ಎಚ್ಚರ: ನಿಮ್ಮ ಮೊಬೈಲ್​ನಲ್ಲಿ UIDAI ನಂಬರ್ ಇದ್ದರೆ ಇಂದೇ ಡಿಲೀಟ್ ಮಾಡಿ

ಯುಐಡಿಎಐ ಹೆಸರಿನಲ್ಲಿ ಈ ನಂಬರ್ ಸೇವ್​ ಆಗಿರುವ ಬಗ್ಗೆ ದೂರುಗಳು ಕೇಳಿಬರುತ್ತಿದ್ದಂತೆ ಗೂಗಲ್ ಸಂಸ್ಥೆಯು ಕ್ಷಮೆಯಾಚಿಸಿದೆ.

zahir | news18
Updated:January 5, 2019, 5:21 PM IST
ಎಚ್ಚರ: ನಿಮ್ಮ ಮೊಬೈಲ್​ನಲ್ಲಿ UIDAI ನಂಬರ್ ಇದ್ದರೆ ಇಂದೇ ಡಿಲೀಟ್ ಮಾಡಿ
ಸಾಂದರ್ಭಿಕ ಚಿತ್ರ
zahir | news18
Updated: January 5, 2019, 5:21 PM IST
ನಿಮಗೆ ಗೊತ್ತಿಲ್ಲದೆ ನಿಮ್ಮ ಮೊಬೈಲ್​ ಕಾಂಟ್ಯಾಕ್ಟ್​ ಲೀಸ್ಟ್​ನಲ್ಲಿ ಯುಐಡಿಎಐ ಹೆಸರಲ್ಲಿ ನಂಬರ್‌ ಸೇವ್​ ಆಗಿರುತ್ತದೆ. ಈ ನಂಬರ್ ಆಧಾರ್, ಬ್ಯಾಂಕ್ ಖಾತೆ ಸೇರಿದಂತೆ ಹಲವು ಖಾತೆಗಳ ದುರುಪಯೋಗಕ್ಕೆ ಕಾರಣವಾಗಬಹುದು ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮುಖ್ಯವಾಗಿ ವಾಟ್ಸ್​ಆ್ಯಪ್​ನಲ್ಲಿ ಇಂತಹದೊಂದು ಮೆಸೇಜ್​ ಕಾಣಿಸುತ್ತಿದ್ದಂತೆ  ಹಲವರಿಗೆ ತಮ್ಮ ಮೊಬೈಲ್​ನಲ್ಲಿ ನಂಬರ್ ಸೇವ್​ ಆಗಿರುವುದು ಗೊತ್ತಾಗಿದೆ. 1800-300-1947 ಟೋಲ್ ಫ್ರೀ ನಂಬರ್​ ಇದಾಗಿದ್ದು, ಈ ನಂಬರ್​ಗೆ ಕರೆ ಮಾಡಿದರೆ ​ವಾಲಿಡ್ ಇಲ್ಲ ಎಂಬ ಉತ್ತರ ಬರುತ್ತದೆ.

ಆಗಸ್ಟ್​ನಲ್ಲಿ ನಂಬರ್ ಸೇವ್:
ಈ ನಂಬರ್ ನಾಲ್ಕು ತಿಂಗಳ ಹಿಂದೆ ಸೇವ್​ ಆಗಿತ್ತು. ಈ ಬಗ್ಗೆ ಹಿಂದೊಮ್ಮೆ ಭಾರತೀಯ ಆಧಾರ್ ಪ್ರಾಧಿಕಾರ ಸ್ಪಷ್ಟನೆ ಕೂಡ ನೀಡಿತ್ತು. ಇದೀಗ ಮತ್ತೊಮ್ಮೆ ಕಿಡಿಕೇಡಿಗಳು ಸುಳ್ಳು ಸುದ್ದಿಯು ಹಬ್ಬಿಸುತ್ತಿದ್ದು, ಜನರು ಈ ನಂಬರ್​ನಿಂದ ತಮ್ಮ ಮಾಹಿತಿಗಳು ಸೋರಿಕೆಯಾಗಿದೆ ಎಂದು ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲದೆ ಅನೇಕರು ಆಧಾರ್​ ಪ್ರಾಧಿಕಾರಕ್ಕೆ ದೂರನ್ನು ಕೂಡ ಸಲ್ಲಿಸಿದ್ದಾರೆ.

ಆಧಾರ್ ಪ್ರಾಧಿಕಾರ ಮತ್ತೆ ಸ್ಪಷ್ಟನೆ:
ಈ ನಂಬರ್​ಗೂ ಭಾರತೀಯ ಆಧಾರ್ ಪ್ರಾಧಿಕಾರಕ್ಕೂ ಸಂಬಂಧವಿಲ್ಲ. ಇದೊಂದು ಸಂಪೂರ್ಣ ಸುಳ್ಳು ಸುದ್ದಿಯಾಗಿದ್ದು, ಗೂಗಲ್​ನಿಂದ ಉಂಟಾದ ತಪ್ಪಿನಿಂದ ಅಂಡ್ರಾಯ್ಡ್​ನಲ್ಲಿ ಈ ನಂಬರ್​ ಸೇವ್​ ಆಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ಗುಡ್ ​ನ್ಯೂಸ್: ಕೆಲವೇ ದಿನಗಳಲ್ಲಿ ಪೆಟ್ರೋಲ್ ದರ 8 ರೂ. ಇಳಿಕೆ..!
Loading...

ಗೂಗಲ್ ಕ್ಷಮೆಯಾಚನೆ:
ಯುಐಡಿಎಐ ಹೆಸರಿನಲ್ಲಿ ಈ ನಂಬರ್ ಸೇವ್​ ಆಗಿರುವ ಬಗ್ಗೆ ದೂರುಗಳು ಕೇಳಿಬರುತ್ತಿದ್ದಂತೆ ಗೂಗಲ್ ಸಂಸ್ಥೆಯು ಕ್ಷಮೆಯಾಚಿಸಿದೆ. ಎಮರ್ಜೆನ್ಸಿ ನಂಬರ್​ಗಳಾದ ಪೊಲೀಸ್, ಅಗ್ನಿಶಾಮಕ ನಂಬರ್​ಗಳ ಪಟ್ಟಿಯಲ್ಲಿ ಯುಐಡಿಎಐ ಸಹಾಯವಾಣಿ ನಂಬರ್​ ಸೇರಿಕೊಂಡಿದ್ದು, ಆಟೋ ಸೇವ್​ಗೆ ಮುಖ್ಯ ಕಾರಣ ಎಂದು ಗೂಗಲ್​ ತಿಳಿಸಿತ್ತು.

ಇದನ್ನೂ ಓದಿ: ವಾಟ್ಸ್​ಆ್ಯಪ್​ನಲ್ಲಿ ಈ ಫೀಚರ್​ ಬಂದರೆ ತೊಂದರೆ ಗ್ಯಾರೆಂಟಿ..!

 ನಂಬರ್ ಈಗಲೂ ಇದೆ!
ಈ ಬಗ್ಗೆ ಮಾಹಿತಿ ಇಲ್ಲದಿರುವ ವ್ಯಕ್ತಿಗಳ ಮೊಬೈಲ್ ಫೋನ್​ಗಳ ಕಾಂಟ್ಯಾಕ್ಟ್​ ಲೀಸ್ಟ್​ ಯುಐಡಿಎಐ ಹೆಸರಲ್ಲಿ ನಂಬರ್‌ ಇನ್ನು ಸೇವ್‌ ಆಗಿದೆ. UIDAI ಎಂದು ಟೈಪ್​​ ಮಾಡಿದರೆ ಈ ನಂಬರ್ ಕಾಣಿಸುತ್ತದೆ. ಈ ನಂಬರ್ ಇನ್​ವಾಲಿಡ್​ ಆಗಿದ್ದು, ಇದನ್ನು ಡಿಲೀಟ್ ಮಾಡಿಕೊಳ್ಳಬಹುದು ಎಂದು ಆಧಾರ್​ ಪ್ರಾಧಿಕಾರ ತಿಳಿಸಿದೆ. ಅಲ್ಲದೆ ಯಾವುದೇ ರೀತಿಯ ಮಾಹಿತಿಗಳು ಸೋರಿಕೆಯಾಗಿಲ್ಲ. ಅದೆಲ್ಲ ಕೇವಲ ವದಂತಿಗಳು ಎಂದು ಸ್ಫಷ್ಟ ನೀಡಿದೆ.

ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಉದ್ಯೋಗಾವಕಾಶ: ಕನ್ನಡಿಗರಿಗೆ ಆದ್ಯತೆ

 

First published:January 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ