Cashify Survey: ಕೈಗೆಟುಕುವ ದರದಲ್ಲಿ ಸಿಗುವ ರೀಫರ್ಬಿಶ್ಡ್ ಫೋನ್‌ಗಳನ್ನೇ ಖರೀದಿ ಮಾಡುತ್ತಿದ್ದಾರಂತೆ ಗ್ರಾಹಕರು

ಮರು-ವಾಣಿಜ್ಯ ಕಂಪನಿ ಕ್ಯಾಶಿಫೈ ಸಮೀಕ್ಷೆ ನಡೆಸಿದ ಪ್ರಕಾರ “ 70% ರಷ್ಟು ಗ್ರಾಹಕರು ಶಿಯೋಮಿ, ಆಪಲ್ ಮತ್ತು ಸ್ಯಾಮ್‌ಸಂಗ್‌ನೊಂದಿಗೆ ನವೀಕರಿಸಿದ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿದ್ದಾರೆ. ಅದರಲ್ಲೂ, ಒನ್‌ಪ್ಲಸ್ ಮೊಬೈಲ್‌ ಪೋನ್‌ ಜನರಿಗೆ ಪಾಕೆಟ್ ಸ್ನೇಹಿ ಬೆಲೆಯಲ್ಲಿ ಲಭ್ಯವಾಗುತ್ತಿರುವುದರಿಂದ ಈ ಪ್ರೀಮಿಯಂ ಫೋನ್ ಜನರು ಹೆಚ್ಚು ಖರೀದಿಸಲು ಬಯಸುತ್ತಿರುವ ಬ್ರ್ಯಾಂಡ್ ಆಗಿ ಹೊರ ಹೊಮ್ಮಿದೆ” ಎಂದು ಹೇಳಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈ ಆಧುನಿಕ ಕಾಲದಲ್ಲಿ ಪ್ರತಿಯೊಬ್ಬರು ಮೊಬೈಲ್‌ ಪೋನ್‌ ಅನ್ನು (Mobile Phone) ಬಳಸುತ್ತಾರೆ. ಅದರಲ್ಲೂ ದಿನನಿತ್ಯ ಸಾವಿರಾರು ಮೊಬೈಲ್‌ ಪೋನ್‌ಗಳು ಮಾರುಕಟ್ಟೆಗೆ (Market) ಲಗ್ಗೆ ಇಡುತ್ತಲೇ ಇರುತ್ತವೆ. ಗ್ರಾಹಕರಿಗೆ ಯಾವ ಮೊಬೈಲ್‌ ಪೋನ್‌ ತೆಗೆದುಕೊಳ್ಳಬೇಕು ಎಂದು ಕೆಲವು ಸಲ ಗೊಂದಲ ಉಂಟಾಗುವುದು ಸಹಜ. ಅದರಲ್ಲೂ ಇತ್ತೀಚೆಗೆ ಹಣದುಬ್ಬರವು (Inflation) ಎಲ್ಲ ಕಡೆ ಹೆಚ್ಚಾಗುತ್ತಿದೆ. ಆದ್ದರಿಂದ ಕೆಲ ಜನರು ಸಮಸ್ಯೆಗಳು ಬಂದಾಗ ಪೋನ್‌ಗಳನ್ನು ಮಾರುತ್ತಿದ್ಧಾರೆ. ಪೋನ್‌ ತೆಗೆದುಕೊಳ್ಳುವ ಅಂಗಡಿಗಳು (Mobile Shops) ಅದರ ಬಿಡಿ ಭಾಗಗಳನ್ನು ಮರು ವಾಣಿಜ್ಯ ಕಂಪನಿಗಳಿಗೆ ಕೊಡುತ್ತವೆ. ಈ ಪ್ರಕ್ರಿಯೆ ಎಲ್ಲ ಮೊಬೈಲ್‌ ಅಂಗಡಿಗಳಲ್ಲಿ ದಿನನಿತ್ಯ ನಡೆಯುತ್ತಲೇ ಇರುತ್ತದೆ.

70% ರಷ್ಟು ನವೀಕರಿಸಿದ ಸ್ಮಾರ್ಟ್‌ಫೋನನ್ನು ಖರೀದಿಸುತ್ತಿರುವ ಗ್ರಾಹಕರು
ಇದರ ಕುರಿತಾಗಿ, ಮರು-ವಾಣಿಜ್ಯ ಕಂಪನಿ ಕ್ಯಾಶಿಫೈ ಸಮೀಕ್ಷೆ ನಡೆಸಿದ ಪ್ರಕಾರ “ 70% ರಷ್ಟು ಗ್ರಾಹಕರು ಶಿಯೋಮಿ, ಆಪಲ್ ಮತ್ತು ಸ್ಯಾಮ್‌ಸಂಗ್‌ನೊಂದಿಗೆ ರೀಫರ್ಬಿಶ್ಡ್/ನವೀಕರಣಗೊಂಡ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿದ್ದಾರೆ. ಅದರಲ್ಲೂ, ಒನ್‌ಪ್ಲಸ್ ಮೊಬೈಲ್‌ ಪೋನ್‌ ಜನರಿಗೆ ಪಾಕೆಟ್ ಸ್ನೇಹಿ ಬೆಲೆಯಲ್ಲಿ ಲಭ್ಯವಾಗುತ್ತಿರುವುದರಿಂದ ಈ ಪ್ರೀಮಿಯಂ ಫೋನ್ ಜನರು ಹೆಚ್ಚು ಖರೀದಿಸಲು ಬಯಸುತ್ತಿರುವ ಬ್ರ್ಯಾಂಡ್ ಆಗಿ ಹೊರ ಹೊಮ್ಮಿದೆ” ಎಂದು ಹೇಳಿದೆ.

ಈ ಕಂಪನಿ ಬಿಡುಗಡೆ ಮಾಡಿದ ಶ್ವೇತಪತ್ರದ ಪ್ರಕಾರ, “ಭಾರತೀಯರು ನವೀಕರಿಸಿದ ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದಾರೆ, ಏಕೆಂದರೆ ಇನ್‌ಪುಟ್ ವೆಚ್ಚದಲ್ಲಿನ ಏರಿಕೆಯಿಂದಾಗಿ ಹೊಸ ಸ್ಮಾರ್ಟ್‌ಫೋನ್‌ಗಳ ಬೆಲೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಸಮೀಕ್ಷೆಯ ಪ್ರಕಾರ, 70% ರಷ್ಟು ಜನರು ಈ ಪೋನ್‌ಗಳು ಕೈಗೆಟುಕುವ ದರದಲ್ಲಿ ಸಿಗುತ್ತಿರುವ ಕಾರಣ ಅಪ್‍ಡೇಟೆಡ್ ಸ್ಮಾರ್ಟ್‌ಫೋನ್ ಖರೀದಿಸಿದರೆ, 12% ಜನರು ಅದನ್ನು ಪ್ಯಾಕ್ ಪೀಸ್‍ನಲ್ಲಿ ಖರೀದಿಸಿದ್ದಾರೆ, 13% ರಷ್ಟು ಜನರು ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ನವೀಕರಿಸಿದ ಫೋನ್ ಖರೀದಿಸಿದ್ದಾರೆ" ಎಂದು ಸಮೀಕ್ಷೆ ಹೇಳಿದೆ.

ಬೈ ಬ್ಯಾಕ್‌ ಕೆಟಗರಿಯಲ್ಲಿiPhone 7 ಗೆ ಅಗ್ರ ಸ್ಥಾನ
ಈ ಮೊಬೈಲ್‌ ಪೋನ್‌ ಮಾಡೆಲ್‌ಗಳಲ್ಲಿ, iPhone 7 ಬೈ ಬ್ಯಾಕ್‌ ಕೆಟಗರಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ ಮತ್ತು Redmi Note 5 Pro ಎರಡನೇ ಸ್ಥಾನಕ್ಕೆ ಬಂದಿದೆ, ನಂತರದ ಸ್ಥಾನಗಳಲ್ಲಿ Redmi Note 4, iPhone 6 ಮತ್ತು iPhone X ಕ್ರಮವಾಗಿ ಸ್ಥಾನ ಪಡೆದಿವೆ.

ಇದನ್ನೂ ಓದಿ: Mobile Ban: ಭಾರತದಲ್ಲಿ ಚೀನಾದ ಕಡಿಮೆ ಬೆಲೆಯ ಮೊಬೈಲ್ ಬ್ಯಾನ್? ಇದುವೇ ಕಾರಣ

ಮರು-ವಾಣಿಜ್ಯ ವಿಭಾಗದಲ್ಲಿ Xiaomi ಮತ್ತು Samsung ನ ಜನಪ್ರಿಯತೆಯು ಅವುಗಳ ಒಟ್ಟಾರೆ ಮಾರುಕಟ್ಟೆ ಷೇರಿಗೆ ಅನುಗುಣವಾಗಿದೆ. ಆದರೆ Apple ಷೇರಿನ ದೊಡ್ಡ ಭಾಗವನ್ನು ಹೊಂದಿದೆ. ಅತಿರಂಜಿತ-ಬೆಲೆಯನ್ನು ಹೊಂದಿರುವ ಹೊಸ ಐಫೋನ್ ಖರೀದಿಸುವುದಕ್ಕಿಂತ ಪೂರ್ವ-ಮಾಲೀಕತ್ವದ ಐಫೋನ್ ಅನ್ನು ಖರೀದಿಸುವುದು ಹೆಚ್ಚು ಕೈಗೆಟುಕುವ ಆಯ್ಕೆಯಾಗಿದೆ.

ಈ ಆಪಲ್ ಮೊಬೈಲ್‌ ಸಂಸ್ಥೆಯ ಐಪೋನ್‌ 6-12 ತಿಂಗಳೊಳಗೆ 12-14% ರಷ್ಟು ಬೆಲೆ ಇಳಿಕೆ ಕಾಣುತ್ತಿದೆ ಎಂದು ವರದಿ ಬಹಿರಂಗಪಡಿಸಿದೆ. ಆದರೆ OnePlus 6-9% ನಷ್ಟು ಕುಸಿತವನ್ನು ಕಾಣುತ್ತಿದೆ ಮತ್ತು Xiaomi ಸ್ಮಾರ್ಟ್ ಫೋನ್ ಬೆಲೆಗಳು 21-28% ಇಳಿಕೆಯಾಗಿವೆ.

ಈ ಬಗ್ಗೆ ಸಮೀಕ್ಷೆಯಲ್ಲಿ ಏನಿದೆ
52% ಕ್ಕಿಂತ ಹೆಚ್ಚು ಗ್ರಾಹಕರು ಎರಡು ಅಥವಾ ಅದಕ್ಕಿಂತ ಹೆಚ್ಚು ಬಳಕೆಯಾಗದ/ಮಾರಾಟವಾಗದ ಸಾಧನಗಳನ್ನು ಹೊಂದಿದ್ದಾರೆ ಎಂದು ಸಮೀಕ್ಷೆಯಲ್ಲಿ ಬಹಿರಂಗಪಡಿಸಲಾಗಿದೆ. ಅದರಲ್ಲಿ 36% ರಷ್ಟು ಜನರು ಕೆಲಸ ಮತ್ತು ತುರ್ತು ಪರಿಸ್ಥಿತಿಗಳಿಗಾಗಿ ಬಿಡಿ ಭಾಗಗಳನ್ನು ಇರಿಸಿಕೊಳ್ಳಲು ತಮ್ಮ ಫೋನ್‌ಗಳನ್ನು ಮಾರಲು ಬಯಸಲಿಲ್ಲ, ಆದರೆ 25% ಜನರು ಉತ್ತಮವಾದ, ಬೆಲೆ ಹೆಚ್ಚಿರುವ ಪೋನ್‌ಗಳನ್ನು ಸ್ವೀಕರಿಸಲಿಲ್ಲ. ಆದ್ದರಿಂದ, 10% ರಷ್ಟು ಜನರು ತಮ್ಮ ಹಳೆಯ ಸಾಧನಗಳನ್ನು ಏನು ಮಾಡಬೇಕೆಂಬುದರ ಬಗ್ಗೆ ಜ್ಞಾನದ ಕೊರತೆಯನ್ನು ಹೊಂದಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

ಇದಲ್ಲದೆ, 2021ರಲ್ಲಿ ನವದೆಹಲಿಯ ಬಳಕೆದಾರರು ಹೆಚ್ಚು ಫೋನ್‌ಗಳನ್ನು ಮಾರಾಟ ಮಾಡಿದ್ದಾರೆ ಎಂದು ಸಮೀಕ್ಷೆಯು ಕಂಡುಹಿಡಿದಿದೆ. ಬೆಂಗಳೂರು ಮತ್ತು ಮುಂಬೈ ಮೊದಲ 3 ಸ್ಥಾನಗಳನ್ನು ತುಂಬಿವೆ. ಆದ್ದರಿಂದ, ಬೆಂಗಳೂರು ಬಳಕೆದಾರರು ಮಾರಾಟ ಮಾಡುವಾಗ ತಮ್ಮ ಹಳೆಯ ಸಾಧನಗಳಲ್ಲಿನ ನ್ಯೂನತೆಗಳನ್ನು ವರದಿ ಮಾಡುವಲ್ಲಿ ಅತ್ಯಂತ ನಿಷ್ಠಾವಂತ ಆಗಿದ್ದಾರೆ. ನಂತರ ಹೈದರಾಬಾದ್, ಕೋಲ್ಕತ್ತಾ ಮತ್ತು ಪುಣೆ ಅತ್ಯಂತ ಕಡಿಮೆ ನಿಜಾಂಶ ಹೊಂದಿದ್ದವು.

ಇದನ್ನೂ ಓದಿ:  Smart Phones: ಬೆಸ್ಟ್​ ಕ್ಯಾಮೆರಾ ಫೋನ್​ ಹುಡುಕುತ್ತಿದ್ದೀರಾ? 15 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುವ ಸ್ಮಾರ್ಟ್​ಫೋನ್​ಗಳು ಇಲ್ಲಿದೆ ನೋಡಿ

"ದೇಶದಾದ್ಯಂತದ ಮೊಬೈಲ್‌ ಪೋನ್‌ ಪ್ರವೃತ್ತಿಯು ಸೆಮಿಕಂಡಕ್ಟರ್ ಕೊರತೆಯ ಹೊರತಾಗಿಯೂ, ಭಾರತದ ನವೀಕರಿಸಿದ ವಲಯವು 2021 ರಿಂದ ಇಲ್ಲಿಯವರೆಗೆ ಮಾರಾಟದಲ್ಲಿ ಏರಿಕೆ ಕಂಡಿದೆ. ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಲ್ಲಿ ಲಾಭದಾಯಕ ಡೀಲ್‌ಗಳಿಗಾಗಿ ಬಳಕೆದಾರರು ನಿರಂತರವಾಗಿ ನೋಡುತ್ತಿದ್ದಾರೆ” ಎಂದು CMO ಮತ್ತು Cashify ಸಹ-ಸಂಸ್ಥಾಪಕ ನಕುಲ್ ಕುಮಾರ್ ಹೇಳಿದ್ದಾರೆ.
Published by:Ashwini Prabhu
First published: