ಇಂದಿನ ದಿನದಲ್ಲಿ ಮೊಬೈಲ್ ಫೋನ್ (Mobile Phone) ಬಳಕೆ ಮಾಡದೇ ಇರುವವರು ಯಾರಿದ್ದಾರೆ ಹೇಳಿ? ಊಟ ತಿಂಡಿ ನಿದ್ದೆ ಹೀಗೆ ಹೋದಲ್ಲಿ ಬಂದಲ್ಲಿ ಜೊತೆಯಾಗಿರುವುದೇ ಈ ಮೊಬೈಲ್ ಫೋನ್ ಎಂಬಷ್ಟರ ಮಟ್ಟಿಗೆ ಮೊಬೈಲ್ ಫೋನ್‌ಗೆ ಅಂಟಿಕೊಂಡು ಬಿಟ್ಟಿದ್ದೇವೆ. ಆದರೆ ಜನರು (Humans) ಮೊಬೈಲ್ ಫೋನ್‌ನ ಚಟಕ್ಕೆ ಬೀಳುತ್ತಾರೆ ಎಂಬುದನ್ನು ಇದನ್ನು 50 ವರ್ಷಗಳ ಹಿಂದೆ ಆವಿಷ್ಕರಿಸಿದ ಸೆಲ್ ಫೋನ್ ಪಿತಾಮಹ ಮಾರ್ಟಿನ್ ಕೂಪರ್ (Martin Cooper) ಊಹಿಸಿದ್ದರು. ಸ್ಮಾರ್ಟ್ಫೋನ್ಗಳ ಬಳಕೆ ಹೆಚ್ಚಾದಂತೆ ಅದರ ದುರುಪಯೋಗಗಳು ಸಹ ಹೆಚ್ಚಾಗುತ್ತಿದೆ.
ಇನ್ನು ಈ ಮೊಬೈಲ್ ಮುಂದೊಂದು ದಿನ ಮಾನವರಿಗೆ ಚಟವಾಗಿ ಬದಲಾಗಬಹುದು ಎಂದು ಮೊಬೈಲ್ ಕಂಡುಹಿಡಿದ ಮಾರ್ಟಿನ್ ಕೂಪರ್ ಊಹಿಸಿದ್ದರು.
ರೋಗವನ್ನು ಜಯಿಸಬಲ್ಲುದೇ ಮೊಬೈಲ್ ಫೋನ್
ಸೆಲ್ ಫೋನ್ ಪಿತಾಮಹ ಎಂದೇ ಹೆಸರುವಾಸಿಯಾದ ಅಮೆರಿಕನ್ ಇಂಜಿನಿಯರ್ ಮಾರ್ಟಿನ್ ಕೂಪರ್ ನಮ್ಮ ಜೇಬಿನಲ್ಲಿರುವ ಸಣ್ಣ ವಸ್ತು ಮಿತಿಯೇ ಇಲ್ಲದ ಸಾಮರ್ಥ್ಯವನ್ನು ಹೊಂದಿದೆ ಎಂದು ಅಂದೇ ಬಣ್ಣಿಸಿದ್ದರು.
ಇದನ್ನೂ ಓದಿ: ಅಮೆಜಾನ್ನಲ್ಲಿ ಇನ್ಮುಂದೆ ರಿಟರ್ನ್ ಬಂದ ಪ್ರೊಡಕ್ಟ್ ಅನ್ನೂ ನೋಡ್ಬಹುದು! ಹೇಗೆ ಗೊತ್ತಾ?
ಇದು ಎಷ್ಟೊಂದು ಮುಂದುವರಿಯುತ್ತದೆ ಎಂದರೆ ರೋಗವನ್ನು ಜಯಿಸಲು ಸಹ ಈಗ ಈ ಡಿವೈಸ್ ಸಹಕಾರಿಯಾಗಲಿದೆ ಎಂಬ ಭವಿಷ್ಯವನ್ನು ನುಡಿದಿದ್ದರು. ಆದರೆ ಇಂದಿನ ದಿನಗಳಲ್ಲಿ ಮೊಬೈಲ್ ಹಿಡಿಯುವುದೇ ಒಂದು ರೋಗವಾಗಿಬಿಟ್ಟಿದೆ.
ಎಲ್ಲಾ ಸಮಯದಲ್ಲಿ ಡಿವೈಸ್ ಬಳಸದಿರಿ
ಯಾರಾದರೂ ರಸ್ತೆ ದಾಟುವಾಗ ತಮ್ಮ ತಮ್ಮ ಫೋನ್‌ನತ್ತ ನೋಡುವುದು ನಿಜಕ್ಕೂ ನನಗೆ ಕೋಪ ತರಿಸುತ್ತದೆ. ಹೀಗೆ ಮೊಬೈಲ್ ಫೋನ್ ಬಳಸುವಾಗ ತಾವು ಎಲ್ಲಿದ್ದೇವೆ, ಏನು ಮಾಡುತ್ತಿದ್ದೇವೆ ಎಂಬ ಪರಿಜ್ಞಾನ ಕೂಡ ಅವರಿಗಿರುವುದಿಲ್ಲ ಎಂಬುದಾಗಿ 94 ರ ಹರೆಯದ ಮಾರ್ಟಿನ್ ಕೂಪರ್ ತಿಳಿಸುತ್ತಾರೆ.
ಯುವ ಜನಾಂಗ ತುಂಬಾ ಮುಂದಿದೆ
ಮಾರ್ಟಿನ್ ಕೂಪರ್ ಕೂಡ ದುಬಾರಿ ಐಫೋನ್ ಹಾಗೂ ಆ್ಯಪಲ್ ವಾಚ್‌ಗಳನ್ನು ಬಳಸುತ್ತಾರೆ ಅಂತೆಯೇ ಇಮೇಲ್, ಫೋಟೋ, ಯೂಟ್ಯೂಬ್ ಮೊದಲಾದ ತಂತ್ರಜ್ಞಾನಗಳನ್ನು ದೈನಂದಿನ ಜೀವನದಲ್ಲಿ ಉಪಯೋಗಿಸುತ್ತಾರೆ. ಆದರೆ ಇತ್ತೀಚಿನ ಜನಾಂಗ ಮೊಬೈಲ್ ಫೋನ್‌ಗಳನ್ನು ಬಳಸುವಂತೆ ನನಗೆ ಬಳಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಕೂಡ ಬಿಚ್ಚಿಡುತ್ತಾರೆ.
ತಂತ್ರಜ್ಞಾನದ ಪ್ರಗತಿ
ಕೂಪರ್ ತಮ್ಮ ಐಫೋನ್ ಅನ್ನು ಜನರೊಂದಿಗೆ ಸಂವಹನ ನಡೆಸಲು ಮಾತ್ರ ಹೆಚ್ಚಾಗಿ ಬಳಸುತ್ತಾರೆ ಎಂದು ತಿಳಿಸಿದ್ದು, ಏಪ್ರಿಲ್ 3, 1973 ರಂದು ಮೊದಲ ಬಾರಿಗೆ ಮೊಬೈಲ್ ಕರೆ ಮಾಡಲು ಬಳಸಿದ ಸರ್ಕ್ಯೂಟ್‌ಗಳು ಹಾಗೂ ಟೆಕ್ನಿಕ್‌ಗಳು ಇಂದಿನ ಕಾಲಮಾನಕ್ಕೆ ಹೋಲಿಸಿದಾಗ ಬಹಳಷ್ಟು ಅಂತರವಿದೆ ಎಂದು ತಿಳಿಸಿದ್ದಾರೆ.
ಮೊಟೊರೊಲಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಕೂಪರ್ ಅತ್ಯುತ್ತಮ ಮೊಬೈಲ್ ತಂತ್ರಜ್ಞಾನವನ್ನು ರೂಪಿಸಲು ತಮ್ಮ ತಂಡ ಹಾಗೂ ಇಂಜಿನಿಯರ್ ಅಂತೆಯೇ ವಿನ್ಯಾಸಕರ ತಂಡವನ್ನು ಮುನ್ನಡೆಸಿದರು ಎಂದು ತಿಳಿಸಿದ್ದಾರೆ.
ಯುಎಸ್ ಟೆಲಿಕಾಂನಲ್ಲಿ ಹೆಚ್ಚು ಪ್ರಾಬಲ್ಯ ಸಾಧಿಸಿದ್ದ ಬೆಲ್ ಸಿಸ್ಟಮ್ ಅನ್ನು ಸೋಲಿಸಬೇಕು ಎಂಬ ಆಶಯದೊಂದಿಗೆ ಕಂಪೆನಿಯು ಮಿಲಿಯನ್‌ಗಟ್ಟಲೆ ಡಾಲರ್‌ಗಳನ್ನು ಹೂಡಿಕೆ ಮಾಡಿತು. ವಿಶ್ವಯುದ್ಧ 2 ರ ನಂತರ ಬೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಂಜಿನಿಯರ್‌ಗಳು ಸೆಲ್ಯುಲಾರ್ ಫೋನ್ ವ್ಯವಸ್ಥೆಯಿಂದ ಕಾರ್‌ಗಳಲ್ಲಿ ಫೋನ್‌ಗಳನ್ನು ಅಳವಡಿಸುವವರೆಗೆ ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸಿದರು.
ಆದರೆ 1972 ರಲ್ಲಿ ಕೂಪರ್ ಇವರಿಗಿಂತ ಹೆಚ್ಚು ಸಾಧಿಸಬೇಕು ಎಂಬ ನಿರ್ಧಾರ ಮಾಡಿದ್ದರು ಅಂತೆಯೇ ಎಲ್ಲಿ ಬೇಕಾದರೂ, ಹೇಗೆ ಬೇಕಾದರೂ, ಯಾವಾಗ ಬೇಕಾದರೂ ಬಳಸಬಹುದಾದ ಡಿವೈಸ್ ಅನ್ನು ಆವಿಷ್ಕರಿಸುವ ಪಣತೊಟ್ಟರು. ಮೊಟೊರೊಲಾದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಹೋದ್ಯೋಗಿಗಳನ್ನು ಒಟ್ಟಾಗಿಸಿ ತಮ್ಮ ಯೋಜನೆಯ ಕುರಿತು ಮಾಹಿತಿ ನೀಡಿದರು. ಇದನ್ನು ಹೇಗೆ ಸಾಧಿಸಬಹುದೆಂಬ ಐಡಿಯಾಗಳನ್ನು ಅವರಿಂದ ಪಡೆದುಕೊಂಡರು.
ಸೆಮಿಕಂಡಕ್ಟರ್‌ಗಳು, ಟ್ರಾನ್ಸಿಸ್ಟರ್‌ಗಳು, ಫಿಲ್ಟರ್‌ಗಳು ಮತ್ತು ಆಂಟೆನಾಗಳ ತಜ್ಞರೊಂದಿಗೆ ಸಮಾಲೋಚನೆ ನಡೆಸಿದರು. ಡೈನಾಮಿಕ್ ಅಡಾಪ್ಟಿವ್ ಟೋಟಲ್ ಏರಿಯಾ ಕವರೇಜ್ ಅನ್ನು ಬಿಡುಗಡೆಗೊಳಿಸಿದರು. ಈ ಫೋನ್ ಒಂದು ಕಿಲೋಗಿಂತ ಹೆಚ್ಚು ತೂಕವನ್ನು ಹೊಂದಿತ್ತು ಎಂದು ತಿಳಿಸುವ ಕೂಪರ್, ಇದರ ಬ್ಯಾಟರಿಯೇ ಎರಡೂವರೆ ಪೌಂಡ್‌ಗಳಾಗಿತ್ತು ಅಂತೆಯೇ 25 ನಿಮಿಷಗಳ ಕಾಲ ಮಾತನಾಡುವ ಸಾಮರ್ಥ್ಯವನ್ನು ಹೊಂದಿತ್ತು.
ಕಾಯಿಲೆಯನ್ನು ಜಯಿಸುವುದು
ಕೂಪರ್ ಡಿವೈಸ್ ನಿರ್ಮಿಸಿದ ಸಮಯದಲ್ಲಿ ಮೊಬೈಲ್ ಫೋನ್‌ಗಳು ತುಂಬಾ ದುಬಾರಿಯಾಗಿದ್ದವು ಎಂದು ತಿಳಿಸುತ್ತಾರೆ. ಜನರು ಡಿವೈಸ್ ಕೊಂಡಾಗ ತಾವೇನೋ ಸಾಧನೆ ಮಾಡಿದಂತೆ ಬೀಗುತ್ತಿದ್ದರು ಎಂದು ಕೂಪರ್ ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಆದರೀಗ ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆ ಡಿವೈಸ್‌ಗಳಲ್ಲಿ ಕೂಡ ಸುಧಾರಣೆ ಕಂಡುಬಂದಿದೆ. ಜನರ ಜೀವನ ಮಟ್ಟವನ್ನು ಮೊಬೈಲ್ ಫೋನ್‌ಗಳು ಸುಧಾರಿಸಿದೆ ಎಂದು ತಿಳಿಸಿದ್ದಾರೆ.
ಇನ್ನಷ್ಟು ಸುಧಾರಣೆಗಳನ್ನು ಮೊಬೈಲ್ ಡಿವೈಸ್‌ಗಳು ಮನುಕುಲಕ್ಕೆ ಮಾಡಲಿದೆ ಎಂದು ಕೂಪರ್ ಅಭಿಪ್ರಾಯಪಟ್ಟಿದ್ದಾರೆ. ಶಿಕ್ಷಣ, ಆರೋಗ್ಯ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಇದು ಮುನ್ನಡೆ ಗಳಿಸಲಿದೆ ಅಂತೆಯೇ ಕಾಯಿಲೆಯನ್ನು ನಿವಾರಿಸುವ ಸಾಮರ್ಥ್ಯ ಪಡೆದುಕೊಳ್ಳಲಿದೆ ಎಂದು ತಿಳಿಸುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ