HOME » NEWS » Tech » CAR CARE IN MONSOON TOP 5 TIPS AND TRICKS TO KEEP YOUR CAR READY STG KVD

ನಿಮ್ಮ ಕಾರು ಮಳೆಗಾಲಕ್ಕೆ ಸಿದ್ಧವೇ? ಈ 5 ಸಲಹೆಗಳನ್ನು ಪಾಲಿಸಿ ನೋಡಿ..

ಟೈರ್‌ಗಳಲ್ಲಿನ ಗ್ರೂವ್‌ಗಳನ್ನು ನೀವು ಗಮನಿಸಿದ್ದೀರಾ? ಅವು ಟೈರ್‌ಗಳಲ್ಲಿನ ಹೆಚ್ಚುವರಿ ನೀರನ್ನು ತೆಗೆದು ಹಾಕಲು ಮತ್ತು ಟೈರ್ ರಬ್ಬರ್ ಹಾಗೂ ರಸ್ತೆಯ ನಡುವೆ ಪ್ರಮುಖ ಸಂಪರ್ಕ ನಿರ್ವಹಿಸಲು ಸಹಾಯ ಮಾಡುತ್ತದೆ.

Trending Desk
Updated:June 21, 2021, 9:07 PM IST
ನಿಮ್ಮ ಕಾರು ಮಳೆಗಾಲಕ್ಕೆ ಸಿದ್ಧವೇ? ಈ 5 ಸಲಹೆಗಳನ್ನು ಪಾಲಿಸಿ ನೋಡಿ..
ಕಾರು
  • Share this:

ನಿಮ್ಮ ಕಾರುಗಳು ಮಳೆಗಾಲದಲ್ಲಿ ಬಳಕೆಗೆ ಸಿದ್ಧವಾಗಿದೆಯೇ ಎಂದು ತಿಳಿದುಕೊಳ್ಳುವುದು ಹೇಗೆ? ಇಲ್ಲಿವೆ ಐದು ಸಲಹೆಗಳು. ಮಳೆಗಾಲ ಆರಂಭವಾಗುತ್ತಿದೆ. ನಮ್ಮ ಕಾರುಗಳನ್ನು ನೋಡಿಕೊಳ್ಳುವ ಮತ್ತು ಮಳೆಗಾಲದ ಬಳಕೆಗೆ ಸೂಕ್ತವಾದ ರೀತಿಯಲ್ಲಿ ಸಿದ್ಧಪಡಿಸಿಕೊಳ್ಳು ಸಮಯವಿದು. ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿ, ನಮ್ಮ ಕಾರುಗಳನ್ನು ಬಳಸದೆ ಹಾಗೆಯೇ ನಿಲ್ಲಿಸಿಟ್ಟಿದ್ದೇವೆ. ಹಾಗಾಗಿ, ನಿಮ್ಮ ಕಾರುಗಳು ಮಳೆಗಾಲದಲ್ಲಿ ಬಳಕೆಗೆ ಸಿದ್ಧವಾಗಿದೆಯೇ ಎಂದು ತಿಳಿದುಕೊಳ್ಳುವುದು ಹೇಗೆ? ಇಲ್ಲಿವೆ ಐದು ಸಲಹೆಗಳು.


1. ವೈಪರ್ಸ್


ಮಳೆಗಾಲದಲ್ಲಿ ವೈಪರ್ ಬ್ಲೇಡ್‍ಗಳನ್ನು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುವುದು ಅತ್ಯಂತ ಅಗತ್ಯ. ಅವು ಕಾಲ ಕ್ರಮೇಣ ಕಠಿಣ ಮತ್ತು ದುರ್ಬಲ ಆಗುತ್ತವೆ. ಹಾಗಾಗಿ ಮಳೆಗಾಲದಲ್ಲಿ ಅವು ಸಮರ್ಪಕ ಸ್ವಚ್ಚತೆ ನೀಡದೇ ಇರುವುದು ಮಾತ್ರವಲ್ಲ, ನಿಮ್ಮ ಕಾರಿನ ವಿಂಡ್‍ಶೀಲ್ಡ್‌ಗೂ ಹಾನಿ ಮಾಡಬಹುದು. ಹಾಗಾಗಿ, ಅದರಿಂದ ನಿಮ್ಮ ವಿಂಡ್‍ಶೀಲ್ಡನ್ನು ಸ್ವಚ್ಚಗೊಳಿಸಲು ಪ್ರಯತ್ನಿಸುವ ಮೂಲಕ ಅದು ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿ. ಸರಿಯಾಗಿ ಇಲ್ಲ ಎಂದೆನಿಸಿದರೆ, ಅದನ್ನು ಬದಲಾಯಿಸಿ ಹೊಸತನ್ನು ತನ್ನಿ.


2. ಟೈರ್‌ಗಳು
ಮುಂದಿನ ಕೆಲಸ ಟೈರ್‌ಗಳ ಬಗ್ಗೆ ಗಮನ ಹರಿಸುವುದು. ಎಲ್ಲಾ ಋತುವಿನಲ್ಲೂ ಒಳ್ಳೆಯ ಟೈರ್‌ಗಳ ಅಗತ್ಯ ಇರುತ್ತದೆ. ಟೈರ್‌ಗಳಲ್ಲಿನ ಗ್ರೂವ್‌ಗಳನ್ನು ನೀವು ಗಮನಿಸಿದ್ದೀರಾ? ಅವು ಟೈರ್‌ಗಳಲ್ಲಿನ ಹೆಚ್ಚುವರಿ ನೀರನ್ನು ತೆಗೆದು ಹಾಕಲು ಮತ್ತು ಟೈರ್ ರಬ್ಬರ್ ಹಾಗೂ ರಸ್ತೆಯ ನಡುವೆ ಪ್ರಮುಖ ಸಂಪರ್ಕ ನಿರ್ವಹಿಸಲು ಸಹಾಯ ಮಾಡುತ್ತದೆ.ಅದು ಆವಶ್ಯಕ. ಏಕೆಂದರೆ ಅದು ತಿರುಗಲು ಮತ್ತು ಬ್ರೇಕ್ ಹಾಕಲು ಸಹಾಯ ಮಾಡುತ್ತದೆ. ಹಾಗಾಗಿ, ಸೂಕ್ತ ಗ್ರೂವ್‌ಗಳು ಇಲ್ಲದ ಟೈರ್ ಇದ್ದರೆ, ತುರ್ತು ಸಮಯದಲ್ಲಿ ಅಥವಾ ತೀಕ್ಷ್ಣ ತಿರುವುಗಳು ಇರುವ ಜಾಗದಲ್ಲಿ ನಿಮ್ಮ ಕಾರನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನೀವು ಟೈರ್‌ಗಳನ್ನು ಬದಲಾಯಿಸಲು ಯೋಚಿಸುತ್ತಿದ್ದರೆ ಇದು ಸರಿಯಾದ ಸಮಯ.


3. ಬ್ರೇಕುಗಳು
ತುರ್ತು ಸಂದರ್ಭಗಳಲ್ಲಿ ಬ್ರೇಕುಗಳು ಕೂಡ ಅತೀ ಅಗತ್ಯ. ನಿಮ್ಮ ಕಾರುಗಳು ಹೊಂದಿರುವ ಟೈರ್‌ಗಳ ಗುಣಮಟ್ಟಕ್ಕೆ ಅನುಗುಣವಾಗಿ ಬ್ರೇಕುಗಳು ಕೆಲಸ ಮಾಡುತ್ತವೆ. ನಿಮ್ಮ ಕಾರುಗಳ ಟೈರ್‌ಗಳಷ್ಟೇ ಬ್ರೇಕ್ ಪ್ಯಾಡ್‍ಗಳು ಕೂಡ ಚೆನ್ನಾಗಿರಬೇಕು. ಅವುಗಳನ್ನು ಪರಿಶೀಲಿಸಿ, ಬದಲಾಯಿಸುವ ಅಗತ್ಯ ಕಂಡು ಬಂದರೆ ಬದಲಾಯಿಸಿ.

4. ಎಲೆಕ್ಟ್ರಿಕಲ್ಸ್
ನಿಮ್ಮ ಕಾರಿನ ಎಲ್ಲಾ ಎಲೆಕ್ಟ್ರಿಕಲ್ ಸಾಧನಗಳು ಸರಿಯಾಗಿ ಕೆಲಸ ಮಾಡುತ್ತಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುವುದು ಒಳ್ಳೆಯದು. ಅದರಲ್ಲೂ ಹೆಚ್ಚಿನವರ ಕಾರುಗಳು ಈ ಸಂದರ್ಭದಲ್ಲಿ ತಿಂಗಳುಗಟ್ಟಲೆ ಬಳಸಲ್ಪಡದೆ ಹಾಗೆಯೇ ನಿಂತಿರುವುದರಿಂದ ಎಲೆಕ್ಟ್ರಿಕಲ್ಸ್‌ಗಳನ್ನು ಪರಿಶೀಲಿಸುವುದು ಅತ್ಯಗತ್ಯ. ಹಾಗಾಗಿ, ಕಾರಿನ ಲೈಟ್‍ಗಳು, ಬ್ಲಿಂಕರ್‌ಗಳು, ಫಾಗ್ ಲ್ಯಾಂಪ್‍ಗಳು, ಹೆಡ್‍ಲ್ಯಾಂಪ್‍ಗಳು ಇತ್ಯಾದಿಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂದು ಪರಿಶೀಲಿಸಿ. ಅದರ ಜೊತೆಗೆ ಬ್ಯಾಟರಿ ಸ್ಥಿತಿಯನ್ನು ಕೂಡ ಪರಿಶೀಲಿಸುವುದು ಅತ್ಯಾವಶ್ಯಕ. ಏಕೆಂದರೆ ಈ ಮಳೆಗಾಲದಲ್ಲಿ ಇಂತಹ ಎಲೆಕ್ಟ್ರಿಕಲ್ ಸಾಧನಗಳಾದ ಲೈಟ್‍ಗಳು, ವೈಪರ್‌ಗಳು ತುಂಬಾ ಅವಶ್ಯಕವಾಗಿರುತ್ತವೆ.


5. ಪೂರ್ವ- ಮುಂಗಾರು ಸರ್ವೀಸ್‌
ಮಳೆಗಾಲ ಆರಂಭವಾಗುವಾಗ ಎಲ್ಲರೂ ಯೋಚಿಸುವ ಸಂಗತಿ ಇದು. ಹೆಚ್ಚಿನ ಆಟೋಮೇಕರ್‌ಗಳು ಕೂಡ ಪೂರ್ವ- ಮುಂಗಾರು ಸರ್ವಿಸ್ ಪ್ಯಾಕೇಜ್ ನೀಡುತ್ತಾರೆ. ಮೇಲೆ ನೀಡಿದ ಸಲಹೆಗಳನ್ನು ಅನುಸರಿಸಿ, ಆದರೆ ಯಾವಾಗಲೂ ವೃತ್ತಿಪರರನ್ನು ಭೇಟಿಯಾಗಿ ಅವರ ಸಲಹೆಯನ್ನು ಪಡೆದು , ಅಗತ್ಯವಿದ್ದರೆ ಕಾರಿನ ಸರ್ವೀಸ್‌ ಮಾಡಿಸುವುದು ಒಳ್ಳೆಯದು.

Published by: Kavya V
First published: June 21, 2021, 9:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories