ಸ್ಯಾಮ್ಸಂಗ್ ಇಂಡಿಯಾ (Samsung India) ಮತ್ತೊಂದು ಹೊಸ ಸ್ಮಾರ್ಟ್ಫೋನ್(Smartphone) ಅನ್ನು ಬಿಡುಗಡೆ ಮಾಡಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎಮ್ (Samsung Galaxy M) ಸೀರಿಸ್ನಲ್ಲಿಸ್ಯಾಮ್ಸಂಗ್ M04 ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ. ಈ ಮೊಬೈಲ್ ಅನ್ನು ರೂ.10,000 ಕ್ಕಿಂತ ಕಡಿಮೆ ಬಜೆಟ್ನಲ್ಲಿ ಬಿಡುಗಡೆ ಮಾಡಿರುವುದು ಗಮನಾರ್ಹವಾಗಿದೆ. ಇದು 6.5 ಇಂಚಿನ ಡಿಸ್ಪ್ಲೇ, 8GB RAM, 128GB ವರೆಗಿನ ಸ್ಟೋರೇಜ್ (Storage), 5,000mAh ಬ್ಯಾಟರಿ ಮತ್ತು 13-ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಸೆಟಪ್ನಂತಹ ಫೀಚರ್ಸ್ಗಳನ್ನು ಹೊಂದಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎಮ್04 ಈ ಹಿಂದೆ ಬಿಡುಗಡೆಯಾದ ಸ್ಯಾಮ್ಸಂಗ್ ಗ್ಯಾಲಕ್ಸಿ ಎಮ್03 ನ ಅಪ್ಗ್ರೇಡ್ ಆವೃತ್ತಿಯಾಗಿದೆ. ಸ್ಮಾರ್ಟ್ಫೋನ್ ಖರೀದಿ ಮಾಡುವ ಪ್ಲಾನ್ನಲ್ಲಿರುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ M04 ಅನ್ನು ಕೇವಲ ಒಂದು ರೂಪಾಂತರದಲ್ಲಿ ಬಿಡುಗಡೆ ಮಾಡಲಾಗಿದೆ. 4GB RAM + 64GB ಸ್ಟೋರೇಜ್ ರೂಪಾಂತರದ ಬೆಲೆ 8,499 ರೂ. ಬ್ಯಾಂಕ್ ಆಫರ್ಗಳ ಜೊತೆ ಖರೀದಿ ಮಾಡಬಹುದು. ಅಮೆಜಾನ್ನಲ್ಲಿ ಡಿಸೆಂಬರ್ 16 ರಂದು ಮಧ್ಯಾಹ್ನ 12 ಗಂಟೆಗೆ ಮಾರಾಟ ಪ್ರಾರಂಭವಾಗಲಿದೆ. ಇದು ಹಸಿರು, ಗೋಲ್ಡ್, ಬಿಳಿ, ನೀಲಿ ಬಣ್ಣಗಳಲ್ಲಿ ಲಭ್ಯವಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎಮ್04 ನ ಸ್ಪೆಷಲ್ ಫೀಚರ್ಸ್:
ಸ್ಯಾಮ್ಸಂಗ್ ಗ್ಯಾಲಕ್ಸಿ ಎಮ್ ಸೀರಿಸ್ನಲ್ಲಿ ಬಿಡುಗಡೆಯಾದ ಸ್ಮಾರ್ಟ್ಫೋನ್ನ ಫೀಚರ್ಸ್ ಅನ್ನು ನೋಡುವುದಾದರೆ ಇದು 90Hz ರಿಫ್ರೆಶ್ ರೇಟ್ನೊಂದಿಗೆ 6.5-ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ. ಮೀಡಿಯಾ ಟೆಕ್ ಹೀಲಿಯೋ ಪಿ35 ಪ್ರೊಸೆಸರ್ನಿಂದ ಕಾರ್ಯನಿರ್ವಹಿಸುತ್ತದೆ. ಈ ಪ್ರೊಸೆಸರ್ ಕಾರ್ಯಕ್ಷಮತೆಯು ಸ್ಮಾರ್ಟ್ಫೋನ್ ಗುಣಮಟ್ಟದಲ್ಲಿ ಕೆಲಸಮಾಡಲು ಸಾಕಾಗುತ್ತದೆ.
ಇದನ್ನೂ ಓದಿ: ಕೇವಲ 17,499 ರೂಪಾಯಿಗೆ ಅತೀ ಹೆಚ್ಚು ಮಾರಾಟವಾದ ಐಫೋನ್ ನಿಮ್ಮದಾಗಿಸಿಕೊಳ್ಳಬಹುದು, ಈ ಆಫರ್ ಮತ್ತೆ ಬರುವುದಿಲ್ಲ
ಇದು 4GB RAM ಮತ್ತು 64GB ಸ್ಟೋರೇಜ್ ಬೆಂಬಲವನ್ನು ಹೊಂದಿದೆ. RAM ಪ್ಲಸ್ ವೈಶಿಷ್ಟ್ಯದೊಂದಿಗೆ 8GB RAM ಅನ್ನು ಹೆಚ್ಚುವರಿ ಆಗಿ ಬಳಸಬಹುದು. ಮೆಮೊರಿ ಕಾರ್ಡ್ ಬಳಸುವುದರೊಮದಿಗೆ 128GB ವರೆಗೆ ಸ್ಟೋರೇಜ್ ಅನ್ನು ಹೆಚ್ಚಿಸಬಹುದು.
ಕ್ಯಾಮೆರಾ ಫೀಚರ್ಸ್
ಸ್ಯಾಮ್ಸಂಗ್ ಗ್ಯಾಲಕ್ಸಿ ಎಮ್04 ಕ್ಯಾಮೆರಾ ವೈಶಿಷ್ಟ್ಯಗಳು ಹಿಂಬದಿಯಲ್ಲಿ 13+2 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿವೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 5-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಇದು ಹೊಂದಿದೆ.
ಇತರ ಫೀಚರ್ಸ್
ಇದು 5000mAh ಬ್ಯಾಟರಿಯನ್ನು ಹೊಂದಿದೆ ಮತ್ತು 15W ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಇದು ಹೊಂದಿದೆ. ಇನ್ನು ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 12 + OneUI 4.1 ಕೋರ್ ಆಪರೇಟಿಂಗ್ ಸಿಸ್ಟಮ್ ಹೊಂದಿದೆ. ಸ್ಯಾಮ್ಸಂಗ್ ಎರಡು ವರ್ಷಗಳಲ್ಲಿ ಆಂಡ್ರಾಯ್ಡ್ ನವೀಕರಣಗಳನ್ನು ನೀಡುವುದಾಗಿ ಘೋಷಿಸಿದೆ.
ಇದು ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸಾರ್ ಅನ್ನು ಸಹ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, ಡ್ಯುಯಲ್ ಬ್ಯಾಂಡ್ Wi-Fi, ಬ್ಲೂಟೂತ್, USB ಟೈಪ್ C ಪೋರ್ಟ್ ಈ ರೀತಿಯ ಆಯ್ಕೆಗಳಿವೆ.
ಬೆಲೆ ಮತ್ತು ಲಭ್ಯತೆ:
ಇನ್ನು ಈ ಸ್ಮಾರ್ಟ್ಫೋನ್ ಇಕಾಮರ್ಸ್ ವೆಬ್ಸೈಟ್ಗಳಲ್ಲಿ ಕೇವಲ 8999 ರೂಪಾಯಿಗೆ ಖರೀದಿ ಮಾಡಬಹುದು.
ಸ್ಯಾಮ್ಸಂಗ್ ಗ್ಯಾಲಕ್ಸಿ ಎಮ್13
ಸ್ಯಾಮ್ಸಂಗ್ ಗ್ಯಾಲಕ್ಸಿ ಎಮ್ ಸರಣಿಯು ಸ್ಯಾಮ್ಸಂಗ್ ಗ್ಯಾಲಕ್ಸಿ ಎಮ್13 ಮಾಡೆಲ್ ಅನ್ನು ರೂ.10,000 ಕ್ಕೂ ಕಡಿಮೆಯಲ್ಲಿ ಒಳಗೊಂಡಿದೆ. ಇದು 6.6 ಇಂಚಿನ ಪೂರ್ಣ HD+ ಡಿಸ್ಪ್ಲೇ, Exynos 850 ಪ್ರೊಸೆಸರ್ ಹೊಂದಿದ್ದು, 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಕ್ಯಾಮೆರಾ, 6000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇದು 15 ವ್ಯಾಟ್ ವೇಗದ ಚಾರ್ಜಿಂಗ್ ಬೆಂಬಲದಂತಹ ಫೀಚರ್ಸ್ ಅನ್ನು ಹೊಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ