ChatGPT ರಚಿಸಿದ ಭಾರತೀಯ ಮಹಿಳೆ! ಇವರ ಹಿನ್ನಲೆ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ

ಓಪನ್ ಎಐ ಸಂಸ್ಥೆಯ ಸಿಟಿಓ ಮೀರಾ ಮೂರ್ತಿ

ಓಪನ್ ಎಐ ಸಂಸ್ಥೆಯ ಸಿಟಿಓ ಮೀರಾ ಮೂರ್ತಿ

ಚಾಟ್​​ಜಿಪಿಟಿ ಎಂಬುದು ಬಳಕೆದಾರರ ಅನುಕೂಲಕ್ಕೆ ಕ್ಷಣಮಾತ್ರದಲ್ಲಿ ಉತ್ತರಿಸುವಂತಹ ಒಂದು ವೆಬ್​ಸೈಟ್​ ಆಗಿದೆ. ಈ ಮೂಲಕ ಬಳಕೆದಾರರಿಗೆ ಬೇಕಾದ ವಿಷಯಗಳನ್ನು ಇದರಲ್ಲಿ ಸರ್ಚ್​ ಮಾಡಬಹುದಾಗಿದೆ. ಆದರೆ ಇದನ್ನೂ ದುರುಪಯೋಗ ಬಳಸಿಕೊಳ್ಳುತ್ತಿದ್ದಾರೆ ಎಂದು ಚಾಟ್​​ಜಿಪಿಟಿಯನ್ನು ರಚಿಸಿದ ಮೀರಾ ಮೂರ್ತಿಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಂದೆ ಓದಿ ...
  • Share this:

    ನವೆಂಬರ್ 2022 ರಲ್ಲಿ ಪ್ರಾರಂಭವಾದಾಗಿನಿಂದ ಚಾಟ್​ಜಿಪಿಟಿ (ChatGPT) ನಿರಂತರವಾಗಿ ಟೆಕ್​ ಮಾರುಕಟ್ಟೆಯಲ್ಲಿ ಭಾರೀ ಮಾತುಕತೆಯಲ್ಲಿದೆ. ಇದರಿಂದ ಆಗುವ ಅಪಾಯಗಳ ಬಗ್ಗೆ ಉದ್ಯಮ ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅನೇಕ ವಿಶ್ವವಿದ್ಯಾನಿಲಯಗಳು, ಕಾಲೇಜುಗಳು ಮತ್ತು ಪ್ರತಿಷ್ಠಿತ ಸಂಸ್ಥೆಗಳು ಈ ಟೆಕ್ನಾಲಜಿಯ ಭಯದಿಂದ ಇದನ್ನು ನಿಷೇಧಿಸಿವೆ, ಇದಕ್ಕೆ ಮೂಲಕ ಕಾರಣ ವಿದ್ಯಾರ್ಥಿಗಳು ಕಂಟೆಂಟ್​ ಅನ್ನು ನಕಲಿ ಮಾಡುವುದಾಗಿದೆ. ಈ ಮಧ್ಯೆ, ಚಾಟ್​ಜಿಪಿಟಿಯನ್ನು ಅಭಿವೃದ್ಧಿಪಡಿಸಿದ ಕಂಪನಿಯಾದ ಓಪನ್​​ ಎಐ (Open AI) ನ ಸಿಟಿಓ ಮೀರಾ ಮೂರ್ತಿ (Meera Murti) ಇತ್ತೀಚೆಗೆ ಚಾಟ್‌ಬಾಟ್‌ಗಳ (ChatBotgpt ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ, ಈ ಮೂಲಕ ಎಐ ಅನ್ನು ಸುಲಭವಾಗಿ ದುರುಪಯೋಗಪಡಿಸಿಕೊಳ್ಳಬಹುದು ಎಂದು ಹೇಳಿದರು.


    ಚಾಟ್​​ಜಿಪಿಟಿ ಎಂಬುದು ಬಳಕೆದಾರರ ಅನುಕೂಲಕ್ಕೆ ಕ್ಷಣಮಾತ್ರದಲ್ಲಿ ಉತ್ತರಿಸುವಂತಹ ಒಂದು ವೆಬ್​ಸೈಟ್​ ಆಗಿದೆ. ಈ ಮೂಲಕ ಬಳಕೆದಾರರಿಗೆ ಬೇಕಾದ ವಿಷಯಗಳನ್ನು ಇದರಲ್ಲಿ ಸರ್ಚ್​ ಮಾಡಬಹುದಾಗಿದೆ. ಆದರೆ ಇದನ್ನೂ ದುರುಪಯೋಗ ಬಳಸಿಕೊಳ್ಳುತ್ತಿದ್ದಾರೆ ಎಂದು ಚಾಟ್​​ಜಿಪಿಟಿಯನ್ನು ರಚಿಸಿದ ಮೀರಾ ಮೂರ್ತಿಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


    ಬಳಕೆದಾರರಿಗೆ ಅನಿಗುಣವಾಗಿ ಮಾಹಿತಿಯನ್ನು ನೀಡುತ್ತದೆ


    ಚಾಟ್‌ಜಿಪಿಟಿ ಎಂಬುದು ಕೃತಕ ಬುದ್ಧಿಮತ್ತೆ (ಎಐ) ಚಾಟ್‌ಬಾಟ್ ಆಗಿದ್ದು ಇದುದು ಬಳಕೆದಾರರ ಇನ್‌ಪುಟ್ ಅನ್ನು ಆಧರಿಸಿ ಪಠ್ಯವನ್ನು ಉತ್ಪಾದಿಸುತ್ತದೆ. ಕೆಲವರು ಎಐ ಅನ್ನು ದುರ್ಬಳಕೆ ಮಾಡಿಕೊಳ್ಳಬಹುದು ಎಂದು ಮೀರಾ ಹೇಳಿದ್ದಾರೆ. ಈ ತಂತ್ರಜ್ಞಾನದ ಜಾಗತಿಕ ಬಳಕೆಯನ್ನು ಹೇಗೆ ನಿಯಂತ್ರಿಸುವುದು ಎಂಬ ಪ್ರಶ್ನೆ ಈಗ ತಂತ್ರಜ್ಞರಲ್ಲಿ ಮೂಡಿದೆ. ಆದರೆ ಇದು ಸಂಪೂರ್ಣವಾಗಿ ಬಳಕೆದಾರರು ಅದನ್ನು ಹೇಗೆ ಬಳಸಲು ಬಯಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.


    ಇದನ್ನೂ ಓದಿ:  ಪ್ರೇಮಿಗಳಿಗೆ ಭರ್ಜರಿ ಆಫರ್​​! ಈ ಪ್ರೊಡಕ್ಟ್​ ಖರೀದಿಸಿ 2 ಉಚಿತ ಸಿನಿಮಾ ಟಿಕೆಟ್ ಪಡೆಯಿರಿ


    ಈ ಬಗ್ಗೆ ಮೀರಾ ಮೂರ್ತಿಯವರ ಅಭಿಪ್ರಾಯ


    ಮೀರಾ ಮೂರ್ತಿ ಅವರ ಪ್ರಕಾರ, ಇದನ್ನು ಸರಿಯಾಗಿ ನಡೆಸಲು ಕಂಪನಿಗೆ ವಿವಿಧ ಮೂಲಗಳಿಂದ ಸಹಾಯ ಬೇಕಾಗುತ್ತದೆ. ಈ ವ್ಯವಸ್ಥೆಗೆ ಹೆಚ್ಚಿನ ಇನ್​ಪುಟ್​ ಅನ್ನು ಬಳಸುವುದು ಅಗತ್ಯವಿರುತ್ತದೆ ಆದರೆ ಅವರ ಗುಂಪಿನಲ್ಲಿ ಹೆಚ್ಚು ಜನರಿಲ್ಲ ಎಂದು ಅವರು ಹೇಳಿದರು. ಆದ್ದರಿಂದ, ಇವರ ಈ ತಂತ್ರಜ್ಞಾನದ ಅಭಿವೃದ್ಧಿಗೆ ನಿಯಂತ್ರಕರು, ಸರ್ಕಾರಗಳ ಮತ್ತು ಬಳಕೆದಾರರ ಸಲಹೆಯ ಅಗತ್ಯವಿರುತ್ತದೆ.


    ಓಪನ್ ಎಐ ಸಂಸ್ಥೆಯ ಸಿಟಿಓ ಮೀರಾ ಮೂರ್ತಿ


    ಮೀರಾ ಮೂರ್ತಿ ಯಾರು?


    ಮೀರಾ ಮೂರ್ತಿ ಅವರು ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ 1988 ರಲ್ಲಿ ಜನಿಸಿದರು. ಮೀರಾ ಅವರ ಪೋಷಕರು ಭಾರತೀಯ ಮೂಲದವರು ಆದರೆ ಮೀರಾ ಸಂಪೂರ್ಣವಾಗಿ ಅಮೆರಿಕಾದಲ್ಲಿ ಹುಟ್ಟಿ ಬೆಳೆದರು. ಮೀರಾ ಮೂರ್ತಿ ಅವರು ಡಾರ್ಟ್‌ಮೌತ್‌ನ ಥೇಯರ್ ಸ್ಕೂಲ್ ಆಫ್ ಇಂಜಿನಿಯರಿಂಗ್‌ನಿಂದ ಪದವಿ ಪಡೆದರು. ಮತ್ತು ಪ್ರಸ್ತುತ OpenAI ನಲ್ಲಿ ಸಂಶೋಧನೆ, ಉತ್ಪನ್ನ ಮತ್ತು ಪಾಲುದಾರಿಕೆಗಳ ಹಿರಿಯ ಉಪಾಧ್ಯಕ್ಷರಾಗಿದ್ದಾರೆ. ಮೀರಾ ಟೆಸ್ಲಾದಲ್ಲಿ ಹಿರಿಯ ಉತ್ಪನ್ನ ನಿರ್ವಾಹಕರಾಗಿಯೂ ಕೆಲಸ ಮಾಡಿದ್ದಾರೆ.


    ಚಾಟ್​ಜಿಪಿಟಿ ಸಹ ತಪ್ಪು ಉತ್ತರಗಳನ್ನು ನೀಡುವ ಸಾಧ್ಯತೆಯಿದೆ


    ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಕೃತಕ ಬುದ್ಧಿಮತ್ತೆ ಕಂಪನಿ OpenAI ಚಾಟ್​​ಜಿಪಿಟಿಯನ್ನು ರಚಿಸಿದೆ. OpenAI ತನ್ನ DALL-E ಡೀಪ್-ಲರ್ನಿಂಗ್ ಮಾದರಿಗೆ ಪ್ರಸಿದ್ಧವಾಗಿದೆ, ಇದು ಪಠ್ಯ ಸೂಚನೆಗಳಿಂದ ಚಿತ್ರಗಳನ್ನು ಸಹ ತೋರಿಸುತ್ತದೆ, ಇದನ್ನು ಪ್ರಾಂಪ್ಟ್ ಎಂದು ಕರೆಯಲಾಗುತ್ತದೆ. ಚಾಟ್‌ಜಿಪಿಟಿಯು ಸಾಮಾನ್ಯವಾಗಿ ತಪ್ಪು ಉತ್ತರಗಳನ್ನು ನೀಡಬಹುದು ಮತ್ತು ಚಾಟ್‌ಬಾಟ್‌ಗಳು ನೀಡುವಂತಹ ಉತ್ತರಗಳು ಹಾನಿ ಸಂಭವಿಸುವಂತಹ ವಿಷಯಗಳಾಗಿರಬಹುದು ಎಂದು ಓಪನ್​​ಎಐ ಸಂಸ್ಥೆ ಒಪ್ಪಿಕೊಂಡಿದೆ.




    ಚಾಟ್​ಜಿಪಿಟಿಯನ್ನು ಹೇಗೆ ಬಳಕೆ ಮಾಡುವುದು?




      • ಮೊದಲಿಗೆ ವೆಬ್​​ಪೇಜ್​ನಲ್ಲಿ ಅಧಿಕೃತ chat.openai.com ಎಂಬ ವೆಬ್‌ಸೈಟ್‌ ಅನ್ನು ಓಪನ್ ಮಾಡಿ.

      • ಬಳಿಕ ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್‌ ನಂಬರ್‌ ಅನ್ನು ಬಳಸಿ ಲಾಗಿನ್ ಮಾಡಬೇಕು.

      • ಇದಲ್ಲದೆ ಇದರಲ್ಲಿ ಬಳಕೆದಾರರು ತಮ್ಮ ವಾಟ್ಸಾಪ್‌ ನಂಬರ್‌ ಅನ್ನು ಸಹ ಬಳಸಬಹುದು.

      • ಸೈನ್ ಅಪ್ ಮಾಡಿದ ನಂತರ ವೆಬ್​ಸೈಟ್​ನಲ್ಲಿ ಮುಖ್ಯ ವಿಂಡೋ ಓಪನ್ ಆಗುತ್ತದೆ.

      • ಬಳಿಕ info about ChatGPT ನಡಿ, ಸರ್ಚ್ ಬಾರ್ ಅನ್ನು ಕಾಣುವಿರಿ.

      • ಸರ್ಚ್ ಬಾರ್ ನಲ್ಲಿ ನಿಮಗೆ ಬೇಕಾದ ಪ್ರಶ್ನೆಯನ್ನು ಬರೆಯಿರಿ ಮತ್ತು ನಮೂದಿಸಿ.

      • ಆ ಬಳಿಕ ಚಾಟ್‌ಬಾಟ್‌ AI ಕೆಲವು ಸೆಕೆಂಡುಗಳಲ್ಲಿ, ಕೇಳಲಾದ ಪ್ರಶ್ನೆಗೆ ಸಂಬಂಧಿಸಿದ ಪ್ರಾಂಪ್ಟ್ ಅನ್ನು ಬಳಕೆದಾರರಿಗೆ ನೀಡುತ್ತದೆ.



    Published by:Prajwal B
    First published: