Network Issue: ನೆಟ್​​ವರ್ಕ್​ ಇಲ್ಲದಿದ್ದರೂ ಕರೆ ಮಾಡಬಹುದು! ಸ್ಮಾರ್ಟ್​ಫೋನಿನಲ್ಲಿರುವ ಈ ಸೆಟ್ಟಿಂಗ್ಸ್ ಬದಲಾಯಿಸಿ ನೋಡಿ!

ವೈ-ಫೈ ಕಾಲಿಂಗ್​ ಮೂಲಕ ನೆಟ್​ವರ್ಕ್​ ಸಮಸ್ಯೆಯಿರುವ ಪ್ರದೇದದಿಂದಲೂ ಕರೆ ಮಾಡಲು ಸಾಧ್ಯವಿದೆ. ಅದಕ್ಕಾಗಿ ವೋಲ್ಟ್​ (Voice over Internet Protocol) ಬದಲಿಗೆ (Voice over LTE) ಆಯ್ಕೆ ಬದಲಾಯಿಸಿಕೊಳ್ಳಬೇಕು.

Photo: Google

Photo: Google

  • Share this:
    ನೆಟ್​ವರ್ಕ್ (Network)​ ಇಲ್ಲದಿದ್ದರೆ ಕರೆ (Call), ಇಂಟರ್​ನೆಟ್ (Internet)​ ಬಳಕೆ ಅಸಾಧ್ಯ ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗಾಗಿ ನೆಟ್​ವರ್ಕ್​ ಇರುವ ಜಾಗದಲ್ಲಿ ಮಾತ್ರ ಸ್ಮಾರ್ಟ್​ಫೋನನ್ನು ಸರಿಯಾಗಿ ಬಳಸಬಹುದಾಗಿದೆ. ಆದರೆ ಭಾರತದಲ್ಲಿ ನೆಟ್​ವರ್ಕ್​ ಸಿಗದ ಪ್ರದೇಶಗಳು ಅನೇಕ ಇವೆ. ಅದರಲ್ಲೂ ಕೊರೋನಾ ಸಮಯದಲ್ಲಿ ಹಳ್ಳಿ ಪ್ರದೇಶದಲ್ಲಿದ್ದುಕೊಂಡು ವರ್ಕ್​ ಫ್ರಂ ಹೋಮ್ (Work From Home) ಮಾಡುವ ಜನರು ನೆಟ್​ವರ್ಕ್​ ಅರಸಿಕೊಂಡು ಹೋಗಿ ಅಲ್ಲಿಂದ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಇನ್ನು ಹಲವರು ವೈ-ಫೈ (Wi-Fi)ಸಂಪರ್ಕಿಸಿಕೊಂಡು ದೈನಂದಿನ ಕೆಲಸವನ್ನು ಪೂರ್ತಿ ಮಾಡುತ್ತಾರೆ. ಆದರೆ ನೆಟ್​ವರ್ಕ್ ಇಲ್ಲದೆಯೇ ಕರೆಯನ್ನು ಮಾಡುವ ಇಂಟರ್​ನೆಟ್​ ಬಳಸುವ ಆಯ್ಕೆಯೊಂದಿದೆ. ಅದಕ್ಕಾಗಿ ಸ್ಮಾರ್ಟ್​ಫೋನ್​ನಲ್ಲಿರುವ ಸೆಟ್ಟಿಂಗ್​ವೊಂದನ್ನು ಬದಲಾಯಿಸಿಕೊಂಡರೆ ಮಾತ್ರ ಸಾಧ್ಯ!

    ವೈ-ಫೈ ಕಾಲಿಂಗ್ (Wi-Fi Calling)​ ಮೂಲಕ ನೆಟ್​ವರ್ಕ್​ ಸಮಸ್ಯೆಯಿರುವ ಪ್ರದೇದದಿಂದಲೂ ಕರೆ ಮಾಡಲು ಸಾಧ್ಯವಿದೆ. ಅದಕ್ಕಾಗಿ ವೋಲ್ಟ್​ (Voice over Internet Protocol) ಬದಲಿಗೆ (Voice over LTE) ಆಯ್ಕೆ ಬದಲಾಯಿಸಿಕೊಳ್ಳಬೇಕು. ಒಂದು ವೇಳೆ ನೆಟ್​ವರ್ಕ್​ ಸಮಸ್ಯೆಯಿದ್ದರೆ. ವೈ-ಫೈ ಸಹಾಯ ಬಳಸಿಕೊಂಡು ಇದರ ಸಹಾಯದ ಮೂಲಕ ಕರೆಯನ್ನು ಮಾಡಬಹುದಾಗಿದೆ. ಆದರೆ ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸುವುದು ಹೇಗೆ? ಈ ಬಗ್ಗೆ ಮಾಹಿತಿ ಇಲ್ಲಿದೆ.

    ನೆಲ ಮಾಳಿಗೆಯಲ್ಲಿ ಇಂಟರ್​ನೆಟ್​ ಸಂಪರ್ಕ ಅಷ್ಟೇನು ಚೆನ್ನಾಗಿರುವುದಿಲ್ಲ. ಇನ್ನು ಕೆಲವೊಂದು ನೆರ್ಟ್​ವರ್ಕ್​ ಚೆನ್ನಾಗಿರುವ  ಪ್ರದೇಶದತ್ತ ತೆರಳಬೇಕಾಗುತ್ತದೆ. ಆದರೆ ವೈ-ಫೈ ಕರೆಯಿಂದ ಕಡಿತವಾಗುವ ಸಾಧ್ಯತೆ ಕಡಿಮೆ. ಭಾರತದಲ್ಲಿ ರಿಲಯನ್ಸ್​, ಏರ್​ಟೆಲ್​ ಮತ್ತು ಐಡಿಯಾ-ವೊಡಾಫೋನ್​ ಟೆಲಿಕಾಂ ಆಪರೇಟರ್​ಗಳು ಯಾವುದೇ ಶುಲ್ಕವಿಲ್ಲದೆ ವೈ-ಫಯ ಕರೆ ಸೌಲಭ್ಯ ಒದಗಿಸುತ್ತಾ ಬಂದಿದೆ.

    ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ವೈಫೈ ಕರೆಗಳನ್ನು ಹೇಗೆ ಸಕ್ರಿಯಗೊಳಿಸಬಹುದು ಎಂಬುದನ್ನು ಗಮನಿಸಿ

    >> ಮೊದಲು ಫೋನ್‌ನ ಸೆಟ್ಟಿಂಗ್‌ ತೆರೆಯಿರಿ, ನಂತರ ನೆಟ್‌ವರ್ಕ್ ಸಂಪರ್ಕಕ್ಕೆ ಹೋಗಿ

    >> ಅದರ ನಂತರ ನೀವು ವೈಫೈ ಆಯ್ಕೆಗೆ ಹೋಗಿ ಮತ್ತು ಅಡ್ವಾನ್ಸ್ ಅನ್ನು ಟ್ಯಾಪ್ ಮಾಡಿ.

    >> ನಂತರ ವೈಫೈ ಕರೆ ಮಾಡುವ ಆಯ್ಕೆಯನ್ನು ಆರಿಸಿಕೊಳ್ಳಿ, ನೀವು 2 ಸಿಮ್ ಬಳಸಿದರೆ ಎರಡೂ ಸಿಮ್‌ಗಳಿಗೆ ವೈಫೈ ಕರೆಗಳನ್ನು ಸಕ್ರಿಯಗೊಳಿಸಬಹುದು, ಹಲವು ಸ್ಮಾರ್ಟ್‌ಫೋನ್‌ಗಳಲ್ಲಿ ನೆಟ್‌ವರ್ಕ್ ಮೆನುವಿನಲ್ಲಿಯೇ ವೈಫೈ ಕರೆ ಮಾಡುವ ಆಯ್ಕೆ ಇರುತ್ತದೆ.

    ಇದನ್ನು ಓದಿ: Second-Hand ಎಲೆಕ್ಟ್ರಿಕ್ ವಾಹನವನ್ನು ಖರೀದಿಸಲು ಯೋಜಿಸುತ್ತಿದ್ದೀರಾ? ಈ ವಿಚಾರಗಳು ನೆನಪಿನಲ್ಲಿರಲಿ

    ಐಫೋನ್‌ನಲ್ಲಿ ವೈಫೈ ಕಾಲಿಂಗ್ ಅನ್ನು ಹೇಗೆ ಸಕ್ರಿಯಗೊಳಿಸುವುದು

    >> ನಿಮ್ಮ ಐಫೋನ್‌ನ ಸೆಟ್ಟಿಂಗ್ಸ್‌ಗೆ ಹೋಗಿ ಮತ್ತು ಅಲ್ಲಿ ಫೋನ್‌ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

    >> ಅದರ ನಂತರ ಫೋನ್ ಡೇಟಾವನ್ನು ಟ್ಯಾಪ್ ಮಾಡಿ ಮತ್ತು ವೈಫೈ ಕರೆ ಆಯ್ಕೆ ಮಾಡಿ

    >> ಈ ಐಫೋನ್‌ನಲ್ಲಿ ವೈಫೈ ಕಾಲಿಂಗ್ ಅನ್ನು ಟಾಗಲ್ ಮಾಡಿ.
    First published: