ChatGPT vs Google Bard -ಇವೆರಡರಲ್ಲಿ ಯಾವುದು ಉತ್ತಮ?

ಚಾಟ್​ಜಿಪಿಟಿ ಮತ್ತು ಗೂಗಲ್ ಬಾರ್ಡ್​

ಚಾಟ್​ಜಿಪಿಟಿ ಮತ್ತು ಗೂಗಲ್ ಬಾರ್ಡ್​

ಚಾಟ್​ಜಿಪಿಟಿ ಟೆಕ್ನಾಲಜಿ ನವೆಂಬರ್​ನಲ್ಲಿ ಪ್ರಾರಂಭವಾಗಿದ್ದು, ಇದೀಗ ಇದಕ್ಕೆ ಪ್ರತಿಸ್ಪರ್ಧಿಯಾಗಿರುವ ಗೂಗಲ್​ ಮತ್ತೆ ಗೂಗಲ್ ಬಾರ್ಡ್​ ಎಂಬ ಟೆಕ್ನಾಲಜಿಯನ್ನು ಅಭಿವೃದ್ಧಿಪಡಿಸಿದೆ. ಹಾಗಿದ್ರೆ ಇವೆರಡರಲ್ಲಿ ಯಾವುದು ಉತ್ತಮ ಎಂದು ಈ ಲೇಖನದಲ್ಲಿ ಓದಿ.

  • Trending Desk
  • 3-MIN READ
  • Last Updated :
  • New Delhi, India
  • Share this:

    ಓಪನ್ ಎಐ (OpenAI) ಮೂಲಕ ಚಾಟ್‌ಜಿಪಿಟಿ ನವೆಂಬರ್ 2022 ರಲ್ಲಿ ಪ್ರಾರಂಭವಾಯಿತು ಹಾಗೂ ಈ ಟೆಕ್ನಾಲಜಿ ಇಂಟರ್ನೆಟ್‌ನಲ್ಲಿ ಹೊಸ ಸಂಚಲವನ್ನೇ ಉಂಟುಮಾಡಿತು. ಇದೀಗ ಗೂಗಲ್ (Google) ತನ್ನದೇ ಆದ AI ಚಾಲಿತ ಚಾಟ್‌ಬಾಟ್ ಅನ್ನು ಅನಾವರಣಗೊಳಿಸಿದೆ. ಬಳಕೆದಾರರ ಪ್ರಶ್ನೆಗಳಿಗೆ ಉತ್ತರಿಸುವ ಚಾಟ್‌ಬಾಟ್ ತನ್ನಲ್ಲಿರುವ ಯಂತ್ರ ಕಲಿಕಾ ಮಾಡೆಲ್‌ನಿಂದ ವಿಷಯವನ್ನು ಉತ್ಪಾದಿಸುತ್ತದೆ. ಪ್ರಶ್ನೆಗಳಿಗೆ ಉತ್ತರವನ್ನು ಚಾಟ್‌ಬಾಟ್ (Chatbot) ಸ್ವಯಂಚಾಲಿತವಾಗಿ ಉತ್ಪಾದಿಸುತ್ತದೆ.


    ಓಪನ್‌ಎಐ ಚಾಟ್‌ಜಿಪಿಟಿಯನ್ನು ಪ್ರಾರಂಭಿಸಿದ ನಂತರ ಜನರು ಜನರು ವ್ಯಾಪಾರ, ಶಿಕ್ಷಣ ಮತ್ತು ವೈಯಕ್ತಿಕ ಉದ್ದೇಶಗಳಿಗಾಗಿ ಎಐ-ರಚಿಸಿದ ವಿಷಯವನ್ನು ಬಳಸಲಾರಂಭಿಸಿದರು.


    ಪರಿಶೀಲನೆ ಮುಖ್ಯ ಎಂದು ಸೂಚಿಸಿದ ತಜ್ಞರು


    ಎಐ ರಚಿಸಿದ ವಿಷಯಗಳನ್ನು ಬಳಸುವ ಮೊದಲು ಪರಿಶೀಲನೆ ನಡೆಸಬೇಕು ಎಂಬುದು ತಜ್ಞರ ಸಲಹೆಯಾಗಿದೆ. ಏಕೆಂದರೆ ತಪ್ಪಾದ ಡೇಟಾ ಮೂಲಗಳಿಂದ ಇದು ವಿಷಯವನ್ನು ಸಂಗ್ರಹಿಸಲೂಬಹುದು ಹಾಗಾಗಿ ಅದು ಉತ್ತರವನ್ನು ಗೊಂದಲಗೊಳಿಸುವ ಪ್ರಮೇಯವೂ ಇರುತ್ತದೆ ಎಂದು ಎಐ ತಜ್ಞರು ಎಚ್ಚರಿಸಿದ್ದಾರೆ. ಹೀಗಾಗಿ ವಿಷಯವನ್ನು ಉತ್ಪಾದಿಸುವ ಈ ಕ್ರಮದಲ್ಲಿ ಅನುಕೂಲ ಅನಾನುಕೂಲ ಎರಡೂ ಇದೆ ಎಂಬುದಾಗಿ ತಜ್ಞರು ಸೂಚಿಸಿದ್ದಾರೆ.


    ಗೂಗಲ್‌ನ ಚಾಟ್‌ಬಾಟ್ ಬಾರ್ಡ್


    ಮೈಕ್ರೋಸಾಫ್ಟ್ ಕೂಡ ಕೃತಕ ಬುದ್ಧಿಮತ್ತೆ ಸಾಮರ್ಥ್ಯಗಳನ್ನು ಹೆಚ್ಚಿಸುವ ಸಲುವಾಗಿ ಓಪನ್‌ಎಐ ನೊಂದಿಗೆ ಬಹುವರ್ಷದ ಸಹಯೋಗವನ್ನು ಘೋಷಿಸಿದೆ.


    ಇದನ್ನೂ ಓದಿ: ಫ್ಲಿಪ್​ಕಾರ್ಟ್​​ ಹಾರ್ಟ್​​ ಡೇಸ್​ ಸೇಲ್​! ಸ್ಮಾರ್ಟ್​​ಫೋನ್​ಗಳ ಮೇಲೆ ಬಂಪರ್ ಆಫರ್​


    ಚಾಟ್‌ಜಿಪಿಟಿ (ChatGPT) ಗೆ ಗೂಗಲ್‌ನ ಉತ್ತರವು ಚಾಟ್‌ಬಾಟ್ ಬಾರ್ಡ್ ಆಗಿದೆ. ಚಾಟ್‌ಬಾಟ್ ಬಾರ್ಡ್ ಇನ್ನು ಪರಿಶೀಲನೆಯ ಹಂತದಲ್ಲಿದ್ದು ಫೆಬ್ರವರಿ ಅಂತ್ಯಕ್ಕೆ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದೆ.


    ಚಾಟ್‌ಜಿಪಿಟಿ ಎಂದರೇನು?


    ಚಾಟ್‌ಜಿಪಿಟಿ ಎಂಬುದು ಕೃತಕ ಬುದ್ಧಿಮತ್ತೆ ಚಾಲಿತ ಚಾಟ್‌ಬಾಟ್ ಆಗಿದ್ದು ಯಂತ್ರ ಕಲಿಕೆಯನ್ನು ಬಳಸಿಕೊಂಡು ಬಳಕೆದಾರರು ಕೇಳುವ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುತ್ತದೆ.


    ಓಪನ್ ಎಐ ನವೆಂಬರ್ 30, 2022 ರಂದು ಚಾಟ್‌ಜಿಪಿಟಿಯನ್ನು ಬಿಡುಗಡೆ ಮಾಡಿದೆ. ಸಂಸ್ಥೆಯ ಸಿಇಒ ಸ್ಯಾಮ್ ಆಲ್ಟ್‌ಮನ್ ಪ್ರಕಾರ, ಐದು ದಿನಗಳಲ್ಲಿ ಚಾಟ್‌ಜಿಪಿಟಿ 1 ಮಿಲಿಯನ್ ಬಳಕೆದಾರರನ್ನು ತಲುಪಿದೆ.


    ಚಾಟ್‌ಜಿಪಿಟಿ, ಜಿಪಿಟಿ-3 ಭಾಷಾ ಮಾದರಿಯನ್ನು ಬಳಸಿಕೊಳ್ಳುತ್ತದೆ ಹಾಗೂ ಇಂಟರ್ನೆಟ್‌ನಿಂದ ಮಾನವ ರಚಿತ ಪಠ್ಯವನ್ನು ಬಳಸಿಕೊಂಡು ತರಬೇತಿ ಪಡೆದುಕೊಂಡಿದೆ. ಬಳಕೆದಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆಗಳನ್ನು ರಚಿಸಲು ಈ ಭಾಷಾ ಮಾದರಿಯನ್ನು ಚಾಟ್‌ಜಿಪಿಟಿ ಬಳಸುತ್ತದೆ.


    ಚಾಟ್​ಜಿಪಿಟಿ ಮತ್ತು ಗೂಗಲ್ ಬಾರ್ಡ್​


    ಕೆಳಗಿನವುಗಳು ಚಾಟ್‌ಜಿಪಿಟಿಗಾಗಿ ಜನಪ್ರಿಯ AI- ರಚಿತ ವಿಷಯದ ಉದಾಹರಣೆಗಳಾಗಿವೆ:


    ಲಿಖಿತ ಕೋಡ್;


    ಉತ್ಪನ್ನ ವಿವರಣೆಗಳು;


    ಬ್ಲಾಗ್ ಪೋಸ್ಟ್‌;


    ಇಮೇಲ್ ಡ್ರಾಫ್ಟ್;


    ಟ್ರಾನ್ಸ್‌ಕ್ರಿಪ್ಟ್ಸ್, ಮೀಟಿಂಗ್ಸ್ ಮತ್ತು ಪಾಡ್‌ಕಾಸ್ಟ್‌ಗಳ ಸಾರಾಂಶಗಳು;


    ಸಂಕೀರ್ಣ ವಿಷಯಗಳ ಸರಳ ವಿವರಣೆಗಳು;


    ಕಾನೂನು ಸಂಕ್ಷಿಪ್ತತೆಗಳು;


    ಅನುವಾದಗಳು;


    ಹಾಸ್ಯಗಳು ಅಥವಾ ಮೇಮ್ಸ್; ಮತ್ತು


    ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು.


    ಬಾರ್ಡ್ ಎಂದರೇನು?


    ಇಂಟರ್‌ನೆಟ್‌ನಿಂದ ಪ್ರತಿಕ್ರಿಯೆಗಳನ್ನು ಸಂಗ್ರಹಿಸಲು ಬಾರ್ಡ್ ಡೈಲಾಗ್ ಆ್ಯಪ್‌ಗಳಿಗಾಗಿ Google ನ ಭಾಷಾ ಮಾದರಿಯನ್ನು ಬಳಸುತ್ತದೆ. ಈ ಭಾಷಾ ಮಾದರಿಯ ಮೂಲಕ ಬಾರ್ಡ್ ಸಾಮಾನ್ಯ ಗೂಗಲ್ ಹುಡುಕಾಟಕ್ಕಿಂತ ಹೆಚ್ಚಿನ ವಿವರಗಳನ್ನು ಬಳಕೆದಾರರಿಗೆ ಒದಗಿಸುತ್ತದೆ. ಬಾರ್ಡ್ ಅನ್ನು ಪ್ರಸ್ತುತ ಬೀಟಾದಲ್ಲಿ ಪರೀಕ್ಷಿಸಲಾಗುತ್ತಿದೆ.


    ಅಲೆಕ್ಸಾ ಮತ್ತು ಸಿರಿಯಂತಹ ಡಿಜಿಟಲ್ ಅಸಿಸ್ಟೆಂಟ್‌ಗಳಂತೆ, ಬಾರ್ಡ್‌ನ ಮುಖ್ಯ ಗುರಿಯು ಸರ್ಚ್ ಎಂಜಿನ್ ಫಲಿತಾಂಶಗಳ ಪುಟಕ್ಕಿಂತ ಸರಳ ಉತ್ತರದಲ್ಲಿ ಮಾಹಿತಿಯನ್ನು ಪಡೆದುಕೊಳ್ಳುವುದಾಗಿದೆ. ಬಾರ್ಡ್ ಕೂಡ ಪರ್ಸನಲ್ ಅಸಿಸ್ಟೆಂಟ್‌ನಂತೆ ಕಾರ್ಯನಿರ್ವಹಿಸುತ್ತದೆ ಅಂದರೆ ರಜಾದಿನಗಳನ್ನು ಆಯೋಜಿಸುವುದು, ಪ್ರಸ್ತುತ ರಿಸರ್ವೇಶನ್‌ಗಳನ್ನು ಹುಡುಕುವುದು ಹಾಗೂ ಮೀಲ್ ಪ್ಲಾನಿಂಗ್ ಇತ್ಯಾದಿ.


    ಚಾಟ್‌ಜಿಪಿಟಿ ವರ್ಸಸ್ ಬಾರ್ಡ್: ಯಾವುದು ಉತ್ತಮ?


    ಚಾಟ್‌ಜಿಪಿಟಿ ಹಾಗೂ ಬಾರ್ಡ್ ಸಮಾನ ರೀತಿಯ ಸೇವೆಗಳನ್ನು ಒದಗಿಸುತ್ತದೆ ಅಂದರೆ ಮಾನವ ರೀತಿಯ ಪ್ರತಿಕ್ರಿಯೆ ಪಡೆದುಕೊಳ್ಳಲು ಬಳಕೆದಾರರು ಪ್ರಶ್ನೆಯನ್ನು ಟೈಪ್ ಮಾಡುತ್ತಾರೆ. ಮೈಕ್ರೋಸಾಫ್ಟ್ ಫೆಬ್ರವರಿ 2023 ರಲ್ಲಿ ಚಾಟ್‌ಜಿಪಿಟಿ ಬಳಸಿಕೊಂಡು ಸ್ವಂತ ಚಾಟ್‌ಬಾಟ್‌ಗಳನ್ನು ರಚಿಸಲು ಹಾಗೂ ದೊಡ್ಡ ಸಂಸ್ಥೆಗಳಿಗೆ ಸೇವೆಯನ್ನು ಕಸ್ಟಮೈಸ್ ಮಾಡುವ ತಂತ್ರಜ್ಞಾನ ಬಿಡುಗಡೆ ಮಾಡುವುದಾಗಿ ಘೋಷಿಸಿತು.




    ಮೈಕ್ರೋಸಾಫ್ಟ್ AI-ಚಾಲಿತ ಹುಡುಕಾಟ ಕಾರ್ಯಗಳನ್ನು ಬಿಂಗ್ ಮತ್ತು ಎಡ್ಜ್‌ಗೆ ಸಂಯೋಜಿಸುತ್ತದೆ ಹಾಗೂ ಚಾಟ್ ಅನುಭವದ ಜೊತೆಗೆ ಹುಡುಕಾಟಗಳನ್ನು ನಡೆಸಲು ಬಳಕೆದಾರರಿಗೆ ಸಹಾಯ ಮಾಡುತ್ತದೆ.


    ತನ್ನ ಸರ್ಚ್ ಇಂಜಿನ್‌ಗಳಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಚಾಟ್‌ಬಾಟ್ ಅನ್ನು ಯಾವಾಗ ಸೇರಿಸಲಿದೆ ಎಂಬುದನ್ನು ಗೂಗಲ್‌ ಇನ್ನೂ ಅಧಿಕೃತಗೊಳಿಸಿಲ್ಲ. ಚಾಟ್‌ಜಿಪಿಟಿ ಹಾಗೂ ಬಾರ್ಡ್ ನಡುವಿನ ಮೂಲ ವ್ಯತ್ಯಾಸವೆಂದರೆ ಡೇಟಾ ಮೂಲವಾಗಿದೆ. ಬಾರ್ಡ್ ನಿರಂತರವಾಗಿ ಇಂಟರ್ನೆಟ್‌ನಿಂದ ಮಾಹಿತಿಯನ್ನು ಸಂಗ್ರಹಿಸುತ್ತದೆ ಹಾಗೂ ಅದು ಅಪ್‌ ಟು ಡೇಟ್ ಆಗಿದೆ ಎಂಬುದನ್ನು ಖಚಿತಪಡಿಸುತ್ತದೆ.


    ಚಾಟ್‌ಜಿಪಿಟಿ ಡೇಟಾ ಮೂಲಗಳು 2021 ರಲ್ಲಿ ಕೊನೆಗೊಳ್ಳುತ್ತವೆ ಹಾಗಾಗಿ ಅದು ಇತ್ತೀಚಿನ ಸಂಶೋಧನೆ ಮತ್ತು ಮಾಹಿತಿಗೆ ಮಾತ್ರ ಸೀಮಿತವಾಗಿವೆ. ಬಾರ್ಡ್ ನೈಜ ಸಮಯದಲ್ಲಿ ಮಾಹಿತಿಯನ್ನು ಸಂಗ್ರಹಿಸಲು ಹೆಚ್ಚಿನ ಡೇಟಾವನ್ನು ಹೊಂದಿರುತ್ತದೆ. ಬಾರ್ಡ್ ಹೆಚ್ಚಿನ ಮಾಹಿತಿಯನ್ನು ದೊಡ್ಡ ಭಾಗಗಳಲ್ಲಿ ರಚಿಸುತ್ತದೆ, ಆದರೆ ಚಾಟ್‌ಜಿಪಿಟಿ ಒಂದೇ ಪಠ್ಯ ಪ್ರಾಂಪ್ಟ್‌ನಲ್ಲಿ ವಿಷಯವನ್ನು ಉತ್ಪಾದಿಸುತ್ತದೆ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು