HOME » NEWS » Tech » CCI ORDERS INVESTIGATION INTO WHATSAPPS PRIVACY POLICY CHANGES HG

WhatsApp ಹೊಸ ಪ್ರೈವಸಿ ಪಾಲಿಸಿ ಕುರಿತಾಗಿ ತನಿಖೆ ನಡೆಸಲು ಭಾರತದ ಸ್ಪರ್ಧಾತ್ಮಕ ಆಯೋಗ ಆದೇಶ!

WhatsApp Privacy Policy: ವಾಟ್ಸ್ಆ್ಯಪ್​ ಭಾರತದ ಸರ್ಧಾ ಕಾಯ್ಡೆ 2000ರ ಉಲ್ಲಂಘನೆಗೆ ಪುಷ್ಟಿ ನೀಡಿರುವುದು ಕಂಡುಬಂದಿದೆ. ಈ ಹಿನ್ನಲೆಯಲ್ಲಿ ತನಿಖೆ ನಡೆಸಲು ಮುಂದಾಗಿದೆ.

news18-kannada
Updated:March 25, 2021, 12:12 PM IST
WhatsApp ಹೊಸ ಪ್ರೈವಸಿ ಪಾಲಿಸಿ ಕುರಿತಾಗಿ ತನಿಖೆ ನಡೆಸಲು ಭಾರತದ ಸ್ಪರ್ಧಾತ್ಮಕ ಆಯೋಗ ಆದೇಶ!
ವಾಟ್ಸ್​ಆಪ್​.
  • Share this:
ಇತ್ತೀಚೆಗೆ ಜನಪ್ರಿಯ ವಾಟ್ಸ್​​ಆ್ಯಪ್ ಹೊಸ​ ಪ್ರೈವಸಿ ಪಾಲಿಸಿ ನೀತಿಯಿಂದ ಬಳಕೆದಾರರ ಕೆಂಗಣ್ಣಿಗೆ ಗುರಿಯಾಯಿತು. ಅನೇಕರು ವಾಟ್ಸ್ಆ್ಯಪ್​ ತೊರೆದು ಬೇರೆ ಆ್ಯಪ್​​​ಗಳತ್ತ ಮುಖಮಾಡಿದರು. ಇದರ ನಡುವೆ ವಾಟ್ಸ್ಆ್ಯಪ್​ ಇನ್ನುಳಿದ ಬಳಕೆದಾರರಿಗೆ ಪ್ರೈವಸಿ ಪಾಲಿಸಿಗೆ ಒಪ್ಪಿಕೊಳ್ಳಲು ಸಮಯವಕಾಶವನ್ನು ಕೂಡ ನೀಡಿತ್ತು. ಇದೀಗ ಇದೇ ವಿಚಾರವಾಗಿ ಭಾರತದ ಸ್ಪರ್ಧಾತ್ಮಕ ಆಯೋಗ (ಸಿಸಿಐ) ತನಿಖೆ ನಡೆಸಲು ಆಯೋಜಿಸಿದೆ.

ವಾಟ್ಸ್​​ಆ್ಯಪ್​ ಹೊಸ ಪಾಲಿಸಿ ಒಪ್ಪಿಗೆ ಸೂಚಿಸಿದ ಅನೇಕ ಬಳಕೆದಾರರು ಆ್ಯಪ್​ ತೊರೆದರು. ಈ ವಿಚಾರವಾಗಿ ಸಿಸಿಐ  ವಾಟ್ಸ್​​ಆ್ಯಪ್​​ ಅನ್ನು  ಸೂಕ್ಷವಾಗಿ ಪರಿಶೀಲಿಸಿದೆ. ವಾಟ್ಸ್ಆ್ಯಪ್​ ಭಾರತದ ಸರ್ಧಾ ಕಾಯ್ಡೆ 2000ರ ಉಲ್ಲಂಘನೆಗೆ ಪುಷ್ಟಿ ನೀಡಿರುವುದು ಕಂಡುಬಂದಿದೆ. ಈ ಹಿನ್ನಲೆಯಲ್ಲಿ ತನಿಖೆ ನಡೆಸಲು ಮುಂದಾಗಿದೆ. 60 ದಿನಗಳಲ್ಲಿ ವರದಿ ಸಲ್ಲಿಸುವಂತೆ ಡೈರೆಕ್ಟರ್​ ಜನರಲ್​ಗೆ ಸೂಚನೆ ನೀಡಿದೆ.

ಅದರ ಜೊತೆಗೆ ವಾಟ್ಸ್​​ಆ್ಯಪ್ ಕುರಿತಾದ ಕೆಲವು ಅಂಶಗಳನ್ನು ಹೊರಹಾಕಿದೆ. ಪಾರದರ್ಶಕವಾಗಿ ವಾಟ್ಸ್​ಆ್ಯಪ್​ ಕಾರ್ಯನಿರ್ವಹಿಸುತ್ತಿಲ್ಲ ಎಂದು ತಿಳಿಸಿದೆ. ಅಷ್ಟು ಮಾತ್ರವಲ್ಲದೆ, ಬಳಕೆದಾರರ ಮಾಹಿತಿಯನ್ನು ಫೇಸ್​ಬುಕ್​ ಕಂಪನಿಯೊಂದಿಗೆ ಹಂಚಿಕೊಳ್ಳುವ ಮೂಲಕ ನಿಯಮ ಉಲ್ಲಂಘನೆ ಮಾಡಿದೆ ಎಂದು ತಿಳಿಸಿದೆ.
Youtube Video

ವಾಟ್ಸ್ಆ್ಯಪ್​ ಖಾಸಗಿ ತನದ ವಿಚಾರವಾಗಿ ಕೇಂದ್ರ ಸರ್ಕಾರ ಶುಕ್ರವಾರದಂದು ದೆಹಲಿ ಹೈಕೋರ್ಟ್​ಗೆ ತಿಳಿಸಿದೆ. ಪ್ರೈವೆಸಿ ಪಾಲಿಸಿ ಅಪ್ಡೇಟ್​​ ಮಾಡುವುದನ್ನು ತಡೆಯಬೇಕು ಎಂದು ಹೇಳಿದೆ. ಮಾತ್ರವಲ್ಲದೆ, ಸರ್ಕಾರ ಅಫಿಡವಿತ್​ ಸಲ್ಲಿಸಿದೆ.
Published by: Harshith AS
First published: March 25, 2021, 12:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories