• Home
 • »
 • News
 • »
 • tech
 • »
 • Apple IPhone: ಇನ್ಮುಂದೆ ಐಫೋನ್​ನಲ್ಲೂ ಬರುತ್ತೆ ಚಾರ್ಜರ್​, ಸರ್ಕಾರದಿಂದ ಮಹತ್ವದ ಆದೇಶ

Apple IPhone: ಇನ್ಮುಂದೆ ಐಫೋನ್​ನಲ್ಲೂ ಬರುತ್ತೆ ಚಾರ್ಜರ್​, ಸರ್ಕಾರದಿಂದ ಮಹತ್ವದ ಆದೇಶ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆ್ಯಪಲ್​ ತನ್ನ 12 ಸೀರಿಸ್​ನ ನಂತರ ಐಫೋನ್​ಗಳಲ್ಲಿ ಚಾರ್ಜರ್ ಅನ್ನು ನೀಡುವುದನ್ನು ಸ್ಥಗಿತಗೊಳಿಸಿತ್ತು. ಇದೀಗ ಆ್ಯಪಲ್ ಕಂಪನಿ ಸಂಕಷ್ಟದಲ್ಲಿದ್ದು ಇನ್ನುಮುಂದೆ ಐಫೋನ್ ಜೊತೆಗೆ ಚಾರ್ಜರ್ ಅನ್ನು ಕೂಡ ನೀಡಬೇಕೆಂದು ಸರ್ಕಾರ ಆದೇಶ ನೀಡಿದೆ. ಇದರ ಕಂಪ್ಲೀಟ್​ ಮಾಹಿತಿ ತಿಳಿಬೇಕಾದ್ರೆ ಇದನ್ನು ಓದಿ.

ಮುಂದೆ ಓದಿ ...
 • Share this:

  ಅಂತರಾಷ್ಟ್ರೀಯ ಟೆಕ್ ಕಂಪನಿ ಆ್ಯಪಲ್ (Apple0 ಇದೀಗ ಸಂಕಷ್ಟದಲ್ಲಿದೆ. ಹೊಸ ಐಫೋನ್ (IPhone) ಖರೀದಿಸುವ ಗ್ರಾಹಕರಿಗೆ ಫೋನ್ ಜೊತೆಗೆ ಚಾರ್ಜರ್ (Charger) ನೀಡದಿರುವ ಬಗ್ಗೆ ಕಂಪನಿಯನ್ನು ಗ್ರಾಹಕರು, ಕೆಲವೊಂದು ಸಮಸ್ಥೆಗಳು ಟೀಕೆಗೆ ಗುರಿಯಾಗಿದೆ. ಇದೇ ಕಾರಣಕ್ಕೆ ಬ್ರೆಜಿಲ್ ಕಂಪನಿಗೆ ಶಾಕ್ ನೀಡಿದೆ. ಆ ದೇಶದಲ್ಲಿ ನೂರಾರು ಐಫೋನ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಚಿಲ್ಲರೆ ಬಾಕ್ಸ್‌ನಲ್ಲಿ ಐಫೋನ್‌ನೊಂದಿಗೆ ಚಾರ್ಜರ್ ಅನ್ನು ನೀಡದಿರುವುದು ಇದಕ್ಕೆ ಕಾರಣ ಎಂದು ಕೆಲವೊಂದು ವರದಿಗಳು ಹೇಳುತ್ತಿದೆ. ಆ್ಯಪಲ್ ಕಂಪನಿಯು ಇತ್ತೀಚೆಗೆ ಐಫೋನ್‌ಗಳ ಜೊತೆಗೆ ಐಫೋನ್ ಚಾರ್ಜರ್‌ಗಳನ್ನು ನೀಡುವುದನ್ನು ನಿಲ್ಲಿಸಿದೆ. ಈ ಕಾರಣದಿಂದಾಗಿ, ಬ್ರೆಜಿಲ್‌ನ ವಿವಿಧ ಮಾರುಕಟ್ಟೆಗಳಿಂದ ಅಧಿಕಾರಿಗಳು ನೂರಾರು ಐಫೋನ್‌ಗಳನ್ನು ವಶಪಡಿಸಿಕೊಂಡರು. ಈ ಕ್ರಮಕ್ಕೆ 'ಆಪರೇಷನ್ ಡಿಸ್ಚಾರ್ಜ್' (Operation Discharge) ಎಂದು ನಂತರ ಹೆಸರಿಡಲಾಯಿತು. ಐಫೋನ್​ ಚಾರ್ಜರ್ (Iphone Charger)​ ನೀಡದಿರುವುದೇ ಇದಕ್ಕೆ ಕಾರಣ ಎಂದು ಕೆಲವರು ಹೇಳುತ್ತಿದ್ದಾರೆ.


  ಬ್ರೆಜಿಲ್​ನ ಕೆಲ ಅಧಿಕಾರಿಗಳು ಕೆಲವೊಂದು ಮಾರುಕಟ್ಟೆಗಳಿಗೆ ಹೋಗಿ ಐಫೊನ್ ಸ್ಮಾರ್ಟ್​ಫೋನ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಐಫೋನ್ ಮಾರಾಟ ಮಾಡುವುದನ್ನು ನಿಷೇಧಿಸಿದೆ ಎಂದು ಕೆಲವರದಿಗಳು ಹೇಳಿವೆ. ಇದರಿಂದ ಸಂಕಷ್ಟದಲ್ಲಿದ್ದ ಆ್ಯಪಲ್ ಕಂಪನಿ ಐಫೋನ್‌ಗಳ ಮಾರಾಟಕ್ಕೆ ಅನುಮತಿ ನೀಡುವಂತೆ ಅಲ್ಲಿನ ಸರ್ಕಾರಕ್ಕೆ ಮನವಿ ಮಾಡಿದೆ. ಘಟನೆಯ ಕುರಿತು ನ್ಯಾಯಾಲಯದ ತೀರ್ಪಿನವರೆಗೆ ಐಫೋನ್‌ಗಳ ಮಾರಾಟಕ್ಕೆ ಅವಕಾಶ ನೀಡುವಂತೆ ಆಪಲ್ ಕೇಳಿದೆ ಎಂದು 9To5Mac ವರದಿ ಬಹಿರಂಗಪಡಿಸಿದೆ.\


  ಗ್ರಾಹಕರ ಆಕ್ಷೇಪ


  ಚಾರ್ಜರ್ ಇಲ್ಲದೆ ಐಫೋನ್‌ಗಳನ್ನು ಮಾರಾಟ ಮಾಡಬಾರದು ಎಂಬ ಇತ್ತೀಚಿನ ಆದೇಶವನ್ನು ಯಾವುದೇ ಕಂಪನಿಯು ಪಾಲಿಸಬೇಕು ಎಂದು ಬ್ರೆಜಿಲ್ ಸ್ಪಷ್ಟಪಡಿಸಿದೆ. ಇದರ ಭಾಗವಾಗಿ ಆ್ಯಪಲ್ ಕಂಪನಿಯ ಮೇಲೆ ಸರ್ಕಾರ ಇದೀಗ ಕ್ರಮ ಕೈಗೊಂಡಿದೆ.


  ಇದನ್ನೂ ಓದಿ: 2023 ರಿಂದ ಹೊಸ ಅಪ್​ಡೇಟ್ಸ್​​ನೊಂದಿಗೆ ಬರಲಿದೆ ಆಂಡ್ರಾಯ್ಡ್​​ ಟಿವಿಗಳು! ಇಲ್ಲಿದೆ ಕಾರಣ.


  ಆ್ಯಪಲ್ ಕಂಪನಿ ಐಫೋನ್ ಚಾರ್ಜರ್ ನೀಡುವುದನ್ನು ಐಫೋನ್​​ನ 12 ಸೀರಿಸ್​​ಗಳಿಂದ ಸ್ಥಗಿತಗೊಳಿಸಲಾಗಿದೆ. ಆ್ಯಪಲ್ ತೆಗೆದುಕೊಂಡ ಈ ನಿರ್ಧಾರದಿಂದ ಬ್ರೆಜಿಲ್ ನಲ್ಲಿ ಕೆಲವೇ ತಿಂಗಳುಗಳಲ್ಲಿ ಗ್ರಾಹಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ಕಾರಣಕ್ಕಾಗಿಯೇ ಸರ್ಕಾರ ಇದೀಗ ಐಫೋನ್‌ಗಳನ್ನು ವಶಪಡಿಸಿಕೊಂಡಿದೆ.


  ಸಾಂದರ್ಭಿಕ ಚಿತ್ರ


  ಇದಲ್ಲದೆ ಬ್ರೆಜಿಲ್ ಈ ಹಿಂದೆಯೂ ಆ್ಯಪಲ್ ಕಂಪನಿಯ ವಿರುದ್ಧ ಕ್ರಮಗಳನ್ನು ತೆಗೆದುಕೊಂಡಿದೆ. ಐಫೋನ್‌ಗಳಿಗೆ ಚಾರ್ಜರ್‌ಗಳನ್ನು ನೀಡದಿದ್ದಕ್ಕಾಗಿ ಎರಡು ಬಾರಿ ದಂಡವನ್ನೂ ಸರ್ಕಾರ ವಿಧಿಸಿತ್ತು.


  ಅಕ್ಟೋಬರ್ ನಲ್ಲಿ 150 ಕೋಟಿ ರೂಪಾಯಿ ದಂಡ


  ಕಳೆದ ಅಕ್ಟೋಬರ್‌ನಲ್ಲಿ, ಕೆಲವೊಂದು ಮಾರುಕಟ್ಟೆಗಳಲ್ಲಿ ಐಫೋನ್‌ಗಳು ತಮ್ಮ ಮೊಬೈಲ್​ ಚಾರ್ಜರ್‌ಗಳನ್ನು ನೀಡದಕ್ಕಾಗಿ ಆಪಲ್‌ಗೆ ಬ್ರೆಜಿಲ್ 100 ಮಿಲಿಯನ್ ಅಂದರೆ ಸುಮಾರು ರೂ. 150 ಕೋಟಿ ದಂಡ ವಿಧಿಸಲಾಗಿತ್ತು. ಈ ಘಟನೆಯನ್ನು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವುದಾಗಿ ಆ್ಯಪಲ್ ಘೋಷಿಸಿತು.


  ಸಾಂದರ್ಭಿಕ ಚಿತ್ರ


  ಮತ್ತೊಂದೆಡೆ, ಸಾಲಗಾರರು, ಗ್ರಾಹಕರು ಮತ್ತು ತೆರಿಗೆದಾರರ ಸಂಘಗಳು ಬ್ರೆಜಿಲ್‌ನ ಸಾವೊ ಪಾಲೊ ಸ್ಟೇಟ್ ಕೋರ್ಟ್‌ನಲ್ಲಿ ಆ್ಯಪಲ್ ವಿರುದ್ಧ ದೂರಿನ ಅರ್ಜಿಯನ್ನು ಸಲ್ಲಿಸಿರು. ವಿಚಾರಣಾ ನ್ಯಾಯಾಲಯವು ಆ್ಯಪಲ್ ವಿರುದ್ಧ ತೀರ್ಪು ನೀಡಿತು. ಆ್ಯಪಲ್ ಕಂಪನಿಯು ತನ್ನ ಪ್ರೀಮಿಯಂ ಸಾಧನಗಳನ್ನು ಚಾರ್ಜರ್ ಇಲ್ಲದೆ ಮಾರಾಟ ಮಾಡುವ ಮೂಲಕ ಗ್ರಾಹಕರನ್ನು ನಿಂದನೆ ಮಾಡುತ್ತಿದೆ ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ತಿಳಿಸಿದೆ.


  ಸಪ್ಟೆಂಬರ್​ನಲ್ಲೂ ಆಪಲ್​ ವಿರುದ್ಧ ಕ್ರಮ:


  ಬ್ರೆಜಿಲ್ ಸೆಪ್ಟೆಂಬರ್‌ನಲ್ಲಿಯೂ ಆ್ಯಪಲ್ ವಿರುದ್ಧ ಕ್ರಮ ಕೈಗೊಂಡಿತ್ತು. ಐಫೋನ್ ಜೊತೆಗೆ ಚಾರ್ಜರ್ ಅನ್ನು ಮಾರಾಟ ಮಾಡದಿದ್ದಕ್ಕಾಗಿ ತಯಾರಕರಿಗೆ ಸುಮಾರು 2.5 ಮಿಲಿಯನ್ ಅಂದರೆ 25 ಲಕ್ಷ ದಂಡ ವಿಧಿಸಲಾಗಿತ್ತು. ಇದರ ಜೊತೆಗೆ, ಬ್ರೆಜಿಲ್‌ನಲ್ಲಿ ಐಫೋನ್‌ಗಳ ಮಾರಾಟದ ಮೇಲೆ ನಿಷೇಧವನ್ನು ಸಹ ವಿಧಿಸಲಾಯಿತು. ಆದರೆ ನಂತರ ಮತ್ತೆ ಆ್ಯಪಲ್ ಕಂಪನಿ ಐಫೋನ್‌ಗಳನ್ನು ಮಾರಾಟ ಮಾಡಲು ಅನುಮತಿ ಪಡೆಯಿತು.


  ಇನ್ನು ಮುಂದೆ ಚಾರ್ಜರ್ ಕೊಡಲೇಬೇಕು


  ಆ್ಯಪಲ್​ನ ನಿರ್ಧಾರವು ಚಾರ್ಜರ್ ಖರೀದಿಸಲು ಜನರು ಹೆಚ್ಚುವರಿ ಖರ್ಚು ಮಾಡಬೇಕಾಗುತ್ತದೆ ಎಂದು ಬ್ರೆಜಿಲ್ ಅಧಿಕಾರಿಗಳು ಹೇಳುತ್ತಾರೆ. ಇದಲ್ಲದೆ, ಆ್ಯಪಲ್ ಫೋನ್‌ನ ಬ್ಯಾಟರಿಯನ್ನು ಚಾರ್ಜ್ ಮಾಡಲು ಚಾರ್ಜರ್ ಒಂದು ಪ್ರಮುಖ ಪರಿಕರವಾಗಿದೆ, ಅದು ಇಲ್ಲದೆ ಫೋನ್ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇದೀಗ ನ್ಯಾಯಾಲಯದ ತೀರ್ಪಿನ ಪ್ರಕಾರ, ಆ್ಯಪಲ್ ಇನ್ನು ಮುಂದೆ ತನ್ನ ಬ್ರಾಂಡ್ ಅನ್ನು ಮಾರಾಟ ಮಾಡುವಾಗ ಚಾರ್ಜರ್ ಅನ್ನು ನೀಡಬೇಕೆಂದು ಹೇಳುತ್ತದೆ.

  Published by:Prajwal B
  First published: