Vodafone Idea: ವೊಡಫೋನ್ ಐಡಿಯಾದಿಂದ ಅಗ್ಗದ ರೀಚಾರ್ಜ್​ ಪ್ಲ್ಯಾನ್​ ಬಿಡುಗಡೆ! ಕೇವಲ 99 ರೂಪಾಯಿ

ವೊಡಫೋನ್ ಐಡಿಯಾ

ವೊಡಫೋನ್ ಐಡಿಯಾ

ಏರ್​ಟೆಲ್​ನ 99 ರೂಪಾಯಿ ರೀಚಾರ್ಜ್​ ಯೋಜನೆಯನ್ನು ರದ್ದು ಮಾಡಿದ ಬೆನ್ನಲ್ಲೇ ವೊಡಫೋನ್​ ಐಡಿಯಾ ಈ ಯೋಜನೆಯನ್ನು ತನ್ನ ಗ್ರಾಹಕರಿಗೆ ಪರಿಚಯಿಸಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಹಲವಾರು ಪ್ರಯೋಜನಗಳು ದೊರೆಯಲಿದ್ದು ಅದರ ಕಂಪ್ಲೀಟ್​ ಮಾಹಿತಿ ಇಲ್ಲಿದೆ.

  • Share this:

    ಭಾರತೀಯ ಟೆಲಿಕಾಂ ಕಂಪೆನಿಗಳು (Indian Telecom Company) ತನ್ನ ಗ್ರಾಹಕರಿಗಾಗಿ ಹೊಸ ಹೊಸ ರೀಚಾರ್ಜ್ ಪ್ಲ್ಯಾನ್​ಗಳನ್ನು (Recharge Plan) ಬಿಡುಗಡೆ ಮಾಡುವ ಮೂಲಕ ತನ್ನತ್ತ ಸೆಳೆಯುವ ಪ್ರಯತ್ನವನ್ನು ಮಾಡುತ್ತಿರುತ್ತದೆ. ಅತೀ ಹೇಚ್ಚು ಗ್ರಾಹಕರನ್ನು ಹೊಂದಿಕೊಂಡು ಜಿಯೋ ಅಗ್ರಸ್ಥಾನದಲ್ಲಿದ್ದರೆ, ಏರ್​​ಟೆಲ್​ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ. ಅದೇ ರೀತಿ ವೊಡಫೋನ್ ಐಡಿಯಾ ಮೂರನೇ ಸ್ಥಾನದಲ್ಲಿದೆ. ಆದರೆ ಈಗ ವೊಡಫೋನ್​ ಐಡಿಯಾ (Vodafone Idea) ತನ್ನ ಗ್ರಾಹಕರಿಗಾಗಿ ಭಾರೀ ಅಗ್ಗದ ರೀಚಾರ್ಜ್​ ಯೋಜನೆಯೊಂದನ್ನು ಪರಿಚಯಿಸಿದೆ. ಈ ಮೂಲಕ ಇನ್ನಷ್ಟು ಗ್ರಾಹಕರನ್ನು ಸೆಳೆಯುವ ಪ್ರಯತ್ನವನ್ನು ಮಾಡುತ್ತಿದೆ. ಇನ್ನು ವೊಡಫೋನ್ ಮತ್ತು ಐಡಿಯಾ ವಿಲೀನವಾದ ನಂತರ ಈ ಕಂಪೆನಿಗಳು ಭಾರೀ ಅಭಿವೃದ್ಧಿಯನ್ನು ಸಾಧಿಸುತ್ತಿದೆ.


    ಏರ್​ಟೆಲ್​ನ 99 ರೂಪಾಯಿ ರೀಚಾರ್ಜ್​ ಯೋಜನೆಯನ್ನು ರದ್ದು ಮಾಡಿದ ಬೆನ್ನಲ್ಲೇ ವೊಡಫೋನ್​ ಐಡಿಯಾ ಈ ಯೋಜನೆಯನ್ನು ತನ್ನ ಗ್ರಾಹಕರಿಗೆ ಪರಿಚಯಿಸಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಹಲವಾರು ಪ್ರಯೋಜನಗಳು ದೊರೆಯಲಿದ್ದು ಅದರ ಕಂಪ್ಲೀಟ್​ ಮಾಹಿತಿ ಇಲ್ಲಿದೆ.


    ವೊಡಫೋನ್ ಐಡಿಯಾದ ಹೊಸ ರೀಚಾರ್ಜ್ ಪ್ಲ್ಯಾನ್​


    ವೊಡಫೋನ್​ ಐಡಿಯಾ ಇದೀಗ ತನ್ನ ಗ್ರಾಹಕರಿಗಾಗಿ 99 ರೂಪಾಯಿಯ ಹೊಸ ಪ್ರೀಪೇಯ್ಡ್​ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯು ಒಟ್ಟು 28 ದಿನಗಳ ಬ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಇನ್ನು ಈ ಹೊಸ ರೀಚಾರ್ಜ್​ ಯೋಜನೆಯಲ್ಲಿ ಅನ್ಲಿಮಿಟೆಡ್​ ವಾಯ್ಸ್​ ಕಾಲ್​ ಪ್ರಯೋಜನ ಮತ್ತು 200 ಎಮ್​ಬಿ ಡೇಟಾ ಸೌಲಭ್ಯವನ್ನು ಪಡೆಯಬಹುದಾಗಿದೆ. ಇದು ದೇಶದಲ್ಲೇ ಅತೀ ಕಡಿಮೆ ಬೆಲೆಯಲ್ಲಿ ಪ್ರೀಪೇಯ್ಡ್​ ಯೋಜನೆಯನ್ನು ಪರಿಚಯಿಸುತ್ತಿರುವ ಏಕೈಕ ಕಂಪೆನಿಯಾಗಿದೆ.




    ವೊಡಫೋನ್​ ಐಡಿಯಾದ ಬ್ಯುಸಿನೆಸ್​ ಹೆಡ್​ ಅವರ ಅಭಿಪ್ರಾಯ


    ವೊಡಾಫೋನ್ ಐಡಿಯಾದ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಕ್ಲಸ್ಟರ್ ಬ್ಯುಸಿನೆಸ್ ಹೆಡ್ ಆಗಿರುವ ಸಿದ್ಧಾರ್ಥ ಜೈನ್ ಅವರು ಈ ಬಗ್ಗೆ ಮಾಹಿತಿ ನೀಡಿ, ‘ಗ್ರಾಹಕರ ಕೈಗೆಟುಕುವಿಕೆಯನ್ನು ಪೂರೈಸುವ ಮೂಲಕ, ಅತ್ಯಂತ ಆಕರ್ಷಕ ಬೆಲೆಯಲ್ಲಿ ಅತ್ಯುತ್ತಮವಾದ ಮೊಬೈಲ್ ಸೇವೆಗಳನ್ನು ನೀಡಲು ವೊಡಫೋನ್​ ಐಡಿಯಾ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದೆ.


    ಮೊಬೈಲ್ ಬಳಕೆದಾರರು ಮತ್ತು ಬಳಕೆದಾರರಲ್ಲದವರನ್ನು ಕೇವಲ ₹ 99ಕ್ಕೆ ಗರಿಷ್ಠ ವೇಗದ ವೊಡಫೋನ್ ಐಡಿಯಾ ನೆಟ್‌ವರ್ಕ್‌ಗೆ ಸೇರಲು ನಾವು ಆಹ್ವಾನಿಸುತ್ತೇವೆ. ಡಿಜಿಟಲ್ ಯುಗದಲ್ಲಿ ಮೊಬೈಲ್ ಸಂಪರ್ಕದ ಗರಿಷ್ಠ ಪ್ರಯೋಜನಗಳನ್ನು ಆನಂದಿಸುವುದನ್ನು ಮುಂದುವರಿಸಿ. ಇದು ಕೇವಲ ಗ್ರಾಹಕರ ಒಳಗೊಳ್ಳುವಿಕೆಯನ್ನು ಹೆಚ್ಚಿಸುವುದಿಲ್ಲ. ಜೊತೆಗೆ ಹೆಚ್ಚಿನ ಬಳಕೆದಾರರು ಡಿಜಿಟಲ್ ಜಗತ್ತಿಗೆ ಸುಲಭವಾಗಿ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ’ ಎಂದು ಹೇಳಿದ್ದಾರೆ.


    ವೊಡಫೋನ್ ಐಡಿಯಾದ 200 ರೂಪಾಯಿ ಒಳಗಿನ ರೀಚಾರ್ಜ್ ಯೋಜನೆ


    ವೊಡಫೋನ್ ಐಡಿಯಾ


    ವೊಡಾಫೋನ್‌ ಐಡಿಯಾ 149 ರೂ.ಪ್ರಿಪೇಯ್ಡ್‌ ಪ್ಲ್ಯಾನ್:


    ವೊಡಫೋನ್​ ಐಡಿಯಾದ ಈ ಪ್ಲ್ಯಾನ್​​​ ಒಟ್ಟು 21 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಇದರಲ್ಲಿ ಒಟ್ಟು 300 ಎಸ್​ಎಮ್​ಎಸ್​ ಸೌಲಭ್ಯ ಮತ್ತು 1ಜಿಬಿ ಡೇಟಾ ಸೌಲಭ್ಯ ದೊರೆಯಲಿದೆ. ಅಲ್ಲದೆ ಅನ್ಲಿಮಿಟೆಡ್​ ವಾಯ್ಸ್​ ಕಾಲ್​ ಮಾಡುವ ಪ್ರಯೋಜನ ಕೂಡ ಲಭ್ಯವಾಗಲಿದೆ.


    ವೊಡಾಫೋನ್‌ ಐಡಿಯಾ 179ರೂ.ಪ್ರಿಪೇಯ್ಡ್‌ ಪ್ಲ್ಯಾನ್:


    ವಿಐ ಟೆಲಿಕಾಂನ ಈ ಪ್ರಿಪೇಯ್ಡ್‌ ಪ್ಲ್ಯಾನ್​ನಲ್ಲಿ ಗ್ರಾಹಕರು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ನೀಡಲಿದೆ. ಇನ್ನು ಈ ಯೋಜನೆಯಲ್ಲಿ ಅನ್ಲಿಮಿಟೆಡ್​ ವಾಯ್ಸ್​ ಕಾಲ್​ ಪ್ರಯೋಜನ ಹಾಗೂ 300 ಎಸ್​​ಎಮ್​ಎಸ್​ ಸೌಲಭ್ಯ ದೊರೆಯಲಿದೆ. ಜೊತೆಗೆ ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ 2ಜಿಬಿ ಡೇಟಾ ಪ್ರಯೋಜನ ಸಹ ಲಭ್ಯವಾಗಲಿದೆ.


    ಇದನ್ನೂ ಓದಿ: ದೇಶದ ಮೊಬೈಲ್​ ಡೌನ್​ಲೋಡ್​ ವೇಗದಲ್ಲಿ ಪ್ರಗತಿ! ವರದಿಯಲ್ಲಿ ಭಾರತಕ್ಕೆ 79ನೇ ಸ್ಥಾನ

    ವೊಡಾಫೋನ್‌ ಐಡಿಯಾ 195ರೂ.ಪ್ರಿಪೇಯ್ಡ್‌ ಪ್ಲಾನ್‌:




    ವೊಡಫೋನ್​ ಐಡಿಯಾ ಪರಿಚಯಿಸುವ ಅಗ್ಗದ ಪ್ಲ್ಯಾನ್​​ಗಳಲ್ಲಿ ಇದೂ ಸಹ ಒಂದಾಗಿದೆ. ಈ ಪ್ಲಾನ್‌ ಒಂದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಅವಧಿಯಲ್ಲಿ ದೈನಂದಿನ ಅನಿಯಮಿತ ಕರೆ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ 300 ಎಸ್​ಎಮ್​ಎಸ್​ ಮತ್ತು ಒಟ್ಟು ಅವಧಿಗೆ 2ಜಿಬಿ ಡೇಟಾ ಸೌಲಭ್ಯ ದೊರೆಯಲಿದೆ. ಈ ಪ್ಲ್ಯಾನ್ ಅನ್ನು ನೀವು ವಿಐ ಅಪ್ಲಿಕೇಶನ್‌ ಮೂಲಕ ರೀಚಾರ್ಜ್‌ ಮಾಡಿದರೆ 2ಜಿಬಿ ಹೆಚ್ಚುವರಿ ಡೇಟಾ ಪ್ರಯೋಜನ ಸಿಗಲಿದೆ.


    Published by:Prajwal B
    First published: