ಇದು ಟೆಕ್ನಾಲಜಿ (Technology) ಯುಗ. ಇಲ್ಲಿ ಎಲ್ಲವೂ ಸಾಧ್ಯ. ಏನಾಗುವುದಿಲ್ಲವೆಂದು ಹೇಳುತ್ತಾರೋ ಅದನ್ನು ತಂತ್ರಜ್ಞಾನ ಮೂಲಕವಾದರೂ ಅಭಿವೃದ್ಧಿ ಮಾಡಲು ಮುಂದಾಗುತ್ತಾರೆ. ಇತ್ತೀಚೆಗೆ ಅಂತೂ ತಂತ್ರಜ್ಞಾನ ಬಹಳಷ್ಟು ಪ್ರಗತಿಯಾಗುತ್ತಿದೆ. ನಾವೆಲ್ಲರೂ ಊಹೆಯೂ ಮಾಡಲಾಗದ ತಂತ್ರಜ್ಞಾನಗಳು ನಮ್ಮ ಕಣ್ಣಮುಂದೆಯೇ ಬಂದು ಟೆಕ್ ಯುಗದಲ್ಲಿ ಸೇರಿಕೊಳ್ಳುತ್ತಿದೆ. ಕೆಲವೊಂದು ತಂತ್ರಜ್ಞಾನಗಳು ಹೇಗೆಂದರೆ ನಮ್ಮನ್ನು ನೋಡ ನೋಡುತ್ತಲೇ ಅಚ್ಚರಿ ಪಡುವಂತೆ ಮಾಡುತ್ತೆ. ಅದೇ ರೀತಿ ತಂತ್ರಜ್ಞಾನದ ಪ್ರಗತಿಗೆ ಹೊಸ ಟೆಕ್ನಾಲಜಿಯೊಂದು ರೂಪುಗೊಳ್ಳುತ್ತಿದೆ. ಅದೇ ಚಾಟ್ಜಿಪಿಟಿ ಎಂಬುದು. ಇತ್ತೀಚೆಗೆ ಎಐ (Artificial Intelligence) ಆಧಾರಿತ ತಂತ್ರಜ್ಞಾನ ಭಾರೀ ಮುಂಚೂಣಿಯಲ್ಲಿದೆ. ಇದೇ ಸಿಸ್ಟಮ್ ಅನ್ನು ಹೊಂದಿರುವ ಇದೀಗ ಚಾಟ್ಜಿಪಿಟಿ (ChatGPT) ಎಂಬ ಟೆಕ್ನಾಲಜಿ ಬರ್ತಿದೆ.
ಚಾಟ್ಜಿಪಿಟಿ ಎಂಬುದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಕಾರ್ಯನಿರ್ವಹಿಸುವಂತಹ ಒಂದು ತಂತ್ರಜ್ಞಾನವಾಗಿದೆ. ಹಾಗಿದ್ರೆ ಈ ಚಾಟ್ಜಿಪಿಟಿ ಎಂದರೆ ಏನು? ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.
ಚಾಟ್ಜಿಪಿಟಿ ಎಂದರೇನು?
ಚಾಟ್ಜಿಪಿಟಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸಂಶೋಧನಾ ಸಂಸ್ಥೆ ಓಪನ್ಎಐ ಅಭಿವೃದ್ಧಿಪಡಿಸಿದ ಎಐ ಬೆಂಬಲಿತ ಚಾಟ್‌ಬಾಟ್ ಆಗಿದೆ. ಈ ಚಾಟ್‌ಬಾಟ್ ಬಳಕೆದಾರರು ಕೇಳುವಂತಹ ಪ್ರಶ್ನೆಗಳಿಗೆ ಪ್ರತಿಕ್ರಿಯೆಯನ್ನು ಅಥವಾ ಉತ್ತರಗಳನ್ನು ನೀಡಲುನೈಸರ್ಗಿಕ ಭಾಷಾ ಸಂಸ್ಕರಣೆ (NLP) ಎಂದು ಕರೆಯಲ್ಪಡುವ ಯಂತ್ರ ಕಲಿಕೆಯ ಕ್ಷೇತ್ರವನ್ನು ಬಳಸುತ್ತದೆ.
ಚಾಟ್ಜಿಪಿಟಿ ಎಐ ಇಂಟರ್ನೆಟ್ ಟೆಕ್ಸ್ಟ್ ಡೇಟಾಸೆಟ್‌ನಲ್ಲಿ ತರಬೇತಿ ಪಡೆದಿದ್ದು, ಮನುಷ್ಯರ ತರಹ ಉತ್ತರಗಳನ್ನು ತನ್ನ ಬಳಕೆದಾರರಿಗೆ ನೀಡುವ ತಂತ್ರಜ್ಞಾನವಾಗಿದೆ. ಭಾಷಾ ಅನುವಾದ, ಟೆಕ್ಸ್ಟ್ ವಿವರಣೆಗಳಿಗಾಗಿ ವಿವಿಧ ನೈಸರ್ಗಿಕ ಭಾಷಾ ಸಂಸ್ಕರಣಾ ಕಾರ್ಯಗಳಿಗೆ ಚಾಟ್ಜಿಪಿಟಿ ಅನ್ನು ಬಳಸಬಹುದು. ಇದರೊಂದಿಗೆ ಪ್ರಶ್ನೆಗೆ ಉತ್ತರಿಸುವುದಕ್ಕೆ ಈ ಚಾಟ್‌ಬಾಟ್ ಸಹಕಾರಿಯಾಗುತ್ತದೆ.
ವೆಬ್ ಪೇಜ್ ಮೂಲಕ ಬಳಸಿ
ಬಳಕೆದಾರರು ಸದ್ಯಕ್ಕೆ ತಮ್ಮ ಅನುಕೂಲಕ್ಕಾಗಿ ಅಧಿಕೃತ ಚಾಟ್ಜಿಪಿಟಿ ವೆಬ್ ಪೇಜ್ ಮೂಲಕ ಮಾತ್ರ ಬಳಸಬಹುದು. ಆದರೆ ಕಂಪೆನಿ ಚಾಟ್ಜಿಪಿಟಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಯಾವುದೇ ಆ್ಯಪ್ ಅನ್ನು ಬಿಡುಗಡೆ ಮಾಡಿಲ್ಲ. ಹೀಗಾಗಿ ಆ್ಯಪ್ ಸ್ಟೋರ್ಗಳಲ್ಲಿರುವಂತಹ ಯಾವುದೇ ಆ್ಯಪ್ಗಳನ್ನು ಡೌನ್ಲೋಡ್ ಮಾಡುವ ಮುನ್ನ ಎಚ್ಚರವಹಿಸಿ.
ಚಾಟ್ಜಿಪಿಟಿಯನ್ನು ಹೇಗೆ ಬಳಕೆ ಮಾಡುವುದು?
ಮಾನವರಂತೆಯೇ ಪ್ರತಿಕ್ರಿಯಿಸುವ ಚಾಟ್ಜಿಪಿಟಿ
ಸದ್ಯ ಚಾಟ್ಜಿಪಿಟಿ ಎಐ ಚಾಟ್‌ಬಾಟ್ ಹೆಚ್ಚು ಮಹತ್ವ ಪಡೆಯುತ್ತಿದ್ದು, ಇದು ಮಾನವ ರೀತಿಯ ಉತ್ತರಗಳನ್ನು ನೀಡುವಲ್ಲಿ ಕೆಲಸ ಮಾಡುತ್ತಿದೆ. ಅಲ್ಲದೇ ಈ ಚಾಟ್‌ಬಾಟ್ ಮೂಲಕ ದೀರ್ಘವಾದ ಮಾಹಿತಿ ಹಾಗೂ ಲೇಖನ ರೀತಿಯ ಮಾಹಿತಿಗಳನ್ನು ಪಡೆಯಬಹುದಾಗಿದೆ. ಅಲ್ಲದೇ ಬೇರೆ ಭಾಷೆಗಳ ಪಠ್ಯವನ್ನು ಸುಲಭವಾಗಿ ಭಾಷಾಂತರಿಸಲು, ಕಥೆ, ಕವಿತೆಗಳನ್ನು ರಚಿಸಲು ChatGPT AI ಚಾಟ್‌ಬಾಟ್ ಅನ್ನು ಬಳಕೆ ಮಾಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ