• Home
  • »
  • News
  • »
  • tech
  • »
  • Technology: ನಿಮ್ಮ ಆಧಾರ್ ಕಾರ್ಡ್ ಮೂಲಕ ನಕಲಿ ಸಿಮ್ ಖರೀದಿಸುತ್ತಿದ್ದಾರೆಯೇ ಎಂದು ಹೀಗೆ ಪರಿಶೀಲಿಸಿ!

Technology: ನಿಮ್ಮ ಆಧಾರ್ ಕಾರ್ಡ್ ಮೂಲಕ ನಕಲಿ ಸಿಮ್ ಖರೀದಿಸುತ್ತಿದ್ದಾರೆಯೇ ಎಂದು ಹೀಗೆ ಪರಿಶೀಲಿಸಿ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಕೆಲವೊಬ್ಬರು ನಕಲಿ ಆಧಾರ್​ ಕಾರ್ಡ್​ ಸೃಷ್ಟಿ ಮಾಡಿ ನಿಮಗೆ ಗೊತ್ತಿಲ್ಲದೇ ಹಾಗೆ ಸಿಮ್ ಖರೀದಿ ಮಾಡುತ್ತಿದ್ದಾರೆ. ಈ ಯೋಜನೆಗಳನ್ನು ಕೆಲವಂಚಕರು ದುರ್ಬಳಕೆ ಮಾಡುತ್ತಿದ್ದಾರೆ. ಹಾಗಿದ್ರೆ ಯಾವ ರೀತಿ ದುರ್ಬಳಕೆ ಮಾಡುತ್ತಿದ್ದಾರೆ? ಹೇಗೆ ಅದನ್ನು ಕಂಡುಹಿಡಿಯೋದು ಇಲ್ಲಿದೆ ಮಾಹಿತಿ.

  • Share this:

    ಇಂದಿನ ದಿನ ಆಧಾರ್ ​​ಕಾರ್ಡ್ (Adhar Card)​ ಇಲ್ಲದ ಜನಗಳೇ ಇಲ್ಲ. ಆಧಾರ್ ಕಾರ್ಡ್ ಈಗ ಒಂದು ಗುರುತಿನ ಚೀಟಿಯಾಗಿದ್ದು ದೇಶದಾದ್ಯಂತ ಇದನ್ನು ಹೊಂದಿರದೇ ಇರುವ ಜನಗಳೇ ಇಲ್ಲ. ಈಗಿನ ಕಾಲಮಾನದಲ್ಲಿ ಆಧಾರ್​ಕಾರ್ಡ್​​ ಇಲ್ಲದೇ ಯಾವುದೇ ಕೆಲಸಕಅರ್ಯಗಳು ಆಗುವುದಿಲ್ಲ. ಇದಲ್ಲದೆ ಒಂದು ಪಾಸ್​​ಪೋರ್ಟ್ (Passport)​ ಮಾಡುವುದರಿಂದ ಹಿಡಿದು ಒಂದು ಸಣ್ಣ ಸಿಮ್​ (Sim) ಮಾಡಬೇಕೆಂದಿದ್ದರೂ ಈ ಆಧಾರ್ ಎಂಬ ಗುರುತಿನ ಚೀಟಿ ಬೇಕೇ ಬೇಕು. ಜೊತೆಗೆ  ದೇಶದಲ್ಲಿ ಸರ್ಕಾರದ ಯಾವುದೇ ಸೌಲಭ್ಯವನ್ನು ಪಡೆಯಬೇಕಾದರು ಆಧಾರ್ ಕಾರ್ಡ್​ ಮಾಡಿಸಲೇ ಬೇಕು. ಹೀಗಿರುವಾಗ ಇತ್ತೀಚಿನ ದಿನಗಳಲ್ಲಿ ನಾವು ಎಲ್ಲಿ ಹೋದರೂ ಆಧಾರ್​ ಕಾರ್ಡ್​ ನಂಬರ್ ನಮೂದಿಸುತ್ತೇವೆ. ಆದರೆ ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಕೆಲವಂಚಕರು ಇದನ್ನು ದುರ್ಬಳಕೆ ಮಾಡುತ್ತಿದ್ದಾರೆ.


    ಕೆಲವೊಬ್ಬರು ನಕಲಿ ಆಧಾರ್​ ಕಾರ್ಡ್​ ಸೃಷ್ಟಿ ಮಾಡಿ ನಿಮಗೆ ಗೊತ್ತಿಲ್ಲದೇ ಹಾಗೆ ಸಿಮ್ ಖರೀದಿ ಮಾಡುತ್ತಿದ್ದಾರೆ. ಈ ಯೋಜನೆಗಳನ್ನು ಕೆಲವಂಚಕರು ದುರ್ಬಳಕೆ ಮಾಡುತ್ತಿದ್ದಾರೆ. ಹಾಗಿದ್ರೆ ಯಾವ ರೀತಿ ದುರ್ಬಳಕೆ ಮಾಡುತ್ತಿದ್ದಾರೆ, ಹೇಗೆ ಅದನ್ನು ಕಂಡುಹಿಡಿಯೋದು ಇಲ್ಲಿದೆ ಮಾಹಿತಿ.


    ಅಮಾಯಕರ ಆಧಾರ್​ ಕಾರ್ಡ್​ ವಂಚನೆ:


    ಕೆಲ ವಂಚಕರು ಅಮಾಯಕರ ಏನೂ ಗೊತ್ತಿಲ್ಲದವರ ನಕಲಿ ಆಧಾರ್​ ಕಾರ್ಡ್​ಗಳನ್ನು ಬಳಸಿ ಸಿಮ್​ ಕಾರ್ಡ್​ಗಳನ್ನು ಖರೀದಿ ಮಾಡಿ ವಂಚನೆ ಮಾಡುತ್ತಿರುವುದು ಇತ್ತೀಚೆಗೆ ಕಂಡುಬರುತ್ತಿದೆ. ಇದಕ್ಕಾಗಿಯೇ ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಯಾವುದಾದರು ಸಿಮ್ ಕಾರ್ಡ್‌ಗಳನ್ನು ತೆಗೆದುಕೊಳ್ಳಲಾಗಿದೆಯೇ ಎಂದು ಪರಿಶೀಲಿಸಲು ಸರ್ಕಾರವು ಇದೀಗ ಜನರಿಗೆ ಹೊಸ ಆಯ್ಕೆಯನ್ನು ನೀಡಿದೆ.


    ಇದನ್ನೂ ಓದಿ: ಎಷ್ಟು ಬಾರಿ ಆಧಾರ್ ಕಾರ್ಡ್ ಅಪ್​ಡೇಟ್ ಮಾಡಬಹುದು? ಈ ನಿಯಮಗಳು ತಿಳಿದಿರಲಿ


    ಟಾರ್ಫಕಾಪ್ ವೆಬ್​ಸೈಟ್​ ಮೂಲಕ ನಕಲಿ ಸಿಮ್​ ಪರಿಶೀಲಿಸಿ:


    ಟಾಫ್-ಕಾಪ್ ಎಂಬ ಹೆಸರನ್ನು ಹೊಂದಿರುವ ವೆಬ್‌ಸೈಟ್ ಮೂಲಕ ನಿಮ್ಮ ಆಧಾರ್ ಕಾರ್ಡ್ ಮೂಲಕ ಎಷ್ಟು ಸಿಮ್ ಖರೀದಿ ಮಾಡಲಾಗಿದೆ, ಆ್ಯಕ್ಟಿವ್ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಪ್ರಸ್ತುತ ಈ ಸೌಲಭ್ಯವು ತೆಲಂಗಾಣ, ಆಂಧ್ರಪ್ರದೇಶ, ಕೇರಳ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ, ಮೇಘಾಲಯ, ತ್ರಿಪುರ, ಅರುಣಾಚಲ ಪ್ರದೇಶ ಮತ್ತು ನಾಗಲೆಂಡ್ ನಾಗರಿಕರಿಗೆ ಮಾತ್ರ ಲಭ್ಯವಿದೆ.


    ನಕಲಿ ಆಧಾರ್ ಅಥವಾ ಸಿಮ್​ ಅನ್ನು ಹೇಗೆ ಪರಿಶೀಲಿಸುವುದು?


    • ಮೊದಲು Tofcop ವೆಬ್‌ಸೈಟ್‌ ಓಪನ್ ಮಾಡಬೇಕು.

    • ಇಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಲು ಕೇಳುತ್ತದೆ.

    • ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ನಂತರ ‘ಓಟಿಪಿ ರಿಕ್ವೆಸ್ಟ್’ ಆಯ್ಕೆ ಮೇಲೆ ಕ್ಲಿಕ್ ಮಾಡಿ.

    • ಬಳಿಕ OTP ನಮೂದಿಸಿ ಮತ್ತು ‘ವ್ಯಾಲಿಡೇಟ್’ ಮೇಲೆ ಕ್ಲಿಕ್ ಮಾಡಬೇಕು.

    • ಈಗ ನಿಮ್ಮ ಆಧಾರ್​ನಿಂದ ತೆಗೆದುಕೊಂಡ ಮೊಬೈಲ್ ಸಂಖ್ಯೆಗಳು/ಸಿಮ್‌ಗಳ ಎಲ್ಲಾ ವಿವರಗಳನ್ನು ಕಾಣಬಹುದು.

    • ಇಲ್ಲಿ ನಿಮಗೆ ಸಂಬಂಧಿಸಿದ ಯಾವುದೇ ಮೊಬೈಲ್ ಸಂಖ್ಯೆಗಳಿದ್ದಲ್ಲಿ ಆ ಸಂಖ್ಯೆಗೆ ರಿಪೋರ್ಟ್​ ಮಾಡಬಹುದು.


    ಸಿಮ್​ ಕಾರ್ಡ್​ ರಚನೆಗೆ ಸರ್ಕಾರದಿಂದ ಕ್ರಮ:


    ಸರ್ಕಾರವೂ ಇತ್ತೀಚೆಗೆ ಒಬ್ಬ ವ್ಯಕ್ತಿ ಕೇವಲ ಒಂಬತ್ತು ಸಿಮ್​ ಕಾರ್ಡ್ ಅನ್ನು ಮಾತ್ರ ಹೊಂದಿರಬೇಕು ಎಂದು ನಿಯಮ ಹೊರಡಿಸಿತ್ತು. ಒಂದು ವೇಳೆ ಒಂಬತ್ತಕ್ಕಿತ ಹೆಚ್ಚು ಸಿಮ್ ಕಾರ್ಡ್ ಅನ್ನು ಹೊಂದಿದ್ದರೆ ಎಲ್ಲಾ ಸಿಮ್​ ಕಾರ್ಡ್​​ಗಳನ್ನು ಮರು ಪರಿಶೀಲನೆ ಮಾಡಬೇಕು ಎಂದು ಸರ್ಕಾರ ಟೆಲಿಕಾಂ ಅಪರೇಟರ್​ಗಳಿಗೆ ಆದೇಶ ಹೊರಡಿಸಿದೆ.


    ಇದು ಹಣಕಾಸಿನ ಅಪರಾಧಗಳು, ತೊಂದರೆ ನೀಡುವಂಥ ಕರೆಗಳು, ಸ್ವಯಂಚಾಲಿತ ಕರೆಗಳು ಮತ್ತು ಮೋಸದ ಚಟುವಟಿಕೆಗಳ ಘಟನೆಗಳನ್ನು ಪರಿಶೀಲಿಸಲು ಈ ಕ್ರಮ ಬಂದಿದೆ. ನಿಯಮದ ಪ್ರಕಾರ, ಬಳಕೆಯಲ್ಲಿ ಇಲ್ಲದ- ಎಲ್ಲಾ ಫ್ಲ್ಯಾಗ್ ಮಾಡಲಾದ ಮೊಬೈಲ್ ಸಂಪರ್ಕಗಳನ್ನು ಡೇಟಾಬೇಸ್‌ನಿಂದ ತೆಗೆದುಹಾಕಲು ಟೆಲಿಕಾಂ ಆಪರೇಟರ್‌ಗಳಿಗೆ ದೂರಸಂಪರ್ಕ ಇಲಾಖೆ ತಿಳಿಸಿದೆ.

    Published by:Prajwal B
    First published: