ಹೆಚ್ಚಿನ ಜನರಿಗೆ ಇಂದಿನ ದಿನಗಳಲ್ಲಿ ಸ್ಮಾರ್ಟ್ಫೋನ್ಗಳು (Smartphones) ಬಹಳ ಮುಖ್ಯ ಸಾಧನವಾಗಿಬಿಟ್ಟಿದೆ. ಈ ಮಧ್ಯೆ ಕೆಲವೊಂದು ಬಾರಿ ಊರಲ್ಲಿ ಹಬ್ಬ, ಸಂಭ್ರಮಾಚರಣೆಗಳು ಬಂದಾಗ ಮನೆಯಲ್ಲಿ ನಾವೇ ಇರಲ್ಲ. ಆದರೆ ಈ ಸಂದರ್ಭಗಳಲ್ಲಿ ಏನು ಮಾಡೋದು ಎಂದು ಗೊತ್ತೇ ಆಗಲ್ಲ. ಇನ್ನೇನು ಕೆಲವೇ ಗಂಟೆಗಳಲ್ಲಿ ಹೋಳಿ ಸಂಭ್ರಮಾಚರಣೆ (Holi Celebration) ಪ್ರಾರಂಭವಾಗ್ತದೆ. ಈ ಸಂದರ್ಭದಲ್ಲಿ ಕೆಲವರು ತಮ್ಮ ಸ್ವಂತ ಊರುಗಳಿಂದ ದೂರದಲ್ಲಿ ಕೆಲಸದಲ್ಲಿರುತ್ತಾರೆ. ಈ ಸಂದರ್ಭದಲ್ಲಿ ಮನೆಯಲ್ಲೇ ಇದ್ದವರಿಗೆ ಈಗ ಮೊಬೈಲ್ (Mobile) ಮೂಲಕವೇ ತಮ್ಮ ಸಂಬಂಧಿಕರ ಜೊತೆಗೆ ಹೋಳಿ ಹಬ್ಬವನ್ನು ಆಚರಿಸಬಹುದು.
ಭಾರತೀಯರಿಗೆ ಹೋಳಿ ಎಂಬುದು ಒಂದು ವಿಶೇಷ ಹಬ್ಬ. ಇಂದು ಮತ್ತು ನಾಳೆ ನಡೆಯುವ ಈ ಹಬ್ಬವನ್ನು ಸ್ನೇಹಿತರು, ಫ್ಯಾಮಿಲಿಯವರೆಲ್ಲಾ ಒಂದೆಡೆ ಸೇರಿ ಆಚರಿಸುತ್ತಾರೆ. ಆದರೆ ಈ ಸಂದರ್ಭದಲ್ಲಿ ದೂರದೂರಿನಲ್ಲಿ ಕೆಲಸಕ್ಕೆಂದು ಹೋದವರಿಗೆ ಹೋಳಿ ಹಬ್ಬವನ್ನು ಆಚರಿಸಲಾಗುವುದಿಲ್ಲ. ಆದರೆ ಈ ಟ್ರಿಕ್ಸ್ ಬಳಸಿಕೊಂಡು ಮೊಬೈಲ್ನಲ್ಲೇ ಈ ಬಾರಿಯ ಹೋಳಿ ಹಬ್ಬವನ್ನು ಆಚರಿಸ್ಬಹುದು.
ಮೆಸೇಜಿಂಗ್ ಪ್ಲಾಟ್ಫಾರ್ಮ್ಗಳನ್ನು ಬಳಸಿ
ಯಾವುದೇ ಮೆಸೆಜಿಂಗ್ ಆ್ಯಪ್ ಆದರೂ ಸಹ ಭಾರತೀಯ ಹಬ್ಬಗಳಿಗೆ ಜೊತೆಯಾಗುತ್ತವೆ. ಇದಕ್ಕಾಗಿ ಅವರು ವಿಶೇಷ ಸ್ಟಿಕ್ಕರ್‌ಗಳನ್ನು ಪರಿಚಯಿಸುವುದರ ಜೊತೆಗೆ ಬಳಕೆದಾರರು ತಮ್ಮ ಪ್ರೀತಿ ಪಾತ್ರರ ಜೊತೆ ಸಮಯ ಕಳೆಯಲು ಅನುವು ಮಾಡಿಕೊಡುತ್ತವೆ. ಅದರಂತೆ ನೀವು ವಾಟ್ಸಾಪ್, ಇನ್‌ಸ್ಟಾಗ್ರಾಮ್ ಹಾಗೂ ಟೆಲಿಗ್ರಾಮ್ ನಂತಹ ಮೆಸೆಜಿಂಗ್ ಆ್ಯಪ್‌ಗಳನ್ನು ಬಳಕೆ ಮಾಡಿಕೊಂಡು ಹೋಳಿ ಸ್ಟಿಕ್ಕರ್‌ಗಳನ್ನು ಕಳುಹಿಸಬಹುದಾಗಿದೆ.
ಇದನ್ನೂ ಓದಿ: ಮತ್ತೆ ಬದಲಾವಣೆಯ ಹಂತದಲ್ಲಿದೆ ಟ್ವಿಟರ್! ಹೊಸ ಅಪ್ಡೇಟ್ ಏನು?
ವಿಡಿಯೋ ಕಾಲ್ ಮಾಡಿ
ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೆ ಈ ಹೋಳಿ ಶುಭಾಶಯಗಳನ್ನು ವಿಡಿಯೋ ಕರೆ ಮಾಡಿ ಹೇಳುವುದು ಉತ್ತಮ ಮಾರ್ಗವಾಗಿದೆ. ಕೇವಲ ಟೆಕ್ಸ್ಟ್ ಮೆಸೇಜ್ ಹಾಗೂ ಇನ್ನಿತರೆ ಸಂದೇಶಗಳನ್ನು ಇದಕ್ಕೆ ಹೋಲಿಕೆ ಮಾಡಿದರೆ ವಿಡಿಯೋ ಕರೆ ಹೆಚ್ಚಿನ ಪರಿಣಾಮ ಬೀರುತ್ತದೆ. ಇದಕ್ಕಾಗಿ ನಿವು ವಾಟ್ಸಾಪ್, ಟೆಲಿಗ್ರಾಮ್, ಸಿಗ್ನಲ್, ಇನ್‌ಸ್ಟಾಗ್ರಾಮ್, ಸ್ನ್ಯಾಪ್‌ಚಾಟ್, ಸ್ಕೈಪ್ ಸೇರಿದಂತೆ ಇತರೆ ಅಪ್ಲಿಕೇಶನ್ಗಳನ್ನು ಬಳಕೆ ಮಾಡಿಕೊಂಡು ಹೋಳಿ ಹಬ್ಬವನ್ನು ಆಚರಿಸಬಹುದು.
GIF, ಎಮೋಜಿಗಳನ್ನು ಶೇರ್ ಮಾಡಿ
ವಿಡಿಯೋ ಕಾಲ್ ಅಥವಾ ಸ್ಟಿಕ್ಕರ್ ಹೊರತಾಗಿಯೂ GIF ಹಾಗೂ ಎಮೋಜಿ ಬಳಕೆ ಮಾಡಿಕೊಂಡು ಹೋಳಿ ಹಬ್ಬ ಆಚರಣೆ ಮಾಡಬಹುದಾಗಿದೆ. ಅದರಲ್ಲೂ ನಿಮ್ಮದೇ ಫೋಟೋ ಅಥವಾ ವಿಡಿಯೋಗಳನ್ನು GIF ಫೈಲ್ ಆಗಿ ಪರಿವರ್ತಿಸುವ ಅವಕಾಶ ಸಹ ಇದ್ದು, ಇವುಗಳನ್ನು ಬಳಕೆ ಮಾಡಿಕೊಂಡು ನಿಮ್ಮ ಪ್ರೀತಿ ಪಾತ್ರರಿಗೆ ಶುಭಾಶಯ ಕೋರಿದರೆ ಖಂಡಿತಾ ಖುಷಿಯನ್ನು ನೀಡಬಹುದು.
ಎಆರ್ ಲೆನ್ಸ್ ಬಳಕೆ ಮಾಡಿ
ಸ್ನ್ಯಾಪ್‌ಚಾಟ್, ಇನ್‌ಸ್ಟಾಗ್ರಾಮ್‌ನಲ್ಲಿ ಸೇರಿದಂತೆ ಹೆಚ್ಚು ಬಳಕೆಯಲ್ಲಿರುವ ಮೆಸೇಜಿಂಗ್ ಆ್ಯಪ್ಗಳಲ್ಲಿ ಎಆರ್ ಲೆನ್ಸ್ ಫೀಚರ್ಸ್ ಇದ್ದು, ಇದನ್ನು ಈ ರೀತಿಯ ಹಬ್ಬದ ಸಂದರ್ಭಗಳಿಗೆ ಬಳಕೆ ಮಾಡಿಕೊಳ್ಳುವುದರ ಮೂಲಕ ಸಂಭ್ರಮದ ಕಳೆಗೆ ಇನ್ನಷ್ಟು ಮೆರುಗು ನೀಡಬಹುದು. ಅದರಂತೆ ಸ್ನ್ಯಾಪ್‌ಚಾಟ್ ಹೋಳಿ ಎಆರ್ ಲೆನ್ಸ್ ಅನ್ನು ಬಳಕೆದಾರರಿಗೆ ಲಭ್ಯವಾಗಿಸಿದ್ದು, ಇನ್‌ಸ್ಟಾಗ್ರಾಮ್‌ನಲ್ಲೂ ಸಹ ಈ ಹೋಳಿ ಲೆನ್ಸ್ ಫಿಲ್ಟರ್‌ಗಳನ್ನು ಬಳಕೆ ಮಾಡಿಕೊಂಡು ಹೋಳಿ ಆಚರಿಸಬಹುದಾಗಿದೆ.
ಬ್ರಾಡ್‌ಕಾಸ್ಟ್ ಸೇವೆ ಪಡೆಯಿರಿ
ಮೇಲೆ ತಿಳಿಸಿದ ಇಷ್ಟೆಲ್ಲಾ ಆಯ್ಕೆಗಳನ್ನು ಸದುಪಯೋಗ ಪಡಿಸಿಕೊಳ್ಳುವುದರ ಜೊತೆಗೆ ನೀವು ಹಲವಾರು ಮಂದಿಗೆ ಒಂದೇ ಸಮಯದಲ್ಲಿ ಶುಭಾಶಯ ಕೋರಲು ಇಚ್ಚೆಪಟ್ಟರೆ ವಾಟ್ಸಾಪ್ ಇತ್ತೀಚೆಗೆ ಘೋಷಣೆ ಮಾಡಲಾದ ಬ್ರಾಡ್‌ಕಾಸ್ಟ್ ಸೇವೆಯನ್ನು ಬಳಕೆ ಮಾಡಿಕೊಳ್ಳಬಹುದು. ಈ ಮೂಲಕ ನಿಮ್ಮ ಶುಭಾಶಯ ಕೆಲವೇ ನಿಮಿಷದಲ್ಲಿ ಬಳಕೆದಾರರಿಗೆ ತಲುಪುತ್ತದೆ. ಇದೂ ಸಹ ಹೋಳಿ ಹಬ್ಬವನ್ನು ಆಚರಿಸಲು ಉತ್ತಮ ಐಡಿಯಾ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ