news18-kannada Updated:March 2, 2021, 1:41 PM IST
ಬ್ಲಾಕ್ವೀವ್ BV6600
ಸ್ಮಾರ್ಟ್ಫೋನ್ ಕೊಂಡುಕೊಳ್ಳುವ ಮುನ್ನ ಕೆಲವೊಂದು ವಿಚಾರಗಳನ್ನು ಗಮನದಲ್ಲಿರಿಸಿಕೊಂಡು ಖರೀದಿಸುತ್ತಾರೆ. ಇನ್ನು ಕೆಲವರು ಫೀಚರ್ ಮತ್ತೆ ಅದರಲ್ಲಿರುವ ಆಯ್ಕೆಯನ್ನು ನೋಡಿ ಖರೀದಿಸುವವರಿರುತ್ತಾರೆ. ಮತ್ತೆ ಹಲವರು ಬೆಲೆ ಮತ್ತು ಅದರ ಮೇಲಿರುವ ಆಫರ್ ನೋಡಿ ಖರೀದಿಸುತ್ತಾರೆ. ಹಾಗಾಗಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಚಿಂತಿಸಿ ಕೊಂಡುಕೊಳ್ಳುತ್ತಾರೆ.
ಹೆಚ್ಚಿನ ಜನರು ಸ್ಮಾರ್ಟ್ಫೊನ್ನಲ್ಲಿರುವ ಕ್ಯಾಮೆರಾ, ಅದರ ಬ್ಯಾಟರಿ, ರ್ಯಾಮ್- ಸ್ಟೊರೇಜ್ ಮತ್ತು ಪ್ರೊಸೆಸರ್ ನೋಡಿ ಕೊಂಡುಕೊಳ್ಳುತ್ತಾರೆ. ಯಾಕೆಂದರೆ ಇದೆಲ್ಲವು ಸ್ಮಾರ್ಟ್ಫೋನ್ ಖರೀದಿಸುವಾಗ ಅಗತ್ಯವಾಗಿ ಗಮನಿಸಬೇಕಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ಫೋನ್ ಫೀಚರ್ಸ್ ತಕ್ಕಂತೆ ಬ್ಯಾಟರಿ ಸಾಮರ್ಥ್ಯದಲ್ಲೂ ಭಾರೀ ಬದಲಾವಣೆಯಾಗುತ್ತಿದೆ. ಅದರಂತೆ ಕಂಪೆನಿಯೊಂದು 8580 mAh ಸಾಮರ್ಥ್ಯದ ಬ್ಯಾಟರಿ ಹೊಂದಿರುವ ಸ್ಮಾರ್ಟ್ಫೋನ್ ಸಿದ್ಧಪಡಿಸಿದೆ. ಸದ್ಯದಲ್ಲೀ ಈ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಪ್ರವೇಶಿಸಲಿದೆ.
ಹೌದು. ಬ್ಲಾಕ್ವೀವ್ ಕಂಪೆನಿ ತನ್ನ BV6600 ಸ್ಮಾರ್ಟ್ಫೋನ್ ಅನ್ನು ತಯಾರಿಸಿದೆ. ಈ ಸ್ಮಾರ್ಟ್ಫೋನ್ 8580mAh ಸಾಮರ್ಥ್ಯದ ಬ್ಯಾಟರಿ ಅಳವಡಿಸಿದೆ. ಅಂದಹಾಗೆಯೇ BV6600 ಸ್ಮಾರ್ಟ್ಫೋನ್ 5.7 HDಡಿಸ್ಪ್ಲೇ ಹೊಂದಿದ್ದು, ಕಾರ್ನಿಂಗ್ ಗೋರಿಲ್ಲ ಗ್ಲಾಸ್ ಅಳವಡಿಸಲಾಗಿದೆ. 4GB RAM ಮತ್ತು ಆಕ್ಟಾ ಕೋರ್ ಮೀಡಿಯಾಟೆಕ್ ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಆ್ಯಂಡ್ರಾಯ್ಡ್ 10 ಬೆಂಬಲವನ್ನು ಪಡೆದಿದೆ.
ಅಚ್ಚರಿ ವಿಶೇಷವೆಂದರೆ, ಸ್ಮಾರ್ಟ್ಫೋನ್ ಬ್ಯಾಟರಿಯಲ್ಲಿ ಬದಲಾವಣೆ ತರಲಾಗಿದ್ದು, ಇದೀಗ 8580 mAh ಬ್ಯಾಟರಿ ನೀಡುವ ಮೂಲಕ ಬಿವಿ600 ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ. ಕಂಪೆನಿ ಹೇಳುವಂತೆ ಬರೋಬ್ಬರಿ 792 ಕಾಲ ನಿರಂತರವಾಗಿ ಬಳಸಬಹುದಾಗಿದೆಯಂತೆ. ಇಂಟರ್ನೆಟ್ ಬಳಸಿದರೆ 439 ಗಂಟೆಗಳ ಕಾಲ ಬಳಸಬಹುದಾಗಿದೆ.
ಬ್ಲಾಕ್ ವೀವ್ ವೆಬ್ಸೈಟ್ ಬಿಬವಿ 600 ಸ್ಮಾರ್ಟ್ಫೋನನ್ನು ಮಾರಾಟ ಮಾಡುತ್ತಿದೆ. ಇದರ ಬೆಲೆ $119.99 ಡಾಲರ್ ಆಗಿದೆ. ಭಾರತೀಯ ಬೆಲೆಯ ಮೂಲಕ ಹೇಳುವುದಾದದರೆ 8,808 ರೂ ಇರಲಿದೆ.
Published by:
Harshith AS
First published:
March 2, 2021, 1:38 PM IST