Dog: ನಾಯಿಗೆ ಮರುಜನ್ಮ ನೀಡಿದ ChatGPT! ಇಡೀ ವೈದ್ಯಲೋಕವನ್ನೇ ಅಚ್ಚರಿಗೊಳಿಸಿದ ಟೆಕ್ನಾಲಜಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ChatGPT saves life of dog: ಪಶುವೈದ್ಯರಿಗೆ ಸವಾಲಾಗಿದ್ದ ಶ್ವಾನದ ಕಾಯಿಲೆಯನ್ನು ಚಾಟ್​​ಜಿಪಿಟಿ 4 ಡಯಾಗ್ನೋಸ್ ಮಾಡಿದೆ. ಖುದ್ದು ವೈದ್ಯರೇ ಇದನ್ನು ಒಪ್ಪಿಕೊಂಡಿದ್ದಾರೆ. ಸೂಕ್ತ ಸಮಯದಲ್ಲಿ ಶ್ವಾನಕ್ಕೆ ಚಿಕಿತ್ಸೆಯನ್ನೂ ನೀಡಲಾಗಿದೆ. ಮುದ್ದು ನಾಯಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಸದ್ಯ ಈ ಸುದ್ದಿ ಪಶು ವೈದ್ಯಲೋಕದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.

ಮುಂದೆ ಓದಿ ...
  • Share this:

ಇದು ಟೆಕ್ನಾಲಜಿ ಯುಗ (Technology). ಯಾವ ಕೆಲಸವನ್ನೂ ಕ್ಷಣ ಮಾತ್ರದಲ್ಲಿ ಈ ಟೆಕ್ನಾಲಜಿ ಮೂಲಕ ಮಾಡಿ ಮುಗಿಸಬಹುದಾಗಿದೆ. ಅದೇ ರೀತಿ ಇತ್ತೀಚೆಗೆ ಟೆಕ್ ಯುಗದಲ್ಲಿ ಭಾರೀ ಸದ್ದಿನಲ್ಲಿರುವ ವಿಷಯವೆಂದರೆ ಅದು ಚಾಟ್​ಜಿಪಿಟಿ. ಎಐ ಟೆಕ್ನಾಲಜಿಯನ್ನು ಬಳಸಿಕೊಂಡು ಅನ್ವೇಷಿಸಲಾದ ಈ ಚಾಟ್​​ಜಿಪಿಟಿ (ChatGPT) ಮಾನವರಂತೆಯೇ ಕಾರ್ಯನಿರ್ವಹಿಸುವಂತಹ ಒಂದು ರೋಬೋಟ್​ ಎಂದು ಹೇಳಬಹುದು. ಪಶುವೈದ್ಯರಿಗೆ ಸವಾಲಾಗಿದ್ದ ಶ್ವಾನದ ಕಾಯಿಲೆಯನ್ನು (Dog Disease) ಚಾಟ್​​ಜಿಪಿಟಿ 4 ಡಯಾಗ್ನೋಸ್ ಮಾಡಿದೆ. ಖುದ್ದು ವೈದ್ಯರೇ (Doctor) ಇದನ್ನು ಒಪ್ಪಿಕೊಂಡಿದ್ದಾರೆ. ಸೂಕ್ತ ಸಮಯದಲ್ಲಿ ಶ್ವಾನಕ್ಕೆ ಚಿಕಿತ್ಸೆಯನ್ನೂ ನೀಡಲಾಗಿದೆ. ಮುದ್ದು ನಾಯಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಸದ್ಯ ಈ ಸುದ್ದಿ ಪಶು ವೈದ್ಯಲೋಕದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.


ಎಲ್ಲೆಡೆ ಚಾಟ್​ಜಿಪಿಟಿಯದ್ದೇ ಮಾತು!


ನಿಮಗೆ ಏನೇ ಡೌಟ್​ ಇರ್ಲಿ, ಸರಳವಾಗಿ ಚಾಟ್​ಜಿಪಿಟಿಯ ಬಾಕ್ಸ್​​ನಲ್ಲಿ ಟೈಪ್​ ಮಾಡಿದ್ರೆ ಸಾಕು. ಕಣ್ಮುಚ್ಚಿ ಬಿಡುವಷ್ಟರಲ್ಲಿ ಚಕ ಚಕನೇ ಮಾರುದ್ದದ ಉತ್ತರವನ್ನು ನಿಮ್ಮ ಮುಂದೆ ಟೈಪ್​ ಮಾಡಿ ಕೊಡುತ್ತದೆ.


ಚಾಟ್​ಜಿಪಿಟಿಯ ಈ ಸಾಧ್ಯತೆ ಮುಂದಿನ ದಿನಗಳಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ ಎನ್ನುವುದು ತಜ್ಞರ ಅನಿಸಿಕೆ. ಇದಕ್ಕೆ ಪುಷ್ಠಿಕೊಡುವಂತೆ ಶ್ವಾನದ ಕಾಯಿಲೆಯನ್ನು ಪತ್ತೆ ಹಚ್ಚಿ ಅದಕ್ಕೆ ಮತ್ತೆ ಜೀವ ನೀಡುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದೆ.


ಏನಿದು ಘಟನೆ?


ಕೂಪರ್ ಎನ್ನುವವರು ತಮ್ಮ ಶ್ವಾನ ಸಾಸ್ಸಿಯ ಕಾಯಿಲೆಯನ್ನು ಗುಣಪಡಿಸಲು ಹಲವಾರು ವೈದ್ಯರ ಮೊರೆ ಹೋಗಿದ್ದರು. ಆದರೆ ಯಾರಿಗೂ ಕಾಯಿಲೆಯನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಕೂಪರ್​​ ತಮ್ಮ ನಾಯಿಯನ್ನು ಹೇಗಾದರೂ ಕಾಪಾಡಿಕೊಳ್ಳಬೇಕು ಎಂದು ಸಾಕಷ್ಟು ಮಾಹಿತಿ ಕಲೆ ಹಾಕುತ್ತಿದ್ದರು. ಹೀಗಿರುವಾಗ ಚಾಟ್​ಜಿಪಿಟಿಯಲ್ಲಿ ಶ್ವಾನದ ಕಾಯಿಲೆಯ ಗುಣ ಲಕ್ಷಣಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ಅತೀ ಕಡಿಮೆ ಬೆಲೆಗೆ ಬರಲಿದೆ IPhone​, ಸಖತ್ತಾಗಿದೆ ಇದರ ಫೀಚರ್ಸ್​​!


ಶ್ವಾನದ ಒಸಡುಗಳು ಮಂಕಾಗಿದ್ದವು, ರಕ್ತ ಪರೀಕ್ಷೆಗಳು ತೀವ್ರವಾದ ಅನಿಮಿಯಾ ಇರುವುದನ್ನು ಸ್ಪಷ್ಟಪಡಿಸಿತ್ತು. ಅದು ಆತಂಕಕಾರಿ ಹಂತಕ್ಕೆ ತಲುಪಿತ್ತು. ಕೂಪರ್​ ಬೇರೆ ವೈದ್ಯರನ್ನು ಕಾಣುವ ಮುನ್ನ ಈ ರಕ್ತ ಪರೀಕ್ಷೆಯ ವಿವರಗಳನ್ನು ಚಾಟ್​ಜಿಪಿಟಿ 4 ನಲ್ಲಿ ಫೀಡ್ ಮಾಡಿದ್ದಾರೆ.


ಚಾಟ್​ಜಿಪಿಟಿಯಿಂದ ಬಂದ ಉತ್ತರ


ಕೂಡಲೇ ಚಾಟ್​​ಜಿಪಿಟಿ ಟಿಕ್ ಬೋರ್ನ್​ ಕಾಯಿಲೆ ಎನ್ನುವುದನ್ನು ತಿಳಿಸಿದೆ. ಜೊತೆಗೆ ನಾನು ಪಶುವೈದ್ಯನಲ್ಲ ಎನ್ನುವ ಸೂಚನೆಯನ್ನು ನೀಡುತ್ತಾ ಚಾಟ್​​ಜಿಪಿಟಿ 4 ರಕ್ತ ಹೀನತೆಗೆ ಸಂಬಂಧಿಸಿದ ಎಲ್ಲಾ ಕಾಯಿಲೆಗಳನ್ನು ಪಟ್ಟಿ ಮಾಡಿದೆ.


ಸಾಂದರ್ಭಿಕ ಚಿತ್ರ


ಅಲ್ಟ್ರಾ ಸೌಂಟ್​, ಇಂಟರ್​ ಬ್ಲೀಡಿಂಗ್​ ಎಲ್ಲವೂ ನೆಗೆಟಿವ್ ಬಂತು. ಆದರೆ ಒಂದು ಕಾಯಿಲೆ ಈ ಎಲ್ಲಾ ಗುಣಲಕ್ಷಣಗಳಿಗೆ ಹೊಂದಿಕೆಯಾಗುತ್ತಿತ್ತು. ಅದುವೇ ‘ಇಮ್ಯೂನ್ ಮೀಡಿಯೇಟೆಡ್ ಹಿಮೋಲಿಟಿಕ್ ಅನಿಮಿಯಾ ಕಾಯಿಲೆ’ ಅಂದರೆ ಆಟೊ ಇಮ್ಯೂನ್ಯೂ ಕಾಯಿಲೆಯಾಗಿದೆ.


ದೇಹವು ತನ್ನ ಕೆಂಪು ರಕ್ತಕಣಗಳ ಮೇಲೆ ಆಕ್ರಮಣ ಮಾಡುತ್ತದೆ. ಇದು ರಕ್ತಕಣಗಳ ಇಳಿಮುಖಕ್ಕೆ ಕಾರಣವಾಗಿ ಅನಿಮಿಯಾವಾಗುತ್ತದೆ. ಈ ಸಮಸ್ಯೆಗೆ ರಕ್ತ ವರ್ಗಾವಣೆ ಮಾಡಬೇಕಾಗುತ್ತದೆ.


ಚಾಟ್​ಜಿಪಿಟಿ3.5 ಗಿಂತ ಚಾಟ್​ಜಿಪಿಟ್4 ಚುರುಕು


ಇನ್ನೂ ಚಾಟ್​ಜಪಿಟಿ 3.5 ಹೆಚ್ಚಿನ ವಿಷಯ ತಿಳಿಸಲಿಲ್ಲ. ಆದರೆ ಚಾಟ್​ಜಿಪಿಟಿ4 ಕಾಯಿಲೆ ಪತ್ತೆ ಹಚ್ಚಿತು ಎಂದು ಕೂಪರ್ ಹೇಳುತ್ತಾರೆ. ಇನ್ನೂ ಚಾಟ್​ಜಿಪಿಟಿ4 ಜೊತೆಗೆ ನಡೆಸಿದ ಸಂಭಾಷಣೆಯ ಸ್ಕ್ರೀನ್​ ಶಾಟ್​ ಕೂಡ ಕೂಪರ್ ತಮ್ಮ ಟ್ವಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆದರೆ ಇದನ್ನೇ ಪ್ರೇರಣೆಯಾಗಿಸಿಕೊಳ್ಳದೇ, ಅನಾರೋಗ್ಯ ಕಾಣಿಸಿಕೊಂಡಾಗ ಮೊದಲು ವೈದ್ಯರನ್ನು ಭೇಟಿ ಮಾಡಬೇಕು. ಚಾಟ್​ಜಿಪಿಟಿಯ ನಿರ್ಣಯವೇ ಅಂತಿಮವಲ್ಲ.


ಚಾಟ್​ಜಿಪಿಟಿ ಕಠಿಣ ಸವಾಲುಗಳಿಗೆ ಉತ್ತರವಾಗಬಹುದು. ಆದರೆ ಅದರ ಮೇಲಿನ ಅತಿಯಾದ ಅವಲಂಬನೆ ಒಳ್ಳೆಯದಲ್ಲ ಎನ್ನುವ ಮಾತುಗಳನ್ನು ಕೂಡ ವೈದ್ಯರು ಹೇಳುತ್ತಿದ್ದಾರೆ. ಇನ್ನೂ ಈ ಹಿಂದೆ ಹೃದಯ ಸಂಬಂಧಿ ಕಾಯಿಲೆಗಳನ್ನು ಆಪಲ್ ವಾಚ್​ಗಳು ಡಯಾಗ್ನೋಸ್ ಮಾಡುತ್ತಿದ್ದವು. ಈಗ ಚಾಟ್​ಜಿಪಿಟಿ ಒಂದು ಹೆಜ್ಜೆ ಮುಂದೆ ಹೋಗಿದೆ.


ಚಾಟ್​ಜಿಪಿಟಿ ಇಷ್ಟೆಲ್ಲಾ ಬುದ್ಧಿವಂತಿಕೆ ಪ್ರದರ್ಶಿಸಿದ್ದರು ಕೂಡ ಆ ಎಲ್ಲಾ ಮಾಹಿತಿಗಳನ್ನು ಸಂಶೋಧಿಸಿದವರು ವೈದ್ಯರು. ಆದರೆ ಸಕಾಲಕ್ಕೆ ಅದನ್ನು ಡಾಕ್ಯುಮೆಂಟ್​ ರೀತಿ ಒದಗಿಸಿ, ರೆಫರೆನ್ಸ್​​​ ದೊರಕಿಸಿದ್ದು ಚಾಟ್​ಜಿಪಿಟಿ ಎನ್ನುವ ಮಾಂತ್ರಿಕ.
20 ಕ್ಷೇತ್ರದ ಉದ್ಯೋಗಕ್ಕೆ ಬದಲಿ ಚಾಟ್​ಜಿಪಿಟಿ


ಇನ್ನು ಚಾಟ್​​ಜಿಪಿಟಿ ಈಗಾಗಲೇ 20 ಕ್ಷೇತ್ರದ ಉದ್ಯೋಗಕ್ಕೆ ಬದಲಿಯಾಗಲಿದೆ ಎನ್ನುವುದನ್ನು ಮೊದಲೇ ಹೇಳಿದೆ. ಇದು ಯಾವೆಲ್ಲಾ ಉದ್ಯೋಗಗಳಿಗೆ ಸ್ಪರ್ಧೆಯೊಡ್ಡಲಿದೆ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯುತ್ತದೆ. ಚಾಟ್​ಜಿಪಿಟಿ ದಿನದಿಂದ ದಿನಕ್ಕೆ ಕುತೂಹಲವನ್ನು ಹೆಚ್ಚಿಸುತ್ತಲೇ ಸಾಗಿದೆ. ಒಟ್ಟಿನಲ್ಲಿ ತಂತ್ರಜ್ಞಾನದ ಸವಲತ್ತುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಹೇಗೆ ಸಮಸ್ಯೆಗಳನ್ನು ಗೆಲ್ಲಬಹುದು ಎನ್ನುವುದಕ್ಕೆ ಈ ಘಟನೆ ಒಂದು ನಿದರ್ಶನವಾಗಿದೆ.

top videos
    First published: