news18-kannada Updated:February 22, 2021, 3:16 PM IST
ವಾಟ್ಸ್ಆಪ್.
ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರು ಮೊಬೈಲ್ ಬಳಸುವುದು ಸಾಮಾನ್ಯವಾಗಿದೆ. ಉದ್ಯಮಿಗಳು ಮತ್ತು ಒಂದಕ್ಕಿಂತ ಹೆಚ್ಚು ಕೆಲಸಗಳನ್ನು ನಿರ್ವಹಿಸುವವರು ಎರಡು ಮೊಬೈಲ್ಗಳನ್ನು ನಿರ್ವಹಣೆ ಮಾಡುವ ಅನಿವಾರ್ಯತೆ ಎದುರಾಗಿದೆ. ಆದರೆ, ಕೆಲಸದ ಒತ್ತಡದಲ್ಲಿ ಬರುವ ದೂರವಾಣಿ ಕರೆಗಳನ್ನು ಸುಲಭವಾಗಿ ರೆಕಾರ್ಡ್ ಮಾಡಬಹುದು. ಈಗ ಸಾಮಾನ್ಯ ಕರೆಗಳು ಬರುವುದಕ್ಕಿಂತ ಹೆಚ್ಚು ವಾಟ್ಸ್ ಆಪ್ ಕರೆಗಳು ಬರಲು ಶುರುವಾಗಿವೆ. ಆದರೆ, ವಾಟ್ಸ್ ಆಪ್ ಕರೆಗಳನ್ನು ಸಾಮಾನ್ಯ ಕರೆಗಳಂತೆ ರೆಕಾರ್ಡ್ ಮಾಡಲು ಸುಲಭ ಅಲ್ಲ. ಆದರೆ, ಆಂಡ್ರಾಯ್ಡ್ ಮತ್ತು ಐಒಎಸ್ (ಐಫೋನ್)ಗಳ ನಿರ್ದಿಷ್ಟ ಸಾಧನಗಳಲ್ಲಿ ನೀವು ವಾಟ್ಸ್ ಆಪ್ ಕರೆಗಳನ್ನು ರೆಕಾರ್ಡ್ ಮಾಡಬಹುದು. ಆದರೆ, ಇದಕ್ಕೆ ನಿಮಗೆ ಕರೆ ಮಾಡುವವರ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ಐಫೋನ್ ಅಥವಾ ಮ್ಯಾಕ್ ಫೋನ್ಗಳಲ್ಲಿ ವಾಟ್ಸ್ ಆಪ್ ಕರೆ ರೆಕಾರ್ಡ್ ಮಾಡುವುದು ಈ ಕೆಳಗಿನಂತಿದೆ
- ನಿಮ್ಮ ಐಫೋನ್ ಅನ್ನು ಕೇಬಲ್ ಮೂಲಕ ಮ್ಯಾಕ್ಗೆ ಕನೆಕ್ಟ್ ಮಾಡಿಕೊಳ್ಳಿ.
- ನೀವು ಮೊದಲ ಬಾರಿ ಮ್ಯಾಕ್ಗೆ ನಿಮ್ಮ ಐಪೋನ್ ಕನೆಕ್ಟ್ ಮಾಡುತ್ತಿದ್ದರೆ ಟ್ರಸ್ಟ್ ದಿಸ್ ಕಂಪ್ಯೂಟರ್ (Trust this computer) ಎಂಬ ಆಪ್ಷನ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ.
- ಆಗ ಮ್ಯಾಕ್ನಲ್ಲಿ ಕ್ವಿಕ್ಟೈಮ್ ಎಂಬ ಆಪ್ಷನ್ ಓಪನ್ ಮಾಡಿ, ಆದರ ಕೆಳಗೆ ನ್ಯೂ ಆಡಿಯೋ ರೆಕಾರ್ಡಿಂಗ್ ಫೈಲ್ ಆಪ್ಷನ್ ಆಯ್ಕೆ ಮಾಡಿಕೊಳ್ಳಿ.
- ಕ್ವಿಕ್ಟೈಮ್ನಲ್ಲಿನ ರೆಕಾರ್ಡ್ ಬಟನ್ನ ಪಕ್ಕದಲ್ಲಿ ಕಾಣಿಸುವ ಕೆಳಕ್ಕೆ ತೋರಿಸಿದ ಬಾಣದ ಗುರುತಿನ ಮೇಲೆ ಕ್ಲಿಕ್ ಮಾಡಿದ ಬಳಿಕ ಐಫೋನ್ ಎಂದು ಆಪ್ಷನ್ ಒತ್ತಿ.
- ಆಗ, ಕ್ವಿಕ್ಟೈಮ್ನಲ್ಲಿ ರೆಕಾರ್ಡ್ ಬಟನ್ ಕಾಣಿಸುತ್ತದೆ. ಅದರ ಮೇಲೆ ಒತ್ತಿ.
- ಆಗ ಐಫೋನ್ನಿಂದ ನಿಮ್ಮ ಮೊಬೈಲ್ಗೆ ವಾಟ್ಸಪ್ ಕರೆ ಮಾಡಿ.
- ಆಗ ನೀವು ಸಂಪರ್ಕಗೊಂಡ ನಂತರ add user ಐಕಾನ್ ಕ್ಲಿಕ್ ಮಾಡಿ ಬಳಕೆದಾರರನ್ನು ಸೇರಿಸಿ.
- ಇದಾದ ಬಳಿಕ ನೀವು ಮಾತನಾಡಲು ಬಯಸುವ ವ್ಯಕ್ತಿಯನ್ನು ಆಯ್ಕೆ ಮಾಡಿದಾಗ ನೀವು ವಾಟ್ಸ್ ಆಪ್ ಕರೆ ರೆಕಾರ್ಡಿಂಗ್ ಮಾಡಲು ಶುರು ಮಾಡಬಹುದು.
- ನೀವು ಕರೆಯಲ್ಲಿ ಮಾತನಾಡುವುದನ್ನು ಮುಗಿಸಿದ ಕರೆ ಕಟ್ ಮಾಡಿ, ಕ್ವಿಕ್ಟೈಮ್ ಅಲ್ಲಿ ರೆಕಾರ್ಡಿಂಗ್ ನಿಲ್ಲಿಸಿ.
•
- ಆಗ ನೀವು ಮಾತನಾಡಿರುವ ಸಂಭಾಷಣೆಯ ಫೈಲ್ ಮಾಕ್ನಲ್ಲಿ ಸೇವ್ ಮಾಡಬಹುದು
ಆಂಡ್ರಾಯ್ಡ್ ಫೋನ್ಗಳಲ್ಲಿ ವಾಟ್ಸ್ ಆಪ್ ಕರೆಗಳು ರೆಕಾರ್ಡ್ ಮಾಡುವುದು ಈ ಕೆಳಗಿನಂತಿದೆ
- ವಾಟ್ಸ್ಆಪ್ ಬಳಕೆದಾರರು, ಕ್ಯೂಬ್ ಕಾಲ್ ರೆಕಾರ್ಡರ್ ಆಪ್ (Cube Call Recorder app) ಇನ್ಸ್ಟಾಲ್ ಮಾಡಿಕೊಳ್ಳಿ.
- ಇನ್ಸ್ಟಾಲ್ ಮಾಡಿಕೊಂಡು ಒಪೆನ್ ಮಾಡಿದ ಬಳಿಕ ವಾಟ್ಸ್ಆಪ್ಗೆ ಸ್ವಿಚ್ ಮಾಡಿ.
- ಆಗ, ನೀವು ಬಯಸುವ ವ್ಯಕ್ತಿಗೆ ವಾಟ್ಸ್ಆಪ್ ಮೂಲಕ ಕರೆ ಮಾಡಿ.
- ಆಗ ನಿಮಗೆ ಕ್ಯೂಬ್ ಆಪ್ ಕಾರ್ಯನಿರ್ವಹಿಸುತ್ತಿರುವುದು ನಿಮಗೆ ತಿಳಿಯುತ್ತದೆ.
ವಾಟ್ಸ್ಆಪ್ ಕರೆಗಳು ಫೋನ್ ರೆಕಾರ್ಡ್ನಲ್ಲಿ ಕಾಣಿಸುತ್ತಾ?
ನೀವು ವಾಟ್ಸ್ಆಪ್ ಮೂಲಕ ಕರೆಗಳನ್ನು ಮಾಡಿ ಮಾತನಾಡಿರುವುದು ನಿಮಗೆ ಯಾವುದೇ ಬಿಲ್ ಬರುವುದಿಲ್ಲ. ಏಕೆಂದರೆ ನೀವು ವಾಟ್ಸ್ಆಪ್ ಅನ್ನು ಮೊಬೈಲ್ ಡೇಟಾ ಅಥವಾ ವೈಫೈ ಮೂಲಕ ಕನೆಕ್ಟ್ ಮಾಡಲಾಗಿರುತ್ತದೆ. ವಾಟ್ಸ್ಆಪ್ ಕರೆಗಳು ಮೊಬೈಲ್ ಕರೆಗಳಂತೆ ಫೋನ್ ಬಿಲ್ ಬರುವುದಿಲ್ಲ.
ಮೂರನೇ ವ್ಯಕ್ತಿ ನನ್ನ ವಾಟ್ಸ್ಆಪ್ ಸಂದೇಶಗಳನ್ನು ನೋಡಬಹುದೇ?
ವಾಟ್ಸ್ಆಪ್ ಸಂದೇಶಗಳನ್ನು ಮೂರನೇ ವ್ಯಕ್ತಿ ನೋಡಲು ಸಾಧ್ಯವಿಲ್ಲ. ಇದನ್ನು ಎಂಡ್-ಟು-ಎಂಡ್ ಎನ್ಕ್ರಿಪ್ಷನ್ ಮೂಲಕ ರಕ್ಷಣೆ ನೀಡಲಾಗಿದೆ. ಇದು ಮೂರನೇ ವ್ಯಕ್ತಿ ಓದಲು ನಿರ್ಭಂಧಿಸುತ್ತದೆ. ಆದ್ದರಿಂದ ವಾಟ್ಸ್ಆಪ್ ಸಂದೇಶಗಳನ್ನು ಮೂರನೇ ವ್ಯಕ್ತಿಯು ಓದಲು ಸಾಧ್ಯ ಆಗುವುದಿಲ್ಲ.
ಇದನ್ನೂ ಓದಿ: ರಾಮ ಮಂದಿರದ ಲೆಕ್ಕ ಕೇಳುವ ಮುನ್ನ ರಾಜ್ಯಕ್ಕೆ 2.86 ಲಕ್ಷ ಕೋಟಿ ಸಾಲದ ಹೊರೆಯ ಲೆಕ್ಕ ಕೊಡಿ; ಪ್ರತಾಪ್ ಸಿಂಹ
ಡಿಲೇಟ್ ಆಗಿರುವ ವಾಟ್ಸ್ಆಪ್ ಸಂದೇಶವನ್ನು ಪೊಲೀಸರು ರಿಕವರಿ ಮಾಡಬಹುದೇ?
ಪೊಲೀಸರು ಡಿಲೇಟ್ ಆಗಿರುವ ನಿಮ್ಮ ವಾಟ್ಸ್ಆಪ್ ಸಂದೇಶಗಳನ್ನು ಸುಲಭವಾಗಿ ಪತ್ತೆ ಮಾಡಿ ರಿಕವರಿ ಮಾಡಬಹುದು. ಇನ್ನೂ ವಾಟ್ಸ್ಆಪ್ ಬ್ಯಾಕಪ್ ಫೈಲ್ಗಳು ಸುರಕ್ಷಿತ ಅಲ್ಲದ ಕಾರಣ ಪೊಲೀಸರು ಡಿಲೇಟ್ ಆಗಿರುವ ವಾಟ್ಸ್ಆಪ್ ಸಂದೇಶವನ್ನು ಪತ್ತೆ ಮಾಡಬಹುದು.
ಎರಡೂ ಕಡೆಯಿಂದ ವಾಟ್ಸಾಪ್ ಸಂದೇಶವನ್ನು ಶಾಶ್ವತವಾಗಿ ಅಳಿಸುವುದು ಹೇಗೆ? ಈ ಕೆಳಗಿನಂತಿದೆ.
- ನಿಮ್ಮ ವಾಟ್ಸ್ಆಪ್ ಅಕೌಂಟ್ ಅನ್ನು ಓಪನ್ ಮಾಡಿ.
- ಚಾಟ್ ಆಪ್ಷನ್ ಕ್ಲಿಕ್ ಮಾಡಿ, ನೀವು ಯಾರ ಸಂದೇಶವನ್ನು ಡಿಲೇಟ್ ಮಾಡಬೇಕು ಅವರ ಚಾಟ್ ಲಿಸ್ಟ್ ಓಪನ್ ಮಾಡಿ.
- ಟ್ಯಾಪ್ ಮಾಡಿ ಡಿಲೇಟ್ ಮಾಡಬೇಕಾದ ಸಂದೇಶವನ್ನು ಒತ್ತಿ ಹಿಡಿಯಿರಿ.
- ಟ್ಯಾಪ್ ಮಾಡಿದಾಗ ನಿಮಗೆ ಡಿಲೀಟ್ ಆಪ್ಷನ್ ಬರುತ್ತದೆ. ಆಗ ಡಿಲೀಟ್ ಫಾರ್ ಎವ್ರಿವನ್ (delete for everyone) ಆಯ್ಕೆ ಮಾಡಿ.
Published by:
MAshok Kumar
First published:
February 22, 2021, 3:14 PM IST