ವಾಟ್ಸಾಪ್ (WhatsApp) ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ, ಚಿಕ್ಕ ಮಕ್ಕಳೂ ಕೂಡ ಇಂದು ವಾಟ್ಸಾಪ್ ಬಳಕೆ ಮಾಡುವುದನ್ನು ಕಲಿತುಕೊಂಡಿರುತ್ತಾರೆ. ವಾಟ್ಸಾಪ್ ಮೆಸೇಜ್ (Message), ಗ್ರೂಪ್ ಚಾಟ್ (Group Chat) , ವಾಟ್ಸಾಪ್ ಕಾಲ್, ವಿಡಿಯೋ ಕಾಲ್ (Video Call) ಈಗ ವಾಟ್ಸಾಪ್‌ನಲ್ಲಿ ಹಣ ಕೂಡ ಟ್ರಾನ್ಸಾಕ್ಷನ್ ಮಾಡಬಹುದು. ಈ ಜನಪ್ರಿಯ ಅಪ್ಲಿಕೇಷನ್ ಇಂಥ ಬಹಳಷ್ಟು ಫೀಚರ್‌ಗಳನ್ನು ಹೊಂದಿದೆ. ವಾಟ್ಸಾಪ್ ಅನ್ನೋದು ಭಾರತವೂ (India) ಸೇರಿದಂತೆ ಪ್ರಪಂಚದಾದ್ಯಂತ ಹೆಚ್ಚು ಜನರು ಬಳಸುವಂತಹ ಮೆಸೇಜಿಂಗ್ ಅಪ್ಲಿಕೇಷನ್‌ಗಳಲ್ಲಿ (Application) ಒಂದಾಗಿದೆ. ಈ ಅಪ್ಲಿಕೇಶನ್‌ನಲ್ಲಿರುವ ಬಹಳಷ್ಟು ವೈಶಿಷ್ಟ್ಯಗಳು ಬಹಳಷ್ಟು ಜನರಿಗೆ ಗೊತ್ತಿಲ್ಲ. ಅದರಲ್ಲೊಂದು ಆ್ಯಪ್ ಓಪನ್ ಮಾಡದೆಯೇ ಸಂದೇಶಗಳನ್ನು ಓದುವುದು. ವಾಟ್ಸಾಪ್ ತೆರೆಯದೆಯೇ ಸಂಪೂರ್ಣ ಸಂದೇಶಗಳನ್ನು ಓದುವುದು ಒಂದು ಟ್ರಿಕ್ ಆಗಿದೆ.
ನಿಮ್ಮೆಲ್ಲರ ಮೊಬೈಲ್‌ಗಳಲ್ಲಿ ವಾಟ್ಸಾಪ್ ಮೆಸೇಜ್ ಬಂದ ತಕ್ಷಣ ನೋಟಿಫಿಕೇಶನ್ ಪಡೆಯುತ್ತೀರಿ. ಅಲ್ಲಿ ನೀವು ಮೆಸೇಜ್ ಓದಬಹುದು. ಆದರೆ ನಿಮಗೆ ಬಂದಿರುವಂಥ ಮೆಸೇಜ್ ದೀರ್ಘವಾಗಿದ್ದರೆ ಪೂರ್ಣ ಸಂದೇಶಗಳನ್ನು ನೋಟಿಫಿಕೇಶನ್‌ನಲ್ಲಿಯೇ ಓದಲಾಗುವುದಿಲ್ಲ. ಕೆಲವೊಮ್ಮೆ ನಿಮಗೆ ಏನು ಮೆಸೇಜ್ ಬಂದಿದೆ ಎಂದು ತಿಳಿದುಕೊಳ್ಳುವ ಕುತೂಹಲವಿರುತ್ತದೆ.
ಆದರೆ ಅಪ್ಲಿಕೇಷನ್ ತೆರೆಯಲು ಮನಸ್ಸಿರುವುದಿಲ್ಲ. ಇಂಥ ಸಂದರ್ಭಗಳಲ್ಲಿ ಅಪ್ಲಿಕೇಶನ್ ಓಪನ್ ಮಾಡದೆಯೇ ಸಂದೇಶವೇನೆಂದು ತಿಳಿದುಕೊಳ್ಳಲು ನೀವು ಬಯಸುತ್ತೀರಿ. ಹೀಗೆ ಬಯಸುವವರಲ್ಲಿ ನೀವೂ ಕೂಡ ಒಬ್ಬರಾಗಿದ್ದರೆ ಚಿಂತೆ ಬೇಡ. ಅದು ಸಾಧ್ಯ. ಹೇಗೆ ಅನ್ನೋದನ್ನು ನಾವು ಹೇಳುತ್ತೇವೆ.
ಅಂದಹಾಗೆ ಈ ಪ್ರಕ್ರಿಯೆಯು ಕಷ್ಟಕರವಾಗೇನೂ ಇಲ್ಲ. ಈ ಟ್ರಿಕ್ ತುಂಬ ಸುಲಭದ್ದಾಗಿದೆ. ಇದನ್ನು ಹೊಂದಿಸಲು ಕೇವಲ ಒಂದು ನಿಮಿಷ ಬೇಕಾಗಬಹುದಷ್ಟೇ. ಮೆಸೇಜಿಂಗ್ ಅಪ್ಲಿಕೇಶನ್ ತೆರೆಯದೆಯೇ ನೀವು ಸಂಪೂರ್ಣ WhatsApp ಸಂದೇಶಗಳನ್ನು ಹೇಗೆ ಓದಬಹುದು ಎಂಬುವುದರ ವಿವರ ಇಲ್ಲಿದೆ.
ಹಂತ 1:Android ಫೋನ್ ಬಳಕೆದಾರರು ಮೊದಲು ಮೇನ್ ಸ್ಕ್ರೀನ್ ಮೇಲೆ ಕೆಲ ಸೆಕೆಂಡ್‌ಗಳ ಕಾಲ ಪ್ರೆಸ್ ಮಾಡಬೇಕಾಗುತ್ತದೆ.
ಹಂತ 2: ಈಗ, ವಿಜೆಟ್‌ಗಳ ಮೇಲೆ ಟ್ಯಾಪ್ ಮಾಡಿ. ನಿಮ್ಮ ಸ್ಮಾರ್ಟ್‌ಫೋನ್‌ನ ಎಲ್ಲಾ ವಿಜೆಟ್‌ಗಳು ಪರದೆಯ ಮೇಲೆ ಕಾಣುತ್ತವೆ.
ಹಂತ 3: ನೀವು ವಾಟ್ಸಾಪ್ ವಿಜೆಟ್ ಅನ್ನು ಕಾಣುವವರೆಗೆ ಕೆಳಗೆ ಸ್ಕ್ರೋಲ್ ಮಾಡುತ್ತಿರಿ.
ಹಂತ 4: ವಾಟ್ಸಾಪ್ ವಿಜೆಟ್ಅನ್ನು ಟ್ಯಾಪ್ ಮಾಡಿ. ಅದನ್ನು ನಿಮ್ಮ ಹೋಮ್‌ಪೇಜ್‌ಗೆ ಸೇರಿಸಿ. ನಂತರ ನೀವು ಕ್ಲೀನ್ ಹೋಮ್‌ಪೇಜ್ ಸ್ಕ್ರೀನ್ ಇಂಟರ್ಫೇಸ್ ಅನ್ನು ಪಡೆಯುವವರೆಗೆ ವಿಜೆಟ್‌ನಲ್ಲಿ ದೀರ್ಘವಾಗಿ ಒತ್ತಿ. ನಂತರ ನೀವು ಅದನ್ನು ಬಲಭಾಗದಲ್ಲಿ ಎಳೆಯಬಹುದು.
ಹಂತ 5:ಕೊನೆಗೆ ಡನ್ ಬಟನ್ ಪ್ರೆಸ್ ಮಾಡಿ. ವಿಜೆಟ್ಅನ್ನು ದೀರ್ಘವಾಗಿ ಒತ್ತಿ. ಅದನ್ನು ಮೇಲ್ಭಾಗದಲ್ಲಿ ಬದಲಾಯಿಸಿ. ನಂತರ ನೀವು ವಿಜೆಟ್ ಅನ್ನು ಎಕ್ಸಟೆಂಡ್ ಮಾಡುವ ಆಯ್ಕೆಯನ್ನು ಪಡೆಯುತ್ತೀರಿ. ಅದನ್ನು ಫುಲ್ ಸ್ಕ್ರೀನ್‌ಗೆ ಹಾಕಬಹುದು. ಇದರಿಂದ ನೀವು ಪೂರ್ಣ ಮೆಸೇಜ್‌ಅನ್ನು ಸುಲಭವಾಗಿ ಓದಬಹುದು.
ಇದನ್ನೂ ಓದಿ:WhatsApp Update: ವಾಟ್ಸಾಪ್‌ನಲ್ಲಿ ಇನ್ಮುಂದೆ ಕರೆಯನ್ನು ಶೆಡ್ಯೂಲ್ ಮಾಡ್ಬಹುದು! ಯಾರಿಗೆಲ್ಲಾ ಈ ಫೀಚರ್ ಲಭ್ಯ?
ಆ್ಯಪ್ ತೆರೆಯದೆಯೇ ಬಂದಿರುವ ಎಲ್ಲಾ ವಾಟ್ಸಾಪ್ ಮೆಸೇಜ್‌ಗಳನ್ನು ಓದುವುದು ಹೇಗೆ?
ಒಮ್ಮೆ ನೀವು ಮೊಬೈಲ್‌ನ ಹೋಂ ಪೇಜ್‌ನಲ್ಲಿ ವಾಟ್ಸಾಪ್ ವಿಜೆಟ್ಅನ್ನು ಯಶಸ್ವಿಯಾಗಿ ಸೆಟಪ್ ಮಾಡಿದ ನಂತರ, ಎಲ್ಲಾ ಸಂದೇಶಗಳನ್ನು ಓದಲು ನೀವು ಕೆಳಗೆ ಸ್ಕ್ರಾಲ್ ಮಾಡಬೇಕಾಗುತ್ತದೆ. ಇಲ್ಲಿ ಅಪ್ಲಿಕೇಶನ್‌ನಲ್ಲಿನ ಚಾಟ್‌ಗಳ ಪ್ರಕಾರ ಸಂದೇಶಗಳನ್ನು ಜೋಡಿಸಲಾಗಿರುತ್ತದೆ. ನಿಮಗೆ ಬಂದಿರುವಂಥ ಇತ್ತೀಚಿನ ಮೆಸೇಜ್ ಮೇಲ್ಭಾಗದಲ್ಲಿರುತ್ತದೆ. ನೀವು ಓದದಿರುವ ಹಿಂದಿನ ಎಲ್ಲ ಮೆಸೇಜ್‌ಗಳು ಅದರ ಕೆಳಗೆ ಕಾಣಿಸುತ್ತವೆ.
ಏನನ್ನು ನೆನಪಿಡಬೇಕು ?
ಆದರೆ ನೆನಪಿಟ್ಟುಕೊಳ್ಳಬೇಕಾದ ಸಂಗತಿಯೇನೆಂದರೆ, ವಿಜೆಟ್‌ನಲ್ಲಿರುವ ಯಾವುದೇ ಮೆಸೇಜ್ ಟ್ಯಾಪ್ ಮಾಡುವುದನ್ನು ನೀವು ತಪ್ಪಿಸಬೇಕು. ಏಕೆಂದರೆ ಇದು ವಾಟ್ಸಾಪ್‌ನಲ್ಲಿ ಚಾಟ್ಅನ್ನು ತೆರೆಯುತ್ತದೆ. ಹಾಗೆಯೇ ಕಳುಹಿಸಲಾದ ಮೆಸೇಜ್‌ಅನ್ನು ಓದಿದ್ದಾರೆ ಎಂಬುದಾಗಿ ತೋರಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ