• Home
  • »
  • News
  • »
  • tech
  • »
  • Apple Company: ಈ ರೀತಿಯೂ ಆ್ಯಪಲ್​ ಕಂಪನಿಗೆ ದೂರು ದಾಖಲಿಸಬಹುದಾ? ಬೆಂಗಳೂರಿನ ವ್ಯಕ್ತಿ ಟ್ವಿಟರ್​ನಲ್ಲಿ ಫುಲ್ ವೈರಲ್

Apple Company: ಈ ರೀತಿಯೂ ಆ್ಯಪಲ್​ ಕಂಪನಿಗೆ ದೂರು ದಾಖಲಿಸಬಹುದಾ? ಬೆಂಗಳೂರಿನ ವ್ಯಕ್ತಿ ಟ್ವಿಟರ್​ನಲ್ಲಿ ಫುಲ್ ವೈರಲ್

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಸ್ವಿಗ್ಗಿ ಕಂಪನಿ ಗ್ರಾಹಕರಿಗೆ ಪೇಪರ್​, ಆಹಾರ, ಕೀ ಇಂತಹವುಗಳನ್ನು ತಲುಪಿಸಲು ಸಹಾಯಮಾಡುತ್ತದೆ. ಇಲ್ಲೊಂದು ಬೆಂಗಳೂರಿನ ವ್ಯಕ್ತಿಯೊಬ್ಬರು ತಮ್ಮಲ್ಲಿರುವ ಆ್ಯಪಲ್ ಪ್ರಾಡಕ್ಟ್ ಒಂದರ ಸಮಸ್ಯೆಯನ್ನು ಕಸ್ಟಮರ್ ಸಪೋರ್ಟ್‌ಗೆ ತಿಳಿಸಲು ಸ್ವಿಗ್ಗಿ ಜೀನಿ ಸಹಾಯವನ್ನು ಪಡೆದುಕೊಂಡಿ ಇದೀಗ ಟ್ವಿಟರ್‌ನಲ್ಲಿ ಈ ಸುದ್ದಿ ವೈರಲ್ ಆಗಿದೆ.

ಮುಂದೆ ಓದಿ ...
  • Share this:

    ಇತ್ತೀಚಿನ ಟೆಕ್ನಾಲಜಿಗಳು (Technology) ಬಹಳಷ್ಟು ಅಭಿವೃದ್ಧಿ ಹೊಂದಿವೆ. ಯಾವುದೇ ಒಂದು ಸಾಧನ, ಆಹಾರ ಬೇಕಾದರೂ ಆನ್​ಲೈನ್​ನಲ್ಲಿ (Online) ಖರೀದಿಸಬಹುದಾಗಿದೆ. ಅದ್ರಲ್ಲೂ ಕೋವಿಡ್​ 19 (Covid 19) ನಿಂದ ಲಾಕ್​ಡೌನ್​ (Lockdown) ಆದಾಗಿನಿಂದ ಇಕಾಮರ್ಸ್​ ವೆಬ್​ಸೈಟ್​ಗಳು (E-Commerse Website) ಬೆಳೆದಿವೆ.​ ಇದೀಗ ಆಹಾರದಿಂದ ಹಿಡಿದು ದಿನಸಿಯವರೆಗೆ ಪ್ರತಿಯೊಂದು ಮನೆಬಾಗಿಲಿಗೆ ತಲುಪುವಷ್ಟು ಆಧುನಿಕ ವ್ಯವಸ್ಥೆ ಮುನ್ನಡೆ ಸಾಧಿಸುತ್ತಿದೆ. ಮನೆಯಿಂದ ಹೊರಗಡೆ ಹೋಗಲು ಸೋಮಾರಿತನ ಕಾಡುತ್ತಿದೆ ಎಂದರೆ ಸಾಕು ಈ ಡೆಲಿವರಿ ಸಂಸ್ಥೆಗಳು ನಿಮಗೆ ಬೇಕಾದ ಆಹಾರ, ಮನೆ ಸಾಮಾಗ್ರಿಗಳು ಪ್ರತಿಯೊಂದನ್ನೂ ತಲುಪಿಸುತ್ತವೆ.


    ಇಲ್ಲೊಬ್ಬರು ತಮ್ಮ ಆ್ಯಪಲ್​ ಪ್ರೊಡಕ್ಟ್​ ಬಗ್ಗೆ ಕಸ್ಟಮರ್​ ಕೇರ್​ಗೆ ಮಾಹಿತಿ ನೀಡಲು ಸ್ವಿಗ್ಗಿ ಬಾಯ್​ ಅವರನ್ನು ಸಂಪರ್ಕಿಸಿದ್ದಾರೆ. ಈ ಸುದ್ದಿ ಇದೀಗ ಟ್ವಿಟರ್​ನಲ್ಲಿ ಭಾರಿ ವೈರಲ್ ಆಗ್ತಿದೆ.


    ಕಸ್ಟಮರ್ ಸಪೋರ್ಟ್‌ನೊಂದಿಗೆ ಮಾತನಾಡಲು ಸ್ವಿಗ್ಗಿ ಜೀನಿ ಸಹಾಯ ಪಡೆದ ಬೆಂಗಳೂರು ನಿವಾಸಿ


    ಸ್ವಿಗ್ಗಿ ಅಥವಾ ಡಂಜೊ ಜೀನಿ ಸೇವೆ ಕೂಡ ಪೇಪರ್, ಊಟ, ಕೀಗಳನ್ನು ವರ್ಗಾಯಿಸಲು ಗ್ರಾಹಕರಿಗೆ ಸಹಾಯ ಮಾಡುವ ವ್ಯವಸ್ಥೆಯಾಗಿದೆ.


    ಇದನ್ನೂ ಓದಿ: ಆರ್ಡರ್​​ ಮಾಡಿದ್ದು ಲ್ಯಾಪ್​ಟ್ಯಾಪ್​! ಆದ್ರೆ ಅಮೆಜಾನ್​ ಕಳ್ಸಿದ್ದು ಮಾತ್ರ ಚಿತ್ರ-ವಿಚಿತ್ರ ಐಟಂ!


    ಆದರೆ ಬೆಂಗಳೂರಿನ ವ್ಯಕ್ತಿಯೊಬ್ಬರು ತಮ್ಮಲ್ಲಿರುವ ಆ್ಯಪಲ್ ಪ್ರಾಡಕ್ಟ್ ಒಂದರ ಸಮಸ್ಯೆಯನ್ನು ಕಸ್ಟಮರ್ ಸಪೋರ್ಟ್‌ಗೆ ತಿಳಿಸಲು ಸ್ವಿಗ್ಗಿ ಜೀನಿ ಸಹಾಯವನ್ನು ಪಡೆದುಕೊಂಡಿದ್ದು ಇದೀಗ ಟ್ವಿಟರ್‌ನಲ್ಲಿ ಈ ಸುದ್ದಿ ವೈರಲ್ ಆಗಿದೆ.


    ಜುಗಾಡ್ ಐಡಿಯಾ ಎಂಬ ಹೊಗಳಿಕೆಗೆ ಪಾತ್ರವಾಗಿದೆ


    ಪ್ರಾಡಕ್ಟ್ ದೋಷವನ್ನು ಇತ್ಯರ್ಥಗೊಳಿಸುವುದು ಹಾಗೂ ಸಂಬಂಧಿತ ಕಸ್ಟಮರ್ ಸಪೋರ್ಟ್ ವಿಭಾಗದೊಂದಿಗೆ ವ್ಯವಹರಿಸುವುದು ಒಮ್ಮೊಮ್ಮೆ ಸುಸ್ತಾಗುವಂತೆ ಮಾಡುತ್ತದೆ. ಎಷ್ಟೋ ಜನರು ಬೇರೆ ಬೇರೆ ಉಪಾಯಗಳನ್ನು ಮಾಡಿ ಕಸ್ಟಮರ್ ಸಪೋರ್ಟ್ ತಂಡದೊಂದಿಗೆ ಸಂವಹನ ನಡೆಸಲು ಕಸರತ್ತು ಮಾಡುತ್ತಾರೆ ಹಾಗೂ ಅದರಲ್ಲಿ ಸಫಲಗೊಳ್ಳುವವರು ತುಂಬಾ ಕಡಿಮೆ.


    ಆದರೆ ಬೆಂಗಳೂರಿನ ನಿವಾಸಿ ನೇರವಾಗಿ ಸ್ಟೋರ್‌ನಲ್ಲಿರುವ ಕಸ್ಟಮರ್ ತಂಡದೊಂದಿಗೆ ಮಾತನಾಡಲು ಸ್ವಿಗ್ಗಿ ಜೀನಿ ವ್ಯಕ್ತಿಯನ್ನೇ ಕಳುಹಿಸಿಕೊಟ್ಟಿದ್ದಾರೆ.


    ಟ್ವಿಟರ್‌ನಲ್ಲಿ ವೈರಲ್ ಆಯಿತು ಈ ಘಟನೆ


    ಟ್ವಿಟರ್ ಬಳಕೆದಾರರಾದ ಶಂಕರ್ ಗಣೇಶ್ ಈ ತಮಾಷೆಯ ವಿಷಯನ್ನು ಟ್ವೀಟ್ ಮಾಡಿದ್ದು ಇದೊಂದು ಜುಗಾಡ್ ಐಡಿಯಾ ಎಂಬ ಕಾಮೆಂಟ್‌ಗೆ ಇದು ಪಾತ್ರವಾಗಿದೆ.


    ಆ್ಯಪಲ್ ಪ್ರಾಡಕ್ಟ್ ಹೊಂದಿದ್ದ ಬೆಂಗಳೂರಿನ ನಿವಾಸಿಯು ಕಸ್ಟಮರ್ ಸಪೋರ್ಟ್ ವಿಭಾಗದೊಂದಿಗೆ ನಿರಂತರ ಕರೆಮಾಡಿ ಸುಸ್ತಾಗಿದ್ದು ತನ್ನ ದೂರನ್ನು ಇತ್ಯರ್ಥಪಡಿಸಲು ಸ್ವಿಗ್ಗಿ ಜೀನಿ ಏಜಂಟ್ ಒಬ್ಬರನ್ನು ನೇರವಾಗಿ ಆ್ಯಪಲ್ ಸ್ಟೋರ್‌ಗೆ ಕಳುಹಿಸಿದ್ದಾರೆ ಎಂದು ಶಂಕರ್ ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.


    ಸ್ವಿಗ್ಗಿ ಜೀನಿ ಸೇವೆಯು ಗ್ರಾಹಕರಿಗೆ ಪಿಕಪ್ ಹಾಗೂ ಡೆಲಿವರಿ ಸೇವೆಗಳನ್ನು ವಿನಂತಿಸಲು ಅನುಮತಿಸುತ್ತದೆ ಈ ಮೂಲಕ ಪೇಪರ್, ಊಟ, ಕೀಗಳನ್ನು ಮತ್ತೊಬ್ಬರಿಗೆ ತಲುಪಿಸಲು ಹೆಚ್ಚಿನವರು ಸ್ವಿಗ್ಗಿ ಜೀನಿ ಸೇವೆಯನ್ನು ಬಳಸುತ್ತಾರೆ.


    ಕಸ್ಟಮರ್ ಸಪೋರ್ಟ್‌ ತಂಡದೊಂದಿಗೆ ನೇರವಾಗಿ ಮಾತನಾಡಿದ ವ್ಯಕ್ತಿ


    ಟ್ವಿಟರ್ ಬಳಕೆದಾರರಾದ ಶಂಕರ್ ಗಣೇಶ್ ತಮಾಷೆಯ ಹಾಗೂ ಸ್ವಾರಸ್ಯಭರಿತವಾದ ಈ ಘಟನೆಯನ್ನು ಹಂಚಿಕೊಂಡಿದ್ದು ಬೆಂಗಳೂರಿನ ನಿವಾಸಿಯೊಬ್ಬರು ಡಂಜೊ ಅಥವಾ ಸ್ವಿಗ್ಗಿ ಜೀನಿ ಸೇವಾ ನಿರತ ವ್ಯಕ್ತಿಯನ್ನು ಇಮ್ಯಾಜಿನ್ ಆ್ಯಪಲ್ ಸ್ಟೋರ್‌ಗೆ ಕಳುಹಿಸಿದ್ದಾರೆ ಹಾಗೂ ಅಲ್ಲಿನ ಕಸ್ಟಮರ್ ಸಪೋರ್ಟ್ ತಂಡದೊಂದಿಗೆ ನೇರವಾಗಿ ಅವರ ಫೋನ್ ಬಳಸಿ ಸಮಸ್ಯೆಯನ್ನು ತಿಳಿಸಿದ್ದಾರೆ ಎಂಬುದನ್ನು ಶಂಕರ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.


    ಟ್ವಿಟರ್‌ನಲ್ಲಿ ವೈರಲ್ ಆದ ಟ್ವೀಟ್


    ಡಿಸೆಂಬರ್ 17 ರಂದು ಈ ಟ್ವೀಟ್ ಹಂಚಿಕೊಂಡಿದ್ದು ನೂರಾರು ಲೈಕ್‌ಗಳನ್ನು ಪಡೆದುಕೊಂಡಿದೆ ಹಾಗೂ ಹಲವು ಬಳಕೆದಾರರು ಈ ಸ್ವಾರಸ್ಯಮಯ ಸುದ್ದಿಯನ್ನು ರಿಟ್ವೀಟ್ ಮಾಡಿದ್ದಾರೆ. ತಮ್ಮದೇ ಆದ ಹಾಸ್ಯಮಯ ಕಾಮೆಂಟ್‌ಗಳನ್ನು ನೀಡುವ ಮೂಲಕ ಬಳಕೆದಾರರು ಈ ಘಟನೆಯನ್ನು ಇನ್ನಷ್ಟು ರಂಗುಗೊಳಿಸಿದ್ದಾರೆ.


    ಬಳಕೆದಾರರ ಕಾಮೆಂಟ್‌ಗಳೇನು?


    ಶಂಕರ್ ಸ್ವಿಗ್ಗಿ ಅಥವಾ ಡೆಂಜೊ ಜೀನಿಯು ಬೆಂಗಳೂರಿನ ನಿವಾಸಿಗೆ ಪ್ರಾಡಕ್ಟ್ ದೋಷವನ್ನು ತಿಳಿಸಲು ಕಸ್ಟಮರ್ ಸಪೋರ್ಟ್ ತಂಡವನ್ನು ನೇರವಾಗಿ ಸಂಪರ್ಕಿಸಿದ್ದು ನಿಜಕ್ಕೂ ಭಾರತೀಯರ ಜುಗಾಡ್ ಐಡಿಯಾ ಇದಾಗಿದೆ ಎಂದು ಹಾಸ್ಯಚಟಾಕಿ ಹಾರಿಸಿದ್ದಾರೆ.


    ಇಂತಹ ವ್ಯವಸ್ಥೆಗಳು ಮುಂದಿನ ಸ್ಟಾರ್ಟಪ್ ಐಡಿಯಾಗಳಿಗೆ ಸೂಕ್ತವಾಗಿದೆ ಎಂದು ಶಂಕರ್ ಟ್ವೀಟ್‌ಗೆ ಗೌರವ್ ಹೆಸರಿನ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.


    ಇನ್ನು ಕೆಲವು ಬಳಕೆದಾರರು ಐಡಿಯಾವನ್ನು ಮೆಚ್ಚಿಕೊಂಡಿದ್ದು ನಿಜಕ್ಕೂ ಉತ್ತಮ ಕೆಲಸ ಮಾಡಿದ್ದಾರೆ ನಾವು ಕೂಡ ಇದನ್ನೇ ಅನುಸರಿಸುತ್ತೇವೆ ಎಂಬ ಕಾಮೆಂಟ್‌ಗಳನ್ನು ಮಾಡಿದ್ದಾರೆ.


    ಉತ್ತಮ ಉಪಾಯ ಎಂದು ಮೆಚ್ಚಿದ ಬಳಕೆದಾರರು


    ಹೆಚ್ಚಿನವರು ಗ್ರಾಹಕ ತಂಡದೊಂದಿಗೆ ಸಂಪರ್ಕಿಸುವ ತಮ್ಮ ಕಷ್ಟಗಳನ್ನು ತಿಳಿಸಿದ್ದು, ನಿಜಕ್ಕೂ ಇವರು ಅದ್ಭುತವಾಗಿ ತಲೆ ಓಡಿಸಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

    Published by:Prajwal B
    First published: