಂದಾಗ ದೊಡ್ಡ ಅಂತರವಿದೆ. ಈ ಅಂಶದಿಂದಾಗಿ, ಖರೀದಿದಾರರು ಎರಡನೇ ತಲೆಮಾರಿನ ಆ್ಯಪಲ್ ಏರ್ಪಾಡ್ ಗಳತ್ತ ಮುಖ ಮಾಡುತ್ತಿದ್ದಾರೆ ಮತ್ತು ನೀವು ಅದನ್ನು ಖರೀದಿಸಲು ಯೋಜಿಸುತ್ತಿದ್ದರೆ, ಇದು ಸರಿಯಾದ ಸಮಯವಾಗಿರಬಹುದು. ಆ್ಯಪಲ್ ಏರ್ಪಾಡ್ ಗಳು ಪ್ರಸ್ತುತ ಫ್ಲಿಪ್ಕಾರ್ಟ್ ನಲ್ಲಿ 2023 ರ ಮೊದಲ ವಾರದಲ್ಲಿ 1,499 ರೂಪಾಯಿಗೆ ಲಭ್ಯವಿದೆ.
ಆ್ಯಪಲ್ ಏರ್ಪಾಡ್ ಗಳ ಬೆಲೆ ಪ್ರಸ್ತುತ ಫ್ಲಿಪ್ಕಾರ್ಟ್ ನಲ್ಲಿ 11,990 ರೂಪಾಯಿ ಆಗಿದೆ. ಇ-ಕಾಮರ್ಸ್ ಪ್ಲಾಟ್ಫಾರ್ಮ್ ನಲ್ಲಿ ನಿಮ್ಮ ಬಳಿ ಹಳೆಯ ಸ್ಮಾರ್ಟ್ಫೋನ್ ಇದ್ದರೆ 10,500 ರೂಪಾಯಿಗಳವರೆಗೆ ಭಾರಿ ರಿಯಾಯಿತಿಯನ್ನು ನೀಡುತ್ತಿದೆ. ಇದರರ್ಥ ನೀವು 1,499 ರೂಪಾಯಿಗಳಿಗೆ ಆ್ಯಪಲ್ ಏರ್ಪಾಡ್ ಗಳನ್ನು ಪಡೆಯಬಹುದು. ಇದಲ್ಲದೆ, ಫ್ಲಿಪ್ಕಾರ್ಟ್ ನಲ್ಲಿ ಆಕ್ಸಿಸ್ ಬ್ಯಾಂಕ್ ಕಾರ್ಡ್ ಮೇಲೆ 5 ಪ್ರತಿಶತದಷ್ಟು ಕ್ಯಾಶ್ಬ್ಯಾಕ್ ಅನ್ನು ಸಹ ನೀಡುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ