Chingari: ಟಿಕ್​ಟಾಕ್​ ಬ್ಯಾನ್ ಆದರೇನಂತೆ; ದೇಶಿಯ ಚಿಂಗಾರಿ ಮತ್ತು ಮಿತ್ರೋ ಆ್ಯಪ್​​ ಇದೆಯಲ್ಲ!

Mitron: ಮಿತ್ರೋ ದೇಶಿಯ ಆ್ಯಪ್​ ಆಗಿದ್ದು, ಸಾಕಷ್ಟು ಬಳಕೆದಾರರನ್ನು ಹೊಂದಿದೆ. ಐಐಟಿ ರೂರ್ಕಿಯ ವಿದ್ಯಾರ್ಥಿ ಶಿಬಾಂಕ್ ಅಗರ್ ವಾಲ್ ಈ ‘ಮಿತ್ರೋ‘ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಿದ್ದಾರೆ.

news18-kannada
Updated:June 30, 2020, 2:24 PM IST
Chingari: ಟಿಕ್​ಟಾಕ್​ ಬ್ಯಾನ್ ಆದರೇನಂತೆ; ದೇಶಿಯ ಚಿಂಗಾರಿ ಮತ್ತು ಮಿತ್ರೋ ಆ್ಯಪ್​​ ಇದೆಯಲ್ಲ!
ಮಿತ್ರೋ-ಚಿಂಗಾರಿ ಆ್ಯಪ್
  • Share this:
ಕೇಂದ್ರ ಸರ್ಕಾರ ಟಿಕ್​ಟಾಕ್​​ ಆ್ಯಪ್​ ಅನ್ನು ಬ್ಯಾನ್​ ಮಾಡಿದೆ. ಇದರ ಜೊತೆಗೆ ಚೀನಾ ಮೂಲಕ 58 ಆ್ಯಪ್​ಗಳನ್ನು ಕಿತ್ತೆಸೆದಿದೆ. ಮತ್ತೊಂದೆಡೆ ಕೆಲ ಆ್ಯಪ್​​ಗಳು ಗೂಗಲ್​ ಪ್ಲೇಸ್ಟೋರ್​ನಿಂದ ಕಣ್ಮರೆಯಾಗಿದೆ. ಹೀಗಿರುವಾಗ ದೇಶಿ ಟಿಕ್​ಟಾಕ್​ ಆ್ಯಪ್​ಗಳು ಭರ್ಜರಿ ಜನಪ್ರಿಯತೆ ಪಡೆಯುತ್ತಿವೆ.

ಟಿಕ್​ಟಾಕ್​ ಭಾರತದಲ್ಲಿ ಅನೇಕ ಬಳಕೆದಾರರನ್ನು ಹೊಂದಿದ್ದು, ಪ್ರತಿ ದಿನ ಸಾಕಷ್ಟು ವಿಡಿಯೋಗಳು ಟಿಕ್​ಟಾಕ್​ನಲ್ಲಿ ಅಪ್ಲೋಡ್​ ಆಗುತ್ತಿದ್ದವು. ಆದರೆ ಟಿಕ್​ಟಾಕ್​ ಚೀನಾ ಮೂಲದ್ದಾಗಿದ್ದು, ಆಂತರಿಕ ಮತ್ತು ಬಾಹ್ಯ ಭದ್ರತೆಗೆ ತೊಂದರೆಯನ್ನುಂಟು ಮಾಡಬಹುದು ಎಂಬ ಕಾರಣಕ್ಕೆ ನಿನ್ನೆ ಸಂಜೆ ಚೀನಿ ಆ್ಯಪ್​ಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ.

ಚಿಂಗಾರಿ ಆ್ಯಪ್​​:

ಟಿಕ್​ಟಾಕ್​ ಬ್ಯಾನ್​ ಆದ ಹಿನ್ನಲೆಯಲ್ಲಿ ದೇಶಿ ಆ್ಯಪ್​ ಚಿಂಗಾರಿ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. 25 ಲಕ್ಷಕ್ಕೂ ಅಧಿಕ ಡೌನ್​ಲೋಡ್​​ ಕಂಡಿದೆ. ಬಿಡುಗಡೆಯಾದ ​ ಕೇವಲ 10 ದಿನಗಳಲ್ಲಿ ಚಿಂಗಾರಿ ಆ್ಯಪ್ 5.5 ಲಕ್ಷ ಡೌನ್​ಲೋಡ್​​​​ ಕಂಡಿತ್ತು. ಇದೀಗ 25 ಲಕ್ಷ ಡೌನ್​ಲೋಡ್​ ಕಂಡಿದೆ.

ಚಿಂಗಾರಿ ಟಿಕ್​ಟಾಕ್​​ನಂತೆಯೇ ಕಿರು-ವಿಡಿಯೋ ತಯಾರಿಕೆ ಅಪ್ಲಿಕೇಶನ್​ ಆಗಿದೆ. ಬಳಕೆದಾರರೊಂದಿಗೆ ಚಾಟ್​ ಮಾಡುವುದು, ವಿಡಿಯೋ ಅಪ್ಲೋಡ್​ ಮತ್ತು ಡೌನ್​ಲೋಡ್​ ಮಾಡುವ ಆಯ್ಕೆಯನ್ನು ನೀಡಿದೆ. ಈ ಆ್ಯಪ್​​ ಹಿಂದಿ, ಇಂಗ್ಲೀಷ್​, ಬಾಂಗ್ಲಾ, ಗುಜರಾತಿ, ಮರಾಠಿ, ಕನ್ನಡ, ಪಂಜಾಬಿ, ಮಲಯಾಳಂ, ತಮಿಳು, ತೆಲುಗು ಸೇರಿಂದಂತೆ ಅನೇಕ ಭಾಷೆಯಲ್ಲಿ ಲಭ್ಯವಿದೆ.

ಚಿಂಗಾರಿ ಆ್ಯಪ್​ ಮೂಲಕ ವಾಟ್ಸ್ಆ್ಯಪ್​​​ ​ ಸ್ಟೇಟಸ್​​, ಆಡಿಯೋ ತುಣುಕು, ವಿಡಿಯೋ ತುಣುಕು, ಜಿಐಎಫ್​​ ಸ್ಟಿಕ್ಕರ್​, ಫೋಟೋಗಳನ್ನು ರಚಿಸಬಹುದು. ಜೊತೆಗೆ ಟ್ರೆಂಡಿಂಗ್​ ನ್ಯೂಸ್​​, ಎಂಟರ್​ಟೈನ್​​​ಮೆಂಟ್​​ ನ್ಯೂಸ್​​, ಸಾಂಗ್​​ಗಳನ್ನು ವೀಕ್ಷಿಸಬಹುದಾಗಿದೆ.

 


ಮಿತ್ರೋ ಆ್ಯಪ್​​:

ಮಿತ್ರೋ ದೇಶಿಯ ಆ್ಯಪ್​ ಆಗಿದ್ದು, ಸಾಕಷ್ಟು ಬಳಕೆದಾರರನ್ನು ಹೊಂದಿದೆ. ಐಐಟಿ ರೂರ್ಕಿಯ ವಿದ್ಯಾರ್ಥಿ ಶಿಬಾಂಕ್ ಅಗರ್ ವಾಲ್ ಈ ‘ಮಿತ್ರೋ‘ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಿದ್ದಾರೆ.

ಇತ್ತೀಚೆಗೆ ‘ಮಿತ್ರೋ ಆ್ಯಪ್‘​​ ಅನ್ನು ಪಾಕಿಸ್ತಾನಿ ಮೂಲಕ ‘ಟಿಕ್​ಟಿಕ್​ ಆ್ಯಪ್‘​ ಕೋಡಿಂಗ್​ ಬಳಸಿ ಸಿದ್ಧಪಡಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿತ್ತು. ಇದನ್ನು ಮನಗಂಡ ಗೂಗಲ್​​ ಕಾನೂನು ಉಲ್ಲಂಘನೆ ಮಾಡಿರುವ ಕಾರಣಕ್ಕಾಗಿ ಪ್ಲೇ ಸ್ಟೋರ್​ನಿಂದ ತೆಗೆದು ಹಾಕಿತ್ತು. ನಂತರ ‘ಮಿತ್ರೋ ಆ್ಯಪ್‘​​ನಲ್ಲಿರುವ ಸಮಸ್ಯೆಗಳನ್ನು ಸರಿಪಡಿಸಲು ಗೂಗಲ್​ ಪ್ಲೇ ಸ್ಟೋರ್​ ಮಿತ್ರೋ ಡೆವಲಪರ್​ಗೆ ತಿಳಿಸಿದ್ದರು.

ಆನಂತರ 'ಮಿತ್ರೋ ಆ್ಯಪ್'​​ ತನ್ನ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಮತ್ತೆ ಪ್ಲೇ ಸ್ಟೋರ್​ಗೆ ಮರಳಿದೆ. ಪ್ಲೇ ಸ್ಟೋರ್​ನಿಂದ ‘ಮಿತ್ರೋ ಆ್ಯಪ್​‘ ರಿಮೂವ್​ ಆಗುವ ಮೊದಲು 50 ಲಕ್ಷಕ್ಕೂ ಹೆಚ್ಚು ಡೌನ್​ಲೋಡ್​​ ಕಂಡಿತ್ತು. ಅಷ್ಟೇ ಅಲ್ಲದೆ, ಸಾಕಷ್ಟು ಜನಪ್ರಿಯತೆಯನ್ನು ಪಡೆದಿತ್ತು.  ಚೀನಾ ಮೂಲಕದ ಟಿಕ್​ಟಾಕ್​​ನಂತೆ ಮಿತ್ರೋ ಆ್ಯಪ್​ ಅನ್ನು ಸಿದ್ಧಪಡಿಸಲಾಗಿತ್ತು.

ಇದೀಗ ಟಿಕ್​ಟಾಕ್​ ಬ್ಯಾನ್​ ಆದ ಹಿನ್ನಲೆಯಲ್ಲಿ ಭಾರತದ ಚಿಂಗಾರಿ, ಮಿತ್ರೋ ಆ್ಯಪ್​​ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ.

Viral Video – ನಾಯಿ ಬೊಗಳಿದಕ್ಕೆ ಗೇಟ್ ತೆರೆದು ಬಂದ ಗಜರಾಜ; ಕಾಲ್ಕಿತ್ತ ನಾಯಿಗಳು
First published:June 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading