ಈ ಆಧುನಿಕ ಕಾಲದಲ್ಲಿ ಯಾರನ್ನು ನಂಬೋದು (Believe) ಅಥವಾ ಯಾರನ್ನು ಬಿಡೋದು ಗೊತ್ತಾಗೋದೆ ಇಲ್ಲ. ಈಗ ಕಾಲ ಅಷ್ಟೊಂದು ಸೂಕ್ಷ್ಮವಾಗಿದೆ. ಈಗೀಗಂತಲೂ ಎಲ್ಲಿ ಹೋದರೂ ಸಿಸಿ ಕ್ಯಾಮೆರಾಗಳ (CC Camera) ಕಣ್ಗಾವಲ್ಲಿನಲ್ಲಿಯೇ (Under Surveillance) ಎಲ್ಲವೂ ನಡೆಯುತ್ತದೆ. ಸಿಸಿ ಕ್ಯಾಮೆರಾ ಇರುವುದು ಈಗ ಎಲ್ಲ ಕಡೆ ಸರ್ವೆ ಸಾಮ್ಯಾನವಾದ ಸಂಗತಿ ಎಂದು ಹೇಳಬಹುದು. ಈ ಸಿಸಿ ಕ್ಯಾಮೆರಾಗಳನ್ನು ನಮ್ಮ ಕಣ್ಣಿಗೆ ಕಾಣುವ ಹಾಗೆ ಇರಿಸಿದರೆ ಅದು ಸಾಮಾನ್ಯ ಸಂಗತಿ. ಆದರೆ ಯಾರಿಗೂ ಕಾಣದಂತೆ ಸಿಸಿ ಕ್ಯಾಮೆರಾಗಳನ್ನು ಮನೆಗೆ ತರುವ ಟಿವಿ (TV), ಫ್ರಿಡ್ಜ್ (Fridge) ಮುಂತಾದ ವಸ್ತುಗಳಲ್ಲಿ ಇರಿಸಿದರೆ ಅದು ನಿಜಕ್ಕೂ ಆಘಾತಕಾರಿ ಸಂಗತಿ ಆಗಿರುತ್ತದೆ. ಇಂಥದ್ದೊಂದು ಪ್ರಕರಣ ಈಗ ಬೆಳಕಿಗೆ ಬಂದಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಏನಿದು ಪ್ರಕರಣ?
ಇತ್ತೀಚೆಗೆ, ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಕುಟುಂಬ ಒಂದು ತಮ್ಮ ನಿವಾಸಕ್ಕೆ ಏರ್‌ಬಿಎನ್‌ಬಿ ಕಂಪನಿಯ ಬಾಡಿಗೆ ಟಿವಿಯನ್ನು ತಂದಿತ್ತು. ಆದರೆ, ಆ ಟಿವಿಯ ಕ್ಯಾಬಿನೆಟ್ ಒಳಗೆ ಒಂದು ಗುಪ್ತ ಕ್ಯಾಮೆರಾವನ್ನು ಇರಿಸಲಾಗಿದೆ. ಇದು ಕುಟುಂಬದವರ ಗಮನಕ್ಕೆ ಬಂದಿದೆ. ಆ ಕುಟುಂಬವು ಈ ಘಟನೆಯಿಂದ ಆಘಾತಗೊಂಡಿದ್ದು, ಏರ್‌ಬಿಎನ್‌ಬಿ ಕಂಪನಿಯವರ ಮೇಲೆ ಆರೋಪ ಮಾಡಿದ್ದಾರೆ. ಇದರ ಸಾಕ್ಷ್ಯಧಾರಗಳನ್ನು ಕಂಡುಕೊಳ್ಳಲು ಇವರು ಆ ಕ್ಯಾಮೆರಾಗಳು ಎಲ್ಲಿವೆ ಎಂಬುದನ್ನು ಕಂಡುಹಿಡಿದು ಅಲ್ಲಿಯೇ ವಾಸ ಮಾಡುವ ತಮ್ಮ ಸೋದರ ಸಂಬಂಧಿಗಳಿಗೆ ತಿಳಿಸಿದ್ದಾರೆ. ಆ ನಿವಾಸಿಯ ಹೆಸರು ಜಾಸ್ ಗ್ರೆವಲ್ ಆಗಿದೆ.
ಇದರ ನಂತರ ಜಾಸ್ ಗ್ರೆವಲ್ ಅವರು ಮಾಧ್ಯಮಗಳಿಗೆ “ನಾವು ಟಿವಿಯ ಎಚ್‌ಡಿಎಂಐ ಕೇಬಲ್ ಹುಡುಕಾಡುತ್ತಿದ್ದೆವು. ಆಗ ಈ ಗುಪ್ತ ಕ್ಯಾಮೆರಾಗಳೂ ನಮ್ಮ ಕಣ್ಣಿಗೆ ಬಿದ್ದವು. ನಾವು ಮಲಗುವ ಕೋಣೆಯ ದಿಕ್ಕಿನಲ್ಲಿ ಛಾಯಾಚಿತ್ರ ತೆಗೆಯಲು ಈ ಕ್ಯಾಮೆರಾವನ್ನು ಅಳವಡಿಸಲಾಗಿದೆ” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: LG ಕಂಪನಿಯ OLED R ಮಡಚಬಹುದಾದ ಟಿವಿ ಲಭ್ಯ; ಹಾಗಿದ್ರೆ ಇದರ ಬೆಲೆ?
ಏರ್‌ಬಿಎನ್‌ಬಿ ವೆಬ್‌ಸೈಟ್, ಭದ್ರತಾ ಕ್ಯಾಮೆರಾಗಳು ಮತ್ತು ಶಬ್ದ ಮೇಲ್ವಿಚಾರಣಾ ಸಾಧನಗಳ ಬಗ್ಗೆ ಯಾವ ಮಾಹಿತಿಯನ್ನು ನಮಗೆ ನೀಡಿಲ್ಲ. ಇದನ್ನು ಬಹಿರಂಗಪಡಿಸಿದರೆ ಭದ್ರತಾ ಕ್ರಮಗಳಿಗೆ ಧಕ್ಕೆಯಾಗಬಹುದು ಎಂದು ಯಾವ ವಿಷಯವನ್ನು ಹೇಳಿಲ್ಲ. ಇದು ತಪ್ಪಾದ ಕ್ರಮ ಆಗಿದೆ. ಆದ್ದರಿಂದ ಕ್ಯಾಮೆರಾದ ಬಗ್ಗೆ ಏನೂ ಹೇಳಲಾಗಿಲ್ಲ ಎಂದು ಗ್ರೆವಾಲ್ ಹೇಳಿದರು.
ಈ ಘಟನೆ ಕುರಿತು ಏರ್‌ಬಿಎನ್‌ಬಿ ಹೇಳಿದ್ದೇನು?
ಈ ಘಟನೆಯ ನಂತರ, ಏರ್‌ಬಿಎನ್‌ಬಿ “ ಮನೆಗಳಲ್ಲಿ ಭದ್ರತಾ ಕ್ಯಾಮೆರಾಗಳನ್ನು ಬಳಸುವುದರ ಬಗ್ಗೆ ಕಂಪನಿಯ ನೀತಿಯು ಸ್ಪಷ್ಟವಾಗಿದೆ. ಆದರೆ ನಾವು ಅತಿಥಿ ಗೌಪ್ಯತೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಈ ಘಟನೆಯ ನಂತರ ಗ್ರೆವಾಲ್ ಮತ್ತು ಅವನ ಸೋದರ ಸಂಬಂಧಿಗಳಿಗೆ ಸಂಪೂರ್ಣ ಮರುಪಾವತಿ ನೀಡಲಾಗಿದೆ" ಎಂದು ತನ್ನ ಹೇಳಿಕೆ ನೀಡಿದೆ.
ಇದರ ಮುಂದುವರಿದ ಹೇಳಿಕೆಯಲ್ಲಿ, "ನಾವು ಅತಿಥಿ ಗೌಪ್ಯತೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ಈ ಘಟನೆಯ ಕುರಿತು ನಮ್ಮ ಸುರಕ್ಷತಾ ತಂಡವು ಸಂಪೂರ್ಣವಾಗಿ ತನಿಖೆ ನಡೆಸುತ್ತಿದೆ. ಅತಿಥಿಗಳಿಗೆ ಪೂರ್ಣ ಮರುಪಾವತಿಯನ್ನು ನೀಡಲಾಗಿದೆ ಮತ್ತು ತನಿಖೆಯಲ್ಲಿ ಬಾಕಿ ಉಳಿದಿರುವ ಪಟ್ಟಿಯನ್ನು ನಿಷ್ಕ್ರಿಯಗೊಳಿಸಲಾಗಿದೆ ”ಎಂದು ಏರ್‌ಬಿಎನ್‌ಬಿ ಹೇಳಿಕೆ ನೀಡಿದೆ.
ಏರ್‌ಬಿಎನ್‌ಬಿ ಬಗ್ಗೆ ಒಂದಿಷ್ಟು ಮಾಹಿತಿ:
ಏರ್‌ಬಿಎನ್‌ಬಿ ಒಂದು ಆತಿಥ್ಯ ಸೇವೆ ಒದಗಿಸುವ ಕಂಪನಿಯಾಗಿದ್ದು, ಜನರಿಗೆ ಅಲ್ಪಾವಧಿಯ ಆಧಾರದ ಮೇಲೆ ಕಾಟೆಜ್‌ಗಳು, ಅಪಾರ್ಟ್‌ಮೆಂಟ್‌ಗಳು, ಹಾಸ್ಟೆಲ್‌ಗಳು ಮತ್ತು ಹೋಟೆಲ್ ಕೊಠಡಿಗಳನ್ನು ಬಾಡಿಗೆಗೆ ನೀಡಲು ಅನುವು ಮಾಡಿಕೊಡುತ್ತದೆ. ಈ ಕಂಪನಿಯು 2008 ರಲ್ಲಿ ಪ್ರಾರಂಭವಾಯಿತು.
ಇದನ್ನೂ ಓದಿ: PD 100 Black Hornet: ಇದು ಮುಷ್ಟಿ ಗಾತ್ರದ ಹೆಲಿಕಾಪ್ಟರ್ ಡ್ರೋನ್ ಕ್ಯಾಮೆರಾ! ಹತ್ರ ಇದ್ರೂ ಗೊತ್ತಾಗಲ್ವಂತೆ
ಆದರೆ, ಕಳೆದ ಒಂದು ದಶಕದ ಅವಧಿಯಲ್ಲಿ ವಿಶ್ವದಾದ್ಯಂತ ಜನರು ಹೋಟೆಲ್‌ಗಳಿಗೆ ಅಗ್ಗದ ಪರ್ಯಾಯಗಳನ್ನು ಹುಡುಕಲು ಪ್ರಾರಂಭಿಸಿದಾಗ ಈ ಕಂಪನಿಯ ಜನಪ್ರಿಯತೆಯು ಗಗನಕ್ಕೇರಿದೆ. ವರದಿಗಳ ಪ್ರಕಾರ, ಈಗ ಏರ್‌ಬಿಎನ್‌ಬಿ ಯಲ್ಲಿ ವಿಶ್ವಾದ್ಯಂತ ಸುಮಾರು 2.9 ಮಿಲಿಯನ್ ಆತಿಥೇಯರು ಇದ್ದಾರೆ. ಪ್ರತಿ ತಿಂಗಳು 14,000 ಆತಿಥೇಯರು ಈ ಕಂಪನಿಯ ಸೇವೆ ಪಡೆಯುತ್ತಾರೆನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ