ಸದ್ಯ ಟೆಕ್ ವಲಯದಲ್ಲಿ ಭಾರೀ ಸದ್ದಿಲ್ಲಿರುವ ಸುದ್ದಿಯೆಂದರೆ ಚಾಟ್ಜಿಪಿಟಿ (ChatGPT). ಇದು ಇತ್ತೀಚೆಗೆ ಟೆಕ್ನಾಲಜಿ ಯುಗವನ್ನು ಒಮ್ಮೆ ತಿರುಗಿ ನೋಡುವಂತೆ ಮಾಡಿದಂಹ ಹೊಸ ಫೀಚರ್ ಎಂದರೆ ತಪ್ಪಾಗದು. ಇತ್ತೀಚಿನ ದಿನಗಳಲ್ಲಿ ಟೆಕ್ನಾಲಜಿ ಭಾರೀ ಪ್ರಗತಿಯನ್ನು ಕಾಣುತ್ತಿದೆ. ಇದಕ್ಕೆ ಕಾರಣ ಇದು ಬಳಕೆ ಮಾಡುತ್ತಿರುವಂತಹ ಹೊಸ ಹೊಸ ತಂತ್ರಜ್ಞಾನಗಳು (Technology) ಅಂತಾನೇ ಹೇಳ್ಬಹುದು. ಚಾಟ್ಜಿಪಿಟಿ ಎಂಬುದು ಎಐ (AI) ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುವಂತಹ ಹೊಸ ಚಾಟ್‌ಬಾಟ್ (Chat bot) ಆಗಿದೆ. ಇದು ಮನುಷ್ಯರಂತೆಯೇ ಆಲೋಚಿಸುವಂತಹ ಟೆಕ್ನಾಲಜಿಯನ್ನು ಒಳಗೊಂಡಿದೆ. ಈ ತಂತ್ರಜ್ಞಾನವನ್ನು ಬಳಕೆದಾರರು ಯಾವುದೇ ಪ್ರಶ್ನೆಗಳನ್ನು ಕೇಳಿದ್ರು ಪಠ್ಯ ರೂಪದಲ್ಲಿ ನಿಖರವಾದ ಉತ್ತರವನ್ನು ನೀಡುತ್ತದೆ.
ಓಪನ್ಎಐ ಕಂಪೆನಿ ಬಿಡುಗಡೆ ಮಾಡಿದ ಚಾಟ್ಜಿಪಿ ಎಂಬ ಟೂಲ್ ಇತ್ತೀಚೆಗೆ ಟೆಕ್ ಮಾರುಕಟ್ಟೆಯಲ್ಲಿ ಭಾರೀ ಸಂಚಲನವನ್ನು ಮೂಡಿಸಿದೆ. ಇದು ವಿದ್ಯಾರ್ಥಿಗಳು ಅಥವಾ ಯಾರೇ ಆಗಲಿ ತಮಗೆ ಬೇಕಾದ ಯಾವುದೇ ಪ್ರಶ್ನೆಯನ್ನು ಕೇಳಿದರೂ ಮನುಷ್ಯರಂತೆಯೇ ಆಲೋಚಿಸಿ ಉತ್ತರ ನೀಡುತ್ತದೆ. ಆದರೆ ಇದೀಗ ಈ ಕಂಪೆನಿ ಹೊಸ ಟೂಲ್ ಒಂದನ್ನು ಪರಿಚಯಿಸಿದ್ದು, ಬಳಕೆದಾರರನ್ನು ಗಾಬರಿಯಾಗುವಂತೆ ಮಾಡಿದೆ. ಹಾಗಿದ್ರೆ ಈ ಹೊಸ ಟೂಲ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಬೇಕಾದ್ರೆ ಈ ಲೇಖನವನ್ನು ಫುಲ್ ಓದಿ.
ದ ಎಐ ಟೆಕ್ಸ್ಟ್ ಕ್ಲಾಸಿಫೈಯರ್ ಟೂಲ್ (The AI Text Classifier)
ಓಪನ್ ಎಐ ಸಂಸ್ಥೆಯು ಇದೀಗ AI ಆಧರಿತ ಕಂಟೆಂಟ್ ಅಥವಾ ಪಠ್ಯವನ್ನು ಪತ್ತೆ ಮಾಡುವ ಹೊಸ ಟೂಲ್ ಅನ್ನು ಬಳಕೆದಾರರಿಗೆ ಪರಿಚಯಿಸಿದೆ. ಈ ಮೂಲಕ ಚಾಟ್ಜಿಪಿಟಿಯಿಂದ ಪಡೆದ ಅಥವಾ ಎಐ ಆಧಾರಿತವಾಗಿ ಪಡೆದ ಕಂಟೆಂಟ್ ಅನ್ನು ಈ ಟೂಲ್ ಮೂಲಕ ಸುಲಭದಲ್ಲಿ ಕಂಡುಹಿಡಿಯಬಹುದು.
ದ ಎಐ ಟೆಕ್ಸ್ಟ್ ಕ್ಲಾಸಿಫೈಯರ್ ಟೂಲ್ ಬಳಸಿಕೊಂಡು AI ಆಧರಿತ ಕಂಟೆಂಟ್ ಅನ್ನು ಪತ್ತೆ ಮಾಡಬೇಕಿದ್ದರೆ, ಡೈಲಾಗ್ ಬಾಕ್ಸ್‌ನಲ್ಲಿ ನೀವು ಚೆಕ್ ಮಾಡಲು ಬಯಸುವ ಕಂಟೆಂಟ್‌ನ ಸುಮಾರು 250 ಪದಗಳನ್ನು ಆ್ಯಡ್ ಮಾಡಿ ಪರಿಶೀಲಿಸಬೇಕಿದೆ. ನೂತನ ಟೂಲ್‌ನಲ್ಲಿ ಕಂಟೆಂಟ್ ಮೂಲ ಪತ್ತೆ ಮಾಡಲು, ಕನಿಷ್ಠ 250 ಪದಗಳ ಇರಬೇಕು. ಇಲ್ಲವೇ ಅದಕ್ಕಿಂತಲೂ ಅಧಿಕ ಪದಗಳಿರಬಹುದು ಎಂದು ಓಪನ್ಎಐ ಸಂಸ್ಥೆ ಹೇಳಿದೆ.
ಭಾಷೆಯಲ್ಲಿ ಬದಲಾವಣೆಯಿದ್ದರೆ ಕಂಡುಹಿಡಿಯಲು ಕಷ್ಟ
ಇನ್ನು ಈ AI ಆಧರಿತವಾಗಿ ಪಡೆದ ಕಂಟೆಂಟ್ ಅಥವಾ ಪಠ್ಯವನ್ನು ಎಡಿಟ್ ಮಾಡಬಹುದಾಗಿದ್ದು, ಒಂದು ವೇಳೆ ಎಡಿಟ್ ಮಾಡಿ ಕಂಟೆಂಟ್ ಅನ್ನು ಚಾಟ್ಜಿಪಿಟಿ ಟೂಲ್ ಮೂಲಕ ಪರಿಶೀಲಿಸಿದರೆ ಅದು ತಪ್ಪಾದ ಮಾಹಿತಿಯನ್ನು ನೀಡಬಹುದು ಎಂದು ಹೇಳಲಾಗಿದೆ.
ಹಾಗೆಯೇ ಮಕ್ಕಳು ಬರೆದ ಪಠ್ಯ ಮತ್ತು ಇಂಗ್ಲೀಷ್ ಭಾಷೆಯಲ್ಲಿಲ್ಲದ ಪಠ್ಯದ ಮೇಲೂ ತಪ್ಪಾಗಿ ಲೇಬಲ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಕ್ಕೆ ಮೂಲ ಕಾರಣವೆಂದರೆ ಓಪನ್ ಎಐ ಸಂಸ್ಥೆ ಪರಿಚಯಿಸಿದ ಈ ಹೊಸ ಟೂಲ್ ಸದ್ಯಕ್ಕೆ ಕೇವಲ ಯುವಜನತೆ ಬರೆಯುವಂತ ಇಂಗ್ಲೀಷ್ ಕಂಟೆಂಟ್ಗಳ ಮೇಲೆ ಮಾತ್ರ ತರಬೇತಿಯನ್ನು ಪಡೆದಿದೆ.
ಚಾಟ್ಜಿಪಿಟಿ ಎಂದರೆ ಏನು?
ಚಾಟ್ಜಿಪಿಟಿ ಎಂಬುದು ಇದೊಂದು ಎಐ ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುವಂತಹ ಚಾಟ್‌ಬಾಟ್ ಆಗಿದ್ದು, ಇದನ್ನು ಓಪನ್ ಎಐ ಎಂಬ ಸಂಸ್ಥೆ ಪರಿಚಯಿಸಿದೆ. ಅಂತೆಯೇ ಮನುಷ್ಯನ ಅಲೋಚನೆಗೆ ಸರಿಸಮನಾಗಿ ಚಾಟ್ಜಿಪಿಟಿ ಯೋಚನೆ ಮಾಡಲಿದ್ದು, ಇದರ ಮೂಲಕ ನೀವು ಏನೇ ಪ್ರಶ್ನೆ ಕೇಳಿದರೂ ಸಹ ಬಹುಪಾಲು ಸರಿಯಾದ ವಿವರ ಇರುವ ಉತ್ತರವನ್ನು ನೀಡುತ್ತದೆ.
ಚಾಟ್ಜಿಪಿಟಿಯನ್ನು ಹೇಗೆ ಬಳಕೆ ಮಾಡುವುದು?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ