ಇದು ಟೆಕ್ನಾಲಜಿ ಯುಗ. ಹೊಸ ಹೊಸ ಟೆಕ್ನಾಲಜಿಗಳನ್ನು (Technology) ಟೆಕ್ ಕಂಪೆನಿಗಳು ದಿನ ಕಳೆದಂತೆ ಅಭಿವೃದ್ಧಿ ಪಡಿಸುತ್ತಲೇ ಇರುತ್ತದೆ. ಈಗಂತೂ ಜಾಗತಿಕ ಟೆಕ್ನಾಲಜಿ ಮಾರುಕಟ್ಟೆಯಲ್ಲಿ ಚಾಟ್ಜಿಪಿಟಿ (ChatGPT) ಭಾರೀ ಸದ್ದು ಮಾಡುತ್ತಿದೆ. ಚಾಟ್ಜಿಪಿಟಿ ಎಂಬುದು ಒಂದು ಆಧುನಿಕ ಯುಗದಲ್ಲಿ ಬಿಡುಗಡೆಯಾದಂತಹ ಹೊಸ ತಂತ್ರಜ್ಞಾನವಾಗಿದೆ. ಎಐ ತಂತ್ರಜ್ಞಾನದ ಮೂಲಕ ಅಭಿವೃದ್ಧಿ ಪಡಿಸಲಾದ ಈ ಸಿಸ್ಟಮ್ ಇದೀಗ ಭಾರೀ ಸದ್ದಿನಲ್ಲಿದೆ. ಅಂದಹಾಗೆ ಈ ತಂತ್ರಜ್ಞಾನವನ್ನು ಬೆಂಬಲಿಸುವ ಕೆಲ ಟೆಕ್ನಾಲಜಿಯನ್ನು ಕೆಲ ಕಾಲೇಜುಗಳಲ್ಲಿ ಬ್ಯಾನ್ ಮಾಡಲಾಗಿದೆ. ಟೆಕ್ ಕಂಪೆನಿಗಳು (Tech Company) ಇದೇ ರೀತಿಯ ಹಲವು ಆವಿಷ್ಕಾರಗಳನ್ನು ಮಾಡುತ್ತಿರುತ್ತದೆ. ಆದರೆ ಇದರಿಂದ ಕೆಲವೊಮ್ಮೆ ಲಾಭಗಳು ಹೆಚ್ಚಿರುತ್ತದೆ. ಆದರೆ ಕೆಲವೊಂದು ಬಾರಿ ನಷ್ಟಗಳು ಕೂಡ ಸಂಭವಿಸುತ್ತದೆ.
ಚಾಟ್ಜಿಪಿಟಿ ಎಂಬುದು ಮಾನವರಂತೆಯೇ ಕಾರ್ಯನಿರ್ವಹಿಸುವಂತಹ ಒಂದು ತಂತ್ರಜ್ಞಾನವಾಗಿದೆ. ಇದು ವೆಬ್ ಬಳಕೆದಾರರು ಯಾವುದೇ ಪ್ರಶ್ನೆಗಳನ್ನು ಕೇಳಿದ್ರೂ ಸರಿಯಾದ ಉತ್ತರವನ್ನು ವಾಯ್ಸ್ ಮೂಲಕ ನೀಡುತ್ತದೆ. ಆದರೆ ಈ ಟೆಕ್ನಾಲಜಿಯನ್ನು ಇದೀಗ ಬೆಂಗಳೂರಿನ ಕೆಲ ಕಾಲೇಜುಗಳಲ್ಲಿ ಬ್ಯಾನ್ ಮಾಡಲಾಗಿದೆ ಎಂದು ಸುದ್ದಿಯಾಗಿದೆ. ಕಾಲೇಜಿನ ಈ ನಿರ್ಧಾರಕ್ಕೆ ಕಾರಣಗಳೇನು ಎಂಬುದಕ್ಕೆ ಉತ್ತರ ಈ ಲೇಖನದಲ್ಲಿದೆ.
ಚಾಟ್ಜಿಪಿಟಿ ಎಂದರೇನು?
ಚಾಟ್ಜಿಪಿಟಿ ಎಂಬದು ಇದೊಂದು ಎಐ ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುವಂತಹ ಚಾಟ್‌ಬಾಟ್ ಆಗಿದ್ದು, ಇದನ್ನು ಓಪನ್ ಎಐ ಎಂಬ ಸಂಸ್ಥೆ ಪರಿಚಯಿಸಿದೆ. ಅಂತೆಯೇ ಮನುಷ್ಯನ ಅಲೋಚನೆಗೆ ಸರಿಸಮನಾಗಿ ಚಾಟ್ಜಿಪಿಟಿ ಯೋಚನೆ ಮಾಡಲಿದ್ದು, ಇದರ ಮೂಲಕ ನೀವು ಏನೇ ಪ್ರಶ್ನೆ ಕೇಳಿದರೂ ಸಹ ಬಹುಪಾಲು ಸರಿಯಾದ ವಿವರ ಇರುವ ಉತ್ತರವನ್ನು ನೀಡುತ್ತದೆ.
ವಿದ್ಯಾರ್ಥಿಗಳಿಗೆ ಇದರಿಂದೇನು ಲಾಭ?
ಕಾಲೇಜು ವಿಭಾಗಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ಅಸೈನ್ಮೆಂಟ್ಗಳನ್ನು ನೀಡುತ್ತಿರುತ್ತಾರೆ. ಆದರೆ ಇದು ವಿದ್ಯಾರ್ಥಿಗಳ ಶಿಕ್ಷಣವನ್ನು ಅಭವೃದ್ಧಿ ಪಡಿಸುವ ದೃಷ್ಟಿಯಿಂದ ನೀಡಲಾಗುತ್ತದೆ. ಆದರೆ ಕೆಲ ವಿದ್ಯಾರ್ಥಿಗಳು ಶಿಕ್ಷಕರು ನೀಡುವಂತಹ ಆ ಅಸೈನ್ಮೆಂಟ್ಗಳನ್ನು ತಾವಾಗಿಯೇ ಸ್ವತಃ ಆಲೋಚಿಸಿ ಬರೆಯುವ ಬದಲು ಚಾಟ್ಜಿಪಿಟಿಯ ಸಹಾಯದಿಂದ ಉತ್ತರ ಪಡೆದುಕೊಳ್ಳುತ್ತಿದ್ದಾರೆ. ಈ ಮೂಲಕ ತಮ್ಮ ಸ್ವಂತ ಯೋಚನೆಯಿಂದ ಬರೆಯದೆ ಚಾಟ್ಜಿಪಿಟಿ ನೀಡ ಉತ್ತರವನ್ನೇ ಶಿಕ್ಷಕರಿಗೆ ಒಪ್ಪಿಸುತ್ತಿದ್ದಾರೆ ಎಂಬ ದೂರುಗಳು ಬರುತ್ತಿವೆ. ಪ್ರಮುಖ ವಿಷಯ ಎಂದರೆ ಕೇವಲ ಚಾಟ್ಜಿಪಿಟಿ ಮಾತ್ರವಲ್ಲದೆ ಗಿಥಬ್ ಕಾಪಿಲಟ್ ಮತ್ತು ಬ್ಲಾಕ್‌ಬಾಕ್ಸ್‌ನಂತಹ ಎಐ ಪ್ಲಾಟ್‌ಫಾರ್ಮ್‌ಗಳು ಸಹ ಈ ಕೆಲಸ ಮಾಡುತ್ತಿವೆ.
ಇದಲ್ಲದೆ ಇದು ಪ್ರಾಂಪ್ಟ್ ಮಾಡುವುದರಿಂದ ಕೋಡಿಂಗ್ ಆಗಿರಬಹುದು, ಕವನಗಳಾಗಿರಬಹುದು ಇವೆಲ್ಲವನ್ನು ಕೇಳಲು ತುಂಬಾನೇ ಸಹಕಾರಿಯಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಈ ಕಾಲೇಜಿನ ವಿದ್ಯಾಭ್ಯಾಸದ ಕೆಲಸಗಳಿಗೆ ಹೆಚ್ಚಿನ ಶ್ರಮ ಪಡುವುದಿಲ್ಲ.
ಯಾವೆಲ್ಲಾ ಕಾಲೇಜುಗಳಲ್ಲಿ ಬ್ಯಾನ್?
ಬೆಂಗಳೂರಿನ ಆರ್‌ವಿ ವಿಶ್ವವಿದ್ಯಾನಿಲಯ, ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ-ಬೆಂಗಳೂರು ಮತ್ತು ದಯಾನಂದ ಸಾಗರ್ ವಿಶ್ವವಿದ್ಯಾನಿಲಯಗಳಲ್ಲಿ ಈ ಚಾಟ್ಜಿಪಿಟಿಯನ್ನು ಸಂಪೂರ್ಣವಾಗಿ ವಿರೋಧ ಮಾಡಲಾಗುತ್ತಿದೆ. ಈ ಮೂಲಕ ವಿದ್ಯಾರ್ಥಿಗಳ ಕಳ್ಳ ಮಾರ್ಗಕ್ಕೆ ಬ್ರೇಕ್ ಹಾಕಲು ಸಂಸ್ಥೆಗಳು ಈ ನಿರ್ಧಾರವನ್ನು ಕೈಗೊಂಡಿದೆ.
ಆರ್‌ವಿ ವಿಶ್ವವಿದ್ಯಾನಿಲಯದ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ಶಾಲೆಯ ಡೀನ್ ಸಂಜಯ್ ಚಿಟ್ನಿಸ್ ಈ ಸಂಬಂಧ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಸಲಹೆಯನ್ನು ನೀಡಿದ್ದಾರೆ. ಕೃತಕ ಬುದ್ಧಿಮತ್ತೆ ಅಥವಾ ಎಐ ತಂತ್ರಜ್ಞಾನದ ಅಡಿಯಲ್ಲಿ ಕಾರ್ಯನಿರ್ವಹಿಸುವ ಚಾಟ್ಜಿಪಿಟಿ, ಗಿಥಬ್ ಕಾಪಿಲಟ್ ಮತ್ತು ಬ್ಲಾಕ್‌ಬಾಕ್ಸ್ ಗಳನ್ನು ಯಾವುದೇ ಕಾರಣಕ್ಕೂ ಬಳಕೆ ಮಾಡಬಾರದು ಎಂದು ತಿಳಿಸಿದ್ದಾರೆ. ಈ ಚಾಟ್ಜಿಪಿಟಿ ಬಳಕೆ ಮಾಡುವವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
ಸಂಸ್ಥೆಯ ನಿರ್ದೇಶಕರ ಅಭಿಪ್ರಾಯ
ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಬೆಂಗಳೂರು (IIIT-B) ಚಾಟ್ಜಿಪಿಟಿಯನ್ನು ಬಳಕೆ ಮಾಡುತ್ತಿರುವ ಬಗ್ಗೆ ಸರಿಯಾಗಿ ಗಮನಹರಿಸಲು ಒಂದು ಸಮಿತಿಯನ್ನು ರಚನೆ ಮಾಡಿದೆ. ಈ ಚಾಟ್ಜಿಪಿಟಿ ಕುರಿತು ಸಂಸ್ಥೆಯ ನಿರ್ದೇಶಕರಾದ ದೇಬಬ್ರತ ದಾಸ್ ಪ್ರತಿಕ್ರಿಯಿಸಿ, ಚಾಟ್ಜಿಪಿಟಿ ಯನ್ನು ತುಂಬಾ ಜನರು ಬಳಕೆ ಮಾಡುತ್ತಿದ್ದಾರೆ.
ಇದನ್ನೂ ಓದಿ: 20 ಸಾವಿರದೊಳಗಿನ, ಮಾರುಕಟ್ಟೆಯಲ್ಲಿರುವ ಬೆಸ್ಟ್ ಸ್ಮಾರ್ಟ್ಫೋನ್ಗಳಿವು!
ಇದು ದಿನನಿತ್ಯದ ದಾಖಲೆ, ಸರಳ ಪ್ರೋಗ್ರಾಮಿಂಗ್ ಇತ್ಯಾದಿಗಳನ್ನು ತಿಳಿಯುವಲ್ಲಿ ತುಂಬಾನೇ ಸಹಾಯಕವಾಗುತ್ತದೆ. ಆದರೆ ನಮ್ಮ ಸಂಸ್ಥಯ ಕೆಲವೊಂದು ಕಾರ್ಯತಂತ್ರಗಳು ಭಾರೀ ಆಳವಾಗಿರುವುದರಿಂದ ಈ ಸಂದರ್ಭದಲ್ಲಿ ಇದು ಉಪಯೋಗಕ್ಕರ ಬರುವುದಿಲ್ಲ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ