ಕೇಂಬ್ರಿಡ್ಜ್​ ಅನಾಲಿಟಿಕಾ ಹಗರಣ ಸಿಬಿಐ ತನಿಖೆಗೆ


Updated:July 27, 2018, 3:29 PM IST
ಕೇಂಬ್ರಿಡ್ಜ್​ ಅನಾಲಿಟಿಕಾ ಹಗರಣ ಸಿಬಿಐ ತನಿಖೆಗೆ

Updated: July 27, 2018, 3:29 PM IST
ಕೇಂಬ್ರಿಜ್‌ ಅನಾಲಿಟಿಕಾ ಹಗರಣದಲ್ಲಿ ಭಾರತೀಯರ ಹೆಸರು ತಳುಕು ಹಾಕಿಕೊಂಡ ಸಂಶಯವಿದ್ದು ಹೀಗಾಗಿ ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಲಿದೆ ಎಂದು ಕೇಂದ್ರ ಕಾನೂನು ಹಾಗೂ ಐಟಿ ಸಚಿವ ರವಿಶಂಕರ್​ ಹೇಳಿದ್ದಾರೆ.

ಕೇಂಬ್ರಿಡ್ಜ್‌ ಅನಾಲೆಟಿಕಾ ಸಂಸ್ಥೆಯು ಭಾರತದ ಫೇಸ್‌ಬುಕ್‌ ಬಳಕೆದಾರರ ಖಾತೆಯಿಂದಲೂ ಮಾಹಿತಿ ಕದ್ದಿರುವ ಶಂಕೆಯಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಿಸುವಂತೆ ಫೇಸ್​ಬುಕ್​ ಹಾಗು ಕೇಂಬ್ರಿಡ್ಜ್​ ಅನಾಲೆಟಿಕಾ ಸಂಸ್ಥೆಗೆ ನೊಟೀಸ್​ ನೀಡಲಾಗಿದೆ, ರವಿಶಂಕರ್​ ಪ್ರಸಾದ್​ ಗುರುವಾರ ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ರಾಜಕೀಯ ಸಲಹಾ ಸಂಸ್ಥೆಯಾಗಿದ್ದ ಭಾರತೀಯರ ಸಾಮಾಜಿಕ ಜಾಲತಾಣದಿಂದ ಕೇಂಬ್ರಿಜ್‌ ಅನಾಲಿಟಿಕಾ ಸಂಸ್ಥೆಯ ಮಾಹಿತಿಯನ್ನು ಕದ್ದಿಲ್ಲ ಎಂದು ಈ ಹಿಂದೆ ಹೇಳಿಕೊಂಡಿತ್ತು. ಈ ಕುರಿತುತಂತೆ ಫೇಸ್​ಬುಕ್​ ಕೂಡಾ ಸ್ಪಷ್ಟೀಕರಣ ನೀಡಿತ್ತು. ಆದರೆ ನಮ್ಮ ತನಿಖೆಯ ವೇಳೆ ಎರಡೂ ಸಂಸ್ಥೆಗಳು ಸೂಕ್ತವಾದ ಉತ್ತವನ್ನು ನೀಡಿಲ್ಲ. ಹೀಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸುವಂತೆ ಆದೇಶಿಸಿರುವದಾಗಿ ರವಿಶಂಕರ್​ ಹೇಳಿದ್ದಾರೆ.

ಲಂಡನ್​ ಮೂಲದ ಕೇಂಬ್ರಿಡ್ಜ್​ ಸಂಸ್ಥೆ 2016ರ ಅಮೆರಿಕ ಚುನಾವಣೆಗಾಗಿ ಫೇಸ್​ಬುಕ್​ನಿಂದ ಮಾಹಿತಿಯನ್ನು ಕದ್ದಿದೆ ಎಂದು ಆರೋಪಿಸಿ ಎರಡು ಪ್ರಮುಖ ಪತ್ರಿಕೆಗಳು ವರದಿ ಮಾಡಿದ್ದವು. ಅಲ್ಲದೇ ತನಿಖೆ ವೇಳೆ ಈ ಸಂಸ್ಥೆ 2014ರಿಂದಲೇ ಫೇಸ್​ಬುಕ್​ನಿಂದ ಮಾಹಿತಿಯನ್ನು ಪಡೆದುಕೊಳ್ಳುತ್ತಿದೆ ಎಂದು ಬಹಿರಂಗವಾಗಿತ್ತು. ಹೀಗಾಗಿ ಫೇಸ್​ಬುಕ್​ ಭಾರೀ ಮುಜುಗರಕ್ಕೆ ಈಡಾಗಿತ್ತು.

ಕೇಂಬ್ರಿಜ್‌ ಅನಾಲಿಟಿಕಾ ಹಗರಣದಿಂದಾಗಿ ಅಪಖ್ಯಾತಿ ಗೀಡಾದ ನಂತರ ಫೇಸ್‌ಬುಕ್‌ ಬಳಕೆದಾರರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗ ತೊಡಗಿತು. ಹೀಗಾಗಿ ಬುಧವಾರದಂದು ಫೇಸ್ಬುಕ್ ಒಂದೇ ದಿನದಲ್ಲಿ ಷೇರುಮಾರುಕಟ್ಟೆಯಲ್ಲಿ 119 ಬಿಲಿಯನ್ ಡಾಲರ್​ಗೂ ಹೆಚ್ಚು ಹಣ ಸಂಸ್ಥೆ ನಷ್ಟ ಮಾಡಿಕೊಂಡಿದೆ. ಭಾರತೀಯ ರುಪಾಯಿಗೆ ಪರಿವರ್ತಿಸಿದರೆ ಇದು ಸರಿಸುಮಾರು 8 ಲಕ್ಷ ಕೋಟಿ ರೂಪಾಯಿ ಆಗುತ್ತದೆ.
ವಿಶ್ವ ಷೇರು ಮಾರುಕಟ್ಟೆ ಇತಿಹಾಸದಲ್ಲಿ ಒಂದೇ ದಿನದಲ್ಲಿ ಅತೀ ಹೆಚ್ಚು ಮೌಲ್ಯ ಕಳೆದುಕೊಂಡ ಕಂಪನಿ ಎಂಬ ದಾಖಲೆಯನ್ನು ಫೇಸ್ಬುಕ್ ನಿರ್ಮಿಸಿತು.
First published:July 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...